ಬೆಂಗಳೂರು:ನಗರದಲ್ಲಿ ವರ್ಷದಿಂದ ವರ್ಷಕ್ಕೆ ನೀರಿನ ಅಭಾವ ಹೆಚ್ಚಾಗ್ತಿದೆ. ಹೀಗಾಗಿ ಜಲಮಂಡಳಿ ಕಾವೇರಿ ನೀರನ್ನ ಮರುಬಳಕೆ ಮಾಡಲು ಮುಂದಾಗಿತ್ತು. ತ್ಯಾಜ್ಯ ನೀರನ್ನ ಶುದ್ಧೀಕರಿಸಿ ಆ ನೀರನ್ನ ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿದೆ. ಆದ್ರೆ ಆ ನೀರನ್ನ ಕೊಂಡುಕೊಳ್ಳಲು ಯಾರು ಮುಂದೆ ಬರುತ್ತಿಲ್ಲ. ಹೀಗಾಗಿ ಇನ್ಮುಂದೆ ಹೊಸದಾಗಿ ಕಟ್ಟಡ ನಿರ್ಮಾಣ ಮಾಡುವವರು ಕಡ್ಡಾಯವಾಗಿ ಎಸ್ಟಿಪಿಯಿಂದ ಶುದ್ಧಿಕರಿಸಿದ ನೀರನ್ನೇ ಬಳಸಬೇಕು ಎಂದು ಆದೇಶಿಸಿದೆ.
ಅಷ್ಟೆ ಅಲ್ಲ ಎಸ್ಟಿಪಿ ನೀರು ಬಳಸಲೇಬೇಕು ಇಲ್ಲವಾದಲ್ಲಿ ಬೋರ್ ವೆಲ್ ಕೊರೆಯಲು ಅನುಮತಿ ನೀಡಲ್ಲ ಅಂತಾ ಬಿಡಬ್ಲ್ಯೂ ಎಸ್ ಎಸ್ ಬಿ ಅಧಿಕಾರಿಗಳು ಹೇಳ್ತಿದ್ದಾರೆ. ಇನ್ಮುಂದೆ ಸಿಟಿಯಲ್ಲಿ ಹೊಸದಾಗಿ ಕಟ್ಟಡ ಮನೆ ನಿರ್ಮಾಣ ಮಾಡುವವರು ಎಸ್ ಟಿಪಿ ನೀರು ಬಳಸುವುದು ಕಡ್ಡಾಯ ಅಂತಿದೆ ಜಲಮಂಡಳಿ.