ಬೆಂಗಳೂರು: ಐಪಿಎಸ್ ಅಧಿಕಾರಿಯಿಂದ ಲಂಚ ಪಡೆದ ಆರೋಪ ಸಾಬೀತು ಆದ ಹಿನ್ನೆಲೆ ಡಿಸಿಐಬಿ ಇನ್ಸ್ಪೆಕ್ಟರ್ ಶ್ರೀನಿವಾಸ್, ಎಎಸ್ಐಗಳಾದ ಶುಭಾ, ಕೆ.ಜಿ. ಅನಿತಾ ಅಮಾನತು ಮಾಡಲಾಗಿದೆ. ಅತ್ತಿಬೆಲೆಯ ಕ್ರಷರ್ ಉದ್ಯಮಿ ಮಂಜುನಾಥ್ ಎಂಬವರು ದೂರು ದಾಖಲಿಸಲು 55 ಲಕ್ಷ ರೂಪಾಯಿ ಲಂಚ ಪಡೆದ ಆರೋಪದಡಿ ಸಿಎಸ್ಗೆ ದೂರು ನೀಡಿದ್ದರು. ಕೇಂದ್ರ ವಲಯದ ಐಜಿಪಿ ತನಿಖೆಯಲ್ಲಿ ಇನ್ಸ್ಪೆಕ್ಟರ್ ಶ್ರೀನಿವಾಸ್, ಎಎಸ್ಐಗಳು 5 ಲಕ್ಷ ರೂ. ಲಂಚ ಪಡೆದಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಅಧಿಕಾರಿಗಳನ್ನು ಅಮಾನತು ಮಾಡಿ ಆದೇಶ ನೀಡಲಾಗಿದೆ.
ದೂರು ದಾಖಲಿಸಲಯ 55 ಲಕ್ಷ ಲಂಚ ಪಡೆದ ಆರೋಪ ಅಧಿಕಾರಿಗಳ ವಿರುದ್ದ ಕೇಳಿ ಬಂದಿತ್ತು. ಈ ಬಗ್ಗೆ ತನಿಖೆಗೆ ಕೇಂದ್ರ ವಲಯ ಐಜಿಪಿಗೆ ಸಿಎಸ್ ರವಿಕುಮಾರ್ ಸೂಚಿಸಿದ್ದರು. ತನಿಖೆಯಲ್ಲಿ ಇನ್ಸ್ಪೆಕ್ಟರ್ ಶ್ರೀನಿವಾಸ್ ಮತ್ತು ಎಎಸ್ಐಗಳು 5 ಲಕ್ಷ ಲಂಚ ಪಡೆದಿರೋದು ಸಾಬೀತು ಆದ ಹಿನ್ನೆಲೆ ಇದೀಗ ಅಮಾನತು ಮಾಡಲಾಗಿದೆ. ಅರ್ಜಿದಾರ ಮತ್ತು ಇನ್ಸ್ ಪೆಕ್ಟರ್ ಪರಸ್ವರ ಸಂಪರ್ಕದಲ್ಲಿರುವುದು ಸಾಬೀತು ಹಿನ್ನೆಲೆ ಅಮಾನತು ಮಾಡಲಾಗಿದೆ. ಈ ಹಿಂದೆ ಡಿಸಿಐಬಿಯಲ್ಲಿ ಇನ್ಸ್ ಪೆಕ್ಟರ್ ಆಗಿದ್ದ ಶ್ರೀನಿವಾಸ್ ಸಸ್ಪೆಂಡ್ ಆಗಿದ್ದಾರೆ.
ಬೆಂಗಳೂರು: ದರೋಡೆಗೆ ಹೊಂಚು ಹಾಕಿ ಕುಳಿತಿದ್ದ ನಾಲ್ವರು ಆರೋಪಿಗಳ ಬಂಧನ
ದರೋಡೆಗೆ ಹೊಂಚು ಹಾಕಿ ಕುಳಿತಿದ್ದ ನಾಲ್ವರು ಆರೋಪಿಗಳ ಬಂಧನ ಮಾಡಲಾಗಿದೆ. ಜೋಗಯ್ಯ, ಕೇಶವ್, ಅಜಿತ್, ಹರೀಶ್‌ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಹನುಮಂತನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹೊಂಚು ಹಾಕಿ ಕುಳಿತಿದ್ದ ಆರೋಪಿಗಳನ್ನು ಬಂಧನ ಮಾಡಲಾಗಿದೆ. ದರೋಡೆಗೆ ಒಟ್ಟು ಐದು ಜನ ಪ್ಲಾನ್ ಮಾಡಿ ಹೊಂಚು ಹಾಕ್ತಿದ್ರು ಎಂದು ತಿಳಿದುಬಂದಿದೆ. ಪಕ್ಕಾ ಮಾಹಿತಿ ಆಧರಿಸಿ ಸಿಸಿಬಿ ಪೊಲೀಸರು ದಾಳಿ ಮಾಡಿದ್ದಾರೆ. ಈ ವೇಳೆ ಒಬ್ಬ ಆರೋಪಿ ತಪ್ಪಿಸಿಕೊಂಡಿದ್ದು ನಾಲ್ವರು ಅರೆಸ್ಟ್ ಆಗಿದ್ದಾರೆ. ಈ ಸಂಬಂಧ ಹನುಮಂತನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಬೆಂಗಳೂರಿನಲ್ಲಿ ವರನಟ ಡಾ.ರಾಜ್ಕುಮಾರ್ ಪುತ್ಥಳಿ ಕಳ್ಳತನ
ಬೆಂಗಳೂರಿನಲ್ಲಿ ವರನಟ ಡಾ.ರಾಜ್ಕುಮಾರ್ ಪುತ್ಥಳಿ ಕಳ್ಳತನವಾದ ಘಟನೆ ನಡೆದಿದೆ. ಲುಂಬಿನಿ ಗಾರ್ಡನ್ನಲ್ಲಿದ್ದ ಡಾ.ರಾಜ್ ಕಂಚಿನ ಪುತ್ಥಳಿ ಕಳವಾಗಿದೆ. 2 ದಿನದ ಹಿಂದೆ ರಾಜ್ ಪುತ್ಥಳಿ ಕಳ್ಳತನ ಮಾಡಲಾಗಿದೆ. ಘಟನೆ ಬಗ್ಗೆ ಅರಣ್ಯಾಧಿಕಾರಿ ಯೋಗೇಶ್ ಎಂಬುವರಿಂದ ದೂರು ದಾಖಲಾಗಿದೆ. ಈ ಬಗ್ಗೆ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದ್ದು ಸದ್ಯ ಅಮೃತಹಳ್ಳಿ ಪೊಲೀಸರು ಶಂಕಿತರಿಬ್ಬರನ್ನ ವಶಕ್ಕೆ ಪಡೆದಿದ್ದಾರೆ.
ವಿಜಯನಗರ: 15 ದಿನಗಳ ಹಿಂದೆ ಕಾಣೆಯಾಗಿದ್ದ ರೈತ ಶವವಾಗಿ ಪತ್ತೆ
ಕಳೆದ 15 ದಿನಗಳ ಹಿಂದೆ ಕಾಣೆಯಾಗಿದ್ದ ಹೂವಿನಹಡಗಲಿಯ ರೈತ ಬಣಕಾರ ಮಲ್ಲಪ್ಪ ಶವವಾಗಿ ಪತ್ತೆ ಆಗಿದ್ದಾರೆ. ಹೂವಿನಹಡಗಲಿ ಪಟ್ಟಣದ ಹೊರವಲಯದಲ್ಲಿ ರೈತ ಬಣಕಾರ ಮಲ್ಲಪ್ಪ ಮೃತದೇಹ ಪತ್ತೆ ಆಗಿದೆ. ಅಕ್ರಮ ಲೇಔಟ್ ವಿರುದ್ಧ ಹೋರಾಟ ಮಾಡುತ್ತಿದ್ದ ರೈತ ಬಣಕಾರ ಮಲ್ಲಪ್ಪ ಅನುಮಾನಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ.
ಬಳ್ಳಾರಿ: ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ
ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ ಮಾಡಲಾಗಿದೆ. ಬಂಧಿತರಿಂದ 46 ಲೀಟರ್ ಮದ್ಯ ವಶಕ್ಕೆ ಪಡೆಯಲಾಗಿದೆ. ಹಡಗಲಿ ತಾಲೂಕಿನ ಡೊಂಬ್ರಹಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿತ್ತು. ಈ ಹಿನ್ನೆಲೆ ಬಸವರಾಜ, ರಾಜು ಎನ್ನುವ ಆರೋಪಿಗಳಿಬ್ಬರ ಬಂಧನ ಮಾಡಲಾಗಿದೆ. ಹಿರೇಹಡಗಲಿ ಪೊಲೀಸರಿಂದ ಕಾರ್ಯಾಚರಣೆ ನಡೆಸಲಾಗಿದೆ. ವಿಜಯನಗರ ಜಿಲ್ಲೆಯ ಹಿರೇಹಡಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಇದನ್ನೂ ಓದಿ: ಮಂಡ್ಯದಲ್ಲಿ ಒಂದೇ ಕುಟುಂಬದ ಐವರ ಕೊಲೆ! ರಾತ್ರಿ ಮಲಗಿದ್ದಾಗ ಮಾರಕಾಸ್ತ್ರದಿಂದ ಕೊಚ್ಚಿ ಕೊಲೆಗೈದ ದುಷ್ಕರ್ಮಿಗಳು
ಇದನ್ನೂ ಓದಿ: ಹಿಂಡಲಗಾ ಜೈಲಿನಲ್ಲಿ ಕೊಲೆ ಆರೋಪಿ ಅನುಮಾನಾಸ್ಪದ ಸಾವು
Published On - 6:21 pm, Sun, 6 February 22