ಬೆಂಗಳೂರು: ವಿದೇಶಗಳಿಂದ ವಿದ್ಯಾಭ್ಯಾಸಕ್ಕಾಗಿ ಬರುವ ವಿದ್ಯಾರ್ಥಿಗಳನ್ನ ಟಾರ್ಗೆಟ್ ಮಾಡಿ, ನಕಲಿ ಅಡ್ಮಿಷನ್ ನೀಡಿ, FRRO (Foreigners Regional Registration Office) ಸೌಲಭ್ಯಗಳನ್ನ ಪಡೆಯಲು ಯತ್ನಿಸುತ್ತಿದ್ದ ಆರೋಪಿಯನ್ನ ಇದೀಗ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಹೌದು ಕಾಲೇಜು ಮಾಲೀಕನೆಂದು ಹೇಳಿ, ಕಾಲೇಜಿನ ಹೆಸರಿನಲ್ಲಿ ಅಡ್ಮಿಷನ್ ಕೊಡುವ ನೆಪದಲ್ಲಿ ವಿದೇಶಿ ವಿದ್ಯಾರ್ಥಿಗಳಿಂದ ಹಣ ಪಡೆದು FRRO ಸೌಲಭ್ಯಗಳನ್ನ ಪಡೆಯಲು ನಕಲಿ ದಾಖಲಾತಿ ಸೃಷ್ಟಿಸುತ್ತಿದ್ದನು. ಸಮೀರ್ ಖಾನ್ ಬಂಧಿತ ಆರೋಪಿ. ಸುಮಾರು 104 ವಿದೇಶಿ ವಿದ್ಯಾರ್ಥಿಗಳಿಗೆ ಖಾಸಗಿ ಕಾಲೇಜಿನಲ್ಲಿ ಅಡ್ಮಿಷನ್ ಕೊಡಿಸಿದ್ದೇನೆ ಎಂದು ಹೇಳಿ ವಂಚಿಸಿದ್ದಾನೆ.
ಪೊಲೀಸ್ ಠಾಣೆಗೆ ದೂರು ನೀಡಿದ ಎಫ್ ಆರ್ ಆರ್ ಓ ಅಧಿಕಾರಿಗಳು
ಹೌದು ಇತ ನಕಲಿ ಅಡ್ಮಿಷನ್ ನೀಡಿದ್ದ 104 ಮಂದಿ ವಿದೇಶಿ ವಿದ್ಯಾರ್ಥಿಗಳ ಪೈಕಿ ಬಹುತೇಕರು ಯೆಮನ್ ದೇಶದವರು. ತಾನು ಸಂಜಯನಗರದ ಖಾಸಗಿ ಕಾಲೇಜಿನ ಮಾಲೀಕನೆಂದು ಸರ್ಟಿಫಿಕೇಟ್ ನೀಡಿದ್ದ ಸಮೀರ್. ಇತನ ಬಗ್ಗೆ ಅನುಮಾನಗೊಂಡು ಎಫ್ ಆರ್ ಆರ್ ಓ ಅಧಿಕಾರಿಗಳು ಕಾಲೇಜಿನಲ್ಲಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ವಿದ್ಯಾರ್ಥಿಗಳು ಕಾಲೇಜಿನಲ್ಲಿ ಅಡ್ಮಿಷನ್ ಪಡೆದಿಲ್ಲ ಎಂಬುದು ಪತ್ತೆಯಾಗಿದೆ. ಈ ಕುರಿತು ಎಫ್ ಆರ್ ಆರ್ ಓ ಅಧಿಕಾರಿಗಳು ಸಂಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಳಿಕ ಇದೀಗ 104 ವಿದ್ಯಾರ್ಥಿಗಳ ಹೆಸರಲ್ಲಿ ವಂಚನೆ ಯತ್ನ ಹಿನ್ನಲೆ, ಪ್ರಕರಣವನ್ನ ಸಿಸಿಬಿಗೆ ವರ್ಗಾವಣೆ ಮಾಡಲಾಗಿದೆ.
ಇದನ್ನೂ ಓದಿ:ಬೆಂಗಳೂರು; ನಕಲಿ ನಂಬರ್ ಪ್ಲೇಟ್ ಬಳಸಿ ಫಾಸ್ಟ್ಯಾಗ್ ಖಾತೆಗೆ ಕನ್ನ
ಎಫ್ಆರ್ ಆರ್ ಓ ಬೋನಾಫೈಡ್ ಸರ್ಟಿಫಿಕೇಟ್ ಎಂದರೇನು?
ವಿದ್ಯಾಭ್ಯಾಸಕ್ಕಾಗಿ ವಿದೇಶಗಳಿಂದ ಬರುವ ವಿದ್ಯಾರ್ಥಿಗಳು ಎಫ್ಆರ್ ಆರ್ ಓಗೆ ಬೋನಾಫೈಡ್ ಸರ್ಟಿಪಿಕೇಟ್ ಕೊಡಬೇಕು. ಈ ಸರ್ಟಿಪಿಕೇಟ್ ಕೊಟ್ಟರಷ್ಟೇ ಅವರಿಗೆ ಸೌಲಭ್ಯಗಳು ಸಿಗುತ್ತವೆ. ಇದನ್ನ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಬರುವ ಕಾಲೇಜಿನಲ್ಲಿ ಕೊಡಲಾಗುತ್ತೆ. ಆದ್ರೆ, ಕಾಲೇಜು ಮಾಲೀಕನಂತೆ ಸಮೀರ್ ಖಾನ್ ಸರ್ಟಿಫಿಕೇಟ್ಗಳಿಗೆ ಸಹಿ ಮಾಡಿ, ಒಂದು ವರ್ಷದಲ್ಲಿ ಬರೊಬ್ಬರಿ 104 ಮಂದಿ ವಿದೇಶಿಗರಿಗೆ ವಂಚಿಸಿದ್ದಾನೆ. ಇದೀಗ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ ಸಿಸಿಬಿ ಪೊಲೀಸರು. ಆರೋಪಿ ಸಮೀರ್ ಖಾನ್ನ್ನು ಬಂಧಿಸಿ ತನಿಖೆ ಆರಂಭಿಸಿದ್ದಾರೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ