ಬೆಂಗಳೂರು, (ಸೆಪ್ಟೆಂಬರ್ 24): ಕಾವೇರಿ ನೀರಿಗಾಗಿ(Cauvery Water Dispute) ಪ್ರತಿಭಟನೆ ಮತ್ತಷ್ಟು ತೀವ್ರಗೊಳಿಸಲು ವಿವಿಧ ಸಂಘಟನೆಗಳು ತೀರ್ಮಾನಿಸಿದ್ದು, ಸೆಪ್ಟೆಂಬರ್ 26 ಮಂಗಳವಾರ ಬೆಂಗಳೂರು ಬಂದ್(Bengaluru Bandh) ಮಾಡಲು ನಿರ್ಧರಿಸಿವೆ. ಇಂದು (ಸೆ.24) ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ನಡೆದ ಸಭೆಯಲ್ಲಿ ಕಾವೇರಿ ನೀರಿಗಾಗಿ ಬೆಂಗಳೂರು ಬಂದ್‌ಗೆ ಒಮ್ಮತದ ತೀರ್ಮಾನ ಕೈಗೊಳ್ಳಲಾಗಿದ್ದು, ವಿವಿಧ ಸಂಘಟನೆಗಳು ಬಂದ್‌ಗೆ ಬೆಂಬಲ ಘೋಷಿಸಿವೆ. ಹೀಗಾಗಿ ಮಂಗಳವಾರ ಬೆಂಗಳೂರು ಸಂಪೂರ್ಣವಾಗಿ ಬಂದ್ ಆಗಲಿದೆ. ಹಾಗಾದ್ರ, ಅಂದು ಏನೆಲ್ಲ ಇರುತ್ತೆ? ಏನೇನು ಇರಲ್ಲ ಎನ್ನುವು ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ ನೋಡಿ.
ಇನ್ನು ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ನಡೆದ ಹೋರಾಟಗಾರರ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಚಂದ್ರು, ಸೆಪ್ಟೆಂಬರ್ 26ರಂದು ಬೆಂಗಳೂರಿನಲ್ಲಿ ಬೆಳಗ್ಗೆ 6ರಿಂದ ಸಂಜೆ 6ಗಂಟೆವರೆಗೆ ಬಂದ್ ಆಚರಣೆ ಮಾಡುತ್ತೇವೆ. ಟೌನ್‌ಹಾಲ್‌ನಿಂದ ಮೈಸೂರು ಬ್ಯಾಂಕ್ ಸರ್ಕಲ್‌ವರೆಗೆ ರ್ಯಾಲಿ ನಡೆಸುತ್ತೇವೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಸೆ.26ಕ್ಕೆ ಬೆಂಗಳೂರು ಬಂದ್ ಫಿಕ್ಸ್?: ರಸ್ತೆಗಳಿಯಲ್ಲ ಬಸ್, ಓಲಾ, ಉಬರ್; ಯಾರ್ಯಾರ ಬೆಂಬಲ?
ಸೆ.26ರ ಬೆಂಗಳೂರು ಬಂದ್‌ಗೆ ಖಾಸಗಿ ಸಾರಿಗೆ ಸಂಘಟನೆ, ಬಂದ್‌ಗೆ ಶಾಲಾ ಮಕ್ಕಳ ಪೋಷಕರ ಸಂಘಟನೆ, ಆಟೋ ಚಾಲಕರ ಸಂಘ, ಖಾಸಗಿ ಶಾಲಾ ಒಕ್ಕೂಟ, ಐಟಿ-ಬಿಟಿ ಕನ್ನಡ ಬಳಗ, ಕೆಎಸ್ಆರ್ಟಿಸಿ, ಬಿಎಂಟಿಸಿ ಚಾಲಕ ಅಸೋಸಿಯೇಷನ್ ಸೇರಿದಂತೆ ಹಲವು ಸಂಘ, ಸಂಸ್ಥೆಗಳು ಬಂದ್‌ಗೆ ಬೆಂಬಲ ಸೂಚಿಸಿವೆ. ಹೀಗಾಗಿ ಮಂಗಳವಾರ ಬೆಂಗಳೂರು ಸಂಪೂರ್ಣ ಸ್ತಬ್ಧವಾಗುವುದು ಗ್ಯಾರಂಟಿಯಾಗಿದೆ.
* ಆಂಬುಲೆನ್ಸ್ ಸೇವೆ
* ತರಕಾರಿ, ಹಾಲು
* ಮೆಡಿಕಲ್ಸ್
* ಆಸ್ಪತ್ರೆ
* ಬ್ಯಾಂಕ್
* ನಮ್ಮ ಮೆಟ್ರೋ
* ಆಟೋ
* ಮ್ಯಾಕ್ಸಿ ಕ್ಯಾಬ್
* ಹೋಟೆಲ್
* ಬಿಎಂಟಿಸಿ, ಕೆಎಸ್ಆರ್ಟಿಸಿ
* ಲಾರಿ
* ಚಿಕ್ಕಪೇಟೆಯಲ್ಲಿ ವ್ಯಾಪಾರ ವಹಿವಾಟು
* ಓಲಾ, ಊಬರ್
* ಬಿಬಿಎಂಪಿ
* ಖಾಸಗಿ ಶಾಲೆ, ಕಾಲೇಜುಗಳು
ಮಂಗಳವಾರದ ಬಂದ್‌ಗೆ ಶಿಕ್ಷಣ ಇಲಾಖೆಯಿಂದ ನಿರ್ಧಾರ ಪ್ರಕಟವಾಗಿಲ್ಲ. ಹೀಗಾಗಿ ಸರ್ಕಾರಿ ಶಾಲೆಗಳು ಕಾರ್ಯ ನಿರ್ವಹಿಸುವ ಸಾಧ್ಯತೆ ಇದೆ. ಆದರೆ ನಾಳೆಯ ಬಂದ್ ತೀವ್ರತೆ ಮೇಲೆ ನಿರ್ಧಾರ ಕೈಗೊಳ್ಳಲಾಗುತ್ತೆ. ಮಂಗಳವಾರ ಸರ್ಕಾರಿ ಶಾಲೆಗೆ ರಜೆ ಬಗ್ಗೆ ಯಾವುದೇ ನಿರ್ಧಾರವಿಲ್ಲ. ಸರ್ಕಾರಿ ಶಾಲೆಗಳು ಇರುತ್ತಾ ಇಲ್ವಾ ಎಂಬ ಗೊಂದಲದಲ್ಲಿ ಶಾಲಾ ಮಕ್ಕಳಿದ್ದಾರೆ. ಇನ್ನು ಸರ್ಕಾರಿ ಕಚೇರಿಗಳು ಓಪನ್ ಇರಲಿವೆಯಾ ಎನ್ನುವ ಬಗ್ಗೆ ಇನ್ನೂ ಮಾಹಿತಿ ತಿಳಿದುಬಂದಿಲ್ಲ. ಈ ಬಗ್ಗೆ ಸೋಮವಾರ ಸರ್ಕಾರಿ ಶಾಲೆ ಹಾಗೂ ಕಚೇರಿಗಳ ಇರುತ್ತವೆಯೋ ಇಲ್ವೋ ಎನ್ನುವ ಸೋಮವಾರ ಸ್ಪಷ್ಟವಾಗಿ ತಿಳಿಯಲಿದೆ.
ಒಟ್ಟಿನಲ್ಲಿ ಸೆಪ್ಟೆಂಬರ್ 26ರಂದು ಬೆಂಗಳೂರು ಬಂದ್‌ಗೆ ನೂರಾರು ಸಂಘ-ಸಂಸ್ತೆಗಳು ಬೆಂಬಲ ಘೋಷಿಸಿದ್ದರಿಂದ ರಾಜಧಾನಿ ಸ್ತಬ್ಧವಾಗುಗುವುದು ಗ್ಯಾರಂಟಿ. ಹಾಗಾಗಿ ಸಾರ್ವಜನಿಕರು ಮಂಗಳವಾರ ಕಾರ್ಯಕ್ರಮಗಳನ್ನು ಮುಂದೂಡುವುದು ಒಳಿತು.
Published On - 5:17 pm, Sun, 24 September 23