ಬೆಂಗಳೂರು, (ಫೆಬ್ರವರಿ 10): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ(Bengaluru) ರೋಡ್ ರೇಜ್ ಪ್ರಕರಣಗಳು ಹೆಚ್ಚಾಗುತ್ತಿವೆ. ನಿನ್ನೆ( ಫೆಬ್ರುವರಿ 9ರ) ರಾತ್ರಿ ಹೆಬ್ಬಾಳ ಫ್ಲೈಓವರ್ ( hebbal flyover) ಮೇಲೆ ಮತ್ತೊಂದು ರೋಡ್ ರೇಜ್ ಪ್ರಕರಣ ನಡೆದಿದೆ. ಹೌದು..ಕ್ಯಾಬ್‌ಗೆ ಬೇರೊಂದು ಕಾರು ಟಚ್ ಆಗಿದ್ದಕ್ಕೆ ಗಲಾಟೆ ಶುರುವಾಗಿದ್ದು, ಗಲಾಟೆ ವೇಳೆ ಕ್ಯಾಬ್ ಚಾಲಕ ಗಲಾಟೆಯಲ್ಲಿ ಪ್ಯಾಂಟ್ ಬಿಚ್ಚಿಲು ಮುಂದಾಗಿದ್ದಾನೆ. ಕ್ಯಾಬ್ ಚಾಲಕನ ಈ ಅಸಭ್ಯ ವರ್ತನೆಗೆ ಇತರೆ ವಾಹನ ಸವಾರರು ರೊಚ್ಚಿಗೆದಿದ್ದಾರೆ. ಇದರಿಂದ ಗಲಾಟೆ ಮತ್ತೊಷ್ಟು ಹೆಚ್ಚಾಗಿದೆ. ಪ್ಯಾಂಟ್ ಬಿಚ್ಚಿಲು ಮುಂದಾಗಿದ್ದ ಕ್ಯಾಬ್ ಚಾಲಕನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಬಗ್ಗೆ ಕ್ರಮಕೈಗೊಳ್ಳುವಂತೆ ನೆಟ್ಟಿಗರು ಪೊಲೀಸರಿಗೆ ಮನವಿ ಮಾಡಿದ್ದಾರೆ.
ಬೆಂಗಳೂರಿನ ಹೆಬ್ಬಾಳ ಫ್ಲೈಓವರ್ ಹೋಗುವಾಗ ಕ್ಯಾಬ್‌ಗೆ ಮತ್ತೊಂದು ಕಾರು ಟಚ್ ಆಗಿತ್ತು. ಇದರಿಂದ ಸಿಟ್ಟಿಗೆದ್ದು ಕ್ಯಾಬ್ ಚಾಲಕ ಹಾಗೂ ಕಾರಿನ ಡ್ರೈವರ್ ಮಧ್ಯೆ ಗಲಾಟೆ ಶುರುವಾಗಿದೆ. ಗಲಾಟೆಯಲ್ಲಿ ಮಾತಿನ ಚಕಮಕಿ ನಡೆದಿದ್ದು, ಈ ವೇಳೆ ಕೋಪಗೊಂಡ ಕ್ಯಾಬ್ ಚಾಲಕ ಪ್ಯಾಂಟ್ ಬಿಚ್ಚಿ ಅಸಭ್ಯವಾಗಿ ವರ್ತಿಸಿದ್ದಾನೆ. ಚಾಲಕನ ವಿಕೃತಿಗೆ ಗಲಾಟೆ ಮತ್ತಷ್ಟು ಹೆಚ್ಚಾಗಿದೆ.
ಇದನ್ನೂ ಓದಿ: Hit And Run: ಬೆಂಗಳೂರಿನಲ್ಲಿ ಹಿಟ್ ಆ್ಯಂಡ್ ರನ್ಗೆ ಮಹಿಳೆ ಬಲಿ
@CPBlr Shocked and disgusted by the appalling behavior of a cab driver KA03 AJ 1333 who exposed himself on the road today on Hebbal flyover. Such indecent acts have no place in our community. Requesting swift action @DCPNEBCP to ensure the safety and decency of all road users. pic.twitter.com/a5SnzbPYds
— Gautham Azad (@Gauthamazad) February 9, 2024
ಕ್ಯಾಬ್ ಚಾಲಕನ ವರ್ತನೆಗೆ ಇತರೆ ವಾಹನ ಸವಾರರು ಆಕ್ರೋಶ ಹೊರಹಾಕಿದ್ದಾರೆ. ಕಾರಲ್ಲಿ ಮಹಿಳೆಯರು ಮಕ್ಕಳು ಇದ್ದರೂ, ಅವರ ಮುಂದೆ ಪ್ಯಾಂಟ್ ಬಿಚ್ಚಿ ಅಸಭ್ಯವಾಗಿ ವರ್ತಿಸಿದ್ದಕ್ಕೆ ಕಿಡಿಕಾರಿದ್ದಾರೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿ ಚಾಲಕನ ವಿರುದ್ಧ ಕ್ರಮಕೈಗೊಳ್ಳುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ