ಬಾಂಬ್​ ಬೆದರಿಕೆ: ನಾಳೆ ಬೆಂಗಳೂರಿನ ಶಾಲಾ-ಕಾಲೇಜುಗಳಿಗೆ ರಜೆ ಇಲ್ಲ: ಜಿಲ್ಲಾಧಿಕಾರಿ ದಯಾನಂದ್

| Updated By: ಗಂಗಾಧರ​ ಬ. ಸಾಬೋಜಿ

Updated on: Dec 01, 2023 | 3:54 PM

ಬಾಂಬ್ ಬೆದರಿಕೆ ಹಿನ್ನೆಲೆ ಇಂದು ಶಾಲೆಗಳಿಗೆ ರಜೆ ನೀಡಲಾಗಿತ್ತು. ಆದರೆ ನಾಳೆ ಎಂದಿನಂತೆ ಬೆಂಗಳೂರಿನ ಶಾಲಾ-ಕಾಲೇಜು ನಡೆಯುತ್ತೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ದಯಾನಂದ್ ಹೇಳಿದ್ದಾರೆ. ನಗರದಲ್ಲಿ ಟಿವಿ9 ಜೊತೆ ಮಾತನಾಡಿದ ಅವರು, ಯಾವುದೇ ಗಂಭೀರತೆ ಇಲ್ಲ, ಹೀಗಾಗಿ ನಾಳೆ ಶಾಲೆಗಳಿಗೆ ರಜೆ ಇಲ್ಲ ಎಂದು ಹೇಳಿದ್ದಾರೆ. 

ಬಾಂಬ್​ ಬೆದರಿಕೆ: ನಾಳೆ ಬೆಂಗಳೂರಿನ ಶಾಲಾ-ಕಾಲೇಜುಗಳಿಗೆ ರಜೆ ಇಲ್ಲ: ಜಿಲ್ಲಾಧಿಕಾರಿ ದಯಾನಂದ್
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು, ಡಿಸೆಂಬರ್​​​ 01: ಬಾಂಬ್ ಬೆದರಿಕೆ (Bomb threat) ಹಿನ್ನೆಲೆ ಇಂದು ಶಾಲೆಗಳಿಗೆ ರಜೆ ನೀಡಲಾಗಿತ್ತು. ಆದರೆ ನಾಳೆ ಎಂದಿನಂತೆ ಬೆಂಗಳೂರಿನ ಶಾಲಾ-ಕಾಲೇಜು ನಡೆಯುತ್ತೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಬಿ. ದಯಾನಂದ್ ಹೇಳಿದ್ದಾರೆ. ನಗರದಲ್ಲಿ ಟಿವಿ9 ಜೊತೆ ಮಾತನಾಡಿದ ಅವರು, ಯಾವುದೇ ಗಂಭೀರತೆ ಇಲ್ಲ, ಹೀಗಾಗಿ ನಾಳೆ ಶಾಲೆಗಳಿಗೆ ರಜೆ ಇಲ್ಲ ಎಂದು ಹೇಳಿದ್ದಾರೆ.

ಪೋಷಕರು ಯಾವುದೇ ಆತಂಕ ಪಡುವುದು ಬೇಡ

60ಕ್ಕೂ ಹೆಚ್ಚು ಶಾಲೆಗಳಿಗೆ ಮೇಲ್ ಬಂದಿವೆ. ಯಾವ ರೀತಿಯ ಆತಂಕ ಪಡುವಂತಿಲ್ಲ. ನಾವು ಶಾಲೆಗೆ ರಜೆ ನೀಡಿಲ್ಲ. ಯಾವುದೇ ತುರ್ತು ಅನಿವಾರ್ಯತೆ ಇದ್ದರೆ ಶಾಲಾ ಶಿಕ್ಷಣ ಇಲಾಖೆ ಸೂಚನೆ ನೀಡುತ್ತೆ. ಪೋಷಕರು ಯಾವುದೇ ಆತಂಕ ಪಡುವುದು ಬೇಡ. ದುರದ್ದೇಶಪೂರ್ವಕವಾದ ಮೇಲ್ ಬಂದಿರಬಹುದು. ಸರ್ಕಾರ ಈ ಬಗ್ಗೆ ತನಿಖೆಗೆ ಮುಂದಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ 60ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆ: ಯಾವೆಲ್ಲಾ ಸ್ಕೂಲ್? ಇಲ್ಲಿದೆ ಪಟ್ಟಿ

ನಾಳೆ ಶಾಲೆ ಹಾಗೂ ಕಾಲೇಜ್​ಗಳು ಸಹಜವಾಗಿ ನಡೆಯುತ್ತೆ. ನಾಳೆ ಯಾವುದೇ ರಜೆ ಇರುವುದಿಲ್ಲ. ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಹೀಗಾಗಿ ನಾಳೆ ಸಹಜ ಶಾಲೆಗಳು ಇರುತ್ತೆ ಎಂದು ಹೇಳಿದ್ದಾರೆ.

44 ಶಾಲೆಗಳಲ್ಲಿ ಬಾಂಬ್ ಬೆದರಿಕೆ

ಇಂದು ಬೆಳಗ್ಗೆ 9 ಗಂಟೆ ಬೆಂಗಳೂರಿನ 44 ಶಾಲೆಗಳಲ್ಲಿ ಬಾಂಬ್ ಬೆದರಿಕೆ ಬಂದ ವಿಷಯ ಕಾಡ್ಗಿಚ್ಚಿನಂತೆ ಹರಡಿಕೊಂಡಿತ್ತು. ಸದಾಶಿವನಗರ, ಬಸವೇಶ್ವರನಗರ, ನಾಗದೇವನಹಳ್ಳಿ, ಚಾಮರಾಜಪೇಟೆ, ಯಲಹಂಕ, ಆನೇಕಲ್, ಬನ್ನೇರುಘಟ್ಟ, ಸರ್ಜಾಪುರ.

ಇದನ್ನೂ ಓದಿ: ಎಲ್ಲರೂ ಇಸ್ಲಾಂಗೆ ಮತಾಂತರವಾಗಿ, ಇಲ್ಲ ಎಲ್ಲರೂ ಸಾಯಲು ಸಿದ್ಧರಾಗಿ: ಇದು ಶಾಲೆಗಳಿಗೆ ಬಂದ ಬಾಂಬ್ ಬೆದರಿಕೆ

ಸಿಂಗೇನ ಅಗ್ರಹಾರ, ದೊಮ್ಮಸಂದ್ರದ ಹಲವು ಶಾಲೆಗಳಲ್ಲಿ ಬಾಂಬ್ ಸ್ಫೋಟಿಸೋದಾಗಿ ಬೆದರಿಕೆ ಬಂದಿತ್ತು. ಬಾಂಬ್ ಬೆದರಿಕೆ ಬಂದ ವಿಚಾರವನ್ನೂ ಖುದ್ದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಖಚಿತ ಪಡಿಸಿದ್ದರು.

ಸರ್ಕಾರ ಇದನ್ನು ಲಘುವಾಗಿ ಪರಿಗಣಿಸಬಾರದು: ಮಾಜಿ ಸಚಿವ ಸಿಟಿ.ರವಿ

ಬೆಂಗಳೂರಿನ ಬಹುತೇಕ ಶಾಲೆಗಳಲ್ಲಿ ಬಾಂಬ್ ಬೆದರಿಕೆ ಬಂದಿದ್ದು ತೀವ್ರ ಭಯ ಸೃಷ್ಟಿಯಾಗಿತ್ತು. ಈ ವಿಚಾರವಾಗಿ ಮೈಸೂರಿನಲ್ಲಿ ಮಾಜಿ ಸಚಿವ ಸಿಟಿ.ರವಿ ಪ್ರತಿಕ್ರಿಯಿಸಿದ್ದು, ಇದರ ಬಗ್ಗೆ ಸಮಗ್ರ ತನಿಖೆ ಆಗಬೇಕು. ಸರ್ಕಾರ ಲಘುವಾಗಿ ಪರಿಗಣಿಸಬಾರದು. ಉದಾಸೀನ ಮಾಡಬಾರದು. ಅಗತ್ಯ ಬಿದ್ದರೆ ಕೇಂದ್ರದ ಸಹಾಯ ಪಡೆದು ಬೆದರಿಕೆ ಹಾಕಿದವರ ಮಟ್ಟ ಹಾಕಿ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:37 pm, Fri, 1 December 23