ಅವಧಿ ಮುಗಿದ ಆಹಾರ ಪದಾರ್ಥಗಳನ್ನ ಮಾರಾಟ ಮಾಡ್ತಿದ್ದ ಅಂಗಡಿ‌ ಮೇಲೆ‌ ಸಿಸಿಬಿ ದಾಳಿ

ಬೆಂಗಳೂರಿನ ವಿಲ್ಸನ್ ಗಾರ್ಡನ್(Wilson's Garden) ಸಮೀಪದ‌ ಸೋಮೇಶ್ವರನಗರದಲ್ಲಿರುವ ಹೆಚ್ ಎಂ ಟ್ರೇಡರ್ಸ್ ಅಂಗಡಿ‌ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಅವಧಿ ಮುಗಿದ ಆಹಾರ ಪದಾರ್ಥಗಳನ್ನು ಮಾರಾಟ ಮಾಡುತ್ತಿದ್ದ ಹಿನ್ನಲೆ ಈ ದಾಳಿ ಮಾಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

ಅವಧಿ ಮುಗಿದ ಆಹಾರ ಪದಾರ್ಥಗಳನ್ನ ಮಾರಾಟ ಮಾಡ್ತಿದ್ದ ಅಂಗಡಿ‌ ಮೇಲೆ‌ ಸಿಸಿಬಿ ದಾಳಿ
ಸಿಸಿಬಿ ಪೊಲೀಸ್​ ದಾಳಿ
Edited By:

Updated on: Dec 12, 2023 | 8:12 PM

ಬೆಂಗಳೂರು, ಡಿ.12:  ಅವಧಿ ಮುಗಿದ ಆಹಾರ ಪದಾರ್ಥಗಳನ್ನು ಮಾರಾಟ ಮಾಡುತ್ತಿದ್ದ ಹೆಚ್ ಎಂ ಟ್ರೇಡರ್ಸ್ ಅಂಗಡಿ‌ ಮೇಲೆ‌ ಸಿಸಿಬಿ(CCB) ದಾಳಿ ಮಾಡಿದ ಘಟನೆ ವಿಲ್ಸನ್ ಗಾರ್ಡನ್(Wilson’s Garden) ಸಮೀಪದ‌ ಸೋಮೇಶ್ವರನಗರದಲ್ಲಿ ನಡೆದಿದೆ. ಪ್ರತಿಷ್ಠಿತ ಬ್ರ್ಯಾಂಡ್​ನ ಆಹಾರ ಪದಾರ್ಥಗಳು ಎಕ್ಸ್ ಪೆರಿ ಆಗಿದ್ದರೂ ಮಾರಾಟ ಮಾಡಲಾಗುತ್ತಿತ್ತು. ಬಿಸ್ಕತ್, ಮಿಕ್ಸ್ ಚರ್ ಹಾಗೂ ಸ್ವೀಟ್ಸ್ ಸೇರಿದಂತೆ ಗೃಹ ಬಳಕೆ ವಸ್ತುಗಳ‌ನ್ನು ಯಾವುದೇ ಭಯವಿಲ್ಲದೆ ಮಾಲೀಕರು ಸೇಲ್​ ಮಾಡುತ್ತಿದ್ದರ ಖಚಿತ ಮಾಹಿತಿ ಪಡೆದ ಸಿಸಿಬಿ ಅಧಿಕಾರಿಗಳು, ಏಕಾಎಕಿ ದಾಳಿ ಮಾಡಿದ್ದಾರೆ. ಸದ್ಯ ಸಿಸಿಬಿ ಅಧಿಕಾರಿ, ಆರ್ಥಿಕ‌ ಅಪರಾಧ ದಳ ಅಧಿಕಾರಿಗಳಿಂದ ಪರಿಶೀಲನೆ ನಡೆದಿದೆ.

ಅಂತರ್​ ಜಿಲ್ಲಾ ಬೈಕ್ ಕಳ್ಳತನ ಪ್ರಕರಣ ಪತ್ತೆ

ಶಿವಮೊಗ್ಗ: ನಗರದ ದೊಡ್ಡಪೇಟೆ ಪೊಲೀಸರು ಭರ್ಜರಿ ಬೇಟೆ ಆಡಿದ್ದು, ಅಂತರ್​ ಜಿಲ್ಲಾ ಬೈಕ್ ಕಳ್ಳತನ ಪ್ರಕರಣವನ್ನು ಪತ್ತೆ ಹಚ್ಚಿದ್ದಾರೆ. ಒಟ್ಟು 17 ಬೈಕ್​ಗಳ ಕಳ್ಳತನ ಪ್ರಕರಣವನ್ನು ಭೇದಿಸಿದ್ದಾರೆ. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಮೂವರು ಬೈಕ್ ಕಳ್ಳರನ್ನು ಬಂಧಿಸಲಾಗಿದ್ದು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬೈಕ್ ಕಳ್ಳತನ ಮಾಡಿದ್ದ ಖದೀಮರ ತಂಡವನ್ನು ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ:ರಿಕವರಿ ಹಣ ದುರುಪಯೋಗ ಆರೋಪ: ಸಿಸಿಬಿ ಇನ್ಸ್​ಪೆಕ್ಟರ್ ಶಂಕರ ನಾಯಕ್ ವಿರುದ್ಧ ಮತ್ತೆರಡು ದೂರು

10 ಲಕ್ಷಕ್ಕೂ ಅಧಿಕ ಬೆಲೆ ಬಾಳುವ ಬೈಕ್​ ವಶಕ್ಕೆ

ಸುಮಾರು 10 ಲಕ್ಷದ 55 ಸಾವಿರ ರೂ. ಬೆಲೆ ಬಾಳುವ 17 ಬೈಕ್​ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶಿವಮೊಗ್ಗ, ದಾವಣಗೆರೆ, ಸಕ್ರಾಯಪಟ್ಟಣ, ರಾಮನಗರ, ಹಾಸ‌ನ, ತುಮಕೂರು, ಮೈಸೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಈ ಖದೀಮರು ಕಳ್ಳತನ ಮಾಡಿದ್ದರು. ಇದೀಗ ಬೈಕ್ ಕಳ್ಳತನವಾಗಿ 20 ದಿನಗಳಲ್ಲಿ ಕಳ್ಳರ ಬಂಧನವಾಗಿದೆ. ಕಳ್ಳರ ಬಂಧನದ ವೇಳೆ ದೊಡ್ಡ ಜಾಲ ಪತ್ತೆಯಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ