Bengaluru Crime: ಆಸ್ಟ್ರೇಲಿಯಾ ಪ್ರಜೆ ಮೇಲೆ ಹಲ್ಲೆ ನಡೆಸಿದ್ದ ಆಟೋ ಚಾಲಕ ಅರೆಸ್ಟ್
ಡ್ರಾಪ್ ಪಾಯಿಂಟ್ನಲ್ಲಿ 700 ರೂ ಕೊಡುವಂತೆ ಆಟೋ ಚಾಲಕ ಡಿಮಾಂಡ್ ಮಾಡಿದ್ದ. ಕೇಳಿದಷ್ಟು ಹಣ ಕೊಡಲು ಜಾನ್ ನಿರಾಕರಿಸಿದಕ್ಕೆ ಆಟೋ ಚಾಲಕ ಶರತ್ ಗಲಾಟೆ ಮಾಡಿದ್ದಾನೆ. ಜಾನ್ ಮೇಲೆ ಹಲ್ಲೆ ನಡೆಸಿ ಮೊಬೈಲ್ ಕಸಿದುಕೊಂಡು ಪರಾರಿಯಾಗಿದ್ದ.
ಬೆಂಗಳೂರು: ಆಸ್ಟ್ರೇಲಿಯಾ ಪ್ರಜೆ ಮೇಲೆ ಹಲ್ಲೆ ನಡೆಸಿದ್ದ ಆಟೋ ಚಾಲಕನನ್ನು ಬೆಂಗಳೂರಿನ ಬೈಯ್ಯಪ್ಪನಹಳ್ಳಿ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಶರತ್ ಬಂಧಿತ ಆರೋಪಿ. ಆಸ್ಟ್ರೇಲಿಯಾ ಪ್ರಜೆ ಗ್ರೇ ಜಾನ್ ನ್ಯೂಮನ್ ಮೇಲೆ ಆಟೋ ಚಾಲಕ ಶರತ್ ಹಲ್ಲೆಗೈದಿದ್ದ.
ಅಕ್ಟೋಬರ್ 6ರಂದು ಆಸ್ಟ್ರೇಲಿಯಾ ಪ್ರಜೆ ಗ್ರೇ ಜಾನ್ ನ್ಯೂಮನ್ ಚರ್ಚ್ ಸ್ಟ್ರೀಟ್ನಿಂದ ಆಟೋ ಹಿಡಿದು ಸಿ.ವಿ.ರಾಮನ್ನಗರಕ್ಕೆ ತೆರಳುತ್ತಿದ್ದರು. ಆಟೋ ಹತ್ತುವ ಮುನ್ನ ಚಾಲಕ 200 ರೂ. ಬಾಡಿಗೆ ಕೇಳಿದ್ದ. ಆಟೋ ಚಾಲಕ ಶರತ್ ಕೇಳಿದಷ್ಟು ಹಣ ಕೊಡಲು ಜಾನ್ ಸಮ್ಮತಿಸಿದ್ದ. ಆದ್ರೆ ಹಲಸೂರು ಬಳಿ ತೆರಳುತ್ತಿದ್ದಾಗ ಆಟೋ ಟೈರ್ ಪಂಕ್ಚರ್ ಆಗಿತ್ತು. ಪಂಕ್ಚರ್ ಹಾಕಿಸಿಕೊಂಡು ಗ್ರೇ ಜಾನ್ ಹೇಳಿದ ಕಡೆ ಡ್ರಾಪ್ ಮಾಡಲು ಚಾಲಕ ಮುಂದಾದ. ಈ ವೇಳೆ 200 ರೂಪಾಯಿ ಬಾಡಿಗೆ ಜೊತೆಗೆ 100 ರೂ ಟಿಪ್ಸ್ ನೀಡಲು ಜಾನ್ ಮುಂದಾಗಿದ್ದ. ಆದ್ರೆ ಡ್ರಾಪ್ ಪಾಯಿಂಟ್ನಲ್ಲಿ 700 ರೂ ಕೊಡುವಂತೆ ಆಟೋ ಚಾಲಕ ಡಿಮಾಂಡ್ ಮಾಡಿದ್ದ. ಕೇಳಿದಷ್ಟು ಹಣ ಕೊಡಲು ಜಾನ್ ನಿರಾಕರಿಸಿದಕ್ಕೆ ಆಟೋ ಚಾಲಕ ಶರತ್ ಗಲಾಟೆ ಮಾಡಿದ್ದಾನೆ. ಜಾನ್ ಮೇಲೆ ಹಲ್ಲೆ ನಡೆಸಿ ಮೊಬೈಲ್ ಕಸಿದುಕೊಂಡು ಪರಾರಿಯಾಗಿದ್ದ.
ಇಷ್ಟೆಲ್ಲಾ ಆದ ಬಳಿಕ ಜಾನ್ ಸ್ನೇಹಿತನಿಗೆ ಕರೆ ಮಾಡಿ ವೈದ್ಯರ ಬಳಿ ತೆರಳಿ ಚಿಕಿತ್ಸೆ ಪಡೆದ. ಹಲ್ಲೆ, ಸುಲಿಗೆ ಆರೋಪದಡಿ ಗ್ರೇ ಜಾನ್ ಪ್ರಕರಣ ದಾಖಲಿಸಿದ್ದ. ಈ ಬಗ್ಗೆ ಬೈಯ್ಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ಪೊಲೀಸರು ಈಗ ಆಟೋ ಚಾಲಕ ಶರತ್ನನ್ನು ಬಂಧಿಸಿ ಜೈಲಿಗೆ ಕಳಿಸಿದ್ದಾರೆ.
ಇದನ್ನೂ ಓದಿ: ವಿದೇಶಿ ಪ್ರಜೆ ಮೇಲೆ ಹಲ್ಲೆ ಕೇಸ್: 10 ಮಂದಿ ಅರೆಸ್ಟ್