ಬೆಂಗಳೂರು: ನಿಷೇಧಿತ ಇ ಸಿಗರೇಟ್(e-cigarette), ಇ ಲಿಕ್ವೀಡ್(e-liquid) ಮಾರಾಟ ಮಾಡುತ್ತಿದ್ದ ಕುಂಬಾರಪೇಟೆಯ ಕಂಪನಿ ಗೋಡೌನ್ ಮೇಲೆ ಸಿಸಿಬಿ (CCB)ಮಹಿಳಾ ಸಂರಕ್ಷಣಾ ವಿಭಾಗದಿಂದ ದಾಳಿ ಮಾಡಲಾಗಿದೆ. ಈ ವೇಳೆ ಗೋಡೋನ್ನಲ್ಲಿ ಸಂಗ್ರಹಿಸಿದ್ದ 1 ಕೋಟಿ 25 ಲಕ್ಷ ರೂ. ಮೌಲ್ಯದ ನಿಷೇಧಿತ ಲಿಕ್ವೀಡ್, 8 ಸಾವಿರ ವಿವಿಧ ಫ್ಲೇವರ್ನ ಇ-ಸಿಗರೇಟ್, 2227 ಇ-ಸಿಗರೇಟ್ ಲಿಕ್ವೀಡ್, ಇ-ಸಿಗರೇಟ್ ಪಾಡ್ ಹಾಗೂ ಕೆಲ ಬಿಡಿಭಾಗಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಹಿಂದೆಯೂ ಎರಡು ಮೂರು ಬಾರಿ ಇದೇ ಗೋಡೋನ್ ಮೇಲೆ ದಾಳಿ ಮಾಡಲಾಗಿತ್ತು. ಆದರೂ ಕೂಡ ಪದೇ ಪದೇ ಇದೇ ರೀತಿ ನಿಷೇಧಿತ ಇಸಿಗರೇಟ್ ಶೇಖರಣೆ ಮಾಡಿ ಮಾರಾಟ ಮಾಡುತ್ತಿದ್ದಾರೆ. ಸದ್ಯ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನ ಬಂಧಿಸಲಾಗಿದೆ.
ಇನ್ನು ಇದನ್ನ ಕೆಲವೊಂದು ಪಾರ್ಟಿ, ಇವೆಂಟ್ಗಳಿಗೆ ಸರಬರಾಜು ಮಾಡಿರುವುದು ಬಯಲಿಗೆ ಬಂದಿದೆ. ಆದ್ರೆ, ಯಾವ ಯಾವ ಪಾರ್ಟಿ, ಇವೆಂಟ್ ಅನ್ನೋದು ತನಿಖೆ ಬಳಿಕ ಗೊತ್ತಾಗಬೇಕಿದೆ. ಜೊತೆಗೆ ಆನ್ ಲೈನ್ ಮೂಲಕವೂ ಇ-ಸಿಗರೇಟ್ ಮಾರಾಟ ಮಾಡುತ್ತಿರುವುದು ತಿಳಿದಿದೆ. ಈ ಇ-ಸಿಗರೇಟ್ ಆರೋಗ್ಯಕ್ಕೆ ಮಾರಕ ಎಂದು ಕೇಂದ್ರ ಸರ್ಕಾರ ನಿಷೇಧ ಮಾಡಿದೆ. ಆದರೂ ಇವರು ಬೇರೆ ಬೇರೆ ರಾಜ್ಯಗಳಿಂದ ತಂದು ಮಾರಾಟ ಮಾಡುತ್ತಿದ್ದರು. ಇನ್ನು ಈ ಪ್ರಕರಣ ಸಂಬಂಧ ಸಚಿನ್ ಮತ್ತು ಸಿದ್ದಲಿಂಗ ಎಂಬಿಬ್ಬರನ್ನ ಬಂಧಿಸಿ, ಗೋಡೌನ್ ಮಾಲೀಕನ ಮೇಲೆ ಕೇಸ್ ದಾಖಲು ಮಾಡಲಾಗಿದೆ.
ಇದನ್ನೂ ಓದಿ:ನಕಲಿ ಅಂಕಪಟ್ಟಿ ತಯಾರಿಸಿ ಮಾರಾಟ ಮಾಡುತ್ತಿದ್ದ ಹುಬ್ಬಳ್ಳಿಯ ಸ್ಟಡಿ ಸೆಂಟರ್ ಮೇಲೆ ಸಿಸಿಬಿ ದಾಳಿ
ಅನಾಥ ಮಕ್ಕಳು, ವೃದ್ದರೂ, ನಿರ್ಗತಿಕರ ಕೇರ್ ಟೇಕರ್ ಸಂಸ್ಥೆ ಮೇಲೆ ಸಿಸಿಬಿ ಪೊಲೀಸರ ದಾಳಿ: ವಂಚನೆ ಆರೋಪ
ಬೆಂಗಳೂರು: ಅನಾಥ ಮಕ್ಕಳು, ವೃದ್ದರೂ, ನಿರ್ಗತಿಕರ ಕೇರ್ ಟೇಕರ್ ಹೆಸರಲ್ಲಿ ಹಣ ಸಂಗ್ರಹಿಸಿ ವಂಚನೆ ಮಾಡಿದ ಆರೋಪದ ಮೇಲೆ ಬೊಮ್ಮನಹಳ್ಳಿ ವ್ಯಾಪ್ತಿಯ ಖಾಸಗಿ ಟ್ರಸ್ಟ್ ಮೇಲೆ ಸಿಸಿಬಿ ಪೊಲೀಸರು(CCB Police) ದಾಳಿ ನಡೆಸಿದ್ದರು. ಅಜಯ್ ಹಾಗೂ ವೆಂಕಟಾಚಲ ಎಂಬ ಇಬ್ಬರು ನಡೆಸುತ್ತಿದ್ದ ಟ್ರಸ್ಟ್ ಇದಾಗಿದ್ದು, ಇಬ್ಬರನ್ನು ವಶಕ್ಕೆ ಪಡೆಯಲಾಗಿತ್ತು. ಸಮಾಜದಲ್ಲಿ ಎಷ್ಟೋ ಜನ ಅನಾಥ ಮಕ್ಕಳು, ವೃದ್ದರೂ, ನಿರ್ಗತಿಕರು ಇದ್ದಾರೆ. ಇಂತವರನ್ನು ಕೇರ್ ಟೇಕ್ ಮಾಡುವುದಕ್ಕೆಂದು ಅದೆಷ್ಟೋ ಸಂಸ್ಥೆಗಳು ಇವೆ. ಕೆಲವರು ಸ್ವಂತ ಹಣದಲ್ಲಿ ಕೇರ್ ಟೇಕ್ ಮಾಡಿದ್ರೆ, ಇನ್ನು ಕೆಲವರು ಫಂಡ್ ಕಲೆಕ್ಟ್ ಮಾಡಿ ನೋಡ್ಕೋತಾರೆ. ಆದ್ರೆ, ಇಲ್ಲೋಂದು ಟೀಂ ಇಂತಹ ಎಮೋಷನ್ ಫೀಲಿಂಗನ್ನೇ ಬಂಡವಾಳ ಮಾಡಿಕೊಂಡು ಕೋಟ್ಯಾಂತರ ಲೂಟಿ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಸಿಸಿಬಿ ಅಧಿಕಾರಿಗಳು ದಾಳಿ ಮಾಡಿದ್ದರು.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ