ಕಲಬುರಗಿ: ಬೈಕ್ ಮೇಲೆ ಟಿಪ್ಪರ್ ಹರಿದ ಪರಿಣಾಮ ಪತಿ ಪತ್ನಿ ಸ್ಥಳದಲ್ಲೇ ಸಾವು; ಅದೃಷ್ಟವಶಾತ್ ಬದುಕುಳಿದ ಮಗು
ಬೈಕ್ ಮೇಲೆ ಟಿಪ್ಪರ್ ಹರಿದ ಪರಿಣಾಮ ಪತಿ ಪತ್ನಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಗರದ ಉದನೂರು ಕ್ರಾಸ್ ಬಳಿ ನಡೆದಿದೆ. ಕೂಲಿ ಕೆಲಸ ಮಾಡಿಕೊಂಡಿದ್ದ ರಾಣೋಜಿ (42), ರೇಣುಕಾ(35) ಮೃತಪಟ್ಟ ರ್ದುದೈವಿಗಳು.
ಕಲಬುರಗಿ: ಬೈಕ್ ಮೇಲೆ ಟಿಪ್ಪರ್ ಹರಿದ ಪರಿಣಾಮ ಪತಿ ಪತ್ನಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಗರದ ಉದನೂರು ಕ್ರಾಸ್ ಬಳಿ ನಡೆದಿದೆ. ಕೂಲಿ ಕೆಲಸ ಮಾಡಿಕೊಂಡಿದ್ದ ರಾಣೋಜಿ (42), ರೇಣುಕಾ(35) ಮೃತಪಟ್ಟ ರ್ದುದೈವಿಗಳು. ಮೃತರು ಕಲಬುರಗಿ ತಾಲೂಕಿನ ಶರಣ ಸಿರಸಗಿ ಗ್ರಾಮದ ನಿವಾಸಿಗಳಾಗಿದ್ದು, ನಿನ್ನೆ(ಏ.21) ರಾತ್ರಿ ಒಂಬತ್ತು ಗಂಟೆ ಸಮಯದಲ್ಲಿ ರಾಣೋಜಿ ಪತ್ನಿ ಮತ್ತು ಮಗು ಜೊತೆ ಕಲಬುರಗಿ ನಗರದಿಂದ ಶರಣಸಿರಸಗಿಯಲ್ಲಿರುವ ತಮ್ಮ ಮನೆಗೆ ಹೋಗುತ್ತಿದ್ದರಂತೆ. ಈ ಸಂದರ್ಭದಲ್ಲಿ ಹಿಂದಿನಿಂದ ಬಂದ ಮರಳು ಟಿಪ್ಪರ್ ಬೈಕ್ಗೆ ಗುುದ್ದಿದೆ. ಮರಳು ಟಿಪ್ಪರ್ನ ಚಕ್ರದಡಿ ಸಿಲುಕಿ ಪತಿ ಪತ್ನಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇನ್ನು ದಂಪತಿಯ ಮೂರು ವರ್ಷದ ಮಗು ಅದೃಷ್ಟವಶಾತ್ ಬದುಕುಳಿದಿದೆ. ಇನ್ನು ಅಪಘಾತವಾಗುತ್ತಿದ್ದಂತೆ ಟಿಪ್ಪರ್ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಕಲಬುರಗಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಮೇಲಿಂದ ಮೇಲೆ ಕಲಬುರಗಿ ನಗರದ ರಿಂಗ್ ರಸ್ತೆಯಲ್ಲಿ ಅಪಘಾತಗಳು ಹೆಚ್ಚಾಗುತ್ತಿದ್ದು, ರಿಂಗ್ ರಸ್ತೆಯಲ್ಲಿ ಮರಳು ಟಿಪ್ಪರ್ ಸಂಚಾರಕ್ಕೆ ಬ್ರೇಕ್ ಹಾಕಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಇದನ್ನೂ ಓದಿ:Kukke Subramanya: ಬಿಳಿನೆಲೆಯಲ್ಲಿ ಭೀಕರ ರಸ್ತೆ ಅಪಘಾತ; ಮಗು ಸೇರಿ ನಾಲ್ವರ ದುರ್ಮರಣ
ಲಾರಿ ಚಾಲಕನ ಯಡವಟ್ಟಿಗೆ ಸರಣಿ ಅಪಘಾತ
ಬೆಂಗಳೂರು: ನಿಂತಿದ್ದ ಲಾರಿಯ ಹ್ಯಾಂಡ್ ಬ್ರೇಕ್ ಹಾಕದ ಕಾರಣ ಮೂವ್ ಆಗಿ ಸರಣಿ ಅಪಘಾತವಾದ ಘಟನೆ ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಟೈಲ್ಸ್ ಲೋಡ್ ಆಗಿದ್ದ ಲಾರಿಯನ್ನ ನಿಲ್ಲಿಸಿ ಹ್ಯಾಂಡ್ ಬ್ರೇಕ್ ಹಾಕೋದನ್ನ ಚಾಲಕ ಮರೆತು ಹೋಗಿದ್ದಾನೆ. ಈ ವೇಳೆ ಅಚಾನಕ್ ಆಗಿ ಲಾರಿ ಮೂವ್ ಆಗಿದ್ದು, ಇದರ ಪರಿಣಾಮ ರಸ್ತೆಯಲ್ಲಿ ನಿಂತಿದ್ದ ಟಾಟಾ ಏಸ್ ಪಲ್ಟಿ, ಒಂದು ಕಾರು ಸಂಪೂರ್ಣ ಜಖಂ ಆಗಿದೆ. ಅದೃಷ್ಟವಶಾತ್ ಯಾರಿಗೂ ಪ್ರಾಣಪಾಯವಾಗಿಲ್ಲ. ಘಟನಾ ಸ್ಥಳಕ್ಕೆ ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇನ್ನಷ್ಟು ಅಪಘಾತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ