ಬೆಂಗಳೂರು: 20ನೇ ವರ್ಷದ ಚಿತ್ರ ಸಂತೆಯನ್ನು(Chitra Santhe) ಜನವರಿ 8,2023 ರಂದು ಆಯೋಜಿಸಲು ಕರ್ನಾಟಕ ಚಿತ್ರಕಲಾ ಪರಿಷತ್(Chitra Kala Parishad) ಮತ್ತು ರಾಜ್ಯ ಸರ್ಕಾರ(Karnataka Government) ತೀರ್ಮಾನಿಸಿದೆ. ಹಾಗೂ ಚಿತ್ರ ಸಂತೆಯಲ್ಲಿ ಅರ್ಜಿಸಲ್ಲಿಸಲು ನ.17 ರಿಂದ ಡಿ.10ರವೆರೆಗೆ ಅಧಿಸೂಚನೆ ಹೊರಡಿಸಲಾಗಿದೆ.
ಪ್ರತಿ ವರ್ಷ ಕರ್ನಾಟಕ ಚಿತ್ರಕಲಾ ಪರಿಷತ್ತು ಕರ್ನಾಟಕ ಸರ್ಕಾರದ ಸಹಯೋಗದೊಂದಿಗೆ ಚಿತ್ರಸಂತೆ ಕಾರ್ಯಕ್ರಮ ನಡೆಸಿಕೊಂಡು ಬಂದಿದೆ. ಈ ವರ್ಷ ಕಾರ್ಯಕ್ರಮವನ್ನು 08ನೇ ಜನವರಿ 2023ರ ಭಾನುವಾರದಂದು ಆಯೋಜಿಸಲು ತೀರ್ಮಾನಿಸಲಾಗಿದೆ. ಆದ್ದರಿಂದ ಚಿತ್ರಸಂತೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಸಕ್ತ ಕಲಾವಿದರು ನ.17 ರಿಂದ ಡಿ.10ರವರೆಗೆ ಅರ್ಜಿಗಳನ್ನು ಸಲ್ಲಿಸಬಹುದು. ವೆಬ್ ಸೈಟ್ ವಿಳಾಸ: www.chitrakalaparishath.org ಹಾಗೂ ಇ-ಮೇಲ್: chitrasanthe@chitrakalaparishath.org
ಚಿತ್ರಸಂತೆಯನ್ನು ಕಲೆಯ ಕುಂಭಮೇಳವೆಂದೇ ಹೇಳಬಹುದು. ಪ್ರತಿಯೊಬ್ಬ ಕಲಾ ಪ್ರೇಮಿ ಈ ಸಂತೆಗೆ ಭೇಟಿ ಕೊಡದೆ ಇರಲಾರ. ಇಲ್ಲಿಗೆ ದೇಶ-ವಿದೇಶಗಳಿಂದ ಕಲಾವಿದರು ಆಗಮಿಸಿ ತಮ್ಮ ಕಲೆಯ ಪ್ರದರ್ಶನ ಮಾಡುತ್ತಾರೆ. ಸಾಮಾನ್ಯವಾಗಿ ಚಿತ್ರಸಂತೆ ವಾರಾಂತ್ಯದಲ್ಲಿ ಆಯೋಜಿಸಲಾಗುತ್ತೆ. ಕಳೆದ ವರ್ಷ ಕೊರೊನಾ ಹಿನ್ನೆಲೆ ಒಂದು ತಿಂಗಳು ಆನ್ ಲೈನ್ನಲ್ಲೇ ಚಿತ್ರ ಸಂತೆ ಆಯೋಜಿಸಲಾಗಿತ್ತು.
ಇದನ್ನೂ ಓದಿ: ಚಿತ್ರಸಂತೆ 2021: ಗಮನ ಸೆಳೆಯುತ್ತಿದೆ ಚಿತ್ರಕಲಾ ಅಕಾಡೆಮಿ ಪ್ರದರ್ಶನಕ್ಕಿಟ್ಟಿರುವ 50 ವರ್ಷ ಹಳೆಯ ಕಲಾಕೃತಿ
Published On - 4:05 pm, Wed, 16 November 22