ಬೆಂಗಳೂರಿನ ವಿದ್ಯಾ ಸಂಸ್ಥೆಗೆ ಬಾಂಬ್ ಬೆದರಿಕೆ ಇ-ಮೇಲ್; ಯಶವಂತಪುರ ಠಾಣೆಯಲ್ಲಿ ದೂರು ದಾಖಲು

| Updated By: ಆಯೇಷಾ ಬಾನು

Updated on: Feb 04, 2024 | 8:04 AM

ಬೆಂಗಳೂರಿನಲ್ಲಿ ಮತ್ತೊಂದು ವಿದ್ಯಾ ಸಂಸ್ಥೆಗೆ ಬಾಂಬ್ ಬೆದರಿಕೆ ಮೇಲ್ ಬಂದಿದೆ. ಕೇಂದ್ರೀಯ ವಿದ್ಯಾಲಯ ಭಾರತೀಯ ವಿದ್ಯಾಸಂಸ್ಥೆಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದೆ. ಸದ್ಯ ಪೊಲೀಸರು ಹಾಗು ಬಾಂಬ್ ಸ್ಕ್ವಾಡ್ ಪರಿಶೀಲನೆ ನಡೆಸಿದೆ. ಘಟನೆ ಸಂಬಂಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬೆಂಗಳೂರಿನ ವಿದ್ಯಾ ಸಂಸ್ಥೆಗೆ ಬಾಂಬ್ ಬೆದರಿಕೆ ಇ-ಮೇಲ್; ಯಶವಂತಪುರ ಠಾಣೆಯಲ್ಲಿ ದೂರು ದಾಖಲು
ಕೇಂದ್ರೀಯ ವಿದ್ಯಾಲಯ ಭಾರತೀಯ ವಿದ್ಯಾಸಂಸ್ಥೆ
Follow us on

ಬೆಂಗಳೂರು, ಫೆ.04: ಸಿಲಿಕಾನ್ ಸಿಟಿಯಲ್ಲಿ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕುವ ಪ್ರವೃತ್ತಿ ಮುಂದುವರೆದಿದೆ (Bomb Threat Email). ನಗರದಲ್ಲಿ ಮತ್ತೊಂದು ವಿದ್ಯಾ ಸಂಸ್ಥೆಗೆ ಬಾಂಬ್ ಬೆದರಿಕೆ ಮೇಲ್ ಬಂದಿದೆ. Sahukarisrinuvasarao65@gmail.com ಎಂಬ ಇ-ಮೇಲ್ ಮೂಲಕ ಕೇಂದ್ರೀಯ ವಿದ್ಯಾಲಯ ಭಾರತೀಯ ವಿದ್ಯಾಸಂಸ್ಥೆಗೆ ಬಾಂಬ್ ಬೆದರಿಕೆ ಬಂದಿದೆ. ಸದ್ಯ ಪೊಲೀಸ್ ಹಾಗು ಬಾಂಬ್ ಸ್ಕ್ವಾಡ್ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಸ್ಕೂಲ್ ಒಳಗೆ ಬಾಂಬ್ ಇಟ್ಟಿದ್ದೀವಿ. ಬೆಳಗ್ಗೆ 10:20ಕ್ಕೆ ಬ್ಲಾಸ್ಟ್ ಆಗುತ್ತೆ ಎಂದು ಆಗಂತಕರು ಮೇಲ್ ಮಾಡಿ ಬೆದರಿಸಿದ್ದಾರೆ. ಮೇಲ್ ಬಂದ ತಕ್ಷಣ ಶಾಲಾ ಆಡಳಿತ ಮಂಡಳಿ ಅಲರ್ಟ್ ಆಗಿದ್ದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಶಾಲೆಗೆ ಬಂದ ಪೊಲೀಸ್ ಹಾಗು ಬಾಂಬ್ ಸ್ಕ್ವಾಡ್ ಪರಿಶೀಲನೆ ನಡೆಸಿದ್ದು ಹುಸಿ ಬಾಂಬ್ ಬೆದರಿಕೆ ಎಂದು ತಿಳಿದು ಬಂದಿದೆ. ಸದ್ಯ ಕೇಂದ್ರೀಯ ವಿದ್ಯಾಲಯ ಪ್ರಿನ್ಸಿಪಾಲ್ ಅಮೃತಬಾಲ ಅವರು ಘಟನೆ ಸಂಬಂಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ: Bomb Threat: ದೆಹಲಿಯ ಶಾಲೆಗೆ ಬಾಂಬ್​ ಬೆದರಿಕೆ ಕರೆ, ಮಕ್ಕಳ ಸ್ಥಳಾಂತರ

2023ರ ಡಿಸೆಂಬರ್​ ತಿಂಗಳಲ್ಲೂ ಇದೇ ರೀತಿ ಕೆಲ ಕಿಡಿಗೇಡಿಗಳು ಬೆಂಗಳೂರಿನ 60 ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆ ಇ-ಮೇಲ್ ಕಳಿಸಿ ಭಯದ ವಾತಾವರಣ ಸೃಷ್ಟಿಸಿದ್ದರು. ಇ ಮೇಲ್ ನಲ್ಲಿ ಶಾಲಾ ಕ್ರೀಡಾಂಗಣ, ಆವರಣದಲ್ಲಿ ಬಾಂಬ್ ಇಟ್ಟಿರುವ ಬಗ್ಗೆ ಬರೆಯಲಾಗಿತ್ತು. ಇಂಥಾ ಸಂದೇಶ ಬಂದಿದ್ದ ಬರೋಬ್ಬರಿ 60 ಶಾಲೆಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು. ಸಿಲಿಕಾನ್ ಸಿಟಿಯ ಶಾಲೆಗಳಿಗೆ ಮಾತ್ರವಲ್ಲ ಮಲೇಷ್ಯಾ , ಜರ್ಮನಿಯ ಕೆಲವು ಶಾಲೆಗಳಿಗೂ ಈ ರೀತಿಯ ಈ ಮೇಲ್ ಸಂದೇಶ ರವಾನೆಯಾಗಿತ್ತು. ಬೀವಲ್.ಕಾಮಚ ಡೊಮೈನ್ ಮೂಲಕ ಮೇಲ್ ಬಂದಿದ್ದು ಈ ಸಂದೇಶವನ್ನು ಲಘುವಾಗಿ ಪರಿಗಣಿಸದೇ ಶಾಲೆಗಳಲ್ಲಿ ಪರಿಶೀಲನೆ ನಡೆಸಲಾಗಿತ್ತು.

ಈ ವೇಳೆ ಇ ಮೇಲ್ ನಲ್ಲಿ ಷಡ್ಯಂತ್ರದ ಶಂಕೆ ವ್ಯಕ್ತಪಡಿಸಿದ್ದ ಹಿರಿಯ ಪೊಲೀಸರು ಟೆಕ್ನಿಕಲ್ ಆಗಿ ತನಿಖೆ ನಡೆಸಲು ಸಜ್ಜಾಗಿದ್ದರು. ಇ ಮೇಲ್ ಯಾವ ಐಪಿ ಅಡ್ರಸ್ ನಿಂದ ಬಂದಿದೆ. ಯಾವ ಉದ್ದೇಶಕ್ಕಾಗಿ ಮೇಲ್ ಮಾಡಿದ್ದಾರೆ. ಇದು ಯಾರ ಷಡ್ಯಂತ್ರ ಎಂಬುದನ್ನು ಬೇಧಿಸುವ ಕಾರ್ಯದಲ್ಲಿ ಟೆಕ್ನಿಕಲ್ ಸೈಬರ್ ಕ್ರೈಂ ತನಿಖಾ ತಂಡ ಕಾರ್ಯ ನಿರ್ವಹಿಸುತ್ತಿದೆ. ಕುಳಿತು VPN ಮೂಲಕ ಬೇರೆ ದೇಶಗಳ IP ಅಡ್ರೆಸ್ ಮೂಲಕವೂ ಮೇಲ್ ಮಾಡಿರೋ ಸಾಧ್ಯತೆ ಗಳಿದ್ದು, ಹಲವು ಆಯಾಮಗಳಲ್ಲಿ ತನಿಖೆ ಮುಂದುವರೆದಿದೆ. ಯಾರಾದ್ರು ಫೋನ್ ಮಾಡಿ ಬೆದರಿಕೆ ಹಾಕಿದ್ರೆ ತನಿಖೆ ಬಹುಬೇಗ ಮುಗಿಯುತ್ತಿತ್ತು ಆದರೆ ಮೇಲ್ಮಾಡಿರುವುದರಿಂದ ತನಿಖೆಯನ್ನು ಟೆಕ್ನಿಕಲ್ ಎವಿಡೆನ್ಸ್ ಆಧಾರದಲ್ಲಿ ನಡೆಸಲಾಗುತ್ತದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ