IT Raid: ಬೆಂಗಳೂರಿನಲ್ಲಿ 4ನೇ ದಿನವೂ ಮುಂದುವರಿದ ಐಟಿ ದಾಳಿ

TV9 Digital Desk

| Edited By: sandhya thejappa

Updated on:Oct 10, 2021 | 11:14 AM

IT Raid Bengaluru: 4ನೇ ದಿನವೂ ಗುತ್ತಿಗೆದಾರ ಉಪ್ಪಾರ್ ಕಚೇರಿಯಲ್ಲಿ ತನಿಖೆ ನಡೆಯುತ್ತಿದೆ. ಬೆಂಗಳೂರಿನ ಸದಾಶಿವನಗರದಲ್ಲಿರುವ ಉಪ್ಪಾರ್ ಕಚೇರಿಯಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ

IT Raid: ಬೆಂಗಳೂರಿನಲ್ಲಿ 4ನೇ ದಿನವೂ ಮುಂದುವರಿದ ಐಟಿ ದಾಳಿ
ಉಪ್ಪಾರ್ ಕಚೇರಿಯಲ್ಲಿ ತನಿಖೆ ಮುಂದುವರಿದಿದೆ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) 4ನೇ ದಿನವೂ ಐಟಿ ದಾಳಿ (IT Raid) ಮುಂದುವರಿದಿದೆ. ಬೆಳಗ್ಗೆ 9 ಗಂಟೆ ನಂತರ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಗುತ್ತಿಗೆದಾರರ ಮನೆ ಮತ್ತು ಕಚೇರಿಗಳಲ್ಲಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಸೋಮಶೇಖರ್, ಗುತ್ತಿಗೆದಾರ ಉಪ್ಪಾರ್ ಸೇರಿದಂತೆ ಹಲವರ ಮನೆ, ಕಚೇರಿಗಳಲ್ಲಿ ಪರಿಶೀಲನೆ ಕಾರ್ಯ ನಡೆಯುತ್ತಿದೆ. ಬೆಂಗಳೂರಿನ ಸದಾಶಿವನಗರದಲ್ಲಿರುವ ಉಪ್ಪಾರ್ ಕಚೇರಿ, ಬಸವೇಶ್ವರನಗರದಲ್ಲಿರುವ ಸೋಮಶೇಖರ್ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

4ನೇ ದಿನವೂ ಗುತ್ತಿಗೆದಾರ ಉಪ್ಪಾರ್ ಕಚೇರಿಯಲ್ಲಿ ತನಿಖೆ ನಡೆಯುತ್ತಿದೆ. ಬೆಂಗಳೂರಿನ ಸದಾಶಿವನಗರದಲ್ಲಿರುವ ಉಪ್ಪಾರ್ ಕಚೇರಿಯಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ತಡರಾತ್ರಿವರೆಗೂ ತನಿಖೆ ನಡೆಸಿ ತೆರಳಿದ್ದ ಐಟಿ ಅಧಿಕಾರಿಗಳು, ಇಂದು ಇನ್ನೋವಾ ಕಾರಿನಲ್ಲಿ ಆಗಮಿಸಿದ್ದಾರೆ. ಇಂದು ಸಂಜೆವರೆಗೂ ದಾಖಲೆಗಳ ಲೆಕ್ಕಾಚಾರ ಮತ್ತು ಪರಿಶೀಲನೆ ನಡೆಸುತ್ತಾರೆ.

ದಾಳಿ ಅಂತ್ಯ ರಾಹುಲ್ ಎಂಟರ್ಪ್ರೈಸ್​ನಲ್ಲಿ ಶೋಧ ಅಂತ್ಯವಾಗಿದೆ. ಸತತ ಮೂರು ದಿನಗಳ ಕಾಲ ಐಟಿ ದಾಳಿ ನಡೆದಿತ್ತು. ಸಹಕಾರನಗರದ ರಾಹುಲ್ ಎಂಟರ್ಪ್ರೈಸಸ್ ಕಚೇರಿಯಲ್ಲಿ ನಿರಂತರ ಮೂರು ದಿನ ಕಡತಗಳ ಪರಿಶೀಲನೆ ನಡೆದಿತ್ತು. ಸಿಮೆಂಟ್ ಮತ್ತು ಸ್ಟೀಲ್ ಡೀಲ್ ಸಂಬಂಧಿತವಾಗಿ ಶೋಧ ನಡೆಸಲಾಗಿತ್ತು. ವಿವಿಧ ಕಾಂಟ್ರಾಕ್ಟರ್​ಗಳಿಗೆ ಸಂಬಂಧಿಸಿ ದಾಖಲೆಗಳನ್ನು ಪರಿಶೀಲನೆ ಮಾಡಲಾಗಿತ್ತು. ರಾಹುಲ್ ಎಂಟರ್ಪ್ರೈಸ್ ಹಲವು ಕಾಂಟ್ರಾಕ್ಟರ್​ಗಳಿಗೆ ಮೆಟಿರೀಯಲ್ ಸಪ್ಲೈ ಮಾಡಿತ್ತು. ಇದಕ್ಕೆ ಸಂಬಂಧಿಸಿ ಸತತ 60 ಗಂಟೆಗಳಿಗೂ ಅಧಿಕ ಸಮಯ ದಾಳಿ ನಡೆಸಿದ್ದಾರೆ. ನಿನ್ನೆ ರಾತ್ರಿ ದಾಳಿ ಮುಕ್ತಾಯಗೊಳಿಸಿ ಐಟಿ ಅಧಿಕಾರಿಗಳು ನಿರ್ಗಮಿಸಿದ್ದಾರೆ.

ಇದನ್ನೂ ಓದಿ

ದಕ್ಷಿಣ ಕನ್ನಡ: ಮೂಡುಬಿದಿರೆಯಲ್ಲಿ ನೈತಿಕ ಪೊಲೀಸ್ ಗಿರಿ ಪ್ರಕರಣ; ಇಬ್ಬರು ಆರೋಪಿಗಳ ಬಂಧನ

IT raid in Bangalore: ಬೆಂಗಳೂರಿನಲ್ಲಿ 50ಕ್ಕೂ ಹೆಚ್ಚು ಕಡೆ ಐಟಿ ದಾಳಿ; ಚಾರ್ಟೆಡ್ ಅಕೌಂಟೆಂಟ್ ಅಮಲಾ ಮನೆ ಮೇಲೆ IT ರೇಡ್

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada