ಬೆಂಗಳೂರು: ನಗರದ ಬಿವಿಕೆ ಅಯ್ಯಂಗಾರ್ ರಸ್ತೆಯಲ್ಲಿ ಅನುಮಾನಾಸ್ಪದವಾಗಿ ಸೂಟ್‌ಕೇಸ್ ಪತ್ತೆಯಾಗಿತ್ತು. ಸೂಟ್‌ಕೇಸ್ ಪತ್ತೆಯಾಗುತ್ತಿದ್ದ ಹಾಗೆ ಸಾರ್ವಜನಿಕರಲ್ಲಿ ಆತಂಕ ಮೂಡಿತ್ತು. ಕೂಡಲೇ ಸ್ಥಳಿಯರು ಪಶ್ಚಿಮ ವಿಭಾಗದ ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಸ್ಥಳಕ್ಕೆ ಕೆ.ಆರ್.ಮಾರ್ಕೆಟ್ ಠಾಣೆ ಪೊಲೀಸರು ಭೇಟಿ ಕೊಟ್ಟಿದ್ದರು. ಬಾಂಬ್ ಸ್ಕ್ವಾಡ್ ಗೆ ಸಿಟಿ ಪೊಲೀಸರು ಮಾಹಿತಿ ನೀಡಿದ್ದರು. ಇಷ್ಟೆಲ್ಲಾ ಆತಂಕದ ಬಳಿಕ, ಇದೀಗ ಅನುಮಾನಾಸ್ಪದವಾಗಿ ಪತ್ತೆಯಾಗಿದ್ದ ಸೂಟ್‌ಕೇಸ್ ಓಪನ್ ಮಾಡಲಾಗಿದೆ. ಉಪ್ಪಾರಪೇಟೆ ಠಾಣಾ ವ್ಯಾಪ್ತಿ ಖಾಲಿ ಮೈದಾನದಲ್ಲಿ ಸೂಟ್‌ಕೇಸ್ ತೆರೆಯಲಾಗಿದೆ.
ಕಳೆದ 2 ಗಂಟೆಯಿಂದ ತಲೆ ಕೆಡಿಸಿಕೊಂಡಿದ್ದ ಪೊಲೀಸರು ಸದ್ಯ ನಿರಾಳರಾಗಿದ್ದಾರೆ. ಒಂದು ಸೂಟ್ಕೇಸ್ನಲ್ಲಿ ಬೆಡ್ಶೀಟ್, ಬಟ್ಟೆಗಳು ಪತ್ತೆಯಾಗಿದೆ. ಮತ್ತೊಂದು ಸೂಟ್ಕೇಸ್ನಲ್ಲಿ ಸೀರೆ, ಪಂಚೆ, ಟವೆಲ್ ಪತ್ತೆಯಾಗಿದೆ. ಸೂಟ್‌ಕೇಸ್ ತೆರೆದು ಬಾಂಬ್ ನಿಷ್ಕ್ರಿಯ ದಳ ವಸ್ತುಗಳನ್ನು ಪರಿಶೀಲಿಸಿದೆ. ಸೂಟ್ಕೇಸ್ನಲ್ಲಿ ಮಧುರ ಅರ್ಕೇಸ್ಟ್ರಾ ಎಂಬ ಐಡಿ ಕಾರ್ಡ್ಪ್ ಪತ್ತೆಯಾಗಿದೆ.
ಇದಕ್ಕೂ ಮೊದಲೇ ಬಾಂಬ್ ನಿಷ್ಕ್ರಿಯ ದಳ ಸ್ಪೋಟಕ ಏನೂ ಇಲ್ಲಾ ಎಂದು ಪ್ರಾಥಮಿಕ ಮಾಹಿತಿ ನೀಡಿತ್ತು. ಆದರೂ ಸುರಕ್ಷತೆಯ ದೃಷ್ಟಿಯಿಂದ ಬಾಕ್ಸ್ ತೆರೆಯಲು ಸೂಚನೆ ಕೊಡಲಾಗಿತ್ತು. ಹೀಗಾಗಿ ಖಾಲಿ ಮೈದಾನಕ್ಕೆ ಸೂಟ್‌ಕೇಸ್ ರವಾನೆ ಮಾಡಲಾಗಿತ್ತು. ಇದೀಗ ಸೂಟ್‌ಕೇಸ್ ಪ್ರಕರಣ ತಾತ್ಕಾಲಿಕ ಅಂತ್ಯ ಪಡೆದುಕೊಂಡಿದೆ.
ಇದನ್ನೂ ಓದಿ: Bengaluru Crime: ಆಸ್ಟ್ರೇಲಿಯಾ ಪ್ರಜೆ ಮೇಲೆ ಹಲ್ಲೆ ನಡೆಸಿದ್ದ ಆಟೋ ಚಾಲಕ ಅರೆಸ್ಟ್
ಇದನ್ನೂ ಓದಿ: Crime News: ಚಲಿಸುವ ರೈಲಿನಲ್ಲೇ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ; 4 ಕಾಮುಕರ ಬಂಧನ