ಇಂದು ರಾತ್ರಿಯಿಂದ ಸುರಪುರ ದೇವಿಕೇರಾ ಜಾತ್ರೆ; ಕೋಣಗಳ ಬಲಿ ತಡೆಯಲು ಪೊಲೀಸ್ ಭದ್ರತೆ

ಯಾದಗಿರಿಯ ಸುರಪುರ ತಾಲೂಕಿನಲ್ಲಿ ಇಂದು ಮತ್ತು ನಾಳೆ ದೇವಿಕೇರಾ ಜಾತ್ರೆ ನಡೆಯಲಿದೆ. ಈ ಜಾತ್ರೆಯಲ್ಲಿ ಕೋಣಗಳನ್ನು ಬಲಿ ಕೊಡುವ ಹಾಗೂ ಅದರ ಮಾಂಸವನ್ನು ದಲಿತರಿಗೆ ತಿನ್ನಬೇಕು, ಇಲ್ಲವಾದರೆ ಬಹಿಷ್ಕಾರ ಹಾಕುವ ಅನಿಷ್ಟ ಪದ್ಧತೆ ಚಾಲ್ತಿಯಲ್ಲಿದೆ. ಇದನ್ನು ವಿರೋಧಿಸಿ ದಲಿತ ಸಮುದಾಯವು ದೂರು ನೀಡಿದ್ದವು. ನಿನ್ನೆ ಗ್ರಾಮದಲ್ಲಿ ಶಾಂತಿ ಸಭೆ ನಡೆದಿದ್ದು, ಕೋಣಗಳ ಬಲಿ ತಡೆಯಲು ಪೊಲೀಸರನ್ನು ನಿಯೋಜಿಸಲಾಗಿದೆ.

ಇಂದು ರಾತ್ರಿಯಿಂದ ಸುರಪುರ ದೇವಿಕೇರಾ ಜಾತ್ರೆ; ಕೋಣಗಳ ಬಲಿ ತಡೆಯಲು ಪೊಲೀಸ್ ಭದ್ರತೆ
ಇಂದು ಮತ್ತು ನಾಳೆ ನಡೆಯುವ ಸುರಪುರ ದೇವಿಕೇರಾ ಜಾತ್ರೆಯಲ್ಲಿ ಕೋಣಗಳ ಬಲಿ ತಡೆಯಲು ಪೊಲೀಸ್ ಭದ್ರತೆ
Follow us
ಅಮೀನ್​ ಸಾಬ್​
| Updated By: Rakesh Nayak Manchi

Updated on: Dec 18, 2023 | 2:42 PM

ಯಾದಗಿರಿ, ಡಿ.18: ಜಿಲ್ಲೆಯ (Yadgir) ಸುರಪುರ ತಾಲೂಕಿನ ದೇವಿಕೇರಾ ಜಾತ್ರೆ (Devikera fair) ಇಂದು ರಾತ್ರಿಯಿಂದ ಆರಂಭಗೊಳ್ಳಲಿದೆ. ಈ ಜಾತ್ರೆಯಲ್ಲಿ ಕೋಣಗಳನ್ನು ಬಲಿ ಕೊಡುವ ಹಾಗೂ ಅದರ ಮಾಂಸವನ್ನು ದಲಿತರಿಗೆ ತಿನ್ನಬೇಕು, ಇಲ್ಲವಾದರೆ ಬಹಿಷ್ಕಾರ ಹಾಕುವ ಅನಿಷ್ಟ ಪದ್ಧತೆ ಚಾಲ್ತಿಯಲ್ಲಿದ್ದು, ಇದನ್ನು ವಿರೋಧಿಸಿ ದಲಿತ ಸಮುದಾಯವು ದೂರು ನೀಡಿತ್ತು. ಅದರಂತೆ, ಜಾತ್ರೆಯಲ್ಲಿ ಕೋಣಗಳ ಬಲಿ ತಡೆಯಲು ಜಿಲ್ಲಾಡಳಿತ ಮುಂಜಾಗ್ರತಾ ಕ್ರಮ ಕೈಗೊಂಡಿದ್ದು, ಗ್ರಾಮದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.

ದೇವಿಕೇರ ಗ್ರಾಮದಲ್ಲಿ ಗ್ರಾಮ ದೇವತೆಯ ಜಾತ್ರೆ ಇಂದು ರಾತ್ರಿ ಮತ್ತು ನಾಳೆ ನಡೆಯಲಿದೆ. ಕೋಣಗಳನ್ನು ಬಲಿ ಕೊಡುವ ಸಾಧ್ಯತೆ ಹಿನ್ನೆಲೆ ಜಿಲ್ಲಾಡಳಿತದಿಂದ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದ್ದು, ಕೋಣಗಳ ಬಲಿ ಕೊಡದಂತೆ ಗ್ರಾಮದಲ್ಲಿ 80 ಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿದೆ.

ಇದನ್ನೂ ಓದಿ: ದೇವಿಕೇರಾ ಜಾತ್ರೆ: ಕೋಣಗಳ ಬಲಿ ಹೆಸರಲ್ಲಿ ಚಂದಾ ವಸೂಲಿ

ದೇವಸ್ಥಾನ ಸೇರಿದಂತೆ ವಿವಿಧ ಕಡೆ ಬಂದೋಬಸ್ತ್​ಗಾಗಿ ಯಾದಗಿರಿ ಎಸ್​ಪಿ ಪೊಲೀಸರನ್ನು ನಿಯೋಜನೆ ಮಾಡಿದ್ದಾರೆ. ದಲಿತ ಸಮುದಾಯದ ದೂರಿನ ಅನ್ವಯ ನಿನ್ನೆ ಸುರಪುರ ತಹಶೀಲ್ದಾರ್ ವಿಜಯ ಕುಮಾರ್ ಗ್ರಾಮಕ್ಕೆ ಹೋಗಿ ಶಾಂತಿ ಸಭೆ ನಡೆಸಿದ್ದರು.

ಬಲಿಕೊಟ್ಟ ಕೋಣಗಳ ಮಾಂಸ ತಿನ್ನದ ದಲಿತರಿಗೆ ಗ್ರಾಮದಿಂದ ಬಹಿಷ್ಕಾರ

ದೇವಿಕೇರಾ ಗ್ರಾಮದಲ್ಲಿ ನಡೆಯುವ ದ್ಯಾಮವ್ವ, ಮರೆಮ್ಮ, ಪಾಲ್ಕಮ್ಮ ಗ್ರಾಮದೇವತೆಗಳ ಜಾತ್ರೆಯಲ್ಲಿ ಹತ್ತಾರು ಕೋಣಗಳನ್ನು ಬಲಿ ಕೊಡಲಾಗುತ್ತದೆ. ಬಲಿಕೊಟ್ಟ ಕೋಣಗಳ ಮಾಂಸವನ್ನು ದಲಿತರು ತಿನ್ನಬೇಕು, ಇಲ್ಲವಾದರೆ ಅಂತಹವರನ್ನು ಗ್ರಾಮದಿಂದ ಬಹಿಷ್ಕಾರ ಹಾಕಲಾಗುತ್ತದೆ. ಇದರ ವಿರುದ್ಧ ರಾಜ್ಯ ದಲಿತ ಸಂಘರ್ಷ ಸಮಿತಿಯ (ಕ್ರಾಂತಿಕಾರಿ ಬಣ) ರಾಜ್ಯ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಅವರು ಜಿಲ್ಲಾಧಿಕಾರಿ, ಎಸ್​ಪಿ​​ಗೆ ದೂರು ನೀಡಿ ಮೂಢನಂಬಿಕೆ ತಡೆಯುವಂತೆ ಒತ್ತಾಯಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?