ಯಾದಗಿರಿ: ಅನ್ನಭಾಗ್ಯ ಅಕ್ಕಿ ಕಳ್ಳನ ಹುಡುಕಿಕೊಡಿ ಎಂದು ದೂರು ಕೊಟ್ಟು ತಾನೇ ಸಿಕ್ಕಿಬಿದ್ದ ಅಧಿಕಾರಿ!

ಈ ಅಧಿಕಾರಿಗಳು ಅಕ್ಕಿ ಕಳ್ಳತನ ಪ್ರಕರಣದಲ್ಲಿ ಮಾಸಿಕ 50,000 ರೂ. ಪಡೆಯುತ್ತಿದ್ದರು ಎನ್ನಲಾಗಿದೆ. ಈ ಹಿಂದೆ ಪ್ರಭು ಹಾಗೂ ಈಗ ಭೀಮರಾಯ ಹಣ ಪಡೆಯುತ್ತಿದ್ದರು. ಪ್ರಕರಣದ ಪ್ರಮುಖ ಆರೋಪಿ ಶಿವಪ್ಪನನ್ನು ಬಂಧಿಸಿ ವಿಚಾರಣೆ ವೇಳೆ ಕಳ್ಳಾಟ ಬೆಳಕಿಗೆ ಬಂದಿದೆ.

ಯಾದಗಿರಿ: ಅನ್ನಭಾಗ್ಯ ಅಕ್ಕಿ ಕಳ್ಳನ ಹುಡುಕಿಕೊಡಿ ಎಂದು ದೂರು ಕೊಟ್ಟು ತಾನೇ ಸಿಕ್ಕಿಬಿದ್ದ ಅಧಿಕಾರಿ!
ಭೀಮರಾಯ ಮಸಾಲಿ ಹಾಗೂ ಪ್ರಭು ದೋರೆ
Follow us
TV9 Web
| Updated By: Ganapathi Sharma

Updated on: Dec 15, 2023 | 2:10 PM

ಯಾದಗಿರಿ, ಡಿಸೆಂಬರ್ 15: ಯಾದಗಿರಿ ಜಿಲ್ಲೆ ಶಹಾಪುರದಲ್ಲಿ ಅನ್ನಭಾಗ್ಯ ಅಕ್ಕಿ (Anna Bhagya Rice) ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ, ಅಕ್ರಮಕ್ಕೆ ಸಾಥ್ ನೀಡಿದ್ದ ಇಬ್ಬರು ಅಧಿಕಾರಿಗಳಿಗೆ ಈಗ ಬಂಧನದ ಭೀತಿ ಎದುರಾಗಿದೆ. ಶುಕ್ರವಾರ ಸಂಜೆಯೊಳಗೆ ಅಧಿಕಾರಿಗಳ ಬಂಧನವಾಗುವ ಸಾಧ್ಯತೆ ಇದೆ.

ಆಹಾರ ಇಲಾಖೆ ಉಪ ನಿರ್ದೇಶಕ ಭೀಮರಾಯ ಮಸಾಲಿ ಹಾಗೂ ಹಿಂದಿನ ಉಪ ನಿರ್ದೇಶಕ ಪ್ರಭು ದೋರೆ ಅವರೇ ಬಂಧನದ ಭೀತಿ ಎದುರಿಸುತ್ತಿರುವವರು.

ಈ ಅಧಿಕಾರಿಗಳು ಅಕ್ಕಿ ಕಳ್ಳತನ ಪ್ರಕರಣದಲ್ಲಿ ಮಾಸಿಕ 50,000 ರೂ. ಪಡೆಯುತ್ತಿದ್ದರು ಎನ್ನಲಾಗಿದೆ. ಈ ಹಿಂದೆ ಪ್ರಭು ಹಾಗೂ ಈಗ ಭೀಮರಾಯ ಹಣ ಪಡೆಯುತ್ತಿದ್ದರು. ಪ್ರಕರಣದ ಪ್ರಮುಖ ಆರೋಪಿ ಶಿವಪ್ಪನನ್ನು ಬಂಧಿಸಿ ವಿಚಾರಣೆ ವೇಳೆ ಕಳ್ಳಾಟ ಬೆಳಕಿಗೆ ಬಂದಿದೆ. ಈಗಾಗಲೇ ಶಿವಪ್ಪ ಸೇರಿ 6 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಸುರಪುರ ಉಪ ವಿಭಾಗದ ಡಿವೈಎಸ್‌ಪಿ ಜಾವೇದ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಈಗಾಗಲೇ ಶಿವಪ್ಪ, ಶಿವರಾಜ್, ವೆಂಕಟೇಶ್, ಮಲ್ಲನಗೌಡ, ಅಬ್ದುಲ್ ನಬಿ, ಮೆಹಬೂಬ್‌ಸಾಬ್​ನನ್ನು ಶಹಾಪುರ‌ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: ರಾಮನಗರ: ಅನ್ನಭಾಗ್ಯ ಅಕ್ಕಿ ಕಳವು ಪ್ರಕರಣ; ಸಿಕ್ಕಿಬಿದ್ದ ಕಳ್ಳ ಯಾರು ಗೊತ್ತಾ?

ದೂರುದಾರ ಅಧಿಕಾರಿಯೇ ಆರೋಪಿ

ಶಹಾಪುರದಲ್ಲಿ ಅನ್ನಭಾಗ್ಯ ಯೋಜನೆಯ ಪಡಿತರ ಅಕ್ಕಿ ಕಳ್ಳತನವಾಗಿತ್ತು. ಬಳಿಕ ಆಹಾರ ಇಲಾಖೆ ಉಪ ನಿರ್ದೇಶಕ ಭೀಮರಾಯ್ ಮಸಾಲಿ, ಶಹಾಪುರ ಪೊಲೀಸ್​ ಠಾಣೆಗೆ ದೂರು ನೀಡಿದ್ದರು. ಆದರೆ, ಇದೀಗ ದೂರು ನೀಡಿದ್ದ ಅಧಿಕಾರಿ ಭೀಮರಾಯ್ ಮಸಾಲಿಯೇ ಆರೋಪಿ ಎಂಬುದು ಗೊತ್ತಾಗಿದೆ.

ರಾಜಕೀಯ ಸುದ್ದಿಗಳನ್ನು ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ