Karnataka Breaking News Highlights: ಕೊನೆ ಎರಡು ದಿನ ವಿಧಾನಸಭೆ ಕಲಾಪಕ್ಕೆ ಹಾಜರಾಗದಿರಲು ವಿಪಕ್ಷ ಬಿಜೆಪಿ ತೀರ್ಮಾನ

ಕಿರಣ್ ಹನುಮಂತ್​ ಮಾದಾರ್
| Updated By: ಗಂಗಾಧರ​ ಬ. ಸಾಬೋಜಿ

Updated on:Jul 19, 2023 | 11:00 PM

Breaking News Today Highlights Updates: ಕರ್ನಾಟಕ ರಾಜಕೀಯ, ಅಪರಾಧ, ಮಳೆ ಸೇರಿದಂತೆ ರಾಜ್ಯದ ಪ್ರಮುಖ ಘಟನೆಗಳ ಕ್ಷಣ ಕ್ಷಣದ ಮಾಹಿತಿಯನ್ನು ಟಿವಿ9 ಡಿಜಿಟಲ್ ಲೈವ್​ ಮೂಲಕ ಪಡೆಯಿರಿ.

Karnataka Breaking News Highlights: ಕೊನೆ ಎರಡು ದಿನ ವಿಧಾನಸಭೆ ಕಲಾಪಕ್ಕೆ ಹಾಜರಾಗದಿರಲು ವಿಪಕ್ಷ ಬಿಜೆಪಿ ತೀರ್ಮಾನ
ವಿಧಾನಸಭೆ ಕಲಾಪ

Karnataka News Highlights: 2024ರ ಲೋಕಸಭಾ ಚುನಾವಣೆಯಲ್ಲಿ(Lok Sabha Election 2024)ಬಿಜೆಪಿಗೆ ಟಕ್ಕರ್ ಕೊಡಲು ಹಾಗೂ ಪ್ರಧಾನಿ ನರೇಂದ್ರ ಮೋದಿಯವರನ್ನು(Narendra Modi) ಕಟ್ಟಿಹಾಕಲು ಕಾಂಗ್ರೆಸ್(Congress) ರಣತಂತ್ರ ಹೆಣೆಯುತ್ತಿದೆ. ಈ ಬಗ್ಗೆ ನಿನ್ನೆ(ಜು.19) ಸಭೆ ನಡೆಸಲು ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಸೇರದಂತೆ ಅನೇಕ ನಾಯಕರುಗಳು ಬೆಂಗಳೂರಿಗೆ ಆಗಮಿಸಿದ್ದು, ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ವಿಪಕ್ಷಗಳ ಮಹಾ ಮೈತ್ರಿಕೂಟದ ಸಭೆ ಹಮ್ಮಿಕೊಳ್ಳಲಾಗಿತ್ತು. ಜೊತೆಗೆ ಇಂದು ಸಂಜೆ 5 ಗಂಟೆಗೆ ಸಿಎಂ ಸಿದ್ದರಾಮಯ್ಯ ಅವರು ವಿಧಾನಸೌಧದಲ್ಲಿ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ನೀಡಲಿದ್ದಾರೆ. ಇನ್ನು ರಾಜ್ಯದಲ್ಲಿ 4 ದಿನಗಳ ಕಾಲ ಸಾಧಾರಣ ಮಳೆಯಾಗಲಿದೆ. ಕರಾವಳಿ (Coastal) ಜಿಲ್ಲೆಗಳಾದ ದಕ್ಷಿಣ ಕನ್ನಡ (Dakshin Kannada), ಉಡುಪಿ (Udupi) ಮತ್ತು ಉತ್ತರ ಕನ್ನಡ (Uttar Kannada) ಜಿಲ್ಲೆಗಳಲ್ಲಿ ಇಂದು (ಜು. 19) ಭಾರಿ ಮಳೆಯಾಗಲಿದ್ದು (Rain) ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ರಾಜ್ಯದ ಪ್ರಮುಖ ಸುದ್ದಿಗಳ ಲೇಟೆಸ್ಟ್​ ಅಪ್ಡೇಟ್ಸ್​ಗಾಗಿ ಟಿವಿ9 ಡಿಜಿಟಲ್ ಫಾಲೋ ಮಾಡಿ.

LIVE NEWS & UPDATES

The liveblog has ended.
  • 19 Jul 2023 10:36 PM (IST)

    Karnataka Breaking News Live: ನಾಳೆ ಬೆಳಗ್ಗೆ 10 ಗಂಟೆಗೆ ಬಿಜೆಪಿ ಶಾಸಕರ ಸಭೆ

    ವಿಧಾನಸಭೆಯಲ್ಲಿ ಬಿಜೆಪಿ ಪ್ರತಿಭಟನೆ ಮತ್ತು ಶಾಸಕರ ಅಮಾನತು ಹಿನ್ನೆಲೆ ಬೆಂಗಳೂರಿನಲ್ಲಿ ಮಲ್ಲೇಶ್ವರಂನ ಬಿಜೆಪಿ ರಾಜ್ಯ ಕಚೇರಿಯಲ್ಲಿ ನಾಳೆ ಬೆಳಗ್ಗೆ 10 ಗಂಟೆಗೆ ಬಿಜೆಪಿ ಶಾಸಕರ ಸಭೆ ಕರೆಯಲಾಗಿದೆ. ಪ್ರತಿಭಟನೆ ವಿಚಾರವಾಗಿ ಮುಂದಿನ ನಡೆ ಬಗ್ಗೆ ಸಭೆ ನಡೆಯಲಿದ್ದು, ನಾಳೆ ಮಧ್ಯಾಹ್ನ 12.30ಕ್ಕೆ ಬಿಜೆಪಿ ನಾಯಕರಿಂದ ರಾಜ್ಯಪಾಲರ ಭೇಟಿ ಮಾಡಲಿದ್ದಾರೆ.

  • 19 Jul 2023 10:07 PM (IST)

    Karnataka Breaking News Live: ನಾಳೆ ಜೆಡಿಎಸ್ ಪಕ್ಷದ ಶಾಸಕಾಂಗ ಸಭೆ ಕರೆದಿರುವ ಹೆಚ್‌ಡಿ ಕುಮಾರಸ್ವಾಮಿ

    ನಾಳೆ ಬೆಳಗ್ಗೆ 9.30ಕ್ಕೆ ವಿಧಾನಸೌಧದ ಕಚೇರಿಯಲ್ಲಿ ಮಾಜಿ ಸಿಎಂ  ಹೆಚ್‌ ಡಿ ಕುಮಾರಸ್ವಾಮಿ  ಜೆಡಿಎಸ್ ಪಕ್ಷದ ಶಾಸಕಾಂಗ ಸಭೆ ಕರೆದಿದ್ದಾರೆ. ಸದನದಲ್ಲಿ ಗಲಾಟೆ, ಶಾಸಕರ ಅಮಾನತು ಬಗ್ಗೆ ಚರ್ಚೆ ಸಾಧ್ಯತೆ ಇದೆ.

  • 19 Jul 2023 09:58 PM (IST)

    Karnataka Breaking News Live: ಯತ್ನಾಳ್​ಗೆ ಆರೋಗ್ಯ ವಿಚಾರಿಸಲು ಆಗಮಿಸಿದ ಸ್ಪೀಕರ್, ಸಿಎಂ

    ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯಲ್ಲಿ ಶಾಸಕ ಯತ್ನಾಳ್​ಗೆ ಚಿಕಿತ್ಸೆ ನೀಡಲಾಗಿದೆ. ಸಿಎಂ ಸಿದ್ದರಾಮಯ್ಯ ಮತ್ತು ಸ್ಪೀಕರ್ ಯು.ಟಿ.ಖಾದರ್​​ ಆಸ್ಪತ್ರೆಗೆ ಯತ್ನಾಳ್​ ಆರೋಗ್ಯ ವಿಚಾರಿಸಿದರು.

  • 19 Jul 2023 09:11 PM (IST)

    Karnataka Breaking News Live: ಶಾಸಕ ಯತ್ನಾಳ್ ಆರೋಗ್ಯ ವಿಚಾರಿಸಿದ ಬಿಎಸ್​ ಯಡಿಯೂರಪ್ಪ​

    ಬಸವನಗೌಡ ಪಾಟೀಲ್ ಯತ್ನಾಳ್​ರ ಆರೋಗ್ಯ ವಿಚಾರಿಸಲು ಬಂದಿದ್ದೆ. ವೈದ್ಯರು ಹೇಳುವ ಪ್ರಕಾರ ನಾಳೆ, ನಾಡಿದ್ದರಲ್ಲಿ ಮನೆಗೆ ಕಳಿಸಿಕೊಡುತ್ತಾರೆ ಅಂದಿದ್ದಾರೆ. ದೊಡ್ಡ ಅನಾಹುತದಿಂದ ತಪ್ಪಿಸಿಕೊಂಡಿದ್ದಾರೆ ಎಂದು ಬಿಎಸ್​ ಯಡಿಯೂರಪ್ಪ ಹೇಳಿದರು.

  • 19 Jul 2023 08:26 PM (IST)

    Karnataka Breaking News Live: ಕಲಾಪಕ್ಕೆ ಹಾಜರಾಗದಿರಲು ವಿಪಕ್ಷ ಬಿಜೆಪಿ ತೀರ್ಮಾನ

    ಕೊನೆ ಎರಡು ದಿನ ವಿಧಾನಸಭೆ ಕಲಾಪಕ್ಕೆ ಹಾಜರಾಗದೇ ಇರಲು ವಿಪಕ್ಷ ಬಿಜೆಪಿ ತೀರ್ಮಾನಿಸಿದ್ದು, ನಾಳೆ ರಾಜ್ಯಪಾಲರಿಗೆ ಬಿಜೆಪಿ ದೂರು ನೀಡುವ ಸಾಧ್ಯತೆ ಇದೆ. ರಾಜ್ಯಪಾಲರಿಗೆ ದೂರು ನೀಡುವ ಬಗ್ಗೆ ನಾಳೆ ಬೆಳಗ್ಗೆ ಬಿಜೆಪಿ ನಿರ್ಧರಿಸಲಿದೆ.

  • 19 Jul 2023 08:19 PM (IST)

    Karnataka Breaking News Live: ಮಹಿಳೆಯರಿಗೆ ಮೀಸಲಾತಿ ಕೊಡಬೇಕೆಂದು ಬಿಜೆಪಿ ಆಲೋಚಿಸಿಯೇ ಇಲ್ಲ

    ಮಹಿಳೆಯರು ಸಬಲರಾಗದಿದ್ದರೆ ದೇಶ, ರಾಜ್ಯ ಅಭಿವೃದ್ಧಿಯಾಗಿಲ್ಲ. ಮಹಿಳೆಯರಿಗೆ ಮೀಸಲಾತಿ ಕೊಡಬೇಕೆಂದು ಬಿಜೆಪಿ ಆಲೋಚಿಸಿಯೇ ಇಲ್ಲ. ಮಹಿಳೆಯರಿಗೆ ಮೀಸಲಾತಿ ಸಿಕ್ಕಿದ್ದೇ ಕಾಂಗ್ರೆಸ್‌ನಿಂದ. ವಿಧಾನಸಭೆ, ಸಂಸತ್‌ನಲ್ಲಿ ಮಹಿಳೆಯರಿಗೆ ಮೀಸಲಾತಿ ತಂದ್ರೆ ಕಾಂಗ್ರೆಸ್‌ ಪಕ್ಷ ಬೆಂಬಲ ನೀಡುತ್ತೆ ಎಂದು ಸಿಎಂ ಸಿದ್ಧರಾಮಯ್ಯ ಹೇಳಿದರು.

  • 19 Jul 2023 08:00 PM (IST)

    Karnataka Breaking News Live: ಯತ್ನಾಳ್​ ಆರೋಗ್ಯ ವಿಚಾರಿಸಿದ ಯಡಿಯೂರಪ್ಪ

    ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯಲ್ಲಿ ಶಾಸಕ ಯತ್ನಾಳ್​ಗೆ ಚಿಕಿತ್ಸೆ ನೀಡಲಾಗಿದೆ. ಈ ವೇಳೆ ಆಸ್ಪತ್ರೆಗೆ ಮಾಜಿ ಸಿಎಂ ಯಡಿಯೂರಪ್ಪ ಸೇರಿದಂತೆ ಸಿ.ಟಿ.ರವಿ, ಎನ್.ರವಿಕುಮಾರ್, ತೇಜಸ್ವಿನಿಯಿಂದಲೂ ಆರೋಗ್ಯ ವಿಚಾರಣೆ ಮಾಡಿದ್ದಾರೆ.

  • 19 Jul 2023 07:51 PM (IST)

    Karnataka Breaking News Live: ಮಹಿಳೆಯರಿಗೆ ಆರ್ಥಿಕ ಶಕ್ತಿಯನ್ನ ಸರ್ಕಾರ ತುಂಬಿದೆ

    ಸರ್ಕಾರದಿಂದ ಗೃಹ ಲಕ್ಷ್ಮೀ ಯೋಜನೆ ಘೋಷಣೆ ಹಿನ್ನಲೆ ಉತ್ತರ ಕನ್ನಡ ಜಿಲ್ಲೆಯ ಮಹಿಳಾ ಮಣಿಗಳು ಪುಲ್ ಖುಷ್​ ಆಗಿದ್ದಾರೆ. ಮಹಿಳೆಯರಿಗೆ ಆರ್ಥಿಕ ಶಕ್ತಿಯನ್ನ ಸರ್ಕಾರ ತುಂಬಿದೆ. ಸಣ್ಣಪುಟ್ಟ ವಿಷಯಕ್ಕೂ ಗಂಡ ಅಥವಾ ಮಕ್ಕಳ ಬಳಿ ಹಣ ಕೇಳುವ ಸ್ಥಿತಿ ಇತ್ತು ಎಂದಿದ್ದಾರೆ.

  • 19 Jul 2023 07:33 PM (IST)

    Karnataka Breaking News Live: 5 ಗ್ಯಾರಂಟಿಗಳ ಜಾರಿ ನಮಗೆ ಒಂದು ರೀತಿ ಸವಾಲಾಗಿತ್ತು-ಸಿದ್ದರಾಮಯ್ಯ

    ಗೃಹಲಕ್ಷ್ಮೀ ಯೋಜನೆ ನೋಂದಣಿ ಪ್ರಕ್ರಿಯೆಗೆ ಅಧಿಕೃತವಾಗಿ ಚಾಲನೆ ನೀಡಲಾಗಿದೆ. ವಿಧಾನಸೌಧದಲ್ಲಿ ಕಾರ್ಯಕ್ರಮ ಉದ್ದೇಶಿಸಿ ಸಿಎಂ ಸಿದ್ದರಾಮಯ್ಯ ಭಾಷಣ ಮಾಡಿದ್ದು, ಆಗಸ್ಟ್‌ 16ರಂದು ಫಲಾನುಭವಿಗಳಿಗೆ 2 ಸಾವಿರ ರೂ. ಹಣ ಹಾಕುತ್ತೇವೆ. 5 ಗ್ಯಾರಂಟಿಗಳ ಜಾರಿ ನಮಗೆ ಒಂದು ರೀತಿ ಸವಾಲಾಗಿತ್ತು. 5 ಗ್ಯಾರಂಟಿಗಳ ಜಾರಿ ಬಹಳ ಕಷ್ಟ ಎಂದು ಹಲವರು ಹೇಳುತ್ತಿದ್ದರು. ರಾಜ್ಯ ಆರ್ಥಿಕವಾಗಿ ದಿವಾಳಿ ಆಗುತ್ತೆ ಎಂದು ಪ್ರಧಾನಿರವರೇ ಹೇಳಿದ್ದರು ಎಂದಿದ್ದಾರೆ.

  • 19 Jul 2023 07:19 PM (IST)

    Karnataka Breaking News Live: ಯತ್ನಾಳ್​ರವರ ಆರೋಗ್ಯ ಸ್ಥಿರವಾಗಿದೆ

    ಶಾಸಕ ಯತ್ನಾಳ್​ ಅವರು ಆರೋಗ್ಯವಾಗಿದ್ದಾರೆ ಎಂದು ಮಾಜಿ ಡಿಸಿಎಂ ಅಶ್ವಥ್ ನಾರಾಯಣ್ ಹೇಳಿದರು. ಈಗಷ್ಟೆ ಅವರನ್ನ ಮಾತಾಡಿಸಿಕೊಂಡು ಬಂದಿದ್ದೇವೆ. ಇವತ್ತು ನಡೆಯಬಾರದ ಘಟನೆ ನಡೆದುಹೋಗಿದೆ. ಆ ನೂಕಾಟ ತಳ್ಳಾಟದಲ್ಲಿ ಅವರ ಬಿಪಿ ಜಾಸ್ತಿ ಆಗಿ ಆರೋಗ್ಯದಲ್ಲಿ ಏರುಪೇರಾಗಿದೆ. ಈಗ ಸ್ಥಿರವಾಗಿದ್ದಾರೆ ಎಂದರು.

  • 19 Jul 2023 06:47 PM (IST)

    Karnataka Breaking News Live: ಡೆಪ್ಯುಟಿ ಸ್ಪೀಕರ್​ ಮುಂದೆ ನಡೆದುಕೊಂಡ ರೀತಿ ಶೋಭೆ ತರುವುದಿಲ್ಲ

    ಇವತ್ತಿನ ಸಣ್ಣ ಘಟನೆ ದೊಡ್ಡದಾಗಿದೆ ಎಂದು ವಿಧಾನಸಭೆಯಲ್ಲಿ ಸ್ಪೀಕರ್ ಯು.ಟಿ.ಖಾದರ್ ಹೇಳಿದರು. ಪ್ರೋಟೋಕಾಲ್‌ ವಿಚಾರವಾಗಿ ನಾನು ಚರ್ಚೆಗೆ ಅವಕಾಶ ಕೊಟ್ಟಿದ್ದೆ. ಅದೇ ಕಾರಣ ಇಟ್ಟುಕೊಂಡು ಬಿಜೆಪಿ ಸದಸ್ಯರು ಧರಣಿ ಮಾಡಿದರು. ಧರಣಿ ಮಾಡಲು ಎಲ್ಲರಿಗೂ ಅವಕಾಶ ಇದೆ. ಡೆಪ್ಯುಟಿ ಸ್ಪೀಕರ್​ ಮುಂದೆ ನಡೆದುಕೊಂಡ ರೀತಿ ಶೋಭೆ ತರುವುದಿಲ್ಲ. ಬಿಜೆಪಿ ಸದಸ್ಯರು ಶಾಸನ ಸಭೆಗೆ ಅಗೌರವ ತೋರಿದ್ದಾರೆ ಎಂದರು. ​

  • 19 Jul 2023 06:27 PM (IST)

    Karnataka Breaking News Live: ಪ್ರತಿಭಟನಾನಿರತ ಬಿಜೆಪಿಯಕರನ್ನು ಬಿಎಂಟಿಸಿ ಬಸ್​ಲ್ಲಿ ಕರೆದೊಯ್ದ ಪೊಲೀಸ್​​

    ಪ್ರತಿಭಟನಾನಿರತ ಮಾಜಿ ಸಿಎಂಗಳಾದ ಬೊಮ್ಮಾಯಿ, ಹೆಚ್​​ಡಿ ಕುಮಾರಸ್ವಾಮಿ ಅವರನ್ನು ಪೊಲೀಸರು ವಶಕ್ಕೆ ಪಡೆದು ಬಿಎಂಟಿಸಿ ಬಸ್​ನಲ್ಲಿ ತುಂಬಿಸಿ ಕರೆದೊಯ್ದಿದ್ದಾರೆ. ಆರಗ ಜ್ಞಾನೇಂದ್ರ, ಅಶ್ವತ್ಥ್ ನಾರಾಯಣ, ಸುರೇಶ್ ಕುಮಾರ್​, ವಿ.ಸುನೀಲ್ ಕುಮಾರ್, ಮುನಿರತ್ನ ಸೇರಿದಂತೆ ಹಲವರನ್ನು ವಶಕ್ಕೆ ಪಡೆಯಲಾಗಿದೆ.

  • 19 Jul 2023 05:59 PM (IST)

    Karnataka Breaking News Live: ಬಿಪಿ ಹೆಚ್ಚಾಗಿ ಕುಸಿದುಬಿದ್ದ ಶಾಸಕ ಯತ್ನಾಳ್‌

    ವಿಧಾನಸಭೆಯಿಂದ ಬಿಜೆಪಿಯ 10 ಸದಸ್ಯರು ಅಮಾನತು ಮಾಡಲಾಗಿದೆ. ಸಸ್ಪೆಂಡ್ ಆದ ಯತ್ನಾಳ್​ರನ್ನ ಸದನದಿಂದ ಮಾರ್ಷಲ್ಸ್​ ಎಳೆದೊಯ್ದಿದ್ದಾರೆ. ಈ ವೇಳೆ ಮಾರ್ಷಲ್ಸ್​ ಎಳೆದಾಟದಿಂದಾಗಿ ಬಿಪಿ ಹೆಚ್ಚಾಗಿದ್ದು,  ಶಾಸಕ ಯತ್ನಾಳ್​​ ಪ್ರಜ್ಞೆ ತಪ್ಪಿ ಬಿದಿದ್ದಾರೆ. ಕೂಡಲೇ ಅವರನ್ನು ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಯತ್ನಾಳ್​ ನೋಡಲು ಪತ್ನಿ ಶೈಲಜಮ್ಮ ಹಾಗೂ ಮಗ ಹರ್ಷ ಆಗಮಿಸಿದ್ದಾರೆ.

  • 19 Jul 2023 05:53 PM (IST)

    Karnataka Breaking News Live: ಸ್ವೀಕರ್​ ಯು.ಟಿ ಖಾದರ್ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ನೋಟಿಸ್

    ಬೆಂಗಳೂರು: ತಾಜ್​ ವೆಸ್ಟೆಂಡ್​ ಹೋಟೆಲ್​ನಲ್ಲಿ ನಿನ್ನೆ ಪ್ರತಿಪಕ್ಷಗಳ ಸಭೆ ವೇಳೆ ವಿಧಾನಸಭೆ ಸ್ವೀಕರ್​ ಯು.ಟಿ ಖಾದರ್ ಭೇಟಿ ನೀಡಿದ್ದನ್ನು ವಿರೋಧಿಸಿ ಅವರ ವಿರುದ್ಧ ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ಅವಿಶ್ವಾಸ ​ ನಿರ್ಣಯಕ್ಕೆ ನೋಟಿಸ್ ನೀಡಿವೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಹೆಚ್​.ಡಿ ಕುಮಾರಸ್ವಾಮಿ ಸೇರಿದಂತೆ ಹಲವು ಬಿಜೆಪಿ ಮತ್ತು ಜೆಡಿಎಸ್‌ ಶಾಸಕರು ನೋಟಿಸ್‌ಗೆ ಸಹಿ ಹಾಕಿದ್ದಾರೆ ಎಂದು ನ್ಯೂಸ್​ 9 ವರದಿ ಮಾಡಿದೆ.

  • 19 Jul 2023 05:32 PM (IST)

    Karnataka Breaking News Live: ವಿಧಾನಸಭೆ ಪೂರ್ವಭಾಗದ ಪ್ರವೇಶ ದ್ವಾರದ ಗಾಜು ಪುಡಿ ಪುಡಿ

    ಬಿಜೆಪಿಯ 10 ಶಾಸಕರ ಅಮಾನತು ವಿರೋಧಿಸಿ ಪ್ರತಿಭಟನೆ ಮಾಡಲಾಗುತ್ತಿದ್ದು, ಈ ವೇಳೆ ವಿಧಾನಸಭೆ ಪೂರ್ವಭಾಗದ ಪ್ರವೇಶ ದ್ವಾರದ ಗಾಜು ಪುಡಿ ಪುಡಿ ಆಗಿದೆ.

  • 19 Jul 2023 05:09 PM (IST)

    Karnataka Breaking News Live: ಅಮಾನತುಗೊಂಡವರನ್ನು ಹೊರಹಾಕಿದ ಮಾರ್ಷಲ್ಸ್‌

    ವಿಧಾನಸಭೆಯಿಂದ ಅಮಾನತುಗೊಂಡವರನ್ನು ಮಾರ್ಷಲ್ಸ್‌ ಹೊರಹಾಕಿದರು. ಮತ್ತೊಂದೆಡೆ ಸದನದಲ್ಲಿ  ಬಿಜೆಪಿ ಸದಸ್ಯರು ಪ್ರತಿಭಟನೆ ಮುಂದುವರಿಸಿದ್ದಾರೆ. ಸ್ಪೀಕರ್‌ ಕಚೇರಿ ಮೆಟ್ಟಿಲು ಮೇಲೆ ಕುಳಿತು ಬಿಜೆಪಿ ಸದಸ್ಯರಿಂದ ಪ್ರತಿಭಟನೆ ಮಾಡಲಾಗುತ್ತಿದೆ.

  • 19 Jul 2023 04:43 PM (IST)

    Karnataka Breaking News Live: ಐವರು ಶಂಕಿತ ಉಗ್ರರು 7 ದಿನಗಳ ಕಾಲ ಸಿಸಿಬಿ ಪೊಲೀಸರ ವಶಕ್ಕೆ

    ಐವರು ಶಂಕಿತ ಉಗ್ರರು 7 ದಿನಗಳ ಕಾಲ ಸಿಸಿಬಿ ಪೊಲೀಸರ ವಶಕ್ಕೆ ನೀಡಿ ಬೆಂಗಳೂರಿನ ಎನ್​ಐಎ ವಿಶೇಷ ಕೋರ್ಟ್​ ಆದೇಶ ಹೊರಡಿಸಿದೆ. ಶಂಕಿತ ಉಗ್ರರಾದ ಸಯ್ಯದ್ ಸುಹೇಲ್, ಉಮರ್, ಜುನೈದ್​, ಮುದಾಸಿರ್, ಜಾಹಿದ್​ 7 ದಿನಗಳ ಕಾಲ ಸಿಸಿಬಿ ಪೊಲೀಸರ ವಶಕ್ಕೆ ನೀಡಲಾಗಿದೆ.

  • 19 Jul 2023 04:28 PM (IST)

    Karnataka Breaking News Live: ಅಗೌರವ ತೋರಿದ 10 ಬಿಜೆಪಿ ಶಾಸಕರ ಅಮಾನತು

    ಸದನದಲ್ಲಿ ಅಗೌರವ ತೋರಿದ 10 ಬಿಜೆಪಿ ಶಾಸಕರನ್ನು ಅಮಾನತು ಮಾಡಲಾಗಿದೆ. ಡಾ.ಅಶ್ವತ್ಥ್​​ ನಾರಾಯಣ, ವೇದವ್ಯಾಸ ಕಾಮತ್, ಅರವಿಂದ ಬೆಲ್ಲದ್, ಧೀರಜ್ ಮುನಿರಾಜು, ಯಶಪಾಲ್ ಸುವರ್ಣ, ಸುನೀಲ್ ಕುಮಾರ್, ಆರ್.ಅಶೋಕ್, ಉಮಾನಾಥ್ ಕೋಟ್ಯಾನ್, ಆರಗ ಜ್ಞಾನೇಂದ್ರ, ಭರತ್ ಶೆಟ್ಟಿ ಈ ಅಧಿವೇಶನ ಮುಗಿಯುವವರೆಗೂ ಅಮಾನತು ಮಾಡಲಾಗಿದೆ.

  • 19 Jul 2023 04:12 PM (IST)

    Karnataka Breaking News Live: ಬಿಜೆಪಿ ಸದಸ್ಯರಿಂದ ಡೆಪ್ಯುಟಿ ಸ್ಪೀಕರ್ ಮೇಲೆ ಕಾಗದ ಪತ್ರ ಎಸೆತ

    ಬಿಜೆಪಿ ಸದಸ್ಯರಿಂದ ಡೆಪ್ಯುಟಿ ಸ್ಪೀಕರ್ ಮೇಲೆ ಕಾಗದ ಪತ್ರ ಎಸೆಯಲಾಗಿದ್ದು, ಬಿಜೆಪಿಯ ನಾಲ್ವರು ಶಾಸಕರ ಮೇಲೆ ಸ್ಪೀಕರ್ ಕ್ರಮ ಸಾಧ್ಯತೆ ಇದೆ. ಈಗಾಗಲೇ ಸ್ಪೀಕರ್​ಗೆ ಬಿಜೆಪಿ ಶಾಸಕರ ವಿರುದ್ಧ ಕಾಂಗ್ರೆಸ್ ಸದಸ್ಯರು ದೂರು ನೀಡಿದ್ದಾರೆ.

  • 19 Jul 2023 03:51 PM (IST)

    Karnataka Breaking News Live: ಉಗ್ರರನ್ನ 15 ದಿನ ಪೊಲೀಸ್ ಕಸ್ಟಡಿಗೆ ಸಿಸಿಬಿ ಮನವಿ

    ಶಂಕಿತ ಉಗ್ರರನ್ನು 15 ದಿನ ವಶಕ್ಕೆ ನೀಡುವಂತೆ ಸಿಸಿಬಿ ಪೊಲೀಸರು ಕೇಳಿದ್ದು, ಪಬ್ಲಿಕ್ ಪ್ರಾಸಿಕ್ಯೂಟರ್​ ಕೋರ್ಟ್​ಗೆ ಹಾಜರಾಗದ ಹಿನ್ನೆಲೆ ಸ್ವಲ್ಪ ಸಮಯದ ನಂತರ ಪಿಪಿ ಜೊತೆ ಹಾಜರುಪಡಿಸಲು ಸಿಸಿಬಿ ಪೊಲೀಸರಿಗೆ ಎನ್​ಐಎ ವಿಶೇಷ ನ್ಯಾಯಾಲಯ ಸೂಚನೆ ನೀಡಿದೆ.

  • 19 Jul 2023 03:27 PM (IST)

    Karnataka Breaking News Live: ಭಯೋತ್ಪಾದಕರ ಬಂಧನ ಹಿನ್ನೆಲೆ ರಾಜ್ಯದ ಎಲ್ಲೆಡೆ ಕಟ್ಟೆಚ್ಚರ

    ಬೆಂಗಳೂರಿನಲ್ಲಿ ಐವರು ಶಂಕಿತ ಭಯೋತ್ಪಾದಕರ ಬಂಧನ ಹಿನ್ನೆಲೆ ರಾಜ್ಯದ ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ. ವಿಜಯಪುರ ಜಿಲ್ಲೆಯಲ್ಲಿ ಅಲರ್ಟ್​ ಆದ ಪೊಲೀಸ್ ಇಲಾಖೆ, ರೈಲು ನಿಲ್ದಾಣದಲ್ಲಿ ಬಾಂಬ್ ಪತ್ತೆ ದಳ, ಶ್ವಾನದಳದಿಂದ ತಪಾಸಣೆ ಮಾಡಲಾಗಿದೆ. ಜೊತೆಗೆ ರೈಲ್ವೆ ಪ್ರಯಾಣಿಕರ ಬ್ಯಾಗ್‌ಗಳನ್ನು ಸಹ ಪರಿಶೀಲಿಸಿದ್ದಾರೆ.

  • 19 Jul 2023 03:11 PM (IST)

    Karnataka Breaking News Live: ಬಿಜೆಪಿಯವರು ಕ್ಷಮೆ ಕೇಳಬೇಕು

    ಪ್ರೋಟೋಕಾಲ್ ಪ್ರಕಾರ, ಸ್ಟೇಟ್ ಗೆಸ್ಟ್ ಎಂದು ಅಧಿಕಾರಿಗಳು ನಾಯಕರನ್ನ ಕರ್ಕೊಂಡು ಬಂದಿದ್ದಾರೆ. ಪ್ರೋಟೋಕಾಲ್ ಪ್ರಕಾರ ಅಧಿಕಾರಿಗಳು ನಡ್ಕೊಂಡಿದಾರೆ. ಸಿಂಪಲ್ ವಿಚಾರಕ್ಕೆ ಧರಣಿ ಮಾಡುತ್ತಾರೆ. ದಲಿತ ಅಧ್ಯಕ್ಷನ ಮೇಲೆ ಪೇಪರ್ ಎಸೀತಾರೆ, ಹಲ್ಲೆಗೆ ಮುಂದಾಗುತ್ತಾರೆ. ಬಿಜೆಪಿಯವರು ಕ್ಷಮೆ ಕೇಳಬೇಕು, ಕಾನೂನು ಕ್ರಮ ಆಗಬೇಕು ಎಂದು ವಿಧಾನಸೌಧದಲ್ಲಿ ಕಾಂಗ್ರೆಸ್ ಶಾಸಕ‌ ಶಿವಲಿಂಗೇಗೌಡ ಹೇಳಿದರು.

  • 19 Jul 2023 02:50 PM (IST)

    Karnataka Breaking News Live: ಸರ್ಕಾರದ ಪ್ರೋಟೋಕಾಲ್ ಪ್ರಕಾರ ಪ್ರತಿಪಕ್ಷ ನಾಯಕರ ಸ್ವಾಗತಕ್ಕೆ ಅಧಿಕಾರಿಗಳ ನಿಯೋಜನ; ಪ್ರಿಯಾಂಕ್ ಖರ್ಗೆ

    ಬೆಂಗಳೂರು: ಪ್ರತಿಪಕ್ಷ ನಾಯಕರ ಸ್ವಾಗತಕ್ಕೆ ಅಧಿಕಾರಿಗಳ ನಿಯೋಜನೆ ವಿಚಾರವಾಗಿ ವಿಧಾನಸಭೆಯಲ್ಲಿ ಪರಸ್ಪರ ವಾಕ್ಸಮರ ಶುರುವಾಗಿದೆ. ಅದರಂತೆ ಇದೀಗ ‘ಸರ್ಕಾರದ ಪ್ರೋಟೋಕಾಲ್ ಪ್ರಕಾರ ಅಧಿಕಾರಿಗಳ ನಿಯೋಜನೆ ಮಾಡಲಾಗಿದೆ ಎಂದು ಬೆಂಗಳೂರಿನಲ್ಲಿ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಈ ಹಿಂದೆ ಕೇಶವಕೃಪಾಗೆ ಒಂದು ರಿಸರ್ವ್ ವ್ಯಾನ್ ಹಾಕಿದ್ದರು. ಯಾವ ಅಧಾರದ ಮೇಲೆ ಕೇಶವಕೃಪಾಗೆ ಒಂದು ತುಕಡಿ ಹಾಕಿದ್ರಿ, ಅದೆಲ್ಲಾ ಸ್ಟೇಟ್​ಮೆಂಟ್​​ ಹೊರಗೆ ಬರಲಿ ಎಂದರು.

  • 19 Jul 2023 02:33 PM (IST)

    Karnataka Breaking News Live: ಸರ್ಕಾರದ ಪ್ರೋಟೋಕಾಲ್ ಪ್ರಕಾರ ಅಧಿಕಾರಿಗಳ ನಿಯೋಜನೆ

    ಸರ್ಕಾರದ ಪ್ರೋಟೋಕಾಲ್ ಪ್ರಕಾರ ಅಧಿಕಾರಿಗಳ ನಿಯೋಜನೆ ಮಾಡಲಾಗಿದೆ ಎಂದು ಬೆಂಗಳೂರಿನಲ್ಲಿ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು. ಈ ಹಿಂದೆ ಕೇಶವ ಕೃಪಾಗೆ ಒಂದು ರಿಸರ್ವ್ ವ್ಯಾನ್ ಹಾಕಿದ್ದರು. ಯಾವ ಅಧಾರದ ಮೇಲೆ ಕೇಶವಕೃಪಾಗೆ ಒಂದು ತುಕಡಿ ಹಾಕಿದ್ರಿ. ಅದೆಲ್ಲಾ ಸ್ಟೇಟ್​ಮೆಂಟ್​​ ಹೊರಗೆ ಬರಲಿ ಎಂದು ಪ್ರಿಯಾಂಕ್​ ಖರ್ಗೆ ಹೇಳಿದರು.

  • 19 Jul 2023 01:49 PM (IST)

    Karnataka Breaking News Live: ಐವರು ಶಂಕಿತ ಉಗ್ರರ ಬಂಧನ; ಸಿಸಿಬಿ ಪೊಲೀಸರಿಗೆ ಸಿಎಂ ಸಿದ್ದರಾಮಯ್ಯ ಟವರು ಟ್ವೀಟ್​ ಮೂಲಕ ಅಭಿನಂದನೆ

    ಬೆಂಗಳೂರು: ನಗರದಲ್ಲಿ ವಿಧ್ವಂಸಕ ಕೃತ್ಯವೆಸಗಲು ಸಂಚು ರೂಪಿಸಿದ್ದ ಐವರು ಶಂಕಿತ ಉಗ್ರರನ್ನು ಬಂಧಿಸುವ ಮೂಲಕ‌ ಸಂಭವಿಸಬಹುದಾಗಿದ್ದ ಭಾರೀ ಅನಾಹುತವನ್ನು ವಿಫಲಗೊಳಿಸಿರುವ ರಾಜ್ಯದ ಸಿಸಿಬಿ ಪೊಲೀಸರಿಗೆ ಸಿಎಂ ಸಿದ್ದರಾಮಯ್ಯ ಟವರು ಟ್ವೀಟ್​ ಮೂಲಕ ಅಭಿನಂದನೆಗಳು ತಿಳಿಸಿದ್ದಾರೆ. ಭಯೋತ್ಪಾದಕ ಚಟುವಟಿಕೆಗಳು ಸೇರಿದಂತೆ ಯಾವುದೇ ತೆರನಾದ ದೇಶವಿರೋಧಿ ಚಟುವಟಿಗಳಲ್ಲಿ ತೊಡಗಿರುವವರನ್ನು ಪತ್ತೆಹಚ್ಚಿ, ಬೇರು ಸಮೇತ ಅಂತಹ ಶಕ್ತಿಗಳನ್ನು ರಾಜ್ಯದಿಂದ ಕಿತ್ತೊಗೆಯಲು ನಾವು ಸದಾ ಸಿದ್ಧರಿದ್ದೇವೆ. ನಾಡಿನ ಪ್ರತಿಯೊಬ್ಬರೂ ಸುರಕ್ಷತೆಯ ಬದುಕು ನೀಡಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದಿದ್ದಾರೆ.

  • 19 Jul 2023 01:42 PM (IST)

    Karnataka Breaking News Live: ಜೈನಮುನಿ ಹತ್ಯೆ ಪ್ರಕರಣದ ತನಿಖೆ ಸಿಐಡಿಗೆ ಹಸ್ತಾಂತರ; ಸಿಎಂ ಸಿದ್ದರಾಮಯ್ಯ

    ಬೆಂಗಳೂರು: ಜೈನಮುನಿ ಹತ್ಯೆ ಪ್ರಕರಣದ ತನಿಖೆಯನ್ನ ಸಿಐಡಿಗೆ ಹಸ್ತಾಂತರಿಸಲಾಗುವುದು ಎಂದು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಹಿರೇಕೋಡಿಯಲ್ಲಿ ಜೈನಮುನಿ ಹತ್ಯೆಯಾಗಿತ್ತು. ಈ ಪ್ರಕರಣ ಅತಿ ಸೂಕ್ಷ್ಮವಾಗಿರುವುದರಿಂದ ಸಿಐಡಿ ತನಿಖೆಗೆ ಹಸ್ತಾಂತರ ಮಾಡಲಾಗುವುದು ಎಂದು ಸಿಎಂ ಹೇಳಿದ್ದಾರೆ.

  • 19 Jul 2023 01:15 PM (IST)

    Karnataka Breaking News Live: ಇಂಡಿಯಾ ನಾಯಕರ ಸ್ವಾಗತಕ್ಕೆ ಅಧಿಕಾರಿಗಳ ನಿಯೋಜನೆ ವಿಚಾರ; ಹೆಚ್​ಡಿಕೆ ಆಕ್ರೋಶ

    ಬೆಂಗಳೂರು: ಮಹಾಘಟಬಂಧನ್ ಸಭೆಗೆ ಗಣ್ಯರ ಸ್ವಾಗತಕ್ಕೆ ಐಎಎಸ್ ಅಧಿಕಾರಿಗಳ ನಿಯೋಜನೆ ವಿಚಾರವಾಗಿ ವಿಧಾನಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಂದು ರಾಜಕೀಯ ಸಭೆಗಾಗಿ ಆಡಳಿತ ಸಿಬ್ಬಂದಿ ನೇಮಿಸ್ತೀರಾ?, ಇವರು ಯಾವ ರೀತಿ ಆಡಳಿತ ನಡೆಸ್ತಿದಾರೆ?, ಇದು ದೇಶಪ್ರೇಮನಾ? ಎಂದು ಕಾಂಗ್ರೆಸ್​ ವಿರುದ್ದ ಹರಿಹಾಯ್ದಿದ್ದಾರೆ.

  • 19 Jul 2023 12:43 PM (IST)

    Karnataka Breaking News Live: ಬೆಂಬಲ ಬೆಲೆ ನೀಡುವಂತೆ ಫ್ರೀಡಂ ಪಾರ್ಕ್​ನಲ್ಲಿ ತೆಂಗು ಬೆಳೆಗಾರರ ಪ್ರತಿಭಟನೆ

    ಬೆಂಗಳೂರು: ಬೆಂಬಲ ಬೆಲೆ ನೀಡುವಂತೆ ಫ್ರೀಡಂ ಪಾರ್ಕ್​ನಲ್ಲಿ ತೆಂಗು ಬೆಳೆಗಾರರ ಪ್ರತಿಭಟನೆ ನಡೆಸುತ್ತಿದ್ದಾರೆ. ಕೊಬ್ಬರಿಗೆ 16,730 ಬೆಂಬಲ ಬೆಲೆ ನೀಡಬೇಕು. ತೆಂಗು ಮತ್ತು ಕೊಬ್ಬರಿಯನ್ನು ಎಪಿಎಂಸಿ ಮಾರುಕಟ್ಟೆಯ ಮೂಲಕವೇ ಖರೀದಿಸಬೇಕು. ರಾಜ್ಯದಲ್ಲಿ 6.46 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ತೆಂಗು ಬೆಳೆ ಬೆಳೆಯಲಾಗುತ್ತದೆ. ವಾರ್ಷಿಕ 2.18 ಲಕ್ಷ ಮೆಟ್ರಿಕ್‌ ಟನ್‌ ಕೊಬ್ಬರಿ ಉತ್ಪಾದನೆಯಾಗುತ್ತದೆ. ಹಿಂದೆ ಪ್ರತಿ ಕ್ವಿಂಟಲ್‌ ಕೊಬ್ಬರಿ 16 ಸಾವಿರದಿಂದ 18 ಸಾವಿರದವರೆಗೂ ಮಾರಾಟವಾಗುತ್ತಿತ್ತು. ಕೇಂದ್ರ ಸರ್ಕಾರದ ತಪ್ಪು ಆಮದು ನೀತಿ ಮತ್ತು ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದ ಸದ್ಯ ಪ್ರತಿ ಕ್ವಿಂಟಲ್‌ ಕೊಬ್ಬರಿಗೆ ಕೇವಲ 6 ಸಾವಿರದಿಂದ 7 ಸಾವಿರದವರೆಗೂ ಮಾರಾಟವಾಗುತ್ತಿದೆ. ಹೀಗಾಗಿ ರಾಜ್ಯದ ಎಲ್ಲಾ ಕೊಬ್ಬರಿ ಬೆಳೆಗಾರರು ಪ್ರತಿಭಟನೆ ನಡೆಸುತ್ತಿದ್ದಾರೆ.

  • 19 Jul 2023 12:32 PM (IST)

    Karnataka Breaking News Live: ಯಾರಿಗೂ ಸತ್ಯ ಮಾತನಾಡಲು ಧೈರ್ಯ ಇಲ್ಲ; ಪರಿಷತ್ ಸದಸ್ಯ ಹೆಚ್ ವಿಶ್ವನಾಥ್

    ಬೆಂಗಳೂರು: ಯಾರಿಗೂ ಸತ್ಯ ಮಾತನಾಡಲು ಧೈರ್ಯ ಇಲ್ಲ, ಎಲ್ಲರು ಗಾಜಿನ ಮನೆಯಲ್ಲಿ ಇದ್ದೆವೆಂದು ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಹೇಳಿದರು. ‘ಬಜೆಟ್ ಜನರಿಗೆ ಕೊಡೋದು, ಯಾವುದೇ ಪಾರ್ಟಿ ಪಕ್ಷಕ್ಕೆ ಕೊಡೋದಲ್ಲ. ಜನ ನಮ್ಮ ಮೇಲೆ ಇಟ್ಟಿರುವ ಚೂರು ಪಾರು ನಂಬಿಕೆ ಕಳೆದುಕೊಳ್ಳುತ್ತೇವೆ. ಆಗ ನಾವು ಪ್ರಶ್ನೆ ಕೇಳಿದ್ರೆ ಸಚಿವರು ಓದಿಕೊಂಡು ಸಿದ್ದರಾಗಿ ಬರುತ್ತಿದ್ದರು. ಈಗ ಸಿದ್ದತೇನೂ ಇಲ್ಲ ಬದ್ದತೇನೂ ಇಲ್ಲ ಎಂದಿದ್ದಾರೆ.

  • 19 Jul 2023 11:55 AM (IST)

    Karnataka Breaking News Live: ಐವರು ಶಂಕಿತ ಭಯೋತ್ಪಾದಕರ ಬಂಧನ; ತನಿಖೆಯನ್ನು NIAಗೆ ಕೊಡಬೇಕೆಂದ ಅರಗ ಜ್ಞಾನೇಂದ್ರ

    ಬೆಂಗಳೂರು: ಇಂದು(ಜು.19) ಬೆಂಗಳೂರಿನಲ್ಲಿ ಐವರು ಶಂಕಿತ ಭಯೋತ್ಪಾದಕರ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್​ಐಆರ್​​ ಹಾಕಿ ಬಿಡಬಾರದು, ತನಿಖೆಯನ್ನು NIAಗೆ ಕೊಡಬೇಕು ಎಂದು ವಿಧಾನಸೌಧದಲ್ಲಿ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ‘ ಮಂಗಳೂರು ಸ್ಫೋಟ ಪ್ರಕರಣ ಕೂಡ ಕೂಲಂಕಷವಾಗಿ ತನಿಖೆ ಆಗಿತ್ತು. ಜನರಿಗೆ ಸುರಕ್ಷಿತವಾಗಿದ್ದೇವೆ ಎಂಬ ಭಾವನೆ ಬರಬೇಕು ಎಂದರು.

  • 19 Jul 2023 11:17 AM (IST)

    Karnataka Breaking News Live: ಇದು ಭಾರತ ವರ್ಸಸ್ ಈಸ್ಟ್ ಇಂಡಿಯಾ ಕಂಪನಿ; ಶೋಭಾ ಕರಂದ್ಲಾಜೆ

    ಉಡುಪಿ: ನಿನ್ನೆ ವಿರೋಧ ಪಕ್ಷಗಳು ನಡೆಸಿದ ಸಭೆ ವಿಚಾರ ‘ದೇಶವನ್ನು 60 ವರ್ಷ ಲೂಟಿ ಮಾಡಿದವರು ಇದೀಗ ಒಂದಾಗಿದ್ದಾರೆ. ಈ ಈಸ್ಟ್ ಇಂಡಿಯಾ ಕಂಪನಿಗೆ ಪ್ರಧಾನಿ ನರೇಂದ್ರ ಮೋದಿಯೇ ಟಾರ್ಗೆಟ್ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದ್ದಾರೆ. ಉಡುಪಿಯಲ್ಲಿ ಮಾತನಾಡಿದ ಅವರು ‘ ಕಳೆದ ಬಾರಿಯಂತೆ ಮತ್ತೆ ಬಿರುಸಿನ ಪ್ರಚಾರ ಶುರು ಮಾಡಿದ್ದಾರೆ. ತಮ್ಮ ಒಕ್ಕೂಟಕ್ಕೆ ಇಂಡಿಯಾ ಎಂಬ ಹೆಸರು ಇಟ್ಟುಕೊಂಡಿದ್ದಾರೆ. ಇದು ಭಾರತ ವರ್ಸಸ್ ಈಸ್ಟ್ ಇಂಡಿಯಾ ಕಂಪನಿ ಎಂದಿದ್ದಾರೆ.

  • 19 Jul 2023 10:40 AM (IST)

    Karnataka Breaking News Live: ಕಾಂಗ್ರೆಸ್ ಸರ್ಕಾರ ವರ್ಗಾವಣೆ ದಂಧೆಯಲ್ಲಿ ಮುಳುಗಿದೆ; ಆರ್​.ಅಶೋಕ್

    ಬೆಂಗಳೂರು: ಕಾಂಗ್ರೆಸ್ ಸರ್ಕಾರ ವರ್ಗಾವಣೆ ದಂಧೆಯಲ್ಲಿ ಮುಳುಗಿದೆ ಎಂದು ಆರ್​.ಅಶೋಕ್ ವಾಗ್ದಾಳಿ ನಡೆಸಿದ್ದಾರೆ. ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ‘ಕಾಂಗ್ರೆಸ್ ವಿರುದ್ಧ ವಿಪಕ್ಷಗಳು ಮಾಡಿಕೊಂಡ ಗುಂಪಿಗೆ ಇಂಡಿಯಾ ಎಂದು ಹೆಸರಿಟ್ಟಿದೆ. ಅದು ಇಂಡಿಯಾ ಅಲ್ಲ ಈಸ್ಟ್​ ಇಂಡಿಯಾ ಕಂಪನಿ ಇದ್ದಂತೆ. ಮುಂದೆ ನಡೆಯಲಿರುವ ಚುನಾವಣೆಗೆ ರಾಜ್ಯ ಕಾಂಗ್ರೆಸ್ ವರ್ಗಾವಣೆ ದಂಧೆ ಮೂಲಕ ಹಣ ಸಂಗ್ರಹಿಸಿ ಹೈಕಮಾಂಡ್​ಗೆ ಕಳಿಸಲಿದೆ ಎಂದರು.

  • 19 Jul 2023 10:27 AM (IST)

    Karnataka Breaking News Live: ಉದ್ಘಾಟನೆಗೂ ಮುನ್ನವೇ ಕುಸಿಯುವ ಹಂತ ತಲುಪಿದ ಸೇತುವೆ

    ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನ ಮುಗುರಳ್ಳಿ ಗ್ರಾಮದ ಬಳಿ ನೂತನವಾಗಿ ನಿರ್ಮಿಸಿದ್ದ ಸೇತುವೆ ಉದ್ಘಾಟನೆಗೂ ಮುನ್ನವೇ ಕುಸಿಯುವ ಹಂತ ತಲುಪಿದೆ. ಭಾರಿ ಮಳೆಯಿಂದ ಸೇತುವೆ ಬಳಿ ತಡೆಗೋಡೆ ಕುಸಿತವಾಗಿದ್ದು, ರಸ್ತೆಗಳು ಬಿರುಕು ಬಿಟ್ಟಿದ್ದಾವೆ. ಮುಗುರಳ್ಳಿ ಸೇರಿದಂತೆ ನಾಲ್ಕು ಗ್ರಾಮಗಳಿಗೆ ಸಂಪರ್ಕಿಸುವ ಸೇತುವೆ ಇದಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿದೆ.

  • 19 Jul 2023 09:47 AM (IST)

    Karnataka Breaking News Live: ಚಿಕ್ಕಮಗಳೂರಿನಲ್ಲಿ ಧಾರಾಕಾರಾ ಮಳೆ; ಜನಜೀವನ ಅಸ್ತವ್ಯಸ್ತ

    ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮುಂದುವರಿದ ಧಾರಾಕಾರ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಮೂಡಿಗೆರೆ ಕಳಸ ,ಕೊಪ್ಪ, N.R ಪುರ ತಾಲೂಕಿನಾದ್ಯಂತ ಮಳೆಯ ಜೊತೆ ರಭಸವಾಗಿ ಗಾಳಿ ಬೀಸುತ್ತಿದೆ. ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಚಾರ್ಮಾಡಿ ಘಾಟ್​ನಲ್ಲಿ ಸುರಿಯುತ್ತಿರುವ ಮಳೆಯಿಂದ ವಾಹನ ಸವಾರರಿಗೆ ತೊಂದರೆ ಉಂಟಾಗುತ್ತಿದೆ.

  • 19 Jul 2023 09:09 AM (IST)

    Karnataka Breaking News Live: ಪಶ್ಚಿಮ ಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆ; ತುಂಬಿ ಹರಿಯುತ್ತಿರುವ ಮಲಪ್ರಭಾ ನದಿ

    ಬೆಳಗಾವಿ: ಪಶ್ಚಿಮ ಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆ ಹಿನ್ನೆಲೆ ಜಿಲ್ಲೆಯ ಖಾನಾಪುರ ತಾಲೂಕಿನ ಮಲಪ್ರಭಾ ನದಿ ತುಂಬಿ ಹರಿಯುತ್ತಿದೆ. ನದಿ ನೀರಿನಲ್ಲಿ ಬಹುತೇಕ ದೇವಸ್ಥಾನಗಳು ಜಲಾವೃತವಾಗಿದೆ. ಇಂದು ಒಂದು ದಿನ ಮಳೆ ಆದರೆ, ಖಾನಾಪುರ ತಾಲೂಕಿನ ಹಬ್ಬಾನಟ್ಟಿ ಗ್ರಾಮದಲ್ಲಿರುವ ದೇವಸ್ಥಾನ ಸಂಪೂರ್ಣ ಜಲಾವೃತ‌ವಾಗಲಿದೆ. ಕಳೆದ

  • 19 Jul 2023 08:35 AM (IST)

    Karnataka Breaking News Live: ವಿಧಾನಪರಿಷತ್​ನಲ್ಲಿಂದು ರಾಜ್ಯದ ಮಳೆ ಕೊರತೆ, ರೈತರ ಆತ್ಮಹತ್ಯೆ ಸಂಬಂಧ ಚರ್ಚೆ

    ಬೆಂಗಳೂರು: ವಿಧಾನಪರಿಷತ್​ನಲ್ಲಿ ಇಂದು(ಜು.19) ರಾಜ್ಯದಲ್ಲಿ ಮಳೆ ಕೊರತೆ, ರೈತರ ಆತ್ಮಹತ್ಯೆ ಸಂಬಂಧ ಚರ್ಚೆಯಾಗಲಿದೆ. ವಿಧಾನಪರಿಷತ್​ನಲ್ಲಿ ಇಂದು ನಿಯಮ 68ರ ಅಡಿ ಚರ್ಚೆಗೆ ಅವಕಾಶ ನೀಡಲಾಗಿದೆ. ನಿನ್ನೆ ಪರಿಷತ್​ನಲ್ಲಿ ರಾಜ್ಯದಲ್ಲಿ 48 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆಂದು ಕೋಟ ಶ್ರೀನಿವಾಸ ಪೂಜಾರಿ ವಿಷಯ ಪ್ರಸ್ತಾಪಿಸಿದ್ದರು. ಇಂದು ಸಭಾಪತಿ ಹೊರಟ್ಟಿ ಅವರು ಚರ್ಚೆಗೆ ಅವಕಾಶ ನೀಡುವುದಾಗಿ ಹೇಳಿದ್ದರು.

  • 19 Jul 2023 08:13 AM (IST)

    Karnataka Breaking News Live: ಕಾಂಗ್ರೆಸ್​ನ 4 ನೇ ಗ್ಯಾರಂಟಿಯಾದ ಗೃಹಲಕ್ಷ್ಮೀ ಯೋಜನೆ ಇಂದು ಚಾಲನೆ; ಸಹಾಯವಾಣಿ ಸಂಖ್ಯೆ ಇಲ್ಲಿದೆ

    ಬೆಂಗಳೂರು: ಕಾಂಗ್ರೆಸ್​ನ 4 ನೇ ಗ್ಯಾರಂಟಿಯಾದ ಗೃಹಲಕ್ಷ್ಮೀ ಯೋಜನೆಗೆ ಇಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಚಾಲನೆ ನೀಡಲಿದ್ದಾರೆ. ಇನ್ನು ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗೆ ತಳ ಹಂತದಿಂದ ತರಬೇತಿ ನೀಡಲಾಗಿದೆ. ನಾಡಕಚೇರಿ, ಗ್ರಾಮ ಒನ್, ಬೆಂಗಳೂರು ಒನ್ ಸಿಬ್ಬಂದಿಗೂ ತರಬೇತಿ ನೀಡಿದ್ದು, ಗೃಹಲಕ್ಷ್ಮೀ ಯೋಜನೆಯಡಿ ಮನೆ ಯಜಮಾನಿಗೆ 2 ಸಾವಿರ ರೂ. ಪಡೆಯಲು, ಮನೆ ಯಜಮಾನಿಯ ಪತಿಯ ಆಧಾರ್​​ಕಾರ್ಡ್ ಕೂಡ ಬೇಕಾಗುತ್ತದೆ. ಹೌದು ಬೇರೆ ಖಾತೆಗೆ ಹಣ ಹಾಕೆನ್ನುವವರು ಪಾಸ್​​ಬುಕ್ ಜೆರಾಕ್ಸ್ ಕೊಡಬೇಕು. ಯೋಜನೆಯ ಉಚಿತ ಲಾಭ ಪಡೆದುಕೊಳ್ಳಲು ಸಹಾಯವಾಣಿ ಸಂಖ್ಯೆ. 8147500500ಕ್ಕೆ ಪಡಿತರ ಚೀಟಿ ಸಂಖ್ಯೆ SMS ಮಾಡಿ, ಕೂಡಲೇ ಇದು ಸ್ಥಳ, ಗೊತ್ತುಪಡಿಸಿದ ದಿನಾಂಕ, ಸಮಯ ಸಂದೇಶ ರವಾನಿಸುತ್ತದೆ. ಗೊಂದಲವಿದ್ದರೆ 1902 ನಂಬರ್​ಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಿ ಎಂದು ಮಹಿಳಾ & ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಮಾಹಿತಿ ನೀಡಿದ್ದಾರೆ.

  • 19 Jul 2023 08:02 AM (IST)

    Karnataka Breaking News Live: ಗೃಹಲಕ್ಷ್ಮೀ ಯೋಜನೆಗೆ ಇಂದು ಚಾಲನೆ

    ಬೆಂಗಳೂರು: ಇಂದು ಸಂಜೆ 5ಕ್ಕೆ ಗೃಹಲಕ್ಷ್ಮೀ ಯೋಜನೆಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್​ ಚಾಲನೆ ನೀಡಲಿದ್ದಾರೆ. ಕಾಂಗ್ರೆಸ್​ನ 4 ನೇ ಗ್ಯಾರಂಟಿಯಾದ ಗೃಹಲಕ್ಷ್ಮೀ ಯೋಜನೆ ಇಂದು ಚಾಲನೆ ನೀಡಲಿದ್ದಾರೆ. ಈಗಾಗಲೇ ಯೋಜನೆ ಜಾರಿಗೆ ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆಯಿಂದ ಸಿದ್ಧತೆ ಮಾಡಿಕೊಳ್ಳಲಾಗಿದೆ.

  • Published On - Jul 19,2023 7:59 AM

    Follow us
    ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
    ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
    ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
    ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
    ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
    ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
    Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
    Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
    ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
    ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
    ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
    ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
    ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
    ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
    ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
    ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
    ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
    ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
    ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
    ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್