ಬೆಂಗಳೂರು, ಡಿ.24: ಕ್ರಿಸ್ಮಸ್ (Christmas), ನ್ಯೂ ಇಯರ್(New Year) ಹಿನ್ನೆಲೆ ಸಾಲು ಸಾಲು ರಜೆಗಳು ಬಂದಿದ್ದು ಊರಿಗೆ ಹೋಗಲು ಪ್ಲ್ಯಾನ್ ಮಾಡಿಕೊಂಡವರಿಗೆ ಬಸ್ ಬುಕ್ಕಿಂಗ್ ಆ್ಯಪ್ಗಳು (Bus Booking Apps) ಶಾಕ್ ಕೊಟ್ಟಿವೆ. ಖಾಸಗಿ ಬಸ್ ಬುಕ್ಕಿಂಗ್ ಆ್ಯಪ್ಗಳು ಪ್ರಯಾಣಿಕರಿಂದ ಸುಲಿಗೆ ಮಾಡಲು ನಿಂತಿವೆ. ಸಾಲು ಸಾಲು ರಜೆ ಹಿನ್ನೆಲೆ ಖಾಸಗಿ ಬಸ್ ಟಿಕೆಟ್ ದರ ದುಪ್ಪಟ್ಟಾಗಿದೆ. ಜೊತೆಗೆ ಖಾಸಗಿ ಬಸ್ ಬುಕ್ಕಿಂಗ್ ವೆಬ್ ಸೈಟ್ನಲ್ಲಿ ಟಿಕೆಟ್ ದರ ಒನ್ ಟು ಡಬಲ್ ತೋರಿಸಲಾಗುತ್ತಿದೆ.
ಬೆಂಗಳೂರಿನಿಂದ ಬಹುತೇಕ ಊರುಗಳಿಗೆ ಖಾಸಗಿ ಬಸ್ಗಳು ದುಪ್ಪಟ್ಟು ದರ ನಿಗದಿ ಮಾಡಿವೆ. ಮತ್ತೊಂದೆಡೆ ಬಸ್ ಬುಕ್ಕಿಂಗ್ ಆ್ಯಪ್ಗಳಲ್ಲಿ ಮತ್ತಷ್ಟು ಹೆಚ್ಚಿನ ದರದಲ್ಲಿ ಟಿಕೆಟ್ ಬುಕ್ಕಿಂಗ್ ಮಾಡಬೇಕಿದೆ. ನಿನ್ನೆ, ಇಂದು ಮತ್ತು ನಾಳೆ ಮೂರು ದಿನಗಳ ಕಾಲ ರಜೆ ಹಿನ್ನೆಲೆ ಎಸಿ, ವೋಲ್ವೋ, ಮಲ್ಟಿ ಆ್ಯಕ್ಸಲ್ ಬಸ್ ಟಿಕೆಟ್ಗಳ ದರ ಸಾಮಾನ್ಯ ದರಕ್ಕಿಂತ ಎರಡು ಪಟ್ಟು ಹೆಚ್ಚಾಗಿದೆ. ಮತ್ತೊಂದೆಡೆ ಬಸ್ ಬುಕ್ಕಿಂಗ್ ಆ್ಯಪ್ಗಳು, ನಿರ್ವಾಹಣೆ ವೆಚ್ಚ, GST ಎಂದು ಟಿಕೆಟ್ ದರಕ್ಕಿಂತ ಮೂರುಪಟ್ಟು ಹೆಚ್ಚಿನ ಹಣ ಸುಲಿಗೆ ಮಾಡುತ್ತಿವೆ. ಖಾಸಗಿ ಬಸ್ ಬುಕ್ಕಿಂಗ್ ಆ್ಯಪ್ಗಳು ಪ್ರತಿ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರಿಂದ ಹೆಚ್ಚಿನ ಹಣ ಸುಲಿಗೆ ಮಾಡುತ್ತಿದೆ. ಬೇಕಾಬಿಟ್ಟಿ ದರ ಹೆಚ್ಚಿಸುತ್ತಿರುವ ಖಾಸಗಿ ಬಸ್ ಆ್ಯಪ್ಗಳ ಮೇಲೆ ಕ್ರಮ ಯಾವಾಗ ಎಂದು ಜನ ಪ್ರಶ್ನಿಸುತ್ತಿದ್ದಾರೆ.
ಇದನ್ನೂ ಓದಿ: ಕ್ರಿಸ್ಮಸ್ ಹಬ್ಬಕ್ಕೆ ಸಾವಿರ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಿದ KSRTC
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ