ಪೊಲೀಸ್ ಇನ್ ಫಾರ್ಮರ್ ಎಂದು ಪೊಲೀಸರಿಗೆಯೇ ವಂಚನೆ ಮಾಡ್ತಿದ್ದ ಕಿಲಾಡಿ ಸಿಸಿಬಿ ಬಲೆಗೆ

| Updated By: ಆಯೇಷಾ ಬಾನು

Updated on: Nov 08, 2023 | 12:37 PM

ಪೊಲೀಸರ ಜೊತೆಯಲ್ಲಿ ಇದ್ದುಕೊಂಡೇ ಅವರಿಗೆ ಸಹಾಯ ಮಾಡುವಂತೆ ಅವರ ಬಳಿಯಿಂದಲೇ ಹಣ ಪಡೆದು ವಂಚಿಸುತ್ತ ಅಲ್ಲಿ ಇಲ್ಲಿ ಸುತ್ತಾಡುತ್ತ ಮೋಜು ಮಸ್ತಿ ಮಾಡುತ್ತ, ಹಾಯಾದ ಜೀವನ ನಡೆಸುತ್ತಿದ್ದ ಆರೋಪಿಯನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ವಸೀಂ ಬಂಧಿತ ಆರೋಪಿ. ಅಕ್ರಮ ನಡೆಯುತ್ತಿರುವ ಬಗ್ಗೆ ಮಾಹಿತಿ ಕೊಡ್ತೀನಿ ಎಂದು ಪೊಲೀಸರ ಬಳಿಯೇ ಹಣ ಪಡೆದು ವಂಚನೆ.

ಪೊಲೀಸ್ ಇನ್ ಫಾರ್ಮರ್ ಎಂದು ಪೊಲೀಸರಿಗೆಯೇ ವಂಚನೆ ಮಾಡ್ತಿದ್ದ ಕಿಲಾಡಿ ಸಿಸಿಬಿ ಬಲೆಗೆ
ಆರೋಪಿ ವಸೀಂ
Follow us on

ಬೆಂಗಳೂರು, ನ.08: ಪೊಲೀಸ್ ಇನ್ ಫಾರ್ಮರ್ (Police Informer) ಎಂದು ಹೇಳಿಕೊಂಡು ಪೊಲೀಸರಿಗೆಯೇ ವಂಚನೆ ಮಾಡಿ ಅವರ ದುಡ್ಡಿನಲ್ಲಿಯೇ ಮೋಜು ಮಸ್ತಿ ಮಾಡುತ್ತಿದ್ದ ಖತರ್ನಾಕ್ ಕಿಲಾಡಿ ಸದ್ಯ ಸಿಸಿಬಿ ಪೊಲೀಸರ (CCB Police) ಬಲೆಗೆ ಬಿದ್ದಿದ್ದಾನೆ. ಕಳೆದ ನಾಲ್ಕು ವರ್ಷದಿಂದ ಪೊಲೀಸರಿಗೆ ವಂಚಿಸಿ ಪಬ್ ಬಾರ್​ಗಳಲ್ಲಿ ಮೋಜುಮಸ್ತಿ ಮಾಡುತ್ತಿದ್ದ ವಸೀಂ ಎಂಬ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆರೋಪಿ ವಸೀಂ, ಪೊಲೀಸರ ಜೊತೆಯಲ್ಲಿ ಇದ್ದುಕೊಂಡೇ ಅವರಿಗೆ ಸಹಾಯ ಮಾಡುವಂತೆ ಅವರ ಬಳಿಯಿಂದಲೇ ಹಣ ಪಡೆದು ವಂಚಿಸಿದ್ದಾನೆ. ಅಲ್ಲಿ ಇಲ್ಲಿ ಸುತ್ತಾಡುತ್ತ ಮೋಜು ಮಸ್ತಿ ಮಾಡುತ್ತ, ಹಾಯಾದ ಜೀವನ ನಡೆಸುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಅಲ್ಲೊಂದು ದಂಧೆ ನಡೀತಿದೆ, ನಾನು ಅಲ್ಲಿಗೆ ಹೋಗಿ ಲೊಕೇಶನ್ ಕಳಿಸ್ತೀನಿ. ದಂಧೆಯಲ್ಲಿ ಏನೇನು ನಡೆಯುತ್ತೆ ಎಂದು ಮಾಹಿತಿ ನೀಡ್ತಿನಿ ಎಂದು ಪೊಲೀಸರಿಗೆ ಆರೋಪಿ ವಸೀಂ ನಂಬಿಸುತ್ತಿದ್ದ. ಪೊಲೀಸರು ಈಗ್ಲೇ ಬರ್ತೀವಿ ಅಂದ್ರೆ ಬೇಡ ನಾನು ಅಲ್ಲಿಗೆ ಹೋಗಿ ಸ್ಪಾಟ್ ಲೊಕೇಶನ್ ಕಳಿಸ್ತೀನಿ ಅಂತಿದ್ದ. ಸರ್ ಆಟೋ ಪ್ರಾಬ್ಲಂ ಆಗ್ಬಿಟ್ಟಿದೆ, ಪೆಟ್ರೋಲ್ ಬೇಕಿತ್ತು, ಬೈಕ್ ಇಲ್ಲ. ಮನೆಯಲ್ಲಿ ಸಮಸ್ಯೆ ಎಂದು ನಂಬಿಸಿ ಎರಡ್ಮೂರು ಸಾವಿರ ಫೋನ್ ಪೇ ಮಾಡಿ ಅಂತಿದ್ದ. ಇದನ್ನು ನಂಬಿ ಪೊಲೀಸರು ಹಣ ಹಾಕಿದ್ರೆ ಹಣ ಬಂದ ಕೆಲವೇ ಕ್ಷಣಗಳಲ್ಲಿ ಫೋನ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗ್ತಿದ್ದ. ಹೀಗೆ ಹಲವು ಸಿಸಿಬಿ ಹಾಗೂ ಲಾ ಆಂಡ್ ಆರ್ಡರ್ ಪೊಲೀಸರಿಗೆ ಆರೋಪಿ ವಸೀಂ ಯಾಮಾರಿಸಿದ್ದಾನೆ. ಸದ್ಯ ಆರೋಪಿಯನ್ನ ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.

ಇದನ್ನೂ ಓದಿ: ಮಂಡ್ಯ ಜಿಲ್ಲಾಡಳಿತ ನಿರ್ಲಕ್ಷ್ಯಕ್ಕೆ ಪ್ರಾಣತೆತ್ತ ಜನರು: ಕಳೆದ 5 ವರ್ಷದಲ್ಲಿ ವಿಸಿ ನಾಲಗೆ 40 ಮಂದಿ ಬಲಿ

ಇನ್ನು ಈ ಘಟನೆ ಸಂಬಂಧ ಡಿಸಿಪಿ ಶ್ರೀನಿವಾಸ್ ಗೌಡ ಪ್ರತಿಕ್ರಿಯೆ ನೀಡಿದ್ದು, ನೀವು ನನಗೆ ಹಣ ಕೊಟ್ಟರೆ ನಾನು ನಿಮಗೆ ಮಾಹಿತಿ ಕೊಡುತ್ತೀನಿ ಎಂದು ಆರೋಪಿ ವಸೀಂ ವಂಚನೆ ಮಾಡಿದ್ದಾನೆ. ಪೊಲೀಸರಿಗೆ ಹಲವು ಬಾರಿ ತಪ್ಪು ಮಾಹಿತಿ ಕೊಟ್ಟು ವಂಚಿಸಿದ್ದಾನೆ. ಬೇರೆಯವರ ಗುರುತನ್ನು ತೋರಿಸಿ ವಂಚನೆ ಮಾಡುತ್ತಿದ್ದ. ಸದ್ಯ ಆರೋಪಿಯನ್ನ ಸಿಸಿಬಿ ಪೊಲೀಸ್ ತಂಡ ಅರೆಸ್ಟ್ ಮಾಡಿದೆ. ನಾಲ್ಕು ಬೇರೆ ಬೇರೆ ಹೆಸರಿನಲ್ಲಿ‌ ನಾಲ್ಕು ವರ್ಷಗಳಿಂದ ಸುಮಾರು ‌10 ಜನ ಪೊಲೀಸ್ ಅಧಿಕಾರಿಗಳಿಗೆ ಈತ ವಂಚನೆ ಮಾಡಿದ್ದಾನೆ. ಈತನ ಹಿಂದಿನ ಮಾಹಿತಿಯನ್ನ ತನಿಖೆ ಮಾಡಲಾಗುತ್ತಿದೆ. ಕಾಟನ್ ಪೇಟೆ ಪೊಲೀಸ್ ಸ್ಟೇಷನ್ ಗೆ ಪ್ರಡ್ಯೂಸ್ ಮಾಡಲಾಗಿದೆ. ಆರೋಪಿಯ ಮೇಲೆ ಮೋಸ ಮತ್ತು ವಂಚನೆ ಕೇಸ್ ದಾಖಲಿಸಲಾಗಿದ್ದು. ಇನ್ನೂ ಹೆಚ್ಚಿನ ವಿಚಾರಣೆ ಮಾಡುತ್ತಿದ್ದೇವೆ ಎಂದರು.

ಮಾಗಡಿ ಪಟ್ಟಣದಲ್ಲಿ 4 ಕಡೆ ಸರಣಿ ಕಳ್ಳತನ

ಮಾಗಡಿ ಪಟ್ಟಣದಲ್ಲಿ 4 ಕಡೆ ಸರಣಿ ಕಳ್ಳತನವಾಗಿದೆ. ಪಟ್ಟಣದ ಟಿಬಿ ರಸ್ತೆಯ ಜೈ ಜವಾನ್ ಜೈ ಕಿಸಾನ್ ಮೆಗಾ ಮಾರ್ಟ್, ಬಾಲಾಜಿ ಮುಂಭಾಗದ ಕೇಬಲ್ ಕಚೇರಿ, ಧ್ಬನಿ ವರ್ಧಕ ಅಂಗಡಿ, ಬೇಕರಿಗಳ ಬೀಗ ಹೊಡೆದು ಕಳ್ಳತನ ಮಾಡಲಾಗಿದೆ. ಮಾರ್ಟ್ ನಲ್ಲಿ ಒಂದು ಲಕ್ಷಕ್ಕೂ ಹೆಚ್ಚು ನಗದು, ಬೇಕರಿಯಲ್ಲಿ 50 ಸಾವಿರ ನಗದು ಸೇರಿದಂತೆ ಸಿಗರೇಟ್​ಗಳನ್ನು ದೊಚಿ ಖದೀಮರು ಪರಾರಿಯಾಗಿದ್ದಾರೆ. ಎರಡು ತಂಡಗಳಲ್ಲಿ ಬಂದಿದ್ದ ಕಳ್ಳರು ಮಧ್ಯರಾತ್ರಿ ಶಟರ್ ಒಡೆದು ಕಳ್ಳತನ ಮಾಡಿದ್ದಾರೆ. ಸ್ಥಳಕ್ಕೆ ಮಾಗಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 9:10 am, Wed, 8 November 23