ಮರದ ಕೊಂಬೆ ಬಿದ್ದು ಬೆಂಗಳೂರು ದಕ್ಷಿಣ ಡಿಸಿಪಿ ಕಾರು ಜಖಂ

| Updated By: ವಿವೇಕ ಬಿರಾದಾರ

Updated on: Sep 04, 2022 | 2:28 PM

ಮರದ ಕೊಂಬೆ ಬಿದ್ದು ಬೆಂಗಳೂರು ದಕ್ಷಿಣ ಡಿಸಿಪಿ ಕಾರು ಜಖಂಗೊಂಡಿರುವ ಘಟನೆ ಜಯನಗರದ ದಕ್ಷಿಣ ವಿಭಾಗ ಡಿಸಿಪಿ ಕಚೇರಿ ಬಳಿ ನಡೆದಿದೆ.

ಮರದ ಕೊಂಬೆ ಬಿದ್ದು ಬೆಂಗಳೂರು ದಕ್ಷಿಣ ಡಿಸಿಪಿ ಕಾರು ಜಖಂ
ಜಖಂಗೊಂಡಿರುವ ಕಾರು
Follow us on

ಬೆಂಗಳೂರು: ಮರದ ಕೊಂಬೆ ಬಿದ್ದು ಬೆಂಗಳೂರು (Bengaluru) ದಕ್ಷಿಣ ಡಿಸಿಪಿ (DCP) ಕಾರು ಜಖಂಗೊಂಡಿರುವ ಘಟನೆ ಜಯನಗರದ ದಕ್ಷಿಣ ವಿಭಾಗ ಡಿಸಿಪಿ ಕಚೇರಿ ಬಳಿ ನಡೆದಿದೆ. ಅದೃಷ್ಟವಶಾತ್​​ ಕಾರು ಚಾಲಕ ಪ್ರಾಣಪಾಯದಿಂದ ಪಾರಾಗಿದ್ದಾರೆ. ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಕೃಷ್ಣಕಾಂತ್ ಕಾರಿನಲ್ಲಿ ಬಂದು ಕಚೇರಿ ಒಳಗೆ ತೆರಳಿದ್ದರು. ಆದರೆ ಕಾರು ಚಾಲಕ ಕಾರಿನಲ್ಲೇ ಇದ್ದರು.

ಈ ವೇಳೆ ಕಾರು ಚಾಲಕನಿಗೆ ಫೋನ್​ ಕರೆ ಬಂದ ಹಿನ್ನೆಲೆ ಕಾರಿನಿಂದ ಹೊರ ಬಂದಿದ್ದರು. ಚಾಲಕ ಹೊರ ಬರುವ ತಡ ಕಚೇರಿ ಮುಂಭಾಗದಲ್ಲೇ ಇರುವ ಬೃಹರ್ ಮರದ ಕೊಂಬೆ ಕಾರಿನ ಮೇಲೆ ಬಿದ್ದಿದ್ದೆ. ಇದರಿಂದ ಚಾಲಕ ಪ್ರಾಣಾಪಯದಿಂದ ಪಾರಾಗಿದ್ದಾರೆ.

ಡಿಸಿಪಿ ಕೃಷ್ಣಕಾಂತ್ ಕಚೇರಿ ಒಳಗೆ ತೆರಳಿ 5 ನಿಮಿಷದಲ್ಲೇ ಕಾರಿನ ಮೇಲೆ ಮರದ ಕೊಂಬೆ ಬಿದ್ದಿದೆ. ಚಾಲಕನಿಗೆ ಕಾಲ್ ಬರುವುದು ತಡವಾಗಿದ್ದರೆ ಕಾರ್ ಚಾಲಕನ ಮೇಲೆ ಮರಬಿದ್ದು ಸಾವು ನೋವು ಸಂಭವಿಸುತಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:28 pm, Sun, 4 September 22