ರಾಮನಗರ: ಅನ್ನಭಾಗ್ಯ ಅಕ್ಕಿ ಕಳವು ಪ್ರಕರಣ; ಸಿಕ್ಕಿಬಿದ್ದ ಕಳ್ಳ ಯಾರು ಗೊತ್ತಾ?
ನಿನ್ನೆ(ನ.22) ಡಿಸಿಎಂ ಡಿಕೆ ಶಿವಕುಮಾರ್ ತವರು ಜಿಲ್ಲೆಯಲ್ಲೇ ಅನ್ನಭಾಗ್ಯ ಅಕ್ಕಿ ಕಳವು ಆರೋಪ ಕೇಳಿಬಂದಿತ್ತು. ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿರುವ ಟಿಎಪಿಸಿಎಂಎಸ್ ಗೋದಾಮಿನಲ್ಲಿದ್ದ ಬರೊಬ್ಬರಿ 50 ಲಕ್ಷ ಬೆಲೆಯ 1500 ಕ್ವಿಂಟಾಲ್ ಅಕ್ಕಿ ಇದ್ದಕ್ಕಿದ್ದಂತೆ ಕಳ್ಳತನವಾಗಿತ್ತು. ಘಟನೆಗೆ ಸಂಬಂಧಪಟ್ಟಂತೆ ಇದೀಗ ಗೋದಾಮು ನಿರ್ವಹಣೆ ಮಾಡುತ್ತಿದ್ದ ನೌಕರ ಚಂದ್ರು ಎಂಬಾತನೇ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ.
ರಾಮನಗರ, ನ.23: ಜಿಲ್ಲೆಯ ಚನ್ನಪಟ್ಟಣದಲ್ಲಿ ಟಿಎಪಿಸಿಎಂಎಸ್(TAPCMS) ಗೋದಾಮಿನಲ್ಲಿದ್ದ 1500 ಕ್ವಿಂಟಾಲ್ ಅನ್ನಭಾಗ್ಯ(Anna Bhagya) ಅಕ್ಕಿ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಗೋದಾಮಿನ ವ್ಯವಸ್ಥಾಪಕನಾಗಿದ್ದ ಚಂದ್ರಶೇಖರ್ ಎಂಬುವರಿಂಲೇ ಪಡಿತರ ಅಕ್ಕಿ ಕಳ್ಳತನವಾಗಿದೆ ಎಂದು ತಿಳಿದು ಬಂದಿದೆ. ಕೇಂದ್ರ ಸರ್ಕಾರದಿಂದ ಜಿಲ್ಲೆಗೆ 1400 ಕ್ವಿಂಟಾಲ್ ಪಡಿತರ ಅಕ್ಕಿ ಬಂದಿದ್ದು, ಎರಡು ತಿಂಗಳ ಪಡಿತರ ಅಕ್ಕಿ ಒಂದೇ ಬಾರಿಗೆ ಬಂದ ಹಿನ್ನೆಲೆ ಈ ಅವ್ಯವಹಾರ ನಡೆದಿದೆ ಎನ್ನಲಾಗಿದೆ.
ಖಾಸಗಿ ವ್ಯಕ್ತಿಗಳಿಗೆ ಅಕ್ಕಿ ಮಾರಾಟ ಮಾಡಿರುವ ಗೋದಾಮು ವ್ಯವಸ್ಥಾಪಕ
ಅಕ್ಕಿ ಬಂದ ಒಂದೇ ವಾರಕ್ಕೆ 1250 ಕ್ವಿಂಟಾಲ್ಗೂ ಹೆಚ್ಚು ಅಕ್ಕಿ ಕಳ್ಳತನವಾಗಿದ್ದು, ಗೋದಾಮು ವ್ಯವಸ್ಥಾಪಕ ಚಂದ್ರಶೇಖರ್, ಖಾಸಗಿ ವ್ಯಕ್ತಿಗಳಿಗೆ ಅಕ್ಕಿ 2500 ಅಕ್ಕಿ ಮೂಟೆಗಳಲ್ಲಿ ಮಾರಾಟ ಮಾಡಿದ್ದಾರೆ. ಈ ಹಿನ್ನಲೆ ಅಧಿಕಾರಿಗಳು TAPCMS ಗೋದಾಮು ಸೀಜ್ ಮಾಡಿ ಲೈಸೆನ್ಸ್ ರದ್ದುಪಡಿಸಿದ್ದು, ಗೋದಾಮು ವ್ಯವಸ್ಥಾಪಕ ಚಂದ್ರಶೇಖರ್ ವಿರುದ್ಧ ಎಫ್ಐಆರ್ ದಾಖಲು ಮಾಡಿದ್ದಾರೆ. ಈ ಕುರಿತು ಮಾತನಾಡಿದ ಆಹಾರ ಇಲಾಖೆಯ ಉಪನಿರ್ದೇಶಕಿ ರಮ್ಯಾ ‘ಇನ್ಮುಂದೆ ಆಹಾರ ಇಲಾಖೆ ಗೋದಾಮಿನಿಂದಲೇ ಪಡಿತರ ಸರಬರಾಜು ಮಾಡಲಾಗುವುದು. ಅಕ್ಕಿ ಕಳವು ಹಿನ್ನೆಲೆ ಡಿಸೆಂಬರ್ ತಿಂಗಳ ಪಡಿತರ ವಿತರಣೆ ವಿಳಂಬವಾಗುವ ಸಾಧ್ಯತೆಯಿದೆ. ಹೆಚ್ಚುವರಿ ಅಕ್ಕಿ ಪೂರೈಕೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಇದನ್ನೂ ಓದಿ:ರಾಮನಗರ: ಡಿಸಿಎಂ ಡಿಕೆ ಶಿವಕುಮಾರ್ ತವರು ಜಿಲ್ಲೆಯಲ್ಲೇ ಅನ್ನಭಾಗ್ಯ ಅಕ್ಕಿ ಕಳವು ಆರೋಪ; ಓರ್ವನ ಬಂಧನ
ಘಟನೆ ವಿವರ
ನಿನ್ನೆ(ನ.22) ಡಿಸಿಎಂ ಡಿಕೆ ಶಿವಕುಮಾರ್ ತವರು ಜಿಲ್ಲೆಯಲ್ಲೇ ಅನ್ನಭಾಗ್ಯ ಅಕ್ಕಿ ಕಳವು ಆರೋಪ ಕೇಳಿಬಂದಿತ್ತು. ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿರುವ ಟಿಎಪಿಸಿಎಂಎಸ್ ಗೋದಾಮಿನಲ್ಲಿದ್ದ ಬರೊಬ್ಬರಿ 50 ಲಕ್ಷ ಬೆಲೆಯ 1500 ಕ್ವಿಂಟಾಲ್ ಅಕ್ಕಿ ಇದ್ದಕ್ಕಿದ್ದಂತೆ ಕಳ್ಳತನವಾಗಿತ್ತು. ಇದೇ ಗೋದಾಮಿನಿಂದ ಚನ್ನಪಟ್ಟಣ ತಾಲೂಕಿನ 65 ನ್ಯಾಯಬೆಲೆ ಅಂಗಡಿಗಳಿಗೆ ಪಡಿತರ ವಿತರಣೆ ಮಾಡಲಾಗುತ್ತಿತ್ತು. ಇನ್ನು ಘಟನೆಗೆ ಸಂಬಂಧಪಟ್ಟಂತೆ ಅನ್ನಭಾಗ್ಯ ಅಕ್ಕಿ ಗೋದಾಮಿನ ಸಿಬ್ಬಂದಿಯಿಂದಲೇ ಅವ್ಯವಹಾರ ಶಂಕೆ ವ್ಯಕ್ತವಾದ ಹಿನ್ನಲೆ ಗೋದಾಮು ನಿರ್ವಹಣೆ ಮಾಡುತ್ತಿದ್ದ ನೌಕರ ಚಂದ್ರು ಎಂಬಾತನನ್ನು ಚನ್ನಪಟ್ಟಣ ಪೊಲೀಸರು ವಶಕ್ಕೆ ಪಡೆದಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ