ಬೆಂಗಳೂರಿನಲ್ಲಿ ನವಜಾತ ಶಿಶು ಮಾರಾಟ ದಂಧೆ: ಸಿಸಿಬಿ ತನಿಖೆ ವೇಳೆ ಬಯಲಾಯ್ತು ಮತ್ತಷ್ಟು ಭಯಾನಕ ಸತ್ಯ

ಬೆಂಗಳೂರಿನಲ್ಲಿ ಹಸುಗೂಸುಗಳ ಮಾರಾಟ ದಂಧೆಯನ್ನು ಭೇದಿಸಿದ ಸಿಸಿಬಿ ಪೊಲೀಸರಿಗೆ ತನಿಖೆ ವೇಳೆ ಮತ್ತಷ್ಟು ಸತ್ಯ ಬಯಲಾಗಿದೆ. ಆರೋಪಿಗಳ ಗ್ಯಾಂಗ್ ಬಡ ಮಹಿಳೆಯರಿಗೆ ಆಮೀಷವೊಡ್ಡಿ ಸ್ವಲ್ಪ ಹಣ ನೀಡಿ ತಾವು ಹೆಚ್ಚಿನ ಹಣವನ್ನು ಗಳಿಸುತ್ತಿದ್ದರು. ಈ ದಂಧೆಯಲ್ಲಿ ಸರ್ಕಾರಿ, ಖಾಸಗಿ ವೈದ್ಯರು ಶಾಮೀಲಾಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ.

ಬೆಂಗಳೂರಿನಲ್ಲಿ ನವಜಾತ ಶಿಶು ಮಾರಾಟ ದಂಧೆ: ಸಿಸಿಬಿ ತನಿಖೆ ವೇಳೆ ಬಯಲಾಯ್ತು ಮತ್ತಷ್ಟು ಭಯಾನಕ ಸತ್ಯ
ಸಿಸಿಬಿ ಕಚೇರಿ
Follow us
TV9 Web
| Updated By: ಆಯೇಷಾ ಬಾನು

Updated on: Nov 28, 2023 | 10:15 AM

ಬೆಂಗಳೂರು, ನ.28: ಸಿಲಿಕಾನ್ ಸಿಟಿಯಲ್ಲಿ ಹಸುಗೂಸುಗಳ ಮಾರಾಟ ದಂಧೆ ಜಾಲವನ್ನು ಸಿಸಿಬಿ ಪೊಲೀಸರು (CCB Police) ಭೇದಿಸಿದ್ದಾರೆ. ಪ್ರಕರಣದಲ್ಲಿ ಆರೋಪಿಗಳು ರೆಡ್ ಹ್ಯಾಂಡ್ ಆಗಿ ಲಾಕ್ ಆಗಿದ್ದು, ಪ್ರಕರಣ ಸಂಬಂಧ ಸಿಸಿಬಿ ನಡೆಸಿದ ತನಿಖೆ ವೇಳೆ ಮಹತ್ವದ ವಿಚಾರಗಳು ಬೆಳಕಿಗೆ ಬಂದಿದೆ. ಕುಡುಕನೋರ್ವ ನೀಡಿದ ಮಾಹಿತಿಯಿಂದ ದೊಡ್ಡ ಜಾಲ ಸಿಕ್ಕಿಬಿದ್ದಿದೆ. ಕರ್ನಾಟಕ-ತಮಿಳುನಾಡು ರಾಜ್ಯಗಳಲ್ಲಿ ಅವ್ಯಾಹತವಾಗಿ ಮಗು ಮಾರಾಟ ದಂಧೆ (New Born Baby Sale) ನಡೆಯುತ್ತಿದೆ. ಅರೆಸ್ಟ್ ಆದ ಆರೋಪಿಗಳ ಪೈಕಿ ಓರ್ವರು ಬೆಂಗಳೂರು ಮೂಲದವರಾಗಿದ್ದು ಉಳಿದವರು ತಮಿಳುನಾಡಿನವರು.

ನೆರೆಯ ತಮಿಳು ನಾಡು ಮತ್ತು ಕರ್ನಾಟಕದಲ್ಲಿ ಸಕ್ರಿಯಾವಾಗಿದ್ದ ನವಜಾತಶಿಶು ಅಕ್ರಮ‌ಮಾರಾಟ ಜಾಲವನ್ನು ಸಿಸಿಬಿ ಡಿಸಿಪಿ ಶ್ರೀನಿವಾಸ್ ಗೌಡ ನೇತೃತ್ವದ ತಂಡ ಭೇದಿಸಿದೆ. ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಸಿಸಿಬಿ ರೆಡ್ ಹ್ಯಾಂಡ್ ಆಗಿ ಲಾಕ್ ಮಾಡಿದೆ. ಹಾಲುಗಲ್ಲದ ಕಂದಮ್ಮಗಳನ್ನ ಲಕ್ಷಾಂತರ ರೂಪಾಯಿಗಳಿಗೆ ಮಾರಾಟ ಮಾಡ್ತಿದ್ದ ಜಾಲ ಇದಾಗಿದ್ದು, ಕಳೆದ ಶುಕ್ರವಾರ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ 20 ದಿನದ ಗಂಡು ಹಸುಗೂಸನ್ನ ಕಾರಿನಲ್ಲಿ ಮಾರಾಟ ಮಾಡಲು ತಂದಿದ್ದ ವೇಳೆ, ಮಗು ಮಾರಾಟ ಮಾಡುವ ವೇಳೆ ಸಿಸಿಬಿಗೆ ರೆಡ್ ಹ್ಯಾಂಡಾಗಿ ಈ ಗ್ಯಾಂಗ್ ಸಿಕ್ಕಿಬಿದ್ದಿದೆ. ಸದ್ಯ ತನಿಖೆ ನಡೆಸಲಾಗುತ್ತಿದ್ದು ಅನೇಕ ವಿಚಾರಗಳು ಬಹಿರಂಗವಾಗಿವೆ.

ಆರೋಪಿಗಳನ್ನು ಸೆರೆ ಹಿಡಿದದ್ದೇ ರೋಚಕ

ಪ್ರಕರಣ ಭೇದಿಸಲು ಸಿಸಿಬಿ ಅಧಿಕಾರಿಗಳು ಮಕ್ಕಳು ಕೊಳ್ಳುವ ಪೋಷಕರ ಸೋಗಿನಲ್ಲಿ ಥೇಟ್ ಫೀಲ್ಮ್ ಸ್ಟೈಲ್ ನಲ್ಲಿ ಎಂಟ್ರಿ ಕೊಟ್ಟು ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ. ಕುಡುಕ‌ನೋರ್ವ ನೀಡಿದ್ದ ಮಹತ್ವದ ಕ್ಲ್ಯೂ ಆಧರಿಸಿ ಸಿಸಿಬಿ ಬೇಟೆಗಿಳಿದಿತ್ತು. ಕ್ಲ್ಯೂ ಆಧರಿಸಿ ಫೀಲ್ಡ್ ಗಿಳಿದ ಸಿಸಿಬಿ ತನಿಖೆ ವೇಳೆ ಪೊಲೀಸರೇ ಶಾಕ್ ಆಗಿದ್ರು. ಅಸಹಾಯಕ ಬಡ ಮಹಿಳೆಯರಿಂದ ಡಾಕ್ಟರ್ ಸರ್ಕಾರಿ ಅಧಿಕಾರಿ ವರೆಗೂ ಲಿಂಕ್ ಇರುವುದು ಪತ್ತೆಯಾಗಿದೆ. ಅವ್ಯಾಹತವಾಗಿ ಪಸರಿಸಿಕೊಂಡಿರುವ ಬೃಹತ್ ಜಾಲದಲ್ಲಿ ವೈದ್ಯರೇ ಕಿಂಗ್ ಪಿನ್​ಗಳಾಗಿದ್ದಾರೆ.

ಇದನ್ನೂ ಓದಿ: ನವಜಾತ ಶಿಶುವನ್ನು ಮೂರು ಲಕ್ಷಕ್ಕೆ ಮಾರಾಟ ಮಾಡಿದ ತಾಯಿ ಅರೆಸ್ಟ್​​​

ನಕಲಿ ದಾಖಲೆಗಳನ್ನು ಸೃಷ್ಟಿಸಿ ಮಕ್ಕಳ ಮಾರಾಟ ಮಾಡಲಾಗುತ್ತಿದೆ. ಇದರಲ್ಲಿ ಸರ್ಕಾರಿ ಅಧಿಕಾರಿ ಕೂಡ ಶಾಮೀಲಾಗಿ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಮಾರಾಟವಾಗುವ ಮಕ್ಕಳ ನಕಲಿ ದಾಖಲೆ ಸೃಷ್ಟಿಸಿ ಕರಾಳ ದಂಧೆ ನಡೆಯುತ್ತಿರುವ ಬಗ್ಗೆ ಒಂದೊಂದೆ ಮುಖ ಅನಾವರಣಗೊಂಡಿದೆ. ಸದ್ಯ ಹಲವು ಆಯಾಮಗಳಲ್ಲಿ ಸಿಸಿಬಿ ತನಿಖೆ ಚುರುಕುಗೊಳಿಸಿದೆ.

ರಾಜ್ಯದ ಹಲವು ಜಿಲ್ಲೆಗಳಲ್ಲಿ ಶಿಶು ಮಾರಾಟ

ಬಂಧಿತ ಗ್ಯಾಂಗ್ ಬರೋಬ್ಬರಿ 50-60ಕ್ಕೂ ಹೆಚ್ಚು ಶಿಶುಗಳನ್ನು ಅಕ್ರಮವಾಗಿ ಮಾರಾಟ ಮಾಡಿದೆ. ರಾಜ್ಯದ ಹಲವು ಜಿಲ್ಲೆಗಳ ದಂಪತಿಗೆ ಮಾರಾಟ ಮಾಡಿದ್ದಾರೆ. ಬಡ ಮಹಿಳೆಯರಿಗೆ ಸ್ವಲ್ಪ ಹಣ ನೀಡಿ ಈ ಗ್ಯಾಂಗ್ ಲಕ್ಷ-ಲಕ್ಷ ಹಣ ಮಾಡ್ತಿತ್ತು. ನಕಲಿ ದಾಖಲೆಗಳ ಸೃಷ್ಟಿಸಿ ನವಜಾತ ಶಿಶುಗಳ‌ ಮಾರಾಟ ಮಾಡಲಾಗುತ್ತಿತ್ತು ಎಂಬ ಮಾಹಿತಿ ಸಿಕ್ಕಿದೆ.

ಇನ್ನು ನವಜಾತ ಶಿಶು ಮಾರಾಟ ದಂಧೆಯಲ್ಲಿ ಬೆಂಗಳೂರಿನ ಮಹಾಲಕ್ಷ್ಮಿ ಪಾತ್ರ ರಿವೀಲ್ ಆಗಿದೆ. ಬಂಧಿತ ನಾಲ್ವರು ಆರೋಪಿಗಳಲ್ಲಿ ಮೂವರು ತಮಿಳು ನಾಡು ಮೂಲದವರು. ಮುರುಗೇಶ್ವರಿ, ಹೇಮಲತಾ, ಶರಣ್ಯ ತಮಿಳುನಾಡು ಮೂಲದವರು. ಮಹಾಲಕ್ಷ್ಮಿ ಬೆಂಗಳೂರಿನವರಾಗಿದ್ದು, ಆರ್ ಆರ್ ನಗರದಲ್ಲಿ ಮಹಾಲಕ್ಷ್ಮಿ ಮೂಲಕ ನವಜಾತ ಶಿಶು ಮಾರಾಟಕ್ಕೆ ಯತ್ನ ನಡೆದಿತ್ತು.

ಬೆಂಗಳೂರು ಜಿಲ್ಲೆಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ: ಸಿಎಂ
ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ: ಸಿಎಂ