ಬೆಂಗಳೂರು: ಪ್ರಾಪರ್ಟಿ ಖರೀದಿಸಲು ಸಾಲ ನೀಡುವುದಾಗಿ ಪತ್ರಿಕೆಯಲ್ಲಿ ಜಾಹೀರಾತು ನೀಡಿ ಕೋಟ್ಯಾಂತರ ರೂಪಾಯಿ ವಂಚನೆ ಮಾಡಲಾಗಿದೆ. ಸಾಮಿನಾಥ್ ಫೈನಾನ್ಶಿಯಲ್ ಸರ್ವಿಸಸ್ ಹೆಸರಿನಲ್ಲಿ ವೈಯ್ಯಾಲಿಕಾವಲ್ ವಿನಾಯಕ ಸರ್ಕಲ್ ಬಳಿ ಕಚೇರಿ ತೆರೆದು ನೂರಾರು ಗ್ರಾಹಕರಿಗೆ ವಂಚನೆ ಮಾಡಲಾಗಿದೆ. ಈ ಹಿನ್ನೆಲೆ ತಮಿಳು ನಾಡಿನ ಚೈನ್ನೈ ಮೂಲದ ಸಾಮಿನಾಥ್ ಸುಬ್ಬಯ್ಯಚೆಟ್ಟಿ ಮತ್ತು ಗ್ಯಾಂಗ್ ಸೇರಿ ಆರು ಜನ ಆರೋಪಿಗಳ ವಿರುದ್ದ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಈ ವಂಚಕರು ಸಿಬಿಲ್ ಸ್ಕೋರ್ ಕಡಿಮೆ ಇದ್ದರೂ ಲೋನ್ ಕೊಡುವುದಾಗಿ ಆಮಿಷವಡ್ಡುತ್ತಿದ್ದರು. ಲೋನ್ ಮಂಜೂರು ಮಾಡುವ ಹಣಕ್ಕೆ ಇನ್ಶೂರೆನ್ಸ್, ಲೀಗಲ್ ವ್ಯಾಲ್ಯುವೇಶನ್, ವೆರಿಫಿಕೇಷನ್ಗೆ ಹಣ ಪಾವತಿಸುವಂತೆ ಪುಸಲಾಯಿಸ್ತಿದ್ದ ಸಿಬ್ಬಂದಿ ಮಾರುಕಟ್ಟೆ ಮೌಲ್ಯಕ್ಕಿಂತಲೂ ದುಪ್ಪಟ್ಟು ಸಾಲ ನೀಡುವುದಾಗಿ ಭರವಸೆ ನೀಡುತ್ತಿದ್ದರು. ಸಾಲ ನೀಡುವ ಹಣಕ್ಕೆ ಇನ್ಯೂರೆನ್ಸ್ ನೆಪದಲ್ಲಿ ಗ್ರಾಹಕರಿಂದ ಲಕ್ಷ-ಲಕ್ಷ ಹಣ ವಸೂಲಿ ಮಾಡಿ ಸಾಮಿನಾಥ್ ಸುಬ್ಬಯ್ಯಚೆಟ್ಟಿ, ಲಕ್ಷ್ಮೀನಾರಾಯಣ, ಸುಗುಣ, ವೆಂಕಟೇಶ್, ಬಾಲು ವಂಚನೆ ಮಾಡಿ ಎಸ್ಕೇಪ್ ಆಗಿದ್ದರು. ಈ ಸಂಬಂಧ ವಂಚನೆಗೆ ಒಳಗಾದವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಇದನ್ನೂ ಓದಿ: BWSSB Bill scam: ಸಿಬ್ಬಂದಿಯೇ ಬೆಂಗಳೂರು ಜಲಮಂಡಳಿ ವಾಟರ್ ಬಿಲ್ಗೆ ಕನ್ನ ಹಾಕಿದರು! ಎಷ್ಟಕ್ಕೆ?
ಸದ್ಯ ಕೇಸ್ ದಾಖಲಿಸಿ ಆರೋಪಿಗಳ ವಶಕ್ಕೆ ಬಲೆ ಬೀಸಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಪೊಲೀಸರ ತನಿಖೆ ವೇಳೆ ಆರೋಪಿ ಸಾಮಿನಾಥ್ ಸುಬ್ಬಯ್ಯಚೆಟ್ಟಿಯಿಂದ ವಿವಿಧ ರಾಜ್ಯಗಳಲ್ಲೂ ವಂಚನೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಗ್ರಾಹಕರಿಂದ ಖಾತೆಗೆ ಜಮೆಯಾದ ಕೋಟ್ಯಂತರ ಹಣ ಡ್ರಾ ಮಾಡಿ ಎಸ್ಕೇಪ್ ಆಗಿರುವ ಸಾಮಿನಾಥ್ ಸುಬ್ಬಯ್ಯಚೆಟ್ಟಿಗಾಗಿ ವೈಯ್ಯಾಲಿಕಾವಲ್ ಪೊಲೀಸರಿಂದ ಶೋಧ ಮುಂದುವರೆದಿದೆ.
ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಮೈಸೂರು ವ್ಯಾಪ್ತಿಯ ಅರಣ್ಯದಲ್ಲಿ ಕಾಡೆಮ್ಮೆ ಶವ ಪತ್ತೆಯಾಗಿದೆ. ಆನೆಚೌಕೂರು ವನ್ಯಜೀವಿ ವಲಯ ವ್ಯಾಪ್ತಿಯ ದೇವಮಚ್ಚಿ ಶಾಖೆಯ ಸಿಂಗನೂರು ಬಳಿ ಸುಮಾರು ಎಂಟು ವರ್ಷದ ಕಾಡೆಮ್ಮೆ ಶವ ಪತ್ತೆಯಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾಡೆಮ್ಮೆ ಬೇಟೆಗಾರರ ಗುಂಡಿಗೆ ಬಲಿಯಾಗಿರುವ ಶಂಕೆ ವ್ಯಕ್ತವಾಗಿದ್ದು ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ ಮಾಡಲಾಗಿದೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 10:41 am, Wed, 28 December 22