Rowdy Sheeter: ದೆಹಲಿಯ ದರ್ಗಾವೊಂದರಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ರೌಡಿಶೀಟರ್ ಬಂಧನ
ಕುಖ್ಯಾತ ರೌಡಿಶೀಟರ್ ಸಮ್ಮೀರ್ ಖಾನ್ ಅಲಿಯಾಸ್ ಬಾಸ್ನನ್ನು ಶೇಷಾದ್ರಿಪುರಂ ಎಸಿಪಿ ತಂಡದ ನೇತೃತ್ವದಲ್ಲಿ ಅರೆಸ್ಟ್ ಮಾಡಲಾಗಿದೆ.
ಬೆಂಗಳೂರು: ಕುಖ್ಯಾತ ರೌಡಿಶೀಟರ್ (rowdy sheeter) ಸಮ್ಮೀರ್ ಖಾನ್ ಅಲಿಯಾಸ್ ಬಾಸ್ನನ್ನು ಶೇಷಾದ್ರಿಪುರಂ ಎಸಿಪಿ ತಂಡದ ನೇತೃತ್ವದಲ್ಲಿ ಅರೆಸ್ಟ್ ಮಾಡಲಾಗಿದೆ. ದೆಹಲಿಯ ದರ್ಗಾವೊಂದರಲ್ಲಿ ತಲೆಮರೆಸಿಕೊಂಡಿದ್ದಾಗ ಅರೆಸ್ಟ್ ಮಾಡಿದ್ದಾರೆ. ಸಮ್ಮೀರ್ ಖಾನ್ 16 ಕೇಸ್ಗಳಲ್ಲಿ ಆರೋಪಿಯಾಗಿದ್ದಾನೆ. ಬೆಂಗಳೂರಿನ ಎಸ್ಜಿ ಪಾಳ್ಯ, ಮೈಕೋ ಲೇಔಟ್, ವಿಲ್ಸನ್ ಗಾರ್ಡನ್, ಶೇಷಾದ್ರಿಪುರಂ ಸೇರಿ ಹಲವು ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದವು. ಹಲವು ಠಾಣೆಗಳಲ್ಲಿ ಈತನ ವಿರುದ್ಧ ರೌಡಿ ಶೀಟ್ ಕೂಡ ಓಪನ್ ಮಾಡಲಾಗಿತ್ತು. ವೆಪನ್ ಡೀಲ್ ಮಾಡುತ್ತಿದ್ದ ತಂಡವೊಂದನ್ನ ಆಂಧ್ರದ ಅನಂತಪುರಂ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈ ಕೇಸ್ವೊಂದನ್ನ ಆರೋಪಿಗಳಿಗೆ ಸಮ್ಮೀರ್ ಖಾನ್ ಪಿಸ್ತೂಲ್ಗಳನ್ನ ಸರಬರಾಜು ಮಾಡಿದ್ದ ಎಂಬ ಮಾಹಿತಿ ಸಿಕ್ಕಿತ್ತು. ಈ ಕೇಸ್ನಲ್ಲಿ ಬೆಂಗಳೂರು ಮೂಲದ ಜಂಶೇಡ್, ಅಮೀರ್ ಪಾಷಾ, ಮುಬಾರಕ್, ರಿಯಾಜ್ ಅಬ್ದುಲ್ ಸೇರಿ ಹಲವರ ಬಂಧನ ಮಾಡಲಾಗಿದೆ.
ಮಧ್ಯಪ್ರದೇಶದಿಂದ ನಾಡ ಪಿಸ್ತೂಲ್ಗಳನ್ನ ತಯಾರಿಕರಿಂದ ಖರೀದಿ ಮಾಡಿ ಡೀಲ್ ಮಾಡುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದು ಅನಂತಪುರ ಪೊಲೀಸರು ದಾಳಿ ನಡೆಸಿದ್ದರು. ದಾಳಿ ವೇಳೆ ಹದಿನೆಂಟು ಪಿಸ್ತೂಲ್ಗಳು ಹಾಗೂ 95 ಜೀವಂತ ಗುಂಡುಗಳು ವಶಪಡೆದಿದ್ದರು. ಆ ಆರೋಪಿಗಳಿಗೆ ಸಮೀರ್ ಖಾನ್ ಲಿಂಕ್ ಇರೋ ಮಾಹಿತಿ ಸಿಕ್ಕಿದ್ದು, ಈ ಬಗ್ಗೆ ಬೆಂಗಳೂರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಶ್ರೀನಿವಾಸಪುರ: ಶಾಲಾ ಕೊಠಡಿಗೆ ನುಗ್ಗಿ ಶಿಕ್ಷಕನ ಮೇಲೆ ಮಾನಸಿಕ ಅಸ್ವಸ್ಥನಿಂದ ಏಕಾಏಕಿ ಹಲ್ಲೆ: ವಿದ್ಯಾರ್ಥಿಗಳು ಆತಂಕ
ಶರತ್ ಕೊಲೆ ಪ್ರಕರಣದಲ್ಲಿ ಮತ್ತೆ ಐವರು ಆರೋಪಿಗಳ ಬಂಧನ
ಬೆಂಗಳೂರು: ಶರತ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಐವರು ಆರೋಪಿಗಳನ್ನು ಪೊಲೀಸರು ಬಂಧನ ಮಾಡಿದ್ದಾರೆ. ಓಬಳೇಶ್, ನವೀನ್, ಸಂಕೇತ್, ಗೋವಿಂದ, ಉದಯರಾಜ್ ಬಂಧಿತರು. ಮೈಸೂರಿನಿಂದ ಬೆಂಗಳೂರಿಗೆ ಬಂದಿದ್ದ ಶರತ್ನನ್ನು ಮಾರ್ಚ್ 21ರಂದು ಬನಶಂಕರಿ ಬಸ್ ನಿಲ್ದಾಣದ ಬಳಿ ಕಿಡ್ನ್ಯಾಪ್ ಮಾಡಿ ಕೊಲೆ ಮಾಡಿದ್ದರು. ಚಿಕ್ಕಬಳ್ಳಾಪುರದ ವೆಂಕಟಚಲಪತಿ ತೋಟದಲ್ಲಿ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ. ಬಳಿಕ ಚಾರ್ಮಾಡಿ ಘಾಟ್ಗೆ ಶವ ತೆಗೆದುಕೊಂಡು ಹೋಗಿ ಬಿಸಾಡಿದ್ದರು. ಶರತ್ ಕೊಲೆ ಪ್ರಕರಣದಲ್ಲಿ ಇದುವರೆಗೆ 10 ಆರೋಪಿಗಳ ಬಂಧನ ಮಾಡಲಾಗಿದ್ದು, ಶರತ್ ಪ್ರಕರಣದಲ್ಲಿ ಮತ್ತಷ್ಟು ಆರೋಪಿಗಳನ್ನು ಬಂಧಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ವಕೀಲನ ಮೇಲೆ ಹಲ್ಲೆ ಮಾಡಿದ್ದ ಹಾನಗಲ್ ಪಿಎಸ್ಐ ಅಮಾನತು
ಹಾವೇರಿ: ವಕೀಲನ ಮೇಲೆ ಹಲ್ಲೆ ಮಾಡಿದ್ದ ಹಾನಗಲ್ ಪಿಎಸ್ಐನನ್ನು ಅಮಾನತುಗೊಳಿಸಿ ಹಾವೇರಿ ಎಸ್ಪಿ ಹನುಮಂತರಾಯ ಆದೇಶ ಹೊರಡಿಸಿದ್ದಾರೆ. ವಕೀಲ ಶಿವು ತಳವಾರ ಮೇಲೆ ಪಿಎಸ್ಐ ಹಲ್ಲೆ ನಡೆಸಿದ್ದ ಆರೋಪ ಮಾಡಲಾಗಿತ್ತು. ಹಾನಗಲ್ ಠಾಣೆ PSI ಶ್ರೀಶೈಲ ಪಟ್ಟಣಶೆಟ್ಟಿ ವಿರುದ್ಧ ಹಲ್ಲೆ ಆರೋಪ ಕೇಳಿಬಂದಿದೆ. ಠಾಣೆ ಎದುರು ನಿನ್ನೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದರು. ಕೇಸ್ ಕೊಡಲು ಠಾಣೆಗೆ ಬಂದಿದ್ದಾಗ ಮಾತಿಗೆ ಮಾತು ಬೆಳೆದು ಹಲ್ಲೆ ಮಾಡಿದ್ದಾರೆನ್ನಲಾಗಿದೆ.
ಇದನ್ನೂ ಓದಿ: Crime News: 17 ವರ್ಷದ ಬಾಲಕಿಯ ಕತ್ತು ಸೀಳಿ ಹತ್ಯೆ, ಪ್ರೇಮಿಯ ಬಂಧನ
ಪೂರ್ವಭಾವಿ ಸಭೆಯಲ್ಲಿ ಕುಸಿದು ಬಿದ್ದು ‘ಕೈ’ ಕಾರ್ಯಕರ್ತ ಸಾವು
ತುಮಕೂರು: ಕಾರ್ಯಕ್ರಮದಲ್ಲೇ ಕುಸಿದು ಬಿದ್ದು ಕಾಂಗ್ರೆಸ್ ಕಾರ್ಯಕರ್ತ ಸಾವನ್ನಪ್ಪಿರುವಂತಹ ಘಟನೆ ಕೊರಟಗೆರೆ ಲಕ್ಷ್ಮೀನರಸಿಂಹಸ್ವಾಮಿ ಕಲ್ಯಾಣ ಮಂಟಪದಲ್ಲಿ ನಡೆದಿದೆ. ಕ್ಯಾಶವಾರ ಗ್ರಾಮದ ನಾಗರಾಜಪ್ಪ(60) ಮೃತ ದುರ್ದೈವಿ. ಎಸ್.ಟಿ. ಎಸ್ಸಿ ಸಮಾವೇಶದ ಪೂರ್ವಭಾವಿ ಸಭೆ ನಡೆಸಲಾಗುತ್ತಿದ್ದು, ಸಭೆಯಲ್ಲಿ ನಾಗರಾಜಪ್ಪ ಪಾಲ್ಗೊಂಡಿದ್ದರು. ಭಾಷಣ ಮುಗಿಸಿದ ತಕ್ಷಣ ವೇದಿಕೆಯಲ್ಲೇ ಕುಸಿದು ಬಿದಿದ್ದಾರೆ. ತಕ್ಷಣವೇ ಕೊರಟಗೆರೆ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆದರೆ ಆಸ್ಪತ್ರೆಗೆ ಸಾಗಿಸುವ ಮೊದಲೇ ಸಾವನಪ್ಪಿದ್ದರು.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.