Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೆಳೆಯನೊಂದಿಗೆ ಸರಸ ಸಲ್ಲಾಪಕ್ಕೆ ಅಡ್ಡಿಯಾಗಿದ್ದ 5-ವರ್ಷದ ಅಂಗವಿಕಲ ಮಗಳನ್ನು ವಿಚ್ಛೇದಿತ ಮಹಿಳೆ ಕೊಂದೇಬಿಟ್ಟಳು!

ಗೆಳೆಯನೊಂದಿಗೆ ಸರಸ ಸಲ್ಲಾಪಕ್ಕೆ ಅಡ್ಡಿಯಾಗಿದ್ದ 5-ವರ್ಷದ ಅಂಗವಿಕಲ ಮಗಳನ್ನು ವಿಚ್ಛೇದಿತ ಮಹಿಳೆ ಕೊಂದೇಬಿಟ್ಟಳು!

ಅರುಣ್​ ಕುಮಾರ್​ ಬೆಳ್ಳಿ
|

Updated on: Feb 09, 2024 | 7:07 PM

ಜ್ಯೋತಿಯ ಇನ್ನೊಂದು ಮಗು ಸುರಕ್ಷಿತವಾಗಿದೆಯಾದರೂ ಅದರ ಭವಿಷ್ಯದ ಬಗ್ಗೆ ಯೋಚಿಸಿದರೆ ಗಾಬರಿಯಾಗುತ್ತದೆ. ತಾಯಿ ಜೈಲು ಪಾಲು, ಹುಟ್ಟಿಸಿದ ಅಪ್ಪ ಎಲ್ಲೋ ಏನೋ? ಜ್ಯೋತಿಯ ಸಂಬಂಧಿಕರಲ್ಲಿ ಯಾರಾದರು ಮಗುವಿನ ಪೋಷಣೆ ಮಾಡಿಯಾರೇ? ಹಂತಕಿ ಜ್ಯೋತಿಯ ಕತೆಯನ್ನು ಹುಬ್ಬಳ್ಳಿ-ಧಾರವಾಡ ಎಸ್ ಪಿ ರೇಣುಕಾ ಕೆ ಸುಕುಮಾರ್ ಮಾಧ್ಯಮಗಳಿಗೆ ವಿವರಿಸಿದರು.

ಧಾರವಾಡ: ಆಕೆಯೊಬ್ಬ ಡಿವೋರ್ಸೀ ಮತ್ತು ಎರಡು ಅವಳಿ ಹೆಣ್ಣುಮಕ್ಕಳ ತಾಯಿ, ಎರಡರಲ್ಲಿ ಒಂದು ಮಗುವಿಗೆ ಅಂಗವೈಕಲ್ಯ. ಏತನ್ಮಧ್ಯೆ ಬೇರೊಬ್ಬ ಪುರುಷನೊಂದಿಗೆ ಸ್ನೇಹ ಬೆಳಸಿ ಅವನೊಂದಿಗೆ ಸಂಸಾರ ನಡೆಸಲು ಅಣಿಯಾಗಿದ್ದ ಆಕೆಗೆ ವಿಶೇಷ ಚೇತನದ ಮಗು ಹೊರೆಯೆನಿಸತೊಡಗಿತ್ತು ಮತ್ತು ಅಡ್ಡಿಯಾಗತೊಡಗಿತ್ತು. ಅದನ್ನು ನಿವಾರಿಸಲೇಬೇಕಿತ್ತು. ಅದಕ್ಕಾಗಿ ಈ ಪಾಪಿ ಹೆಂಗಸು ಮಾಡಿದ್ದೇನು ಗೊತ್ತಾ? ಮನೆಯಲ್ಲಿದ್ದ ತರಕಾರಿ ಕಟ್ ಮಾಡುವ ಚಾಕುವಿನಿಂದ 5-ವರ್ಷದ ಪುಟಾಣಿಯ ಕತ್ತು ಸೀಳಿ ಹತ್ಯೆ! ಅಂದಹಾಗೆ, ಜ್ಯೋತಿ (Jyoti) ಹೆಸರಿನ ಹಂತಕಿ ಮತ್ತು ಅಪರಾಧದಲ್ಲೂ ಅವಳ ಪಾಲುದಾರನಾದ ಲಿವ್-ಇನ್ ಸಂಗಾತಿ ರಾಹುಲ್ ನನ್ನು (Rahul) ಹುಬಳ್ಳಿ ಉಪನಗರದ ಪೊಲೀಸರು ಬಂಧಿಸಿದ್ದಾರೆ. ಜ್ಯೋತಿ ಧಾರವಾಡದ ಕಮಲಾಪುರದವಳಾದರೆ, ಗೆಣೆಕಾರ ರಾಹುಲ್ ಹುಬ್ಬಳ್ಳಿಯ ನವನಗರದವನು.

ಹತ್ಯೆಗೀಡಾದ ಮಗುವಿನ ಹೆಸರು ಸಹನಾ ಹಿರೇಮಠ (Sahana Hiremath), ಜ್ಯೋತಿಯ ಇನ್ನೊಂದು ಮಗು ಸುರಕ್ಷಿತವಾಗಿದೆಯಾದರೂ ಅದರ ಭವಿಷ್ಯದ ಬಗ್ಗೆ ಯೋಚಿಸಿದರೆ ಗಾಬರಿಯಾಗುತ್ತದೆ. ತಾಯಿ ಜೈಲು ಪಾಲು, ಹುಟ್ಟಿಸಿದ ಅಪ್ಪ ಎಲ್ಲೋ ಏನೋ? ಜ್ಯೋತಿಯ ಸಂಬಂಧಿಕರಲ್ಲಿ ಯಾರಾದರು ಮಗುವಿನ ಪೋಷಣೆ ಮಾಡಿಯಾರೇ? ಹಂತಕಿ ಜ್ಯೋತಿಯ ಕತೆಯನ್ನು ಹುಬ್ಬಳ್ಳಿ-ಧಾರವಾಡ ಎಸ್ ಪಿ ರೇಣುಕಾ ಕೆ ಸುಕುಮಾರ್ (Renuka K Sukumar) ಮಾಧ್ಯಮಗಳಿಗೆ ವಿವರಿಸಿದರು. ವಿಡಿಯೋ ಬಲಭಾಗದಲ್ಲಿ ಜ್ಯೋತಿಯನ್ನು ನೋಡಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ