Dasara: ಕೇವಲ 1 ರೂ.ಗೆ ಬಸ್​ ಟಿಕೆಟ್​ ಬುಕ್​ ಮಾಡಿ; ಖಾಸಗಿ ಸಂಸ್ಥೆಯಿಂದ ಭರ್ಜರಿ ಆಫರ್​

|

Updated on: Oct 17, 2023 | 1:16 PM

ದಸರಾ ರಜೆಯಿದ್ದು, ರಾಜ್ಯದ ಜನರು ವಿವಿಧ ಸ್ಥಳಗಳಿಗೆ ಭೇಟಿ ನೀಡಲು ಉತ್ಸುಕರಾಗಿದ್ದಾರೆ. ಆದರೆ ಪ್ರಯಾಣಿಸಲು ಬಸ್​​ ಟಿಕೆಟ್​ ದುಬಾರಿಯಾದ ಹಿನ್ನೆಲೆಯಲ್ಲಿ ಪ್ರವಾಸಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಆದರೆ ಇದೇ ವೇಳೆ ಪ್ರಯಾಣಿಕರಿಗೆ ಖಾಸಗಿ ಸಂಸ್ಥೆಯೊಂದು ಭರ್ಜರಿ ಆಫರ್​ ನೀಡಿದೆ.

Dasara: ಕೇವಲ 1 ರೂ.ಗೆ ಬಸ್​ ಟಿಕೆಟ್​ ಬುಕ್​ ಮಾಡಿ; ಖಾಸಗಿ ಸಂಸ್ಥೆಯಿಂದ ಭರ್ಜರಿ ಆಫರ್​
ಖಾಸಗಿ ಬಸ್​
Follow us on

ಬೆಂಗಳೂರು ಅ.17: ದಸರಾ (Dasara) ರಜೆಯಿದ್ದು, ರಾಜ್ಯದ ಜನರು ವಿವಿಧ ಸ್ಥಳಗಳಿಗೆ ಭೇಟಿ ನೀಡಲು ಉತ್ಸುಕರಾಗಿದ್ದಾರೆ. ಆದರೆ ಪ್ರಯಾಣಿಸಲು ಬಸ್​​ ಟಿಕೆಟ್​ (Bus Ticket) ದುಬಾರಿಯಾದ ಹಿನ್ನೆಲೆಯಲ್ಲಿ ಪ್ರವಾಸಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಆದರೆ ಇದೇ ವೇಳೆ ಪ್ರಯಾಣಿಕರಿಗೆ ಖಾಸಗಿ ಸಂಸ್ಥೆಯೊಂದು ಭರ್ಜರಿ ಆಫರ್​ ನೀಡಿದೆ. ಖಾಸಗಿ ಸಂಸ್ಥೆ Abhi Bus ಕೇವಲ 1 ರೂ.ಗೆ ಬಸ್​ ಟಿಕೆಟ್​ ಬುಕ್ಕಿಂಗ್​ಗೆ ಅವಕಾಶ ನೀಡಿದೆ.
ಅತ್ಯಂತ ಜನಪ್ರಿಯ ಬಸ್ ಬುಕಿಂಗ್ ಅಪ್ಲಿಕೇಶನ್ AbhiBus ಅಕ್ಟೋಬರ್ 19 ರಿಂದ ಅಕ್ಟೋಬರ್ 25ರ ವರೆಗಿನ ನಡುವಿನ ಪ್ರಯಾಣಕ್ಕೆ ಮಾತ್ರ ಈ ಆಫರ್​ ನೀಡಿದೆ. ಈ ಆಫರ್​ ಪಡೆಯಲು ಪ್ರಯಾಣಿಕರು “LUCKY1” ರಿಯಾಯಿತಿ ಕೋಡ್​ಅನ್ನು ಬಳಸಬೇಕು ಎಂದು ಹೇಳಿದೆ. ಮತ್ತೆ ದೀಪಾವಳಿಯಲ್ಲಿ ಈ ಆಫರ್​ ನೀಡಲಿದೆ.

ಹೊಸದಾಗಿ 30 ವಿಶೇಷ ರೈಲುಗಳನ್ನು ಬಿಟ್ಟ ಇಲಾಖೆ

ಅಕ್ಟೋಬರ್ 15 ರಂದಿ ದಸರಾ ರಜಾದಿನ ಆರಂಭವಾಗಿದೆ. ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ನವರಾತ್ರಿ ಅಥವಾ ದಸರಾ, ದೀಪಾವಳಿ ಹಬ್ಬಗಳನ್ನು ಆಚರಿಸಲಾಗುತ್ತದೆ. ಈ ಹಬ್ಬಗಳನ್ನು ಆಚರಿಸಲು ಹೆಚ್ಚಿನ ಸಂಖ್ಯೆ ಜನರು ತಮ್ಮ ಊರುಗಳಿಗೆ ಹೋಗುತ್ತಾರೆ. ಈ ವೇಳೆ ರೈಲು ಟಿಕೆಟ್ ಖರೀದಿಸುವುದು ತುಂಬಾ ಕಷ್ಟಕರವಾಗುತ್ತಿದೆ. ಮತ್ತು ರೈಲುಗಳು ರಶ್​​ ಆಗಿರುತ್ತವೆ.

ಇದನ್ನೂ ಓದಿ: Mysore Dasara 2023: ಮೈಸೂರು ದಸರಾ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ KSRTCಯಿಂದ ವಿಶೇಷ ಪ್ಯಾಕೇಜ್​; ಇಲ್ಲಿ ಡೀಟೈಲ್ಸ್​​​

ಹಬ್ಬಳ ಸಮಯದಲ್ಲಿ ಅಧಿಕ ಸಂಖ್ಯೆ ಪ್ರಯಾಣಿಕರು ಪ್ರಯಾಣಿಸುವುದರಿಂದ ಸೆಂಟ್ರಲ್​ ರೈಲ್ವೆ ಇಲಾಖೆ 30 ವಿಶೇಷ ರೈಲುಗಳನ್ನು ಬಿಟ್ಟಿದೆ. ರೈಲುಗಳು ಸಿಎಸ್​​ಎಮ್​ಟಿ – ನಾಗ್ಪುರ ದ್ವಿ-ವಾರದ ಸೂಪರ್ಫಾಸ್ಟ್ ವಿಶೇಷ (20) ಮತ್ತು ನಾಗ್ಪುರ-ಪುಣೆ ಸಾಪ್ತಾಹಿಕ ಸೂಪರ್ಫಾಸ್ಟ್ ವಿಶೇಷ (10) ರೈಲುಗಳು ಕಾರ್ಯನಿರ್ವಹಿಸಲಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ