ಬೆಂಗಳೂರು, ಸೆ.03: ಪ್ರಸಕ್ತ 2024ರ ಸಾಲಿನ ಬಿಜೆಪಿ ಸದಸ್ಯತ್ವ (BJP Membership Drive) ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಸೋಮವಾರ ಚಾಲನೆ ನೀಡಿದ್ದಾರೆ. ಇದೀಗ ಇಡೀ ದೇಶದಲ್ಲಿ ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಜನರನ್ನು ತಮ್ಮ ಪಕ್ಷದ ಸದಸ್ಯರನ್ನಾಗಿ ಮಾಡಲು ಬಿಜೆಪಿ ನಾಯಕರು ಮುಂದಾಗಿದ್ದಾರೆ. ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ (BY Vijayendra) ಅವರು ಯುವ ಜನತೆ ಬಿಜೆಪಿ ಸದಸ್ಯತ್ವ ಪಡೆಯಲು ಕರೆ ನೀಡಿದ್ದಾರೆ.
ನಮ್ಮೆಲ್ಲರ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿ ಅವರು ದೇಶಾದ್ಯಂತ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದ್ದು ಅವರ ನಾಯಕತ್ವದಲ್ಲಿ ದೇಶವು ಜಗತ್ ಒಂದೇ ಭಾರತ್ ಧ್ಯೇಯದೊಂದಿಗೆ ಸಾಗುತ್ತಿದ್ದು ಎಲ್ಲರೂ 8800002024 ನಂಬರ್ ಗೆ ಮಿಸ್ಡ್ ಕಾಲ್ ನೀಡಿ, ಈ ಕೆಳಗಿನ ಲಿಂಕ್ ಬಳಸಿ ಬಿಜೆಪಿ ಸದಸ್ಯರಾಗಿ ಎಂದು ಮನವಿ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಬಿ.ವೈ.ವಿಜಯೇಂದ್ರ ಅವರು ವಿಡಿಯೋ ಹಂಚಿಕೊಂಡಿದ್ದಾರೆ.
ನಮ್ಮೆಲ್ಲರ ನೆಚ್ಚಿನ ಪ್ರಧಾನಿ ಶ್ರೀ ನರೇಂದ್ರ ಮೋದಿಜೀ ಅವರು ದೇಶಾದ್ಯಂತ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದ್ದು ಅವರ ನಾಯಕತ್ವದಲ್ಲಿ ದೇಶವು ಜಗತ್ ಒಂದೇ ಭಾರತ್ ಧ್ಯೇಯದೊಂದಿಗೆ ಸಾಗುತ್ತಿದ್ದು ಎಲ್ಲರೂ 8800002024 ನಂಬರ್ ಗೆ ಮಿಸ್ಡ್ ಕಾಲ್ ನೀಡಿ, ಈ ಕೆಳಗಿನ ಲಿಂಕ್ ಬಳಸಿ https://t.co/EJFIebp0qY ಬಿಜೆಪಿ ಸದಸ್ಯರಾಗಿ.… pic.twitter.com/BuAesBbtdW
— Vijayendra Yediyurappa (@BYVijayendra) September 2, 2024
ಇದನ್ನೂ ಓದಿ: Narendra Modi: ಭಾರತದಲ್ಲಿ ಪ್ರಜಾಸತ್ತಾತ್ಮಕ ಪ್ರಕ್ರಿಯೆ ಅನುಸರಿಸುತ್ತಿರುವ ಏಕೈಕ ರಾಜಕೀಯ ಪಕ್ಷ ಬಿಜೆಪಿ; ಪ್ರಧಾನಿ ಮೋದಿ
Live:- ಪ್ರಧಾನಿ ಶ್ರೀ @narendramodi ಅವರಿಂದ ಬಿಜೆಪಿ ರಾಷ್ಟೀಯ ಸದಸ್ಯತಾ ಅಭಿಯಾನಕ್ಕೆ ಚಾಲನೆ. #BJPMembershipDrive #SadasyataAbhiyan2024https://t.co/EWPkXRnoc1
— BJP Karnataka (@BJP4Karnataka) September 2, 2024
ಎರಡು ಹಂತದಲ್ಲಿ ಸದಸ್ಯತ್ವ ನೋಂದಣಿ ಅಭಿಯಾನ ನಡೆಯಲಿದೆ. ಮೊದಲ ಹಂತ ಸೆಪ್ಟೆಂಬರ್ 2 ರಿಂದ 25 ಮತ್ತು ಎರಡನೇ ಹಂತ ಅಕ್ಟೋಬರ್ 1 ರಿಂದ 15 ರವರೆಗೆ ನಡೆಯಲಿದೆ. 10 ಕೋಟಿಗೂ ಅಧಿಕ ಜನರನ್ನು ನೋಂದಣಿ ಮಾಡುವ ಗುರಿ ಹಾಕಿಕೊಳ್ಳಲಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 9:29 am, Tue, 3 September 24