ಕರ್ನಾಟಕದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ಒತ್ತಾಯ; ಕ್ರೈಸ್ತರು ಎದುರಿಸುತ್ತಿರುವ ಸಮಸ್ಯೆ ಪರಿಹಾರಕ್ಕೆ ಕ್ರೈಸ್ತರ ನಿಯೋಗ ಬೇಡಿಕೆ

| Updated By: ganapathi bhat

Updated on: Dec 11, 2021 | 3:52 PM

ಇದು ಕೇವಲ ರಾಜ್ಯಕ್ಕೆ ಮಾತ್ರ ಸಂಬಂಧಿಸಿದ ವಿಷಯವಲ್ಲ. ಇದು ಅಂತಾರಾಷ್ಟ್ರೀಯ ವಿಷಯವಾಗಿದೆ. ಒಂದೊಂದು ಸಮುದಾಯವನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಟಾರ್ಗೆಟ್ ಮಾಡಿ ಹಿಂಸೆ ಕೊಡುತ್ತಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ಆರೋಪ ಮಾಡಿದ್ದಾರೆ.

ಕರ್ನಾಟಕದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ಒತ್ತಾಯ; ಕ್ರೈಸ್ತರು ಎದುರಿಸುತ್ತಿರುವ ಸಮಸ್ಯೆ ಪರಿಹಾರಕ್ಕೆ ಕ್ರೈಸ್ತರ ನಿಯೋಗ ಬೇಡಿಕೆ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಮತಾಂತರ ಕಾಯ್ದೆ ಜಾರಿ ಮಾಡುವ ವಿಚಾರವಾಗಿ ಬಿಜೆಪಿಯವರು ಎರಡು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಒಂದು ಅಧಿಕೃತವಾಗಿ ಕಾಯ್ದೆಯನ್ನು ಜಾರಿ ಮಾಡುವುದು. ಮತ್ತೊಂದು ಖಾಸಗಿಯಾಗಿ ಮಸೂದೆ ಮಂಡನೆ ಮಾಡುವುದು. ಮತಾಂತರ ಕಾಯ್ದೆ ಪಾಸ್ ಮಾಡಿಕೊಳ್ಳಲು ಮುಂದಾಗಿದ್ದಾರೆ‌. ಇದು ರಾಜಕೀಯವಾಗಿ ಪ್ರಭಾವ ಬೀರಲಿದೆ ಎಂದು ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿಕೆ ನೀಡಿದ್ದಾರೆ.

ಇದು ಕೇವಲ ರಾಜ್ಯಕ್ಕೆ ಮಾತ್ರ ಸಂಬಂಧಿಸಿದ ವಿಷಯವಲ್ಲ. ಇದು ಅಂತಾರಾಷ್ಟ್ರೀಯ ವಿಷಯವಾಗಿದೆ. ಒಂದೊಂದು ಸಮುದಾಯವನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಟಾರ್ಗೆಟ್ ಮಾಡಿ ಹಿಂಸೆ ಕೊಡುತ್ತಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ಆರೋಪ ಮಾಡಿದ್ದಾರೆ.

ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಯಾಗಬೇಕು
ರಾಜ್ಯದಲ್ಲಿ ಮತಾಂತರ ಕಾಯ್ದೆ ಜಾರಿ ಆಗಬೇಕು . ಮತಾಂತರ ಕಾಯ್ದೆ ಕುರಿತು ಸಿಎಂ ಸ್ಪಷ್ಟ ಪಡಿಸಿದ್ಥಾರೆ. ಚಳಿಗಾಲ ಅಧಿವೇಶನದಲ್ಲಿ ಮತಾಂತರ ಕಾಯ್ದೆ ಮಂಡಿಸುವ ಸಾಧ್ಯತೆ ಇದೆ. ಎಂಎಲ್​ಸಿ ಚುನಾವಣೆ ಮತದಾನ ನಿನ್ನೆ ಆಗಿದೆ. ಶಿವಮೊಗ್ಗ ಸೇರಿದಂತೆ ರಾಜ್ಯದಲ್ಲಿ ಬಿಜೆಪಿ 12 ರಿಂದ 15 ಸ್ಥಾನ ಗೆಲ್ಲುವುದು ನಿಶ್ಚಿತ ಎಂದು ಶಿವಮೊಗ್ಗದಲ್ಲಿ ಸಂಸದ ಬಿ.ವೈ ರಾಘವೇಂದ್ರ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಯಾಗಬೇಕು. ಮತಾಂತರ ಕುರಿತು ಡಿಕೆಶಿ ಅನಗತ್ಯವಾದ ಹೇಳಿಕೆ ನೀಡಿದ್ದಾರೆ. ಬಲವಂತವಾಗಿ, ಆಮಿಷವೊಡ್ಡಿ ಮತಾಂತರ ಮಾಡಲಾಗುತ್ತಿದೆ. ಅದನ್ನು ತಡೆಯಲು ಮತಾಂತರ ನಿಷೇಧ ಕಾಯ್ದೆ ಅಗತ್ಯ ಎಂದು ಶಿವಮೊಗ್ಗದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಹೇಳಿಕೆ ನೀಡಿದ್ದಾರೆ.

ಮತಾಂತರ ನಿಷೇಧ ಕಾಯ್ದೆ ಜಾರಿಗೆ ಶ್ರೀರಾಮ ಸೇನಾ ಸಂಸ್ಥಾಪಕ ಪ್ರಮೋದ್ ಮುತಾಲಿಕ ಒತ್ತಾಯ ಮಾಡಿದ್ದಾರೆ. ಬೆಳಗಾವಿಯಲ್ಲಿ ಅಧಿವೇಶನ ಡಿಸೆಂಬರ್ 13 ರಿಂದ ನಡೆಯಲಿದೆ. ಮತಾಂತರ ನಿಷೇಧ ಕಾಯ್ದೆ ಜಾರಿಗೆ ಸ್ವಾಮೀಜಿಗಳ ಒತ್ತಡ ಸರ್ಕಾರದ ಮೇಲೆ ತಂದಿದ್ದೇವೆ. ಹಿಂದೂ ಸಂಘಟನೆಗಳು ಸಹ ಬೇಡಿಕೆ ಇಟ್ಟಿವೆ. ಕ್ರಿಶ್ಚಿಯನ್ ಹಾಗೂ ಮುಸ್ಲೀಂ ಮತಾಂತರ ನಿರಂತರವಾಗಿ ತಡೆಯೋ ಅವಶ್ಯಕತೆಯಿದೆ. ಏಳು ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಯಲ್ಲಿದೆ. ಅದೇ ಮಾದರಿಯಲ್ಲಿಯೂ ರಾಜ್ಯದಲ್ಲಿ ಜಾರಿ ಮಾಡಬೇಕಿದೆ ಎಂದು ವಿಜಯಪುರ ನಗರದಲ್ಲಿ ಪ್ರಮೋದ್ ಮುತಾಲಿಕ್ ಹೇಳಿಕೆ ನೀಡಿದ್ದಾರೆ.

ಸಿಎಂ ಭೇಟಿ ವೇಳೆ ಮತಾಂತರ ನಿಷೇಧ ಕಾಯ್ದೆ ಜಾರಿ ಮಾಡೋ ಭರವಸೆ ನೀಡಿದ್ದರು. ಮುಂದಿನ ಆಧಿವೇಶನದಲ್ಲಿ ಜಾರಿ ಮಾಡೋದಾಗಿ ಭರವಸೆ ನೀಡಿದ್ದರು. ಆದರೆ, ಈ ಆಧಿವೇಶನದಲ್ಲಿಯೂ ಮತಾಂತರ ನಿಷೇಧ ಕಾಯ್ದೆ ಜಾರಿಯಾಗದೇ ಇರಬಹುದು. ಕಾರಣ ಬಿಜೆಪಿ ಸರ್ಕಾರದಲ್ಲಿ ನೂರಕ್ಕೆ 70 ರಷ್ಟು ಹೊರಗಡೆಯವರೇ ಇದ್ದಾರೆ. ಸದ್ಯ ಬಿಜೆಪಿಯಲ್ಲಿ ಎಲ್ಲರಿದ್ದಾರೆ, ಕಾಂಗ್ರೆಸ್ಸಿಗರು, ಜೆಡಿಎಸ್ ನವರು, ಕಮ್ಯಿನಿಸ್ಟರು ಇದ್ದಾರೆ. ಅವರಿಗೆ ಮತಾಂತರ ನಿಷೇಧ ಕಾಯ್ದೆ ಕಾಳಜಿ ಇಲ್ಲ. ಅವರಿಗೆ ಮತ ಆಧಿಕಾರ, ಲೂಟಿ ಮಾಡಲು ಬೇಕು ಎಂದು ಮುತಾಲಿಕ್ ವಾಗ್ದಾಳಿ ನಡೆಸಿದ್ದಾರೆ.

ಕ್ರಿಶ್ಚಿಯನ್ ಧರ್ಮದ ನಿಯೋಗದಿಂದ ಸಿಎಂ ಬೊಮ್ಮಾಯಿ ಭೇಟಿ
ರಾಜ್ಯದಲ್ಲಿ ಕ್ರೈಸ್ತರು ಎದುರಿಸುತ್ತಿರುವ ಸಮಸ್ಯೆ ಪರಿಹಾರ ಹಾಗೂ ಮತಾಂತರ ನಿಷೇಧ ಕಾಯ್ದೆ ಜಾರಿ ಬಗ್ಗೆ ಪರಾಮರ್ಶಿಸಲು ಮನವಿ ಮಾಡಿ ಕ್ರಿಶ್ಚಿಯನ್ ಧರ್ಮದ ನಿಯೋಗದಿಂದ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ಮಾಡಲಾಗಿದೆ. ರೊನಾಲ್ಡ್ ಕೊಲಾಸೊ ನೇತೃತ್ವದ ನಿಯೋಗದಿಂದ ಸಿಎಂ ಭೇಟಿ ಮಾಡಲಾಗಿದೆ. ನಿಯೋಗದಲ್ಲಿ ಮಾಜಿ ಎಂ ಎಲ್ ಸಿ ಡಿಸೋಜ , ಕೈ ನಾಯಕ ನಾಯಕ ರಾಧಾಕೃಷ್ಣ , ಎನ್ ಆರ್ ಐ ವೈಸ್ ಚೇರಮನ್ ಆರತಿ ಕೃಷ್ಟ ಭೇಟಿ ಮಾಡಿದ್ದಾರೆ.

ಕಳೆದ ಹತ್ತು ವರ್ಷಗಳಲ್ಲಿ ನಮ್ಮ ಸಮುದಾಯದ ರೇಷಿಯೋ ಕಡಿಮೆಯಾಗಿದೆ. ಆಗಿದ್ರು ನಾವೂ ಆಮಿಷವೊಡ್ಡಿ ಮತಾಂತರ ಮಾಡಲಾಗುತ್ತಿದೆ ಅಂತಾ ಬಿಂಬಿಸಲಾಗುತ್ತಿದೆ. ಈ ರೀತಿ ಬಿಂಬಿಸುವುದು ಸರಿಯಲ್ಲ. ಸಮಾಜದಲ್ಲಿ ನಾವೂ ಗೌರಯುತವಾಗಿ ಬದುಕಲು ಅವಕಾಶ ಮಾಡಿಕೊಡಿ. ಮೊದಲು ನಮ್ಮ ಮೇಲೆ ಆಗುತ್ತಿರುವ ದಾಳಿಯನ್ನ ತಪ್ಪಿಸಿ ಎಂದು ರೊನಾಲ್ಡ್ ಕೊಲಾಸೋ ಹೇಳಿಕೆ ನೀಡಿದ್ದಾರೆ. ಎಲ್ಲವನ್ನು ಸರಿಪಡಿಸುತ್ತೇನೆ ಅಂತಾ ಸಿಎಂ ಭರವಸೆ ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಮಂಗಳೂರು: ನಾಲ್ವರ ಆತ್ಮಹತ್ಯೆ ಪ್ರಕರಣಕ್ಕೆ ಮತಾಂತರ ಯತ್ನವೇ ಕಾರಣ -ಮಂಗಳೂರು ಪೊಲೀಸರ ತನಿಖೆಯಲ್ಲಿ ಬಹಿರಂಗ

ಇದನ್ನೂ ಓದಿ: ಹಿಂದೂ ಧರ್ಮಕ್ಕೆ ಮತಾಂತರ ಆಗಲು ಅಲಿ ಅಕ್ಬರ್​ ನಿರ್ಧಾರ; ಬಲವಾದ ಕಾರಣ ನೀಡಿದ ಖ್ಯಾತ ನಿರ್ದೇಶಕ