ರೌಡಿಶೀಟರ್ ಜೊತೆ ಲಿಂಕ್​ ಹೊಂದಿದ್ದ ಸಿಸಿಬಿ ಇನ್ಸ್​ಪೆಕ್ಟರ್ ಅಮಾನತು

| Updated By: ವಿವೇಕ ಬಿರಾದಾರ

Updated on: Apr 20, 2024 | 2:53 PM

ಪ್ರತ್ಯೇಕ ಘಟನೆ: ಸಿಸಿಬಿಯ ರೌಡಿ ನಿಗ್ರಹದಳದ ಇನ್ಸ್​​ಪೆಕ್ಟರ್ ಜ್ಯೋತಿರ್ಲಿಂಗ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. ರೌಡಿಶೀಟರ್​ ಕಾಡುಬೀಸನಹಳ್ಳಿ ರೋಹಿತ್ ಜೊತೆ ಲಿಂಕ್​ ಹೊಂದಿದ್ದ ಎಂಬ ಕಾರಣಕ್ಕೆ ಅಮಾನತು ಮಾಡಲಾಗಿದೆ. ಮತ್ತೊಂದು ಘಟನೆಯಲ್ಲಿ ರೌಡಿಶೀಟರ್​​ನ ಕೊಲೆಗೆ ಸಂಜು ರೂಪಿಸಿದ್ದ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ರೌಡಿಶೀಟರ್ ಜೊತೆ ಲಿಂಕ್​ ಹೊಂದಿದ್ದ ಸಿಸಿಬಿ ಇನ್ಸ್​ಪೆಕ್ಟರ್ ಅಮಾನತು
ಸಿಸಿಬಿ
Follow us on

ಬೆಂಗಳೂರು ಏಪ್ರಿಲ್​ 20: ರೌಡಿಶೀಟರ್ ಜೊತೆ ಲಿಂಕ್​ ಹೊಂದಿದ್ದ ಅಪರಾಧ ಕೇಂದ್ರ ವಿಭಾಗ (CCB)ಯ ರೌಡಿ ನಿಗ್ರಹದಳದ ಇನ್ಸ್​ಪೆಕ್ಟರ್ (Inspector) ಜ್ಯೋತಿರ್ಲಿಂಗ ಅವರನ್ನು ಅಮಾನತು ಮಾಡಲಾಗಿದೆ. ಪ್ರತಿ ವಿಭಾಗದ ನಟೋರಿಯಸ್ ರೌಡಿಗಳ ಮಾಹಿತಿ ಕಲೆ ಹಾಕಿ, ವರದಿ ನೀಡುವಂತೆ ಸಿಸಿಬಿ ಹಿರಿಯ ಅಧಿಕಾರಿಗಳು ಸೂಚಿಸಿದ್ದರು.
ಹಾಗೆ ಅಧಿಕಾರಿಗಳು ರೌಡಿಶೀಟರ್ ಕಾಡುಬೀಸನಹಳ್ಳಿ ರೋಹಿತ್ ಚಲನವನ ಬಗ್ಗೆ ವರದಿ ಕೇಳಿದ್ದರು.

ಆದರೆ ಇನ್ಸ್​ಪೆಕ್ಟರ್ ಜ್ಯೋತಿರ್ಲಿಂಗ ಅವರು ರೌಡಿಶೀಟರ್ ರೋಹಿತ್ ಬಗ್ಗೆ ಯಾವುದೇ ಮಾಹಿತಿ ಕಲೆ ಹಾಕದೆ, ವರದಿ ನೀಡಿರಲಿಲ್ಲ. ಹೀಗಾಗಿ ಸಿಸಿಬಿ ಅಧಿಕಾರಿಗಳು ಇನ್ಸ್​ಪೆಕ್ಟರ್ ಜ್ಯೋತಿರ್ಲಿಂಗ ವಿರುದ್ಧ ಪೊಲೀಸ್ ಆಯುಕ್ತ ವರದಿ ನೀಡುತ್ತಾರೆ. ವರದಿ ಪರಿಶೀಲನೆ ನಡೆಸಿದ ಪೊಲೀಸ್ ಆಯುಕ್ತರು ಅಮಾನತು ಮಾಡಿ ಆದೇಶ ಹೊರಡಿಸುತ್ತಾರೆ.

ಜೈಲಿನಿಂದಲೇ ಕುಖ್ಯಾತ ರೌಡಿಶೀಟರ್ ಹತ್ಯೆಗೆ ಸಂಚು

ಜೈಲಿನಲ್ಲಿ ಇದ್ದುಕೊಂಡೇ ಕುಖ್ಯಾತ ರೌಡಿಶೀಟರ್​ ಕುಣಿಗಲ್ ಗಿರಿಯನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಇಬ್ಬರು ಆರೋಪಿಗಳನ್ನು ಬಂಧಿಸಿದ್ದು ಮತ್ತಿಬ್ಬರಿಗಾಗಿ ಬಲೆ ಬೀಸಿದ್ದಾರೆ. ಸಿಲಿಂಡರ್ ಸುನೀಲ, ಅವಿನಾಶ್​ ಬಂಧಿತ ಆರೋಪಿಗಳು. ಸೂರಿ ಕೊಲೆ ಪ್ರಕರಣದಲ್ಲಿ ರಾಬರಿ ಕಿಟ್ಟಿ ಕ್ಯಾಪ್ಟರ್ ಜೈಲಿನಲ್ಲಿದ್ದಾನೆ. ಜೈಲಿನಲ್ಲಿರುವ ರಾಬರಿ ಕಿಟ್ಟಿ, ಕಾಮಾಕ್ಷಿಪಾಳ್ಯದ ರೌಡಿಶೀಟರ್ ಆಗಿರುವ ಕುಣಿಗಲ್ ಗಿರಿ ಕೊಲೆಗೆ ಸಂಚು ರೂಪಿಸಿದ್ದನು.

ಇದನ್ನೂ ಓದಿ: CCB Raid: ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನ ಮೇಲೆ ಸಿಸಿಬಿ ದಾಳಿ

ಕುಣಿಗಲ್ ಗಿರಿಯನ್ನು ಕೊಲೆ ಮಾಡಲು ರಾಬರಿ ಕಿಟ್ಟಿ ಶಿಷ್ಯನಾದ ಸಿಲಿಂಡರ್ ಸುನೀಲನಿಗೆ ಸುಪಾರಿ ನೀಡಿದ್ದನು. ಈ ವಿಚಾರ ತಿಳಿದ ಸಿಸಿಬಿ ಪೊಲೀಸರು ಸುನೀಲ ಅಡ್ಡೆ ಮೇಲೆ ದಾಳಿ ಮಾಡಿ ಸಿಲಿಂಡರ್ ಸುನೀಲ ಮತ್ತು ಈತನ ಸಹಚರ ಅವಿನಾಶ್​​ನನ್ನು ಬಂಧಿಸಿದ್ದಾರೆ. ಸಿಲಿಂಡರ್ ಸುನೀಲ ಕೆಂಗೇರಿ ಪೊಲೀಸ್​ ಠಾಣೆ ವ್ಯಪ್ತಿಯ ರೌಡಿಶೀಟರ್ ಆಗಿದ್ದಾನೆ.

ದಾಳಿ ವೇಳೆ ಪರಾರಿಯಾಗಿರುವ ಮತ್ತಿಬ್ಬರು ಆರೋಪಿಗಳಿಗಾಗಿ ಸಿಸಿಬಿ ಅಧಿಕಾರಿಗಳು ಹುಡುಕಾಟ ನಡೆಸಿದ್ದಾರೆ. ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ