ಗೊರಗುಂಟೆ ಪಾಳ್ಯದಲ್ಲಿ ಎಂಟ್ರಿ ಗೇಟ್ ಕ್ಲೋಸ್: ಮೆಟ್ರೋ ಪ್ರಯಾಣಿಕರು ಗರಂ

ಗೊರಗುಂಟೆ ಪಾಳ್ಯದಲ್ಲಿ ಎಂಟ್ರಿ ಗೇಟ್ ಕ್ಲೋಸ್: ಮೆಟ್ರೋ ಪ್ರಯಾಣಿಕರು ಗರಂ

ಬೆಂಗಳೂರು: ಗೊರಗುಂಟೆ ಪಾಳ್ಯ ನಮ್ಮ ‌ಮೆಟ್ರೋ ಸಿಬ್ಬಂದಿ ವಿರುದ್ಧ ಪ್ರಯಾಣಿಕರು ಫುಲ್ ಗರಂ ಆಗಿದ್ದಾರೆ‌. ಪ್ರಯಾಣಿಕರು ಓಡಾಡುವ ಎಂಟ್ರಿ ಗೇಟ್ ಕ್ಲೋಸ್ ಮಾಡಿರುವ ವಿಚಾರಕ್ಕೆ ತಡರಾತ್ರಿ ಮಹಿಳೆಯರು ಕ್ಲಾಸ್ ತೆಗೆದುಕೊಂಡಿದ್ದು‌, ಗೇಟ್ ಓಪನ್ ಮಾಡುವಂತೆ ಒತ್ತಾಯಿಸಿದ್ದಾರೆ‌. ಗೊರಗುಂಟೆ ಪಾಳ್ಯ ಮೆಟ್ರೋ ಸ್ಟೇಷನ್​ನಲ್ಲಿ ಎರಡು ಎಗ್ಸಿಟ್ ಗೇಟ್​ಗಳಿವೆ. ಗೊರಗುಂಟೆ ಪಾಳ್ಯ ಬಸ್ ಸ್ಟಾಪ್​ನಿಂದ ಒಂದು ಎಂಟ್ರಿ ಗೇಟ್ ಮತ್ತು RNS ಕಡೆ ಒಂದು ಗೇಟ್. ಪ್ರಯಾಣಿಕರು ಗೊರಗುಂಟೆ ಪಾಳ್ಯ ಬಸ್ ಸ್ಟಾಪ್ ಕಡೆ ಇರುವ ಗೇಟ್ ಅನ್ನು ಉಪಯೋಗಿಸುತ್ತಾರೆ. […]

sadhu srinath

|

Dec 28, 2019 | 12:13 PM

ಬೆಂಗಳೂರು: ಗೊರಗುಂಟೆ ಪಾಳ್ಯ ನಮ್ಮ ‌ಮೆಟ್ರೋ ಸಿಬ್ಬಂದಿ ವಿರುದ್ಧ ಪ್ರಯಾಣಿಕರು ಫುಲ್ ಗರಂ ಆಗಿದ್ದಾರೆ‌. ಪ್ರಯಾಣಿಕರು ಓಡಾಡುವ ಎಂಟ್ರಿ ಗೇಟ್ ಕ್ಲೋಸ್ ಮಾಡಿರುವ ವಿಚಾರಕ್ಕೆ ತಡರಾತ್ರಿ ಮಹಿಳೆಯರು ಕ್ಲಾಸ್ ತೆಗೆದುಕೊಂಡಿದ್ದು‌, ಗೇಟ್ ಓಪನ್ ಮಾಡುವಂತೆ ಒತ್ತಾಯಿಸಿದ್ದಾರೆ‌.

ಗೊರಗುಂಟೆ ಪಾಳ್ಯ ಮೆಟ್ರೋ ಸ್ಟೇಷನ್​ನಲ್ಲಿ ಎರಡು ಎಗ್ಸಿಟ್ ಗೇಟ್​ಗಳಿವೆ. ಗೊರಗುಂಟೆ ಪಾಳ್ಯ ಬಸ್ ಸ್ಟಾಪ್​ನಿಂದ ಒಂದು ಎಂಟ್ರಿ ಗೇಟ್ ಮತ್ತು RNS ಕಡೆ ಒಂದು ಗೇಟ್. ಪ್ರಯಾಣಿಕರು ಗೊರಗುಂಟೆ ಪಾಳ್ಯ ಬಸ್ ಸ್ಟಾಪ್ ಕಡೆ ಇರುವ ಗೇಟ್ ಅನ್ನು ಉಪಯೋಗಿಸುತ್ತಾರೆ. ಇದು ಮಹಿಳೆಯರಿಗೆ ಓಡಾಡಲು ಸುರಕ್ಷಿತವಾದ ಗೇಟ್ ಎನ್ನಲಾಗಿದೆ. ಆದರೆ‌ ಸಿಬ್ಬಂದಿ ಕೊರತೆ ಅಂತಾ ರಾತ್ರಿ 10 ಗಂಟೆಯ ನಂತರ ಎಂಟ್ರಿ ಗೇಟ್ ಅನ್ನು ಕ್ಲೋಸ್ ಮಾಡ್ತಿದ್ದಾರೆಂದು ಆರೋಪಿಸಲಾಗಿದೆ.

RNS ಗೇಟ್ ಮೂಲಕ ಗೊರಗುಂಟೆಪಾಳ್ಯ ಬಸ್ ಸ್ಟಾಪ್​ಗೆ ತಲುಪಲು 200 ಮೀಟರ್ ಕ್ರಮಿಸಬೇಕಾಗಿದ್ದು, ಅ ಜಾಗದಲ್ಲಿ ಲೈಟ್ ಸಮಸ್ಯೆ ಇದೆ. ಹೀಗಾಗಿ ಮಹಿಳೆಯರಿಗೆ ಯಾವ ಸಮಯದಲ್ಲಿ ಅನಾಹುತ ಆಗುತ್ತೋ ಗೊತ್ತಿಲ್ಲ. ಗೊರಗುಂಟೆ ಬಸ್ ಸ್ಟಾಪದ ಕಡೆ ಇರುವ ಗೇಟ್ ಓಪನ್ ಮಾಡಿದ್ರೆ ಒಂದು ನಿಮಿಷದಲ್ಲಿ ಬಸ್ ಸ್ಟಾಪ್ ತಲುಪಬಹುದು ಆಗಾಗಿ ಕ್ಲೋಸ್ ಮಾಡಿರುವ ಗೇಟ್ ಅನ್ನು ಓಪನ್ ಮಾಡಿ ಅಂತಾ ಮಹಿಳೆಯರು ಗರಂ ಆಗಿದ್ದಾರೆ.

Follow us on

Related Stories

Most Read Stories

Click on your DTH Provider to Add TV9 Kannada