ಸಂಚಾರಿ ಪೊಲೀಸ್​​ ಕಾನ್ಸ್​​ ಟೇಬಲ್ ಜೊತೆ ಯುವಕನ ಗಲಾಟೆ; ವಿಡಿಯೋ ವೈರಲ್​

| Updated By: ವಿವೇಕ ಬಿರಾದಾರ

Updated on: Dec 25, 2023 | 12:11 PM

ಕ್ಷುಲಕ ಕಾರಣಕ್ಕೆ ಸಂಚಾರಿ ಪೊಲೀಸ್​​ ಕಾನ್ಸ್​​ಟೇಬಲ್ ಜೊತೆ ಗಲಾಟೆ ಮಾಡಿದ್ದ ಯುವಕನನ್ನು ಸುಬ್ರಮಣ್ಯಪುರ ಪೊಲೀಸರು ಬಂಧಿಸಿದ್ದಾರೆ. ಯುವಕ ರಾಜು ಬಂಧಿತ ಆರೋಪಿ. ಶನಿವಾರ (ಡಿಸೆಂಬರ್​ 23)ರ ರಾತ್ರಿ ಬೆಂಗಳೂರಿನ ಉತ್ತರಹಳ್ಳಿ ಬಳಿಯ ಹರೇಹಳ್ಳಿ ಸಮೀಪ ಘಟನೆ ನಡೆದಿದೆ.

ಸಂಚಾರಿ ಪೊಲೀಸ್​​ ಕಾನ್ಸ್​​ ಟೇಬಲ್ ಜೊತೆ ಯುವಕನ ಗಲಾಟೆ; ವಿಡಿಯೋ ವೈರಲ್​
ಪೊಲೀಸ್​ ಜೊತೆ ಯುವಕನ ಗಲಾಟೆ
Follow us on

ಬೆಂಗಳೂರು, ಡಿಸೆಂಬರ್​ 25: ಕ್ಷುಲಕ ಕಾರಣಕ್ಕೆ ಸಂಚಾರಿ ಪೊಲೀಸ್​​ ಕಾನ್ಸ್​​ಟೇಬಲ್ (Traffic Police Constable) ಜೊತೆ ಗಲಾಟೆ ಮಾಡಿದ್ದ ಯುವಕನನ್ನು ಸುಬ್ರಮಣ್ಯಪುರ ಪೊಲೀಸರು (Police) ಬಂಧಿಸಿದ್ದಾರೆ. ಯುವಕ ರಾಜು ಬಂಧಿತ ಆರೋಪಿ. ಶನಿವಾರ (ಡಿಸೆಂಬರ್​ 23) ರಾತ್ರಿ ಉತ್ತರಹಳ್ಳಿ ಬಳಿಯ ಹರೇಹಳ್ಳಿ ಸಮೀಪ ಘಟನೆ ನಡೆದಿದೆ. ಕೆ.ಎಸ್.ಲೇಔಟ್ ಸಂಚಾರಿ ಠಾಣೆ ಕಾನ್ಸ್ ಟೇಬಲ್ ಕರಿಬಸವಯ್ಯ, ರಾಜುಗೆ ರೋಡ್​ನಿಂದ ಪಕ್ಕಕ್ಕೆ ಹೋಗುವಂತೆ ಹೇಳಿದ್ದರು.

ಇದರಿಂದ ಕುಂಪಿತಗೊಂಡ ರಾಜು ಕಾನ್ಸ್​ಟೇಬಲ್ ಕರಿಬಸಯ್ಯ​ ಅವರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದರು. ಇದರಿಂದ ಕೋಪಗೊಂಡ ಕಾನ್ಸ್​​ ಟೇಬಲ್​ ಕರಿಬಸವಯ್ಯ ರಾಜುಗೆ ಹಲ್ಲೆ ಮಾಡಿದರು. ಬಳಿಕ ರಾಜು ಕಾನ್ಸ್ ಟೇಬಲ್​ ಕರಿಬಸಯ್ಯ ಅವರಿಗೆ ಹಲ್ಲೆ ಮಾಡಿದ್ದಾರೆ.

ಇಬ್ಬರು ಕೈ ಕೈ ಮೀಲಾಯಿಸಿದ್ದಾರೆ. ಗಲಾಟೆ ವೇಳೆ ಕಾನ್ಸ್​ಟೇಬಲ್ ಕೈಯಲ್ಲಿದ್ದ ಟೋಪಿ ಕೆಳಗೆ ಬಿದ್ದಿದೆ. ಕಾನ್ಸ್​ಟೇಬಲ್ ಕರಿಬಸಯ್ಯ ಟೋಪಿ ತೆಗೆದುಕೊಳ್ಳಲಿ ಬಗ್ಗಿದಾಗ ರಾಜು ಓಡಿ ಹೋಗಲು ಮುಂದಾಗಿದ್ದಾನೆ. ಕೂಡಲೆ ಪೊಲೀಸರು ಆರೋಪಿಯನ್ನ ಹಿಡಿದು ಕೇಸ್ ಹಾಕಿದ್ದಾರೆ. ಸುಬ್ರಮಣ್ಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:08 pm, Mon, 25 December 23