ಅನಾಥ ಮಕ್ಕಳು, ವೃದ್ದರೂ, ನಿರ್ಗತಿಕರ ಕೇರ್​ ಟೇಕರ್ ಸಂಸ್ಥೆ ಮೇಲೆ ಸಿಸಿಬಿ ಪೊಲೀಸರ ದಾಳಿ​​: ವಂಚನೆ ಆರೋಪ

ಅನಾಥ ಮಕ್ಕಳು, ವೃದ್ದರೂ, ನಿರ್ಗತಿಕರ ಕೇರ್​ ಟೇಕರ್​​ ಹೆಸರಲ್ಲಿ ಹಣ ಸಂಗ್ರಹಿಸಿ ವಂಚನೆ ಮಾಡಿದ ಆರೋಪದ ಮೇಲೆ ಬೊಮ್ಮನಹಳ್ಳಿ ವ್ಯಾಪ್ತಿಯ ಖಾಸಗಿ ಟ್ರಸ್ಟ್​ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಅಜಯ್ ಹಾಗೂ ವೆಂಕಟಾಚಲ ಎಂಬ ಇಬ್ಬರು ನಡೆಸುತ್ತಿದ್ದ ಟ್ರಸ್ಟ್ ಇದಾಗಿದ್ದು, ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ.

ಅನಾಥ ಮಕ್ಕಳು, ವೃದ್ದರೂ, ನಿರ್ಗತಿಕರ ಕೇರ್​ ಟೇಕರ್ ಸಂಸ್ಥೆ ಮೇಲೆ ಸಿಸಿಬಿ ಪೊಲೀಸರ ದಾಳಿ​​:  ವಂಚನೆ ಆರೋಪ
ಸಾಂದರ್ಭಿಕ ಚಿತ್ರ
Follow us
|

Updated on: Apr 22, 2023 | 8:06 AM

ಬೆಂಗಳೂರು: ಅನಾಥ ಮಕ್ಕಳು, ವೃದ್ದರೂ, ನಿರ್ಗತಿಕರ ಕೇರ್​ ಟೇಕರ್​​ ಹೆಸರಲ್ಲಿ ಹಣ ಸಂಗ್ರಹಿಸಿ ವಂಚನೆ ಮಾಡಿದ ಆರೋಪದ ಮೇಲೆ ಬೊಮ್ಮನಹಳ್ಳಿ ವ್ಯಾಪ್ತಿಯ ಖಾಸಗಿ ಟ್ರಸ್ಟ್​ ಮೇಲೆ ಸಿಸಿಬಿ ಪೊಲೀಸರು(CCB Police) ದಾಳಿ ನಡೆಸಿದ್ದಾರೆ. ಅಜಯ್ ಹಾಗೂ ವೆಂಕಟಾಚಲ ಎಂಬ ಇಬ್ಬರು ನಡೆಸುತ್ತಿದ್ದ ಟ್ರಸ್ಟ್ ಇದಾಗಿದ್ದು, ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಸಮಾಜದಲ್ಲಿ ಎಷ್ಟೋ ಜ‌ನ ಅನಾಥ ಮಕ್ಕಳು, ವೃದ್ದರೂ, ನಿರ್ಗತಿಕರು ಇದ್ದಾರೆ. ಇಂತವರನ್ನು ಕೇರ್ ಟೇಕ್ ಮಾಡುವುದಕ್ಕೆಂದು ಅದೆಷ್ಟೋ ಸಂಸ್ಥೆಗಳು ಇವೆ. ಕೆಲವರು ಸ್ವಂತ ಹಣದಲ್ಲಿ ಕೇರ್ ಟೇಕ್ ಮಾಡಿದ್ರೆ, ಇನ್ನು ಕೆಲವರು ಫಂಡ್ ಕಲೆಕ್ಟ್ ಮಾಡಿ ನೋಡ್ಕೋತಾರೆ. ಆದ್ರೆ, ಇಲ್ಲೋಂದು ಟೀಂ ಇಂತಹ ಎಮೋಷನ್ ಫೀಲಿಂಗನ್ನೇ ಬಂಡವಾಳ ಮಾಡಿಕೊಂಡು ಕೋಟ್ಯಾಂತರ ಲೂಟಿ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಸಿಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ವ್ಯವಸ್ಥಿತವಾಗಿ ಸಾರ್ವಜನಿಕರಿಂದ ಹಣ ಪಡೆಯುತಿದ್ದ ಈ ಟ್ರಸ್ಟ್. ಸುಮಾರು 20 ಹುಡುಗಿಯರು ತಿಂಗಳಿಗೆ 15 ಸಾವಿರ ಸಂಬಳಕ್ಕೆ ಇಲ್ಲಿ ಕೆಲಸ ಮಾಡುತ್ತಿದ್ದರು. ಕೆಲಸ ಮಾಡುವ ಹುಡುಗಿಯರಿಗೆ ತಿಂಗಳಿಗೆ 2 ರಿಂದ 3 ಲಕ್ಷ ಹಣ ಕಲೆಕ್ಟ್ ಮಾಡುವ ಟಾಸ್ಕ್ ನೀಡುತ್ತಿದ್ದರು.

ಇದನ್ನೂ ಓದಿ:ಸಿಸಿಬಿ ಪೊಲೀಸ್​ ದಾಳಿ ವೇಳೆ ತಲೆಮರಿಸಿಕೊಂಡಿದ್ದ ರೌಡಿಶೀಟರ್​ ನಾಗ ಸಚಿವ ವಿ ಸೋಮಣ್ಣ ಮನೆಗೆ ಎಂಟ್ರಿ

ಹಣ ಕಲೆಕ್ಟ್ ಮಾಡೋದು ಹೇಗೆ ಗೊತ್ತಾ?

ಕೆಲ ನಂಬರ್​ಗಳನ್ನ ಸಂಗ್ರಹ ಮಾಡಿ ಅವರಿಗೆ ಕಾಲ್ ಮಾಡಿ ನಮ್ಮದು ಅಕ್ಯೂಮೆಂಟ್ರಿಕ್ಸ್ ಎಂಬ ಟ್ರಸ್ಟ್ ಎಂದು ಪರಿಚಯ ಮಾಡಿಕೊಳ್ಳುತ್ತಿದ್ದರು. ನಂತರ ನಾವು ಅನಾಥರು, ವೃದ್ದರು, ಬಡವರು ಹಾಗೂ ಮಕ್ಕಳ ವಿದ್ಯಾಭ್ಯಾಸವನ್ನ ನೋಡುತ್ತಿದ್ದೀವಿ. ನೀವು ನಿಮ್ಮ ಕೈಲಾದ ಸಹಾಯ ಮಾಡಿ ಎಂದು ನಯವಾಗಿ ಮಾತನಾಡುತ್ತಾ ಅವರಿಂದ ಎಷ್ಟು ಸಾಧ್ಯವೋ ಅಷ್ಟು ಗೂಗಲ್ ಪೇ ಮೂಲಕ ಹಣ ಪಡೀ‌ತಾ ಇದ್ರು. ಒಂದು ವೇಳೆ ಡೌಟ್ ಬಂದು ಡೀಟೆಲ್ಸ್ ಕೇಳಿದ್ರೆ, ಕೆಲ ಮಕ್ಕಳ, ವೃದ್ದರ ಕೇರ್ ಟೇಕ್ ಮಾಡುವ ತರ ಪೋಟೋ ಕಳಿಸುತ್ತಿದ್ದರು. ಇದನ್ನ ನಂಬಿ ನಗರದಲ್ಲಿ ಹಲವಾರು ಮಂದಿ ಹಣವನ್ನು ಹಾಕಿದ್ದಾರೆ. ಸುಮಾರು ಒಂದುವರೆ ವರ್ಷದಿಂದ ಕೋಟಿಗೂ ಅಧಿಕ‌ ಹಣ ಕಲೆಕ್ಟ್ ಮಾಡಿರೋ ಶಂಕೆ ವ್ಯಕ್ತವಾಗಿದ್ದು ಸಾರ್ವಜನಿಕರಿಂದ ಪಡೆದ ಹಣವನ್ನ ವೈಯಕ್ತಿಕವಾಗಿ ಬಳಕೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ:Bengaluru: ವಿದೇಶಿ ವಿದ್ಯಾರ್ಥಿಗಳ ಹೆಸರಲ್ಲಿ ನಕಲಿ ಅಡ್ಮಿಷನ್; ಸಿಸಿಬಿ ಪೊಲೀಸರಿಂದ ಆರೋಪಿ ಬಂಧನ

ಇನ್ನು ಮಾಹಿತಿ ಸಿಕ್ಕಿದ ಕೂಡಲೇ ಸುಮಾರು 20 ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿ, ಈ ವೇಳೆ ವಂಚನೆ ಮಾಡಿದ ಹಣ ಪಡೆದ ಹಲವು ದಾಖಲೆಗಳ ಜೊತೆಗೆ 20 ಬೇಸಿಕ್ ಮೊಬೈಲ್ ಪೋನ್​ಗಳು ಹಾಗೂ ಲ್ಯಾಪ್ ಟ್ಯಾಪ್​ಗಳು ಪತ್ತೆಯಾಗಿದೆ. ಸದ್ಯ ಎಲ್ಲವನ್ನು ಸೀಜ್ ಮಾಡಿಕೊಂಡಿದ್ದು, ಅಜಯ್ ಹಾಗೂ ವೆಂಕಟಾಚಲ ಅವರನ್ನ ವಶಕ್ಕೆ ಪಡೆದು ಸಿಸಿಬಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಹಿಂದೂ ಮೆರವಣಿಗೆಯಲ್ಲಿ ರಕ್ಷಣೆಗೆ ಶಸ್ತ್ರ ಸಮೇತ ನಾವು ಸಜ್ಜು: ಶ್ರೀರಾಮ ಸೇನೆ
ಹಿಂದೂ ಮೆರವಣಿಗೆಯಲ್ಲಿ ರಕ್ಷಣೆಗೆ ಶಸ್ತ್ರ ಸಮೇತ ನಾವು ಸಜ್ಜು: ಶ್ರೀರಾಮ ಸೇನೆ
ಕಾಳಿ ವೇಷ ಧರಿಸುತ್ತಿದ್ದಂತೆ ಏನಾಗುತ್ತಿತ್ತು, ವಿವರಿಸಿದ ನಟಿ ರಾಧಿಕಾ
ಕಾಳಿ ವೇಷ ಧರಿಸುತ್ತಿದ್ದಂತೆ ಏನಾಗುತ್ತಿತ್ತು, ವಿವರಿಸಿದ ನಟಿ ರಾಧಿಕಾ
ವಾರಣಾಸಿಯಲ್ಲಿ ಗಂಗಾ ಆರತಿ ವೀಕ್ಷಿಸಿದ ಕಾಂಗ್ರೆಸ್ ನಿಯೋಗ
ವಾರಣಾಸಿಯಲ್ಲಿ ಗಂಗಾ ಆರತಿ ವೀಕ್ಷಿಸಿದ ಕಾಂಗ್ರೆಸ್ ನಿಯೋಗ
Daily Devotional: ಹನುಮಾನ್ ಕಾರ್ಯಫಲ ಮಂತ್ರ ಬಗ್ಗೆ ತಿಳಿಯಿರಿ
Daily Devotional: ಹನುಮಾನ್ ಕಾರ್ಯಫಲ ಮಂತ್ರ ಬಗ್ಗೆ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 23 ರಿಂದ 29ರ ವಾರ ಭವಿಷ್ಯ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 23 ರಿಂದ 29ರ ವಾರ ಭವಿಷ್ಯ ತಿಳಿಯಿರಿ
Nithya Bhavishya: ಈ ರಾಶಿಯವರು ವ್ಯಾವಹಾರದಲ್ಲಿ ಇಂದು ಬದಲಾವಣೆಯನ್ನು ತರು
Nithya Bhavishya: ಈ ರಾಶಿಯವರು ವ್ಯಾವಹಾರದಲ್ಲಿ ಇಂದು ಬದಲಾವಣೆಯನ್ನು ತರು
ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್