AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೊಮ್ಮಸಂದ್ರ ಟು ಹೊಸೂರು ಮೆಟ್ರೋ ಅಧ್ಯಯನಕ್ಕೆ ಚೆನ್ನೈ ಮೆಟ್ರೋ ನಿಗಮದಿಂದ ಟೆಂಡರ್ ಆಹ್ವಾನ

ಕನ್ನಡ ಸಂಘಟನೆಗಳ ತೀವ್ರ ವಿರೋಧದ ನಡುವೆಯೂ ಬೊಮ್ಮಸಂದ್ರ ಟು ಹೊಸೂರು ಮಾರ್ಗದ ಮೆಟ್ರೋಗೆ ಮತ್ತೆ ಜೀವ ಸಿಕ್ಕಿದೆ. ಆಗಸ್ಟ್ 1 ರಿಂದ 31 ರವರೆಗೆ ಟೆಂಡರ್​ಗೆ ಅರ್ಜಿ ಸಲ್ಲಿಸಲು ಚೆನ್ನೈ ಮೆಟ್ರೋ ನಿಗಮ ಅವಕಾಶ ನೀಡಿದೆ.

ಬೊಮ್ಮಸಂದ್ರ ಟು ಹೊಸೂರು ಮೆಟ್ರೋ ಅಧ್ಯಯನಕ್ಕೆ ಚೆನ್ನೈ ಮೆಟ್ರೋ ನಿಗಮದಿಂದ ಟೆಂಡರ್ ಆಹ್ವಾನ
ನಮ್ಮ ಮೆಟ್ರೋ (ಸಾಂದರ್ಭಿಕ ಚಿತ್ರ)
TV9 Web
| Updated By: ಆಯೇಷಾ ಬಾನು|

Updated on:Aug 03, 2023 | 1:45 PM

Share

ಬೆಂಗಳೂರು, ಆ.03: ಕನ್ನಡಿಗರ ವಿರೋಧದ ನಡುವೆಯು ಬೊಮ್ಮಸಂದ್ರ ಟು ತಮಿಳುನಾಡಿದ ಹೊಸೂರು ನಡುವೆ ಮೆಟ್ರೋ(Bommasandra to Hosur Metro) ಸಂಪರ್ಕ ಕಲ್ಪಿಸುವ ಯೋಜನೆಯ ಕಾರ್ಯಸಾಧ್ಯತೆ ಬಗ್ಗೆ ಮೆಟ್ರೋ ಅಧ್ಯಯನಕ್ಕೆ ಚೆನ್ನೈ ಮೆಟ್ರೋ ನಿಗಮದಿಂದ(Chennai Metro Corporation) ಟೆಂಡರ್ ಕರೆಯಲಾಗಿದೆ. ಕನ್ನಡ ಸಂಘಟನೆಗಳ ತೀವ್ರ ವಿರೋಧದ ನಡುವೆಯೂ ಬೊಮ್ಮಸಂದ್ರ ಟು ಹೊಸೂರು ಮಾರ್ಗದ ಮೆಟ್ರೋಗೆ ಮತ್ತೆ ಜೀವ ಸಿಕ್ಕಿದೆ. ಆಗಸ್ಟ್ 1 ರಿಂದ 31 ರವರೆಗೆ ಟೆಂಡರ್​ಗೆ ಅರ್ಜಿ ಸಲ್ಲಿಸಲು ಚೆನ್ನೈ ಮೆಟ್ರೋ ನಿಗಮ ಅವಕಾಶ ನೀಡಿದೆ. ಸೆ.1 ರಂದು ಟೆಂಡರ್ ತೆರಯಲು ಚಿಂತನೆ ನಡೆಸಿದೆ.

ಹೊಸೂರು – ಬೊಮ್ಮಸಂದ್ರ ನಡುವಿನ ಒಟ್ಟು 20.5 ಕಿಮೀ ಮಾರ್ಗದಲ್ಲಿ 11.7 ಕಿಮೀ ಕರ್ನಾಟಕದಲ್ಲಿದೆ. ಉಳಿದ 8.8 ಕಿಮೀ ತಮಿಳುನಾಡಿನಲ್ಲಿದೆ. 2021ರಲ್ಲಿ ನಡೆದ ಎಲ್ಲಾ ಮೆಟ್ರೋ ರೈಲು ನಿಗಮಗಳ ವ್ಯವಸ್ಥಾಪಕ ನಿರ್ದೇಶಕರ ಸಭೆಯಲ್ಲಿ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ, ಬೊಮ್ಮಸಂದ್ರ – ಹೊಸೂರು ಮೆಟ್ರೋ ಸಂಪರ್ಕದ ಸಾಧ್ಯತೆ ಕುರಿತು ವರದಿ ನೀಡುವಂತೆ ಬಿಎಂಆರ್‌ಸಿಎಲ್‌ಗೆ ಒತ್ತಾಯಿಸಿದ್ದರು. ಕರ್ನಾಟಕದಲ್ಲಿ ಬರುವ ಮಾರ್ಗವನ್ನು ಬಿಎಂಆರ್‌ಸಿಎಲ್‌ ಮತ್ತು ತಮಿಳುನಾಡಿನ ಮಾರ್ಗವನ್ನು ಸಿಎಂಆರ್‌ಎಲ್‌ ನಿರ್ಮಿಸುವ ಸಾಧ್ಯತೆ ಇದೆ.

ಇನ್ನು ತಮಿಳುನಾಡು ಸರ್ಕಾರ ಕಾರ್ಯ ಸಾಧ್ಯತ ಅಧ್ಯಯನದ ಪೂರ್ಣ ವೆಚ್ಚ ವಹಿಸಲಿದೆ. ಮುಂದೆ ಪ್ರಸ್ತಾವಿಕ ಯೋಜನೆಗೆ ವಸತಿ ಮತ್ತು ನಗರ ಸಚಿವಾಲಯದ ಸಹಯೋಗದಲ್ಲಿ ಎರಡು ರಾಜ್ಯಗಳು ತಮ್ಮ ವ್ಯಾಪ್ತಿಯ ಕಾಮಗಾರಿಗೆ ವೆಚ್ಚದ ಹೊಣೆ ಹೊರುವ ಸಾಧ್ಯತೆ ಇದೆ. ಸದ್ಯ ಈಗಾಗಲೇ ತನ್ನ ವ್ಯಾಪ್ತಿಯ ಕಾಮಗಾರಿ ಸಂಪೂರ್ಣ ವೆಚ್ಚ ಭರಿಸುವ ಬಗ್ಗೆ ತಮಿಳುನಾಡು ಸರ್ಕಾರ ಒಪ್ಪಿಗೆ ಸೂಚಿಸಿದೆ.

ಇದನ್ನೂ ಓದಿ: Siddaramaiah Meets PM Modi: ಮೋದಿ ಭೇಟಿಯಾಗಿ ವಿಶೇಷ ಉಡುಗೊರೆ ನೀಡಿದ ಸಿದ್ದರಾಮಯ್ಯ, ಇಲ್ಲಿವೆ ಫೋಟೋಸ್

ಅಧ್ಯಯನದಲ್ಲಿನ ಅಂಶಗಳ್ಯಾವುವು?

  • ಮೆಟ್ರೋ ಸಂಚರಿಸಬಹುದಾದ ನಗರಗಳ ನಡುವಿನ ಮಾರ್ಗ
  • ಮೆಟ್ರೋ ಮಾರ್ಗದ ತಂತ್ರಜ್ಞಾನ ಹೇಗಿರಬೇಕು
  • ಅಂತರ ಕಡಿಮೆ ಮಾಡಬಹುದೇ
  • ಎಷ್ಟು ಸ್ಟೇಷನ್ ಗಳು ಇರಲಿವೆ
  • ಒಟ್ಟು ಯೋಜನೆಯ ವೆಚ್ಚ.ತಮಿಳುನಾಡು ಸರ್ಕಾರ ಕಳೆದ 5 ತಿಂಗಳ ಹಿಂದೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಈ ವೇಳೆ ಕನ್ನಡ ಪರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಯಾವುದೇ ಕಾರಣಕ್ಕೂ ಈ ಮೆಟ್ರೋ ಮಾರ್ಗಕ್ಕೆ ಅವಕಾಶ ನೀಡದಂತೆ ಆಗ್ರಹಿಸಿ, ಹೊರಟದ ಎಚ್ಚರಿಕೆ ನೀಡಿದ್ದವು. ಈ ನಡುವೆ ಮತ್ತೆ ಮೆಟ್ರೋ ನಿರ್ಮಾಣಕ್ಕೆ ಸಿಎಂಆರ್ಎಲ್ ಮುಂದಾಗಿದೆ.ಈ ಯೋಜನೆಯಿಂದ ಬೆಂಗಳೂರಿಗೆ ನಷ್ಟ ಹೆಚ್ಚು. ಬೆಂಗಳೂರಿಗೆ ಬರುವ ಕೈಗಾರಿಕೆಗಳನ್ನ ಹೊಸೂರಿಗೆ ಸೆಳೆಯುವ ಯತ್ನ ನಡೆಯುತ್ತಿದೆ. ಈ ಕಾರಣಕ್ಕಾಗಿಯೇ ಹಿಂದೆ ಹೊಸೂರಿನಲ್ಲಿ ಸರ್ಕಾರ ತಮಿಳುನಾಡು ವಸಾಹತು ಸ್ಥಾಪನೆ ಮಾಡಿತ್ತು.  ಬೊಮ್ಮಸಂದ್ರ, ವೈಟ್ ಫಿಲ್ಡ್, ಮಹದೇವಪುರ ಭಾಗದಲ್ಲಿ ತಮಿಳುನಾಡಿನ ಭಾಗದ ಪ್ರಭಾವ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಕನ್ನಡ ಪರ ಸಂಘಟನೆಗಳು ಈ ಯೋಜನೆಯನ್ನು ವಿರೋಧಿಸಿವೆ.

    ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 1:37 pm, Thu, 3 August 23