ಬೆಂಗಳೂರು, ಸೆ.23: ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಹೊರಡಿಸಿರುವ ಆದೇಶದಂತೆಯೇ ತಮಿಳುನಾಡಿಗೆ ಪ್ರತಿದಿನ 5 ಸಾವಿರ ಕ್ಯೂಸೆಕ್ ಕಾವೇರಿ ನೀರನ್ನು 15 ದಿನಗಳ ಕಾಲ ಹರಿಸುವಂತೆ ರಾಜ್ಯಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ(Cauvery Water Dispute). ಈ ವಿಚಾರ ರಾಜ್ಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ರಾಜ್ಯದ ಅನೇಕ ಕಡೆ ರೈತರು, ಸಂಘಟನೆಗಳು ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತಿವೆ(Protest). ಇನ್ನು ಮತ್ತೊಂದೆಡೆ ಬೆಂಗಳೂರಿನಲ್ಲಿ ಗೃಹ ಸಚಿವ ಡಾ. ಜಿ.ಪರಮೇಶ್ವರ್(G Parameshwara) ಅವರು ಕಾವೇರಿ ನೀರು ಬಿಡುವ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ್ದು ಈ ಸಂದರ್ಭದಲ್ಲಿ ನಾವೇ ಕಿತ್ತಾಡಿಕೊಂಡ್ರೆ ಬೇರೆಯವರಿಗೆ ಅಡ್ವಾಂಟೇಜ್ ಆಗಲಿದೆ ಎಂದಿದ್ದಾರೆ.
ನಾವು ಎಲ್ಲರನ್ನ, ಎಲ್ಲಾ ಪಕ್ಷದವರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡಿದ್ದೇವೆ. ಇದು ಯಾವುದೋ ಒಬ್ಬ ವ್ಯಕ್ತಿಯ ಪ್ರಶ್ನೆ ಅಲ್ಲ. ಈ ಸಂದರ್ಭದಲ್ಲಿ ನಾವೇ ಕಿತ್ತಾಡಿಕೊಂಡ್ರೆ ಬೇರೆಯವರಿಗೆ ಅಡ್ವಾಂಟೇಜ್ ಆಗಲಿದೆ. ಸಿಎಂ ಈಗಾಗಲೇ ನಾಯಕರನ್ನೆಲ್ಲಾ ಕರೆದು, ಸರ್ವ ಪಕ್ಷ ಸಭೆ ಮಾಡಿದ್ದಾರೆ. ಕಾನೂನಿನ ಚೌಕಟ್ಟಿನಲ್ಲಿ ಏನೆಲ್ಲಾ ಮಾಡಬಹುದು ಅಂತ ಹೇಳಿದ್ದಾರೆ. ನಮ್ಮ ಲೀಗಲ್ ಟೀಮ್ ಎಕ್ಸ್‌ಪರ್ಟ್ ಎಲ್ಲಾ ವಿಚಾರ ಚರ್ಚೆ ಮಾಡಿದ್ದಾರೆ. ಆದ್ರೂ ಅವರು ತಮಿಳುನಾಡಿಗೆ 10 ಸಾವಿರ ಕ್ಯೂಸೆಕ್ ನೀರು ಬಿಡಬೇಕು ಅಂದ್ರು. ಬಳಿಕ 5 ಸಾವಿರ ಕ್ಯೂಸೆಕ್ ನೀರು ಬಿಡಬೇಕು ಅಂದ್ರು. ನಾವು ಅದನ್ನ ಬಿಡಲಿಲ್ಲ. ಕೋರ್ಟಿಗೆ ಹೋದಾಗ ನೀರು ಬಿಡಿ ಅಂದ್ರು. CWMA ತೀರ್ಮಾನ ಉಲ್ಲಂಘಿಸಿದ್ದೀರಾ, ನೀರು ಬಿಟ್ಟು ಬನ್ನಿ ಅಂತ ಹೇಳಿದರು ಎಂದು ಸಚಿವ ಪರಮೇಶ್ವರ್ ತಿಳಿಸಿದರು.
20TMC ನೀರು ಮಾತ್ರ ಕೆಆರ್ಎಸ್ ನಲ್ಲಿದೆ. ಹಾರಂಗಿ, ಹೇಮಾವತಿ, ಕಬಿನಿ ಎಲ್ಲಾ ಲೆಕ್ಕ ಹಾಕಿದ್ರೆ 44 TMC ಆಗುತ್ತೆ. ಡೆಡ್ ಸ್ಟೋರೇಜ್ ಬಿಟ್ಟು ನಮಗೆ 25 TMc ಸಿಗುತ್ತೆ. ಅದನ್ನ ಇಟ್ಟುಕೊಂಡು ಕುಡಿಯುವ ನೀರಿನ ಲೆಕ್ಕಾ ಹಾಕಿ ಹೇಳಿದ್ರೂ ಕೂಡ 5 ಸಾವಿರ ಕ್ಯೂಸೆಕ್ ನೀರು ಬಿಡಬೇಕು ಅಂತ ಹೇಳಿದ್ದಾರೆ. CWMA ನಿರ್ಧಾರ ಅಂತ ಹೇಳಿದ್ದಾರೆ. ಇದೆಲ್ಲಾ ಗೊತ್ತಿದ್ದೂ ವಿಪಕ್ಷಗಳು ನಮಗೆ ಸಹಕಾರ ನೀಡಬೇಕು. ಈ ವಿಚಾರದಲ್ಲಿ ರಾಜಕೀಯ ಮಾಡಿದ್ರೆ ಏನು ಲಾಭ? ಪ್ರತಿಭಟನೆ ಮಾಡಬೇಕು ನಿಜ. ನಾವು ನೀರು ಬಿಡಬಾರದು ಅಂತ ಪ್ರತಿಭಟನೆ ಮಾಡೋದು ಸರಿ. ರೈತರಿಗೆ ಅನ್ಯಾಯ ಆಗಿದೆ ಅಂತ ಅವರಿಗೂ ಗೊತ್ತಾಗಬೇಕು. ಪ್ರತಿಭಟನೆ ಮಾಡಿ, ಆದ್ರೆ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡಬೇಡಿ ಅಂತ ಮನವಿ ಮಾಡಿದ್ದೇವೆ. ಇಷ್ಟಾಗಿಯೂ ನಾವು ಭದ್ರತೆ ನೀಡಿದ್ದೇವೆ. ಬೇರೆ ಬೇರೆ ಕಡೆ ಪ್ರತಿಭಟನೆ ನಡೆಯುತ್ತಿದ್ದು, ಎಲ್ಲಾ ತಯಾರಿ ಮಾಡಿದ್ದೇವೆ. ಎಲ್ಲರೂ ಶಾಂತಿಯುತವಾಗಿ ಪ್ರತಿಭಟನೆ ಮಾಡಿ ಅಂತ ಮನವಿ ಮಾಡಿದ್ದೇವೆ. ಅವರು ಅದನ್ನ ರಾಜಕೀಯವಾಗಿ ಬಳಸಿಕೊಂಡು, ಸರ್ಕಾರದ ಮೇಲೆ ಹೇಳಬಾರದು. ಸರ್ಕಾರದ ಮೇಲೆ ಪ್ರತಿಭಟನೆ ಮಾಡಿದ್ರೆ ಹೇಗೆ? ಲೀಗಲ್ ಟೀಮ್ ಅಸಮರ್ಥ ಆಗಿದೆ, ರಾಜ್ಯ ಸರ್ಕಾರ ಅಸಮರ್ಥ ಅಂತ ಹೇಳೋದು ಸರಿಯಲ್ಲ. ಮೇಲ್ಮನವಿ ಮಾಡಬೇಕು. ಹಿಂದೆ ಬಂಗಾರಪ್ಪ ಇದ್ದಾಗ ಮಿಲಿಟರಿ ಎಲ್ಲಾ ಕಳಿಸಬೇಕಾಗಲಿದೆ ಅಂತ ಎಚ್ಚರಿಸಿದ್ರು. ಆದ್ರೆ, ಆ ರೀತಿ ಆಗಲಿಲ್ಲ ಎಂದರು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ