ಭಾರಿ ವಿಧ್ವಂಸಕ ಕೃತ್ಯಕ್ಕೆ ಸಂಚು, ಬೆಂಗಳೂರಿನಲ್ಲಿ ಐವರು ಶಂಕಿತ ಉಗ್ರರ ಬಂಧನ

| Updated By: ರಮೇಶ್ ಬಿ. ಜವಳಗೇರಾ

Updated on: Jul 19, 2023 | 10:34 AM

ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಚರಣೆ ನಡೆಸಿ ಐವರು ಶಂಕಿತ ಉಗ್ರರನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ಭಾರಿ ವಿಧ್ವಂಸಕ ಕೃತ್ಯಕ್ಕೆ ಸಂಚು, ಬೆಂಗಳೂರಿನಲ್ಲಿ ಐವರು ಶಂಕಿತ ಉಗ್ರರ ಬಂಧನ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, (ಜುಲೈ 19): ಕರ್ನಾಟಕದಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸುತ್ತಿದ್ದ ಐವರು ಶಂಕಿತ ಭಯೋತ್ಪಾದಕರನ್ನು ಸಿಸಿಬಿ ಪೊಲೀಸರು (CCB Police) ಬಂಧಿಸಿದ್ದಾರೆ. ಸಯ್ಯದ್ ಸುಹೇಲ್, ಉಮರ್, ಜುನೇದ್ ಮುದಾಶೀರ್, ಜಾಹಿದ್​ ಬಂಧಿತ ಶಂಕಿತ ಉಗ್ರರರು.  ಭಾರಿ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದರು ಎಂದು ತಿಳಿದುಬಂದಿದೆ. 2017ರ ಅಕ್ಟೋಬರ್​ನಲ್ಲಿ ಬೆಂಗಳೂರಿನ(Bengaluru) ಆರ್​.ಟಿ.ನಗರದಲ್ಲಿ ನಡೆದಿದ್ದ ಮೂವರ ಕಿಡ್ನ್ಯಾಪ್, ಓರ್ವನ ಹತ್ಯೆ ಪ್ರಕರಣದಲ್ಲಿ ಜೈಲುಪಾಲಾಗಿದ್ದ ಹಲವು ಆರೋಪಿಗಳು, ಪರಪ್ಪನ ಅಗ್ರಹಾರ ಜೈಲಿನಿಂದ ಉಗ್ರರ ಜೊತೆಗೆ ಸಂಪರ್ಕ ಹೊಂದಿದ್ದರು ಎನ್ನಲಾಗಿದ್ದು, ಈ ಬಗ್ಗೆ ಐದು ಶಂಕಿತ ಉಗ್ರರನ್ನು ಸಿಸಿಬಿ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ಇದನ್ನೂ ಒದಿ: ಸೈಬರ್ ಕಳ್ಳರ ಹಾವಳಿ: ಸಾರ್ವಜನಿಕರನ್ನು ಎಚ್ಚರಿಸಿದ ಬೆಂಗಳೂರು, ಚಾಮರಾಜನಗರ ಪೊಲೀಸ್ರು

ಆರ್ ಟಿ ನಗರ ಕೊಲೆ ಕೇಸ್​ನ ಅರೋಪಿಗಳು ಜೈಲಿನಲ್ಲಿ ಉಗ್ರರ ಜೊತೆಗೆ ಸಂಪರ್ಕ ಹೊಂದಿದ್ದಾರೆ. ನಂತರ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ವಿಧ್ವಂಸಕ ಕೃತ್ಯಕ್ಕೆ ತಯಾರಿ ನಡೆಸಿದ್ದರು. ಇದಕ್ಕೆ ಬೇಕಾಗುವ ಕಚ್ಚಾ ವಸ್ತುಗಳನ್ನು ಒಗ್ಗೂಡಿಸುತಿದ್ದರು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಈ ಬಗ್ಗೆ ಕೇಂದ್ರ, ಸಿಸಿಬಿ ಮಾಹಿತಿ ಸಂಗ್ರಹ ಮಾಡಿತ್ತು. ಮಾಹಿತಿ ಅನ್ವಯ ಸಿಸಿಬಿ ಜೊತೆಗೆ ಕಾರ್ಯಾಚರಣೆ ನಡೆಸಿ ಐವರನ್ನು ಬಂಧಿಸಿ ವಿಚಾರಣೆ ನಡೆಸಿದೆ.


ಇನ್ನು ಹಲವಾರು ಜನರು ಕೃತ್ಯದಲ್ಲಿ ಭಾಗಿಯಾಗಲು ತಯಾರಿ ನಡೆಸಿದ್ರು ಎನ್ನುವ ಮಾಹಿತಿ ಇದೆ. ಸದ್ಯ ಒಂದು ಹಂತಕ್ಕೆ ಪ್ಲ್ಯಾನ್​ ಕಾರ್ಯರೂಪಕ್ಕೆ ತರಲು ಆಗದಂತೆ ಪೊಲೀಸರು ತಡೆದಿದ್ದಾರೆ. ಆರ್ ಟಿ ನಗರ, ಹೆಬ್ಬಾಳ, ಡಿಜೆ ಹಳ್ಳಿಯಲ್ಲಿ ವಶಕ್ಕೆ ಪಡೆದುಕೊಂಡಿದ್ದು, ಈ ಬಗ್ಗೆ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಏಳು ಪಿಸ್ತೂಲ್​, ಮದ್ದುಗುಂಡುಗಳು ಪತ್ತೆ

ಹೆಬ್ಬಾಳ ಠಾಣಾ ವ್ಯಾಪ್ತಿಯಲ್ಲಿರುವ ಸುಲ್ತಾನ್ ಪಾಳ್ಯದ ಕನಕ ನಗರದ ಮಸೀದಿ ಬಳಿ ಸಿಸಿಬಿ ನಡೆಸಿದ ಕಾರ್ಯಾಚರಣೆಯಲ್ಲಿ ಬಂಧಿತರ ಬಳಿ ಇದ್ದ 7 ಪಿಸ್ತೂಲ್​, ಮದ್ದುಗುಂಡುಗಳು, 2 ಡ್ಯಾಗರ್​​, ಅಮೋನಿಯಾ, 2 ಸ್ಯಾಟ್​​ಲೈಟ್​ ಫೋನ್, 4 ವಾಕಿಟಾಕ್​​ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಯುಎಪಿಎ, ಶಸ್ತ್ರಾಸ್ತ್ರ ನಿಗ್ರಹ ಕಾಯ್ದೆ ಸೇರಿ ವಿವಿಧ ಸೆಕ್ಷನ್​ ಅಡಿ ಪ್ರಕರಣ ದಾಖಲಾಗಿದೆ.

ಪ್ರಕರಣದ ಪ್ರಮುಖ ಆರೋಪಿ ಜುನೈದ್ ಅಹ್ಮದ್ ನಾಪತ್ತೆ

ಕೊಲೆ, ಕಿಡ್ನ್ಯಾಪ್​ ಪ್ರಕರಣದಲ್ಲಿ ಜೈಲು ಸೇರಿದ್ದ ಜುನೈದ್ ಅಹ್ಮದ್, ಜೈಲಿನಿಂದ ಹೊರಬರುವಾಗ ಶಂಕಿತ ಉಗ್ರನಾಗಿದ್ದ. ಇಂದು ಸಿಸಿಬಿ ಬಂಧಿಸಿದ ಬಹುತೇಕ ಶಂಕಿತ ಉಗ್ರರೆಲ್ಲರೂ ಜುನೈದ್ ತಂಡದವರು. ಆದ್ರೆ, ಪ್ರಕರಣದ ಪ್ರಮುಖ ಆರೋಪಿ ಜುನೈದ್ ಅಹ್ಮದ್ ನಾಪತ್ತೆಯಾಗಿದ್ದಾನೆ.

ಜುನೈದ್ ಮತ್ತು ತಂಡ ನೂರ್ ಅಹ್ಮದ್​​ನನ್ನು ಅಪಹರಿಸಿ ಕೊಂದಿತ್ತು. ಈ ಕೊಲೆ ಪ್ರಕರಣದಲ್ಲಿ ಒಟ್ಟು 21 ಆರೋಪಿಗಳನ್ನು ಬಂಧಿಸಲಾಗಿತ್ತು. ಬಳಿಕ ಜುನೈದ್ ಜೈಲಿನಲ್ಲಿ ಉಗ್ರರ ಜೊತೆ ಕಾಂಟ್ಯಾಕ್ಟ್ ಬೆಳೆಸಿಕೊಂಡಿದ್ದ. ಟೀಂ ಸಮೇತ ಸಂಘಟನೆಗಾಗಿ ಕೆಲಸ ಮಾಡುವುದಾಗಿ ಉಗ್ರ ಸಂಘಟನೆ ನಿಭಾಯಿಸುತ್ತಿದ್ದ ವ್ಯಕ್ತಿಯನ್ನು ಸಂಪರ್ಕಿಸಿದ್ದರು. ಬಳಿಕ ವಿಧ್ವಂಸಕ ಕೃತ್ಯಗಳ ಬಗ್ಗೆ ಟ್ರೈನಿಂಗ್ ಪಡೆಯುತ್ತಿದ್ದರು. ಬಾಂಬ್ ಸ್ಫೋಟ ಸೇರಿದಂತೆ ಹಲವು ಕೃತ್ಯಗಳ ಬಗ್ಗೆ ಟ್ರೈನಿಂಗ್ ತರಬೇತಿ ಪಡೆಯುತ್ತಿದ್ದರು. ಸದ್ಯ ಜುನೈದ್ ಅಹ್ಮದ್ ತಂಡದ ಕೆಲವರನ್ನ ಸಿಸಿಬಿ ಬಂಧಿಸಿದ್ದು, ಮಡಿವಾಳ ಟೆಕ್ನಿಕಲ್ ಸೆಲ್​ನಲ್ಲಿ ತೀವ್ರ ವಿಚಾರಣೆ ನಡೆಸಿದೆ. ಆದ್ರೆ, ತಂಡದ ನಾಯಕ ನೈದ್ ಅಹ್ಮದ್ ನಾಪತ್ತೆಯಾಗಿದ್ದು, ಆತನಿಗಾಗಿ ಸಿಸಿಬಿ ತೀವ್ರ ಕಾರ್ಯಚರಣೆ ನಡೆಸಿದೆ.

ಇನ್ನಷ್ಟು ಕ್ರೈಂ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:02 am, Wed, 19 July 23