AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Covid19 Update: ಕರ್ನಾಟಕದಲ್ಲಿ ಹೊಸದಾಗಿ 320 ಜನರಿಗೆ ಕೊರೊನಾ ದೃಢ; 2 ಮಂದಿ ಸಾವು

ಬೆಂಗಳೂರಿನಲ್ಲಿ ಇಂದು ಒಂದೇ ದಿನ 190 ಜನರಿಗೆ ಕೊವಿಡ್-19 ಸೋಂಕು ದೃಢಪಟ್ಟಿದೆ. ಈ ಮೂಲಕ, ಬೆಂಗಳೂರಲ್ಲಿ ಕೊರೊನಾ ಪೀಡಿತರ ಸಂಖ್ಯೆ 12,58,699 ಕ್ಕೆ ಏರಿಕೆಯಾಗಿದೆ. 12,58,699 ಸೋಂಕಿತರ ಪೈಕಿ 12,36,789 ಜನರು ಗುಣಮುಖರಾಗಿದ್ದಾರೆ.

Karnataka Covid19 Update: ಕರ್ನಾಟಕದಲ್ಲಿ ಹೊಸದಾಗಿ 320 ಜನರಿಗೆ ಕೊರೊನಾ ದೃಢ; 2 ಮಂದಿ ಸಾವು
ಸಾಂದರ್ಭಿಕ ಚಿತ್ರ
Follow us
TV9 Web
| Updated By: ganapathi bhat

Updated on: Dec 11, 2021 | 8:31 PM

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಇಂದು (ಡಿಸೆಂಬರ್ 11) ಹೊಸದಾಗಿ 320 ಜನರಿಗೆ ಕೊರೊನಾ ಸೋಂಕು ದೃಢವಾಗಿದೆ. ಈ ಮೂಲಕ, ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 30,00,105 ಕ್ಕೆ ಏರಿಕೆಯಾಗಿದೆ. ಸೋಂಕಿತರ ಪೈಕಿ 29,54,513 ಜನ ಗುಣಮುಖರಾಗಿ ಡಿಸ್ಚಾರ್ಜ್ ಹೊಂದಿದ್ದಾರೆ. ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ 2 ಮಂದಿ ಮೃತಪಟ್ಟಿದ್ದಾರೆ. ಅದರಂತೆ, ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 38,257 ಜನ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ 7,306 ಜನರಲ್ಲಿ ಕೊರೊನಾ ಸೋಂಕು ಸಕ್ರಿಯವಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಬಗ್ಗೆ ಮಾಹಿತಿ ನೀಡಿದೆ.

ಬೆಂಗಳೂರಿನಲ್ಲಿ ಇಂದು ಒಂದೇ ದಿನ 190 ಜನರಿಗೆ ಕೊವಿಡ್-19 ಸೋಂಕು ದೃಢಪಟ್ಟಿದೆ. ಈ ಮೂಲಕ, ಬೆಂಗಳೂರಲ್ಲಿ ಕೊರೊನಾ ಪೀಡಿತರ ಸಂಖ್ಯೆ 12,58,699 ಕ್ಕೆ ಏರಿಕೆಯಾಗಿದೆ. 12,58,699 ಸೋಂಕಿತರ ಪೈಕಿ 12,36,789 ಜನರು ಗುಣಮುಖರಾಗಿದ್ದಾರೆ. ರಾಜ್ಯ ರಾಜಧಾನಿಯಲ್ಲಿ ಇಂದು ಕೊರೊನಾ ಸೋಂಕಿನಿಂದ 2 ಮಂದಿ ಮೃತಪಟ್ಟಿದ್ದಾರೆ. ಅದರಂತೆ, ನಗರದಲ್ಲಿ ಕೊರೊನಾದಿಂದ ಈವರೆಗೆ 16,362 ಜನರ ಸಾವು ಸಂಭವಿಸಿದೆ. ಬೆಂಗಳೂರಲ್ಲಿ 5,547 ಜನರಲ್ಲಿ ಕೊರೊನಾ ಸೋಂಕು ಸಕ್ರಿಯವಾಗಿದೆ.

ಜಿಲ್ಲಾವಾರು ಕೊರೊನಾ ಪ್ರಕರಣಗಳ ವಿವರ ಬಾಗಲಕೋಟೆ 0, ಬಳ್ಳಾರಿ 4, ಬೆಳಗಾವಿ 4, ಬೆಂಗಳೂರು ಗ್ರಾಮಾಂತರ 4, ಬೆಂಗಳೂರು ನಗರ 190, ಬೀದರ್ 0, ಚಾಮರಾಜನಗರ 2, ಚಿಕ್ಕಬಳ್ಳಾಪುರ 0, ಚಿಕ್ಕಮಗಳೂರು 10, ಚಿತ್ರದುರ್ಗ 0, ದಕ್ಷಿಣ ಕನ್ನಡ 20, ದಾವಣಗೆರೆ 1, ಧಾರವಾಡ 5, ಗದಗ 0, ಹಾಸನ 17, ಹಾವೇರಿ 0, ಕಲಬುರಗಿ 1, ಕೊಡಗು 21, ಕೋಲಾರ 0, ಕೊಪ್ಪಳ 0, ಮಂಡ್ಯ 4, ಮೈಸೂರು 14, ರಾಯಚೂರು 0, ರಾಮನಗರ 2, ಶಿವಮೊಗ್ಗ 3, ತುಮಕೂರು 9, ಉಡುಪಿ 2, ಉತ್ತರ ಕನ್ನಡ 4, ವಿಜಯಪುರ 3, ಯಾದಗಿರಿ ಜಿಲ್ಲೆಯಲ್ಲಿ 0 ಕೊವಿಡ್ 19 ಪ್ರಕರಣಗಳು ದಾಖಲಾಗಿವೆ.

ಕೊರೊನಾದಿಂದ ಮೃತಪಟ್ಟವರ ವಿವರ ಬೆಂಗಳೂರು ನಗರ ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ 2 ಮಂದಿ ಸಾವನ್ನಪ್ಪಿದ್ದಾರೆ. ಉಳಿದ ಜಿಲ್ಲೆಗಳಲ್ಲಿ ಕೊರೊನಾದಿಂದ ಸಾವು ಸಂಭವಿಸಿಲ್ಲ.

ಕರ್ನಾಟಕ ಲಸಿಕೆ ನೀಡಿಕೆಯಲ್ಲಿ ಮತ್ತೊಂದು ಮೈಲಿಗಲ್ಲು ಕರ್ನಾಟಕ ರಾಜ್ಯದಲ್ಲಿ ಲಸಿಕೆ ನೀಡಿಕೆಯಲ್ಲಿ ಮತ್ತೊಂದು ಮೈಲಿಗಲ್ಲು ಸಾಧಿಸಲಾಗಿದೆ. ರಾಜ್ಯದಲ್ಲಿ ಈವರೆಗೆ 8 ಕೋಟಿ ಡೋಸ್‌ ಲಸಿಕೆ ನೀಡಿಕೆ ಆಗಿದೆ. ಈ ಬಗ್ಗೆ, ಆರೋಗ್ಯ ಇಲಾಖೆಯ ಸಚಿವ ಡಾ.ಕೆ. ಸುಧಾಕರ್‌ ಟ್ವೀಟ್‌ ಮಾಡಿದ್ದಾರೆ. ಮೊದಲ ಲಸಿಕೆ ನೀಡಿಕೆಯಲ್ಲಿ ದೇಶದಲ್ಲಿ ರಾಜ್ಯವೇ ಪ್ರಥಮ ಆಗಿದೆ. 2ನೇ ಡೋಸ್ ಲಸಿಕೆ ನೀಡಿಕೆಯಲ್ಲಿ ರಾಜ್ಯಕ್ಕೆ 3ನೇ ಸ್ಥಾನ ಇದೆ. ಇದಕ್ಕಾಗಿ ಜಿಲ್ಲಾಡಳಿತಗಳು, ಆರೋಗ್ಯ ಇಲಾಖೆ ಸಿಬ್ಬಂದಿಗೆ ಧನ್ಯವಾದ ಎಂದು ಡಾ.ಕೆ.ಸುಧಾಕರ್‌ ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ: ಕೊರೊನಾ ಸ್ಫೋಟ: ಚಿಕ್ಕಮಗಳೂರು ಶಾಲೆ ಸೀಲ್ ಡೌನ್, ಈ ಕಡೆ ಬೆಂಗಳೂರು ಕಾನ್ವೆಂಟ್​ ಮಕ್ಕಳು 4 ದಿನ ಹೈದರಾಬಾದ್ ಪ್ರವಾಸಕ್ಕೆ!

ಇದನ್ನೂ ಓದಿ: ಕೊವಿಡ್ ಲಸಿಕೆ ಅರ್ಹ ಜನಸಂಖ್ಯೆಯ ಶೇ 86 ಮಂದಿಗೆ 1ನೇ ಡೋಸ್ ನೀಡಲಾಗಿದೆ: ಕೇಂದ್ರ ಆರೋಗ್ಯ ಸಚಿವ

ಶಿವಣ್ಣ, ದರ್ಶನ್ ಅವರನ್ನು ನಿಂದಿಸಿದ್ದು ನಿಜವೇ? ಮನು ಹೇಳಿದ್ದೇನು?
ಶಿವಣ್ಣ, ದರ್ಶನ್ ಅವರನ್ನು ನಿಂದಿಸಿದ್ದು ನಿಜವೇ? ಮನು ಹೇಳಿದ್ದೇನು?
ಕಪ್​ಗೆ ಮುತ್ತಿಡಲು ಶಿವಕುಮಾರ್ ಆರ್​ಸಿಬಿ ತಂಡದ ಆಟಗಾರನೇ? ಭಾಸ್ಕರ್ ರಾವ್
ಕಪ್​ಗೆ ಮುತ್ತಿಡಲು ಶಿವಕುಮಾರ್ ಆರ್​ಸಿಬಿ ತಂಡದ ಆಟಗಾರನೇ? ಭಾಸ್ಕರ್ ರಾವ್
ನನ್ನ ಆರೋಗ್ಯ ಚೆನ್ನಾಗಿದೆ, ಅದನ್ನು ದೇವರು ನೋಡ್ಕೋತಾನೆ: ಕುಮಾರಸ್ವಾಮಿ
ನನ್ನ ಆರೋಗ್ಯ ಚೆನ್ನಾಗಿದೆ, ಅದನ್ನು ದೇವರು ನೋಡ್ಕೋತಾನೆ: ಕುಮಾರಸ್ವಾಮಿ
ವಿರಾಟ್ ಕೊಹ್ಲಿ ಏನು ದೇವರಾ: ಮೃತ ಪ್ರಜ್ವಲ್ ತಾಯಿ ಆಕ್ರೋಶದ ಮಾತು
ವಿರಾಟ್ ಕೊಹ್ಲಿ ಏನು ದೇವರಾ: ಮೃತ ಪ್ರಜ್ವಲ್ ತಾಯಿ ಆಕ್ರೋಶದ ಮಾತು
ಸರ್ಕಾರದಿಂದ ನೆರವು ಸಿಕ್ಕಿಲ್ಲ, ಅಧಿಕಾರಿಗಳು ಮನಗೆ ಬಂದಿಲ್ಲ:ಶಿವಲಿಂಗನ ತಾಯಿ
ಸರ್ಕಾರದಿಂದ ನೆರವು ಸಿಕ್ಕಿಲ್ಲ, ಅಧಿಕಾರಿಗಳು ಮನಗೆ ಬಂದಿಲ್ಲ:ಶಿವಲಿಂಗನ ತಾಯಿ
ಕಾಶ್ಮೀರದ ಮೊದಲ ವಂದೇ ಭಾರತ್ ರೈಲು ಅಂಜಿ ಸೇತುವೆ ದಾಟಿದ ಅದ್ಭುತ ವಿಡಿಯೋ
ಕಾಶ್ಮೀರದ ಮೊದಲ ವಂದೇ ಭಾರತ್ ರೈಲು ಅಂಜಿ ಸೇತುವೆ ದಾಟಿದ ಅದ್ಭುತ ವಿಡಿಯೋ
ನಾನು ಪುನಃ ಜೈಲಿಗೆ ಹೋಗುವುದನ್ನು ನೋಡಲು ಬಹಳ ಜನ ಕಾಯುತ್ತಿದ್ದರು: ಕುಲಕರ್ಣಿ
ನಾನು ಪುನಃ ಜೈಲಿಗೆ ಹೋಗುವುದನ್ನು ನೋಡಲು ಬಹಳ ಜನ ಕಾಯುತ್ತಿದ್ದರು: ಕುಲಕರ್ಣಿ
ಕೇದಾರನಾಥಕ್ಕೆ ಹೋಗುವಾಗ ರಸ್ತೆಯಲ್ಲೇ ಲ್ಯಾಂಡ್ ಆದ ಹೆಲಿಕಾಪ್ಟರ್
ಕೇದಾರನಾಥಕ್ಕೆ ಹೋಗುವಾಗ ರಸ್ತೆಯಲ್ಲೇ ಲ್ಯಾಂಡ್ ಆದ ಹೆಲಿಕಾಪ್ಟರ್
ಮೃತಪ್ರೇಮಿಯನ್ನು ಮಾತಾಡುವ ನೆಪದಲ್ಲಿ ತೋಟದ ಮನೆಗೆ ಕರೆಸಲಾಗಿತ್ತು
ಮೃತಪ್ರೇಮಿಯನ್ನು ಮಾತಾಡುವ ನೆಪದಲ್ಲಿ ತೋಟದ ಮನೆಗೆ ಕರೆಸಲಾಗಿತ್ತು
ಆಟಗಾರರೊಂದಿಗೆ ತಮ್ಮ ಮಕ್ಕಳ ಫೋಟೋಗಾಗಿ ನಮ್ಮ ಮಕ್ಕಳ ಬಲಿ ಪಡೆದರು: ಲಕ್ಷ್ಮಣ
ಆಟಗಾರರೊಂದಿಗೆ ತಮ್ಮ ಮಕ್ಕಳ ಫೋಟೋಗಾಗಿ ನಮ್ಮ ಮಕ್ಕಳ ಬಲಿ ಪಡೆದರು: ಲಕ್ಷ್ಮಣ