ಇನ್ನೂ ನಿಂತಿಲ್ಲದ ಹುಸಿ ಬಾಂಬ್ ಬೆದರಿಕೆ ಇ-ಮೇಲ್ ಪ್ರಕರಣ; ಬೆದರಿಕೆ ಬಂದ ಶಾಲೆಗಳ ಸಂಖ್ಯೆ 17ಕ್ಕೆ ಏರಿಕೆ

ಗಾಂಜಾ ಮಾರಟವನ್ನೇ ಕಾಯಕ ಮಾಡಿಕೊಂಡ ರೌಡಿಶೀಟರ್​ನನ್ನು ಶ್ರೀರಾಂಪುರ ಪೊಲೀಸರು ಬಂಧಿಸಿದ್ದಾರೆ. ರೌಡಿಶೀಟರ್ ನಾರಾಯಣ ಹಾಗೂ ಆತನ ಸಹಚರ ಈಶ್ವರ್ ಬಂಧಿತರು. ಜೈಲಿನಿಂದ ಬಿಡುಗಡೆಯಾದ ಒಂದುವರೆ ತಿಂಗಳಿಗೆ ಮತ್ತೆ ಜೈಲು ಪಾಲಾಗಿದ್ದಾರೆ.

ಇನ್ನೂ ನಿಂತಿಲ್ಲದ ಹುಸಿ ಬಾಂಬ್ ಬೆದರಿಕೆ ಇ-ಮೇಲ್ ಪ್ರಕರಣ; ಬೆದರಿಕೆ ಬಂದ ಶಾಲೆಗಳ ಸಂಖ್ಯೆ 17ಕ್ಕೆ ಏರಿಕೆ
ಸಾಂಕೇತಿಕ ಚಿತ್ರ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Apr 10, 2022 | 3:56 PM

ಬೆಂಗಳೂರು: ಹುಸಿ ಬಾಂಬ್ (Bomb) ಬೆದರಿಕೆ ಇ ಮೇಲ್ ಪ್ರಕರಣ ಇನ್ನು ನಿಂತಿಲ್ಲ. ಬೆದರಿಕೆ ಬಂದ ಶಾಲೆಗಳ ಸಂಖ್ಯೆ ಒಟ್ಟು 17ಕ್ಕೆ ಏರಿಕೆಯಾಗಿದೆ. ನೆನ್ನೆ ಹೊಸ ಮೂರು ಶಾಲೆಗಳಿಗೆ ಇ-ಮೇಲ್ ಮಾಡಿರೋದು ಪತ್ತೆಯಾಗಿದೆ. ಕೂಡಲೇ ಮೆಸೆಜ್ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಲಾಗಿದೆ. ವರ್ತೂರಿನ ಹಾರ್ವೆಸ್ಟ್ ಶಾಲೆ, ಹೆಚ್ ಎಎಲ್​ನ ಖಾಸಗಿ ಶಾಲೆ ಸೇರಿದಂತೆ ಮೂರು ಶಾಲೆಗೆ ಇ-ಮೇಲ್ ಕಳುಹಿಸಲಾಗಿತ್ತು. ಮಾಹಿತಿ ಬಂದ ಕೂಡಲೇ ಶಾಲೆಗೆ ತೆರಳಿದ ಅಧಿಕಾರಿಗಳು ಪರಿಶೀಲನೆ ಮಾಡಿದರು. ಹುಸಿ ಬಾಂಬ್ ಬೆದರಿಕೆಯ ಇ-ಮೇಲ್ ಹಿಂದೆ ಇರುವವರ್ಯಾರು..? ಮೂರು ದಿನ ಕಳೆದರೂ ಯಾವುದೇ ಕ್ಲೂ ಸಿಕ್ಕಿಲ್ಲ. ಸದ್ಯ ಟೆಕ್ನಿಕಲ್ ಮಾಹಿತಿ ಸಂಗ್ರಹಕ್ಕೆ ಪೊಲೀಸರು ಮೊರೆ ಹೋಗಿದ್ದಾರೆ. ಇನ್ನು ಮಾಹಿತಿಗಾಗಿ ಪೊಲೀಸರು ಕಾದು ಕುಳಿತಿದ್ದು, ಸದ್ಯ ಒಂದರ ನಂತರ ಒಂದರಂತೆ ಬೆದರಿಕೆ ಸಂದೇಶಗಳ ಪಟ್ಟಿ ಬಿಡಲಾಗಿದೆ. ಇನ್ನು ಮತ್ತಷ್ಟು ಶಾಲೆಗಳಿಗೂ ಬೆದರಿಕೆ ಸಂದೇಶ ಕಳುಹಿಸಿರೊ ಶಂಕೆ ವ್ಯಕ್ತವಾಗಿದೆ.

ಸೋಲಾರ್ ಪಾರ್ಕ್​ಲ್ಲಿ ಬೆಂಕಿ ಅವಘಡ:

ತುಮಕೂರು: ಜಿಲ್ಲೆಯ ಪಾವಗಡ ತಾಲೂಕಿನ ಪಾವಗಡ ಅಚ್ಚಮನಹಳ್ಳಿ ಸೋಲಾರ್ ಪಾರ್ಕಲ್ಲಿ ಬೆಳೆದ ಒಣ ಹುಲ್ಲಿಗೆ ಬೆಂಕಿ ತಗುಲಿರುವಂತಹ ಘಟನೆ ಟಾಟಾ ಕಂಪನಿಯ 32ನೇ ಬ್ಲಾಕ್​ನಲ್ಲಿ ನಡೆದಿದೆ. ಸುಮಾರು 50ಕ್ಕೂ ಹೆಚ್ಚು ಸೋಲಾರ್ ಪ್ಲೇಟ್​ಗಳು ಭಸ್ಮವಾಗಿವೆ.

ಗಾಂಜಾ ಮಾರಟವನ್ನೇ ಕಾಯಕ ಮಾಡಿಕೊಂಡ ರೌಡಿಶೀಟರ್​ ಅರೆಸ್ಟ್:

ಬೆಂಗಳೂರು: ಗಾಂಜಾ ಮಾರಟವನ್ನೇ ಕಾಯಕ ಮಾಡಿಕೊಂಡ ರೌಡಿಶೀಟರ್​ನನ್ನು ಶ್ರೀರಾಂಪುರ ಪೊಲೀಸರು ಬಂಧಿಸಿದ್ದಾರೆ. ರೌಡಿಶೀಟರ್ ನಾರಾಯಣ ಹಾಗೂ ಆತನ ಸಹಚರ ಈಶ್ವರ್ ಬಂಧಿತರು. ಜೈಲಿನಿಂದ ಬಿಡುಗಡೆಯಾದ ಒಂದುವರೆ ತಿಂಗಳಿಗೆ ಮತ್ತೆ ಜೈಲು ಪಾಲಾಗಿದ್ದಾರೆ. ಈ ಹಿಂದೆ ಹಲವು ಬಾರಿ ಗಾಂಜಾ ಮಾರಟಕ್ಕೆ ಮುಂದಾಗಿ ಬಂಧಿತನಾಗಿದ್ದ. ಕಳೆದ ವರ್ಷ ಕೊಲೆಯತ್ನ ಕೇಸ್​ನಲ್ಲಿ ಆರೋಪಿ ಜೈಲು ಸೇರಿದ್ದ. ಕಳೆದ ಒಂದುವರೆ ತಿಂಗಳ ಹಿಂದಷ್ಟೇ ಜಾಮಿನಿನ ಮೇಲೆ ಬಿಡುಗಡೆಯಾಗಿದ್ದ. ಜೈಲಿನಿಂದ ಹೊರಬಂದು ಗಾಂಜಾ ಮಾರಾಟ ಮಾಡಲು ಮುಂದಾಗಿ ಪೊಲೀಸರಿಗೆ ಲಾಕ್​ ಆಗಿದ್ದಾನೆ. ಬಂಧಿತ ಆರೋಪಿಯಿಂದ ೨೨ ಕೆಜಿ ಗಾಂಜಾ ವಶಕ್ಕೆ ಪಡೆಯಲಾಗಿದ್ದು, ಶ್ರೀರಾಮ್​ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಕಲಿ ಕೀ ಬಳಸಿ ಬೈಕ್ ಕಳ್ಳತನ; 

ಬಳ್ಳಾರಿ: ನಕಲಿ ಕೀ ಬಳಸಿ ಬೈಕ್ ಕಳ್ಳತನ ಮಾಡುತ್ತಿದ್ದ ಅಂತರರಾಜ್ಯ ಬೈಕ್ ಕಳ್ಳನನ್ನು ಎಪಿಎಂಸಿ ಪೊಲೀಸರ ಕಾರ್ಯಾಚರಣೆ ಮಾಡಿ ಬಂಧಿಸಿದ್ದಾರೆ. ಅನಂತಪುರ ಜಿಲ್ಲೆಯ ಗೊಡಸಲಪಲ್ಲಿಯ ಶ್ರಾವಿಣ್ ಬಂಧಿತ ಬೈಕ್ ಕಳ್ಳ. ಬಳ್ಳಾರಿಯ ಎಪಿಎಂಸಿ ಠಾಣೆ ವ್ಯಾಪ್ತಿಯಲ್ಲಿ 3 ಹಾಗೂ ಬ್ರೂಸ್ ಪೇಟೆ ಠಾಣೆ ವ್ಯಾಪ್ತಿಯಲ್ಲಿ 4 ಬೈಕ್ ಕದಿದ್ದ. ಕಾಕರ್ಲತೋಟದ ಸರ್ಕಾರಿ ಪ್ರಾಥಮಿಕ ಶಾಲೆಯ ಬಳಿ ಆರೋಪಿ ಬಂಧನ ಮಾಡಿದ್ದು, 7 ಬೈಕ್ ಜಪ್ತಿ ಮಾಡಲಾಗಿದೆ. ಬಳ್ಳಾರಿಯ ಎಪಿಎಂಸಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಇದನ್ನೂ ಓದಿ:

ಮಂಗಳೂರು: NITK ಬೀಚ್​ನಲ್ಲಿ ಇಬ್ಬರು ಸೋದರಿಯರು ನೀರುಪಾಲು; ಪಿಂಡ ಪ್ರದಾನ ಮಾಡಲು ಬಂದಿದ್ದ ವೇಳೆ ಅವಘಡ

Virat Kohli: ಐಪಿಎಲ್​ ಇತಿಹಾಸದಲ್ಲೇ ಯಾರೂ ಮಾಡಿರದ ದಾಖಲೆ ಬರೆದ ಕಿಂಗ್ ಕೊಹ್ಲಿ

Published On - 2:49 pm, Sun, 10 April 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ