Hit And Run: ಬೆಂಗಳೂರಿನಲ್ಲಿ ಹಿಟ್​ ಆ್ಯಂಡ್​ ರನ್​ಗೆ ಮಹಿಳೆ ಬಲಿ

ಶ್ರೀರಂಗಪಟ್ಟಣಕ್ಕೆ ಹೋಗಲು ಬೆಳಗಿನ‌ ಜಾವ 5:40ರ ಸುಮಾರಿಗೆ ಮನೆ ಬಿಟ್ಟು ಮಹಾಲಕ್ಷ್ಮಿ ಲೇಔಟ್ ಬಸ್ ನಿಲ್ದಾಣಕ್ಕೆ ಬರ್ತಿದ್ದ ಆಶಾರಾಣಿ ಎಂಬ 62 ವರ್ಷ ವಯಸ್ಸಿನ ಮಹಿಳೆಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ಸ್ಥಳೀಯ ಆಸ್ಪತ್ರೆಗೆ ಮಹಿಳೆಯನ್ನು ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಗಿದ್ದು ಚಿಕಿತ್ಸೆ ಫಲಿಸದೆ ಪ್ರಾಣಬಿಟ್ಟಿದ್ದಾರೆ.

Hit And Run: ಬೆಂಗಳೂರಿನಲ್ಲಿ ಹಿಟ್​ ಆ್ಯಂಡ್​ ರನ್​ಗೆ ಮಹಿಳೆ ಬಲಿ
ಬೆಂಗಳೂರಿನಲ್ಲಿ ಹಿಟ್​ ಆ್ಯಂಡ್​ ರನ್​ಗೆ ಮಹಿಳೆ ಬಲಿ
Follow us
Prajwal Kumar NY
| Updated By: ಆಯೇಷಾ ಬಾನು

Updated on: Feb 10, 2024 | 7:39 AM

ಬೆಂಗಳೂರು, ಫೆ.10: ಬೆಂಗಳೂರಿನಲ್ಲಿ ಹಿಟ್​ ಆ್ಯಂಡ್​ ರನ್​ಗೆ (Hit And Run) ಮಹಿಳೆ ಬಲಿಯಾಗಿದ್ದಾರೆ (Death). ಮಹಾಲಕ್ಷ್ಮೀ ಲೇಔಟ್ ಮೆಟ್ರೋ ನಿಲ್ದಾಣ ಬಳಿ 62 ವರ್ಷದ ಆಶಾರಾಣಿ ಎಂಬುವವರಿಗೆ ಅಪರಿಚಿತ ವಾಹನ ಡಿಕ್ಕಿಯಾಗಿದ್ದು ಮಹಿಳೆಯನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಪ್ರಾಣಬಿಟ್ಟಿದ್ದಾರೆ. ಸ್ಥಳಕ್ಕೆ ಮಲ್ಲೇಶ್ವರಂ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಮೃತ ಆಶಾರಾಣಿ ಅವರು ಶ್ರೀರಂಗಪಟ್ಟಣಕ್ಕೆ ಹೋಗಲು ಬೆಳಗಿನ‌ ಜಾವ 5:40ರ ಸುಮಾರಿಗೆ ಮನೆ ಬಿಟ್ಟು ಮಹಾಲಕ್ಷ್ಮಿ ಲೇಔಟ್ ಬಸ್ ನಿಲ್ದಾಣಕ್ಕೆ ಬರ್ತಿದ್ದರು. ಈ ವೇಳೆ ಅಪಘಾತ ಸಂಭವಿಸಿದೆ. ಆರು ಘಂಟೆ ಸಮಯದಲ್ಲಿ ಘಟನೆ ನಡೆದಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ನಸುಕಿನ ವೇಳೆ ಬೆಳಕು ಕಡಿಮೆ ಇದ್ದ ಕಾರಣ ಯಾವ ವಾಹನ ಡಿಕ್ಕಿ ಹೊಡೆದಿದೆ ಎಂಬುದು ಪತ್ತೆಯಾಗಿಲ್ಲ. ಅಪಘಾತ ಬಳಿಕ ಮಹಿಳೆಯನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಪ್ರಾಣ ಹೋಗಿದೆ.

ಖಾಸಗಿ ಬಸ್ ಡಿಕ್ಕಿ, ಬೈಕ್ ಸವಾರ

ಖಾಸಗಿ ಬಸ್ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಚಾಮರಾಜನಗರ ತಾಲೂಕಿನ ದೊಡ್ಡ ರಾಯಪೇಟೆ ಬಳಿ ಘಟನೆ ನಡೆದಿದ್ದು, ಮಂಗಲ ಗ್ರಾಮದ ನಿವಾಸಿ ಅಶೋಕ್ ಮೃತಪಟ್ಟ ದುರ್ದೈವಿ. ಮೃತನು ಚಾಮರಾಜನಗರದಿಂದ ದೊಡ್ಡರಾಯಪೇಟೆಗೆ ತೆರಳುವಾಗ ಅಪಘಾತ ಸಂಭವಿಸಿದ್ದು, ಚಾಲಕನನ್ನು ವಶಕ್ಕೆ ಪಡೆದ ಪೊಲೀಸರು, ಬಸ್ ಜಪ್ತಿ ಮಾಡಿದ್ದಾರೆ.

ಇದನ್ನೂ ಓದಿ: ಪಾದಚಾರಿಗಳ ಕಷ್ಟ ಒಂದೆರೆಡಲ್ಲ; ಬನಶಂಕರಿ‌ ಜಂಕ್ಷನ್​ಗೆ ಬೇಕಿದೆ ಸ್ಕೈ ವಾಕ್

ಮೀನು ಹಿಡಿಯಲು ಹೋಗಿದ್ದ ತಂದೆ-ಮಗ ಸಾವು

ಹಳ್ಳದಲ್ಲಿ ಮೀನು ಹಿಡಿಯಲು ಹೋಗಿದ್ದ ತಂದೆ-ಮಗ ಸಾವನ್ನಪ್ಪಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಂಚಿಕೇರಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಹಳ್ಳಿಗದ್ದೆ ಗ್ರಾಮದ ಖಲಂದರ್ ಫಕ್ರುಸಾಬ್, ಪುತ್ರ ತನ್ವೀರ್ ಮೃತಪಟ್ಟ ದುರ್ದೈವಿಗಳು. ನಿನ್ನೆ ಬೇಡ್ತಿ ಹಳ್ಳದಲ್ಲಿ ಮೀನು ಹಿಡಿಯಲು ಹೋಗಿದ್ರಂತೆ. ರಾತ್ರಿಯಾದ್ರೂ ಮನೆಗೆ ಬಾರದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹುಡುಕಾಟ ನಡೆಸಿದ್ದಾರೆ. ಈ ವೇಳೆ ಹಳ್ಳದಲ್ಲಿ ಇಬ್ಬರ ಮೃತದೇಹಗಳು ಪತ್ತೆಯಾಗಿದ್ವು. ಸ್ಥಳೀಯರ ಸಹಾಯದಿಂದ ಪೊಲೀಸರು ಮೃತದೇಹಗಳನ್ನು ಹೊರತೆಗೆದಿದ್ದಾರೆ.

ಖುತ್ಭಾ ಕೇಳಲು ಕುಳಿತಿದ್ದಾಗ ಹೃದಯಾಘಾತಕ್ಕೆ ಬಲಿ

ಖುತ್ಭಾ ಕೇಳಲು ಕುಳಿತಿದ್ದಾಗ ಕುಸಿದು ಬಿದ್ದು ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಉಡುಪಿ ನಗರ ಬಸ್ ನಿಲ್ದಾಣದ ಅಂಜುಮಾನ್ ಮಸೀದಿಯಲ್ಲಿ ಘಟನೆ ನಡೆದಿದ್ದು, ದೊಡ್ಡಣಗುಡ್ಡೆಯ ಕರಂಬಳ್ಳಿ ನಿವಾಸಿ 55 ವರ್ಷದ ಮುಸ್ತಾಕ್ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ನಿನ್ನೆ ಶುಕ್ರವಾರದ ಜುಮಾ ನಮಾಜ್​ಗಾಗಿ ಅಂಜುಮಾನ್ ಮಸೀದಿಗೆ ಬಂದಿದ್ದ. ಇನ್ನೂ ಮುಸ್ತಾಕ್ ಕುಸಿದು ಬೀಳುವ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ