ಹಳೇ ಮೈಸೂರಿನ ನವಪರ್ವಕ್ಕೆ ಮುನ್ನುಡಿ ಬರೆಯೋಣ; ಹಳೇ ಮೈಸೂರು ಭಾಗದ ಜನರಿಗೆ ಜೆಡಿಎಸ್, ಕಾಂಗ್ರೆಸ್ ದ್ರೋಹ ಮಾಡಿದೆ -ಬಿಜೆಪಿ ವಾಗ್ದಾಳಿ
ಜೆಡಿಎಸ್ ಕೇವಲ ಮೈಸೂರು ಭಾಗದ ಜನರಿಂದ ಬದುಕಿರುವ ಪಕ್ಷ. ಜಿಲ್ಲಾ ಪಂಚಾಯಿತಿಯಿಂದ ಸಂಸತ್ವರೆಗೆ ಹುದ್ದೆ ಹೊಂದಿರುವ ಪಕ್ಷ. ಕಾರ್ಯಕರ್ತರಿಗೆ ಮಾತ್ರ ಯಾವುದೇ ಹುದ್ದೆಯಿಲ್ಲ.
ಬೆಂಗಳೂರು: ಹಳೇ ಮೈಸೂರಿನ ನವಪರ್ವಕ್ಕೆ ಮುನ್ನುಡಿ ಬರೆಯೋಣ. ಹಳೇ ಮೈಸೂರು ಭಾಗದ ಜನರಿಗೆ ಜೆಡಿಎಸ್ ದ್ರೋಹ ಬಗೆಯುತ್ತಿದೆ. ಹಳೇ ಮೈಸೂರು ಅಭಿವೃದ್ಧಿಗಾಗಿ ಕಾಂಗ್ರೆಸ್ ಏನೂ ಮಾಡಲಿಲ್ಲ ಎಂದು ಟ್ವೀಟ್ ಮೂಲಕ ಜೆಡಿಎಸ್ ಹಾಗೂ ಕಾಂಗ್ರೆಸ್ ವಿರುದ್ಧ ರಾಜ್ಯ ಬಿಜೆಪಿ ಘಟಕ ವಾಗ್ದಾಳಿ ನಡೆಸಿದೆ.
ಜೆಡಿಎಸ್ ಕೇವಲ ಮೈಸೂರು ಭಾಗದ ಜನರಿಂದ ಬದುಕಿರುವ ಪಕ್ಷ. ಜಿಲ್ಲಾ ಪಂಚಾಯಿತಿಯಿಂದ ಸಂಸತ್ವರೆಗೆ ಹುದ್ದೆ ಹೊಂದಿರುವ ಪಕ್ಷ. ಕಾರ್ಯಕರ್ತರಿಗೆ ಮಾತ್ರ ಯಾವುದೇ ಹುದ್ದೆಯಿಲ್ಲ. ಅಭಿವೃದ್ಧಿ ಹೆಸರಲ್ಲಿ JDS ಮೈಸೂರು ಭಾಗದ ಜನರನ್ನ ಲೂಟಿ ಮಾಡಿದೆ. ಇಷ್ಟು ವರ್ಷ ಅಧಿಕಾರ ಕೊಟ್ಟ ಜನರಿಗೆ ನೀಡಿದ್ದು ಮಾತ್ರ ಶೂನ್ಯ. ಕುಮಾರಸ್ವಾಮಿ ಸಾರ್ವಜನಿಕವಾಗಿ ಕಣ್ಣೀರು ಸುರಿಸುವುದು ಕೇವಲ ಈ ಭಾಗದ ಜನರನ್ನ ಮೂರ್ಖರನ್ನಾಗಿಸಲು ತಂತ್ರ. ಏನಾದರೂ ಮಾಡಿ ಅಧಿಕಾರ ಹಿಡಿಯಲೇಬೇಕು ಎಂಬುದು ಸಿದ್ಧಾಂತ. ಹೆಸರಲ್ಲಷ್ಟೇ ಜಾತ್ಯಾತೀತತೆ, ಉಳಿದೆಲ್ಲ ಮಾಡಿದ್ದು ಜಾತಿ ರಾಜಕಾರಣ. ಕೇವಲ ಒಂದು ಸಮುದಾಯದವರನ್ನು ನೆಚ್ಚಿ ಬದುಕುತ್ತಿರುವ ಪಕ್ಷ ಜೆಡಿಎಸ್. ಆ ಸಮುದಾಯದ ಉದ್ಧಾರವನ್ನೂ ಕಡೆಗಣಿಸಿದೆ. ಜೆಡಿಎಸ್ ಅಲ್ಪಸಂಖ್ಯಾತರ ತುಷ್ಟೀಕರಣಕ್ಕಿಳಿದುಬಿಟ್ಟಿದೆ. ಪಕ್ಷದ ಬೆನ್ನೆಲುಬಾದ ಕಾರ್ಯಕರ್ತರನ್ನೇ ಕಡೆಗಣಿಸುತ್ತಿದೆ. ತಮ್ಮ ಕುಟುಂಬದವರನ್ನೇ ಚುನಾವಣಾ ಅಭ್ಯರ್ಥಿಯನ್ನಾಗಿಸುತ್ತದೆ ಎಂದು ಟ್ವೀಟ್ ಮೂಲಕ ಜೆಡಿಎಸ್ ವಿರುದ್ಧ ರಾಜ್ಯ ಬಿಜೆಪಿ ಘಟಕ ಟಾಂಗ್ ಕೊಟ್ಟಿದೆ.
ಕೇವಲ ಹಳೆ ಮೈಸೂರು ಭಾಗದ ಜನರಿಂದ ಬದುಕಿರುವ ಪಕ್ಷ ಅವರಿಗೇ ಇಂದು ದ್ರೋಹ ಬಗೆಯುತ್ತಿದೆ. ಜಿ. ಪಂ.ಯಿಂದ ಹಿಡಿದು ಸಂಸತ್ತಿನ ತನಕ ಹುದ್ದೆ ಹೊಂದಿರುವ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತರಿಗೆ ಮಾತ್ರ ಯಾವುದೇ ಹುದ್ದೆಯಿಲ್ಲ! ಅಭಿವೃದ್ಧಿಯ ಹೆಸರಿನಲ್ಲಿ JDS ಹಳೆ ಮೈಸೂರು ಭಾಗದಲ್ಲಿ ಮಾಡಿದ್ದೆಲ್ಲಾ ಜನರ ಲೂಟಿ. #OldMysuruWelcomesAmitShah 1/8
— BJP Karnataka (@BJP4Karnataka) December 28, 2022
ಕಾಂಗ್ರೆಸ್ ವಿರುದ್ಧವೂ ಬಿಜೆಪಿ ವಾಗ್ದಾಳಿ
ಹಳೇ ಮೈಸೂರು ಅಭಿವೃದ್ಧಿಗಾಗಿ ಕಾಂಗ್ರೆಸ್ ಏನೂ ಮಾಡಲಿಲ್ಲ ಎಂದು ಟ್ವೀಟ್ ಮೂಲಕ ಕಾಂಗ್ರೆಸ್ ಪಕ್ಷದ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೂ ಅಭಿವೃದ್ಧಿ ಕಡೆಗಣಿಸಿದ್ದಾರೆ. ಒಡೆದಾಳುವ ನೀತಿ ಅನುಸರಿಸಿ ವೋಟ್ ಬ್ಯಾಂಕ್ ರಾಜಕಾರಣ ಮಾಡಿದ್ದಾರೆ. ಜನ ಇದೆಲ್ಲಾ ಗಮನದಲ್ಲಿಟ್ಟುಕೊಂಡು ಕಳೆದ ಬಾರಿ ಪಾಠ ಕಲಿಸಿದರು. 2018ರ ಚುನಾವಣೆಯಲ್ಲಿ ಸೋಲು ಖಚಿತದ ಅರಿವಾದಾಗ ಚಾಮುಂಡಿ ಕ್ಷೇತ್ರದ ಜನರನ್ನು ಅನಾಥರನ್ನಾಗಿಸಿ ಓಡಿಹೋದರು. ಬಾಗಲಕೋಟೆ ಜಿಲ್ಲೆ ಬಾದಾಮಿಗೆ ಸಿದ್ದರಾಮಯ್ಯ ಓಡಿಹೋದರು. ಅಲ್ಲಿಂದ ಮತ್ತೆ ಮೈಸೂರಿಗೆ ಬರುವ ಯೋಚನೆ ಮಾಡುತ್ತಿದ್ದಾರೆ. ಒಡೆಯರ್ಗೆ ಅಗೌರವದ ಏಕವಚನ ಪದ ಬಳಸಿದವರನ್ನು ಈ ಭಾಗದ ಸುಸಂಸ್ಕೃತ ಜನರು ಶಾಶ್ವತವಾಗಿ ತಿರಸ್ಕರಿಸಿದ್ದಾರೆ ಎಂದು ಟ್ವೀಟ್ ಮೂಲಕ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.
ಈಗ ಮತ್ತೆ @siddaramaiahನವರು ಓಡಲೆಂದು ನಮ್ಮ ಸರ್ಕಾರ ರಾಜ್ಯದಲ್ಲಿ ಉತ್ತಮ ರಸ್ತೆಗಳನ್ನು ನಿರ್ಮಿಸುತ್ತಿದೆ. ಆದರೆ ಈಗ ಬನ್ನೂರು-ಮಳವಳ್ಳಿ ಮಾರ್ಗದಲ್ಲಿ ಓಡಲು ಕನಕಪುರದಲ್ಲಿ ಬಂಡೆ ಅಡ್ಡಲಾಗಿದೆ! ಸಿಎಂ ಆಗಿದ್ದಾಗ ನಿದ್ದೆ ಮಾಡಿ, ಈಗ ಚುನಾವಣೆಯೆಂದು ತಟ್ಟನೆ ಎಚ್ಚರಗೊಂಡು ಈ ಭಾಗದ ಬಗ್ಗೆ ಮಾತಾಡುತ್ತಿದ್ದಾರೆ.
7/8
— BJP Karnataka (@BJP4Karnataka) December 28, 2022
ಕಾಂಗ್ರೆಸ್ ವಿರುದ್ಧ ರಾಜ್ಯ ಬಿಜೆಪಿಯಿಂದ ಸರಣಿ ಟ್ವೀಟ್
ಸಿದ್ದರಾಮಯ್ಯ ಓಡಲೆಂದು ಸರ್ಕಾರ ಉತ್ತಮ ರಸ್ತೆ ನಿರ್ಮಿಸುತ್ತಿದೆ. ಬನ್ನೂರು-ಮಳವಳ್ಳಿ ಮಾರ್ಗದಲ್ಲಿ ಓಡಲು ಕನಕಪುರದಲ್ಲಿ ಬಂಡೆ ಅಡ್ಡಲಾಗಿದೆ! ಸಿಎಂ ಆಗಿದ್ದಾಗ ನಿದ್ದೆ ಮಾಡಿ, ಈಗ ಚುನಾವಣೆಯೆಂದು ತಟ್ಟನೆ ಎಚ್ಚರಗೊಂಡು ಈ ಭಾಗದ ಬಗ್ಗೆ ಮಾತಾಡುತ್ತಿದ್ದಾರೆ. ಹಳೇ ಮೈಸೂರು ಭಾಗದ ಜನರಿಗೆ ಅಭಿವೃದ್ಧಿಯ ರಾಜಕಾರಣ ಬೇಕಿದೆ. ಈ ಭಾಗದ ಜನರು ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ಆಷಾಢಭೂತಿತನ ಕಂಡು ಬದಲಾವಣೆಗೆ ತೆರೆದುಕೊಂಡಿದ್ದಾರೆ. ಇದೆಲ್ಲದಕ್ಕೂ ಅಮಿತ್ ಶಾ ಕಾರ್ಯಕ್ರಮವೇ ಮುನ್ನುಡಿಯಾಗಲಿದೆ ಎಂದಿದೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ