ಹಿಂಡಲಗಾ ಜೈಲಿನಲ್ಲಿ ಕೊಲೆ ಆರೋಪಿ ಅನುಮಾನಾಸ್ಪದ ಸಾವು

ಜೈಲು ಸಿಬ್ಬಂದಿ ವಿರುದ್ಧ ಗುರುರಾಜ್ ಸಂಬಂಧಿಕರು ಗರಂ ಆಗಿದ್ದು, ಎದೆ ನೋವಿದೆ ಎಂದು ಹೇಳಿದರೂ ಬೇಜವಾಬ್ದಾರಿತನ ತೋರಿದ್ದಾರೆ. ತಲೆ ಗುರುರಾಜನ ತಲೆ ಮತ್ತು ಕಾಲಿಗೆ ಗಾಯವಾಗಿದ್ದು ಅನುಮಾನ ಮೂಡಿಸುತ್ತಿದೆ. ಗುರುರಾಜ್​ ಸಾವಿಗೆ ಹಿಂಡಲಗಾ ಜೈಲು ಸಿಬ್ಬಂದಿಯೇ ಕಾರಣ ಎಂದು ಗುರುರಾಜ್ ದೊಡ್ಡಮನಿ ಸೋದರ ಕಿರಣ್​ ಗಂಭೀರ ಆರೋಪ ಮಾಡಿದ್ದಾರೆ.

ಹಿಂಡಲಗಾ ಜೈಲಿನಲ್ಲಿ ಕೊಲೆ ಆರೋಪಿ ಅನುಮಾನಾಸ್ಪದ ಸಾವು
ಹಿಂಡಲಗಾ ಜೈಲಿನಲ್ಲಿ ಕೊಲೆ ಆರೋಪಿ ಅನುಮಾನಾಸ್ಪದ ಸಾವು
Follow us
TV9 Web
| Updated By: ಸಾಧು ಶ್ರೀನಾಥ್​

Updated on: Feb 05, 2022 | 1:25 PM

ಬೆಳಗಾವಿ: ಹಿಂಡಲಗಾ ಜೈಲಿನಲ್ಲಿ ಕೊಲೆ ಆರೋಪಿಯೊಬ್ಬ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾನೆ. ಕೇರಳದ ಕುಖ್ಯಾತ ರೌಡಿ ತಸ್ಲಿಮ್ ಕೊಲೆ ಕೇಸ್​ನ ಆರೋಪಿ ಗುರುರಾಜ್ ದೊಡ್ಡಮನಿ ಮೃತಪಟ್ಟವ. ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ನಿನ್ನೆ ಗುರುರಾಜ್​ ಸಾವಿಗೀಡಾಗಿದ್ದಾನೆ. 15 ದಿನದ ಹಿಂದೆ ಜೈಲಿನಲ್ಲಿ ಗುರುರಾಜ್ ಮೇಲೆ ಹಲ್ಲೆಯೂ ಆಗಿತ್ತು. ಹಲ್ಲೆ ಬಳಿಕ ಆರೋಪಿ ಗುರುರಾಜ್ ಎದೆ ನೋವಿನಿಂದ ಬಳಲ್ತಿದ್ದ. ಸಂಬಂಧಿಗೆ ಕರೆ ಮಾಡಿ ಎದೆ ನೋವಿನ ಬಗ್ಗೆ ಹೇಳಿಕೊಂಡಿದ್ದ. 500 ರೂ. ಹಣ ಬೇಕೆಂದು ಸಂಬಂಧಿಗೆ ಗುರುರಾಜ್ ಕೇಳಿಕೊಂಡಿದ್ದ. ಇದಾದ ಕೆಲವೇ ಗಂಟೆಯಲ್ಲಿ ಮೃತಪಟ್ಟಿದ್ದಾನೆಂದು ಸಂಬಂಧಿಕರಿಗೆ ಕರೆ ಮಾಡಿದ ಜೈಲು ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ಜೈಲು ಸಿಬ್ಬಂದಿ ವಿರುದ್ಧ ಗುರುರಾಜ್ ಸಂಬಂಧಿಕರು ಗರಂ ಆಗಿದ್ದು, ಎದೆ ನೋವಿದೆ ಎಂದು ಹೇಳಿದರೂ ಬೇಜವಾಬ್ದಾರಿತನ ತೋರಿದ್ದಾರೆ. ತಲೆ ಗುರುರಾಜನ ತಲೆ ಮತ್ತು ಕಾಲಿಗೆ ಗಾಯವಾಗಿದ್ದು ಅನುಮಾನ ಮೂಡಿಸುತ್ತಿದೆ. ಗುರುರಾಜ್​ ಸಾವಿಗೆ ಹಿಂಡಲಗಾ ಜೈಲು ಸಿಬ್ಬಂದಿಯೇ ಕಾರಣ ಎಂದು ಗುರುರಾಜ್ ದೊಡ್ಡಮನಿ ಸೋದರ ಕಿರಣ್​ ಗಂಭೀರ ಆರೋಪ ಮಾಡಿದ್ದಾರೆ.

ಹಿಂಡಲಗಾ ಜೈಲು ಸಿಬ್ಬಂದಿ ವಿರುದ್ಧ ಬೆಳಗಾವಿ ಗ್ರಾಮಾಂತರ ಠಾಣೆಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ನಿನ್ನೆಯೇ ಮೃತಪಟ್ಟರೂ ಮರಣೋತ್ತರ ಪರೀಕ್ಷೆ ಮಾಡಿಸಿ ಶವ ನೀಡಿಲ್ಲ ಎಂದು ಹಿಂಡಲಗಾ ಜೈಲು ಸಿಬ್ಬಂದಿ ವಿರುದ್ಧ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕುಡಿದು ಚಿತ್​ ಆಗಿ, ಪೆಟ್ರೋಲ್ ಬಂಕ್‌ನಲ್ಲಿ ಕೆಳಗೆ ಬಿದ್ದಿದ್ದ ಕೆಇಬಿ ನೌಕರ: ಹಿಂಬಾಲಿಸಿ ಬಂದು ಆತನಿಂದ 11 ಲಕ್ಷ ಎಗರಿಸಿದರು! ಹಾಸನ: ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬರು ಪೆಟ್ರೋಲ್ ಬಂಕ್‌ನಲ್ಲಿ ಹಣ ಇಟ್ಟು, ಕೆಳಗೆ ಬಿದ್ದಿದ್ದರು. ಆದರೆ ಅವರನ್ನು ಹಿಂಬಾಲಿಸಿ ಬಂದಿದ್ದ ಖದೀಮರು ಅವರಿಂದ 11 ಲಕ್ಷ ರೂಪಾಯಿ ಎಗರಿಸಿ, ಪರಾರಿಯಾಗಿದ್ದರು. ಕೊನೆಗೆ ಅವರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕ್ಯಾತನಹಳ್ಳಿ ಗ್ರಾಮದ ಪ್ರಸನ್ನ ಹಾಗೂ ಜೋಡಿ ಕೃಷ್ಣಾಪುರ ಗ್ರಾಮದ ಮಂಜುನಾಥ್ ಬಂಧಿತ ಆರೋಪಿಗಳು. ಆರೋಪಿಗಳು ಕೆಇಬಿ ನೌಕರ ಸಂತೋಷ್ ಎಂಬುವವರಿಗೆ ಸೇರಿದ ಹಣವನ್ನು ಎಗರಿಸಿದ್ದರು.

ಕೆಇಬಿ ನೌಕರ ಸಂತೋಷ್ ಜನವರಿ 27 ರಂದು ಬ್ಯಾಂಕ್‌ನಿಂದ ಹಣ ಡ್ರಾ ಮಾಡಿಕೊಂಡು ಮನೆಗೆ ಹೊರಟಿದ್ದರು. ನಡುವೆ ಹಣದ ಸಮೇತ ಬಾರ್‌ಗೆ ತೆರಳಿ ಕಂಠಪೂರ್ತಿ ಕುಡಿದಿದ್ದರು. ಸಂತೋಷ್ ಬಳಿ ಹಣ ಇರುವುದನ್ನು ಬಾರ್‌‌ನಲ್ಲಿ ಗಮನಿಸಿದ್ದ ಪ್ರಸನ್ನ, ತನ್ನ ಸ್ನೇಹಿತ ಮಂಜುನಾಥ್‌ಗೆ ಕರೆ ಮಾಡಿ ಸಂತೋಷ್‌ನನ್ನು ಹಿಂಬಾಲಿಸಿದ್ದರು.

ಹಣದ‌ ಸಮೇತ ಪೆಟ್ರೋಲ್ ಹಾಕಿಸಲು ಸಂತೋಷ್ ಹಾಸನದ ಬಿ. ಕಾಟಿಹಳ್ಳಿಯ ಅರಸೀಕೆರೆ ರಸ್ತೆಯ ಪೆಟ್ರೋಲ್ ಬಂಕ್​ಗೆ ತೆರಳಿದ್ದ. ಆದರೆ ಕುಡಿದ ಮತ್ತಿನಲ್ಲಿ ಪೆಟ್ರೋಲ್ ಬಂಕ್‌ನಲ್ಲೇ ಹಣ ಇಟ್ಟು, ಕೆಳಗೆ ಬಿದ್ದುಬಿಟ್ಟಿದ್ದ. ಕಂಠಪೂರ್ತಿ ಕುಡಿದಿದ್ದರಿಂದ ಬಂಕ್‌ನಲ್ಲೇ ನಿದ್ರೆಗೆ ಜಾರಿದ್ದ ಸಂತೋಷ್! ಆದರೆ ಆತನನ್ನು ಹಿಂಬಾಲಿಸಿದ್ದ ಕಳ್ಳರು ಪೆಟ್ರೋಲ್ ಬಂಕ್ ಹೊರಗೆ ಕಾಯುತ್ತಿದ್ದರು. ಸುಮಾರು 45 ನಿಮಿಷ ಆದರೂ ಸುಖನಿದ್ರೆಯಲ್ಲಿದ್ದ ಸಂತೋಷ ಪೆಟ್ರೋಲ್ ಬಂಕ್‌ನಿಂದ ಹೊರಗೆ ಬಂದಿರಲಿಲ್ಲ.

ಆಗ ಪ್ರಸನ್ನ ಮತ್ತು ಮಂಜುನಾಥ್ ಬಂಕ್‌ ಒಳಗೆ ಪ್ರವೇಶಿಸಿದ್ದಾರೆ. ಬಂದವರೇ ಕೆಳಗೆಬಿದ್ದಿದ್ದ ಸಂತೋಷನಿಂದ ಹಣ ಎಗರಿಸಿ ಎಸ್ಕೇಪ್ ಆಗಿದ್ದಾರೆ. ಇಡೀ ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಎಚ್ಚೆತ್ತ ಸಂತೋಷ, ಬಡಾವಣೆ ಪೊಲೀಸ್ ಠಾಣೆಗೆ ತೆರಳಿ ಹಿಂಗಿಂಗೆಲ್ಲಾ ಆಯ್ತು ಅಂತಾ ದೂರು ನೀಡಿದ್ದಾನೆ. ಸಿಸಿಟಿವಿ ನೆರವಿನೊಂದಿಗೆ ಪ್ರಕರಣ ಭೇದಿಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 9,12,000 ಲಕ್ಷ ರೂ ನಗದು, ಎರಡು ಮೊಬೈಲ್ ಹಾಗೂ ಒಂದು ಪಲ್ಸರ್ ಬೈಕ್ ವಶ ಪಡಿಸಿಕೊಂಡಿದ್ದಾರೆ.

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್