ಸಿಎಂ ಹೊರತುಪಡಿಸಿ ಕೆಲವರ ಬದಲಾವಣೆ ಆಗಬೇಕು, ಅದೇ ಮುಖ ನೋಡಿ ನೋಡಿ ಜನರಿಗೆ ಸಾಕಾಗಿದೆ: ರೇಣುಕಾಚಾರ್ಯ

| Updated By: ಸಾಧು ಶ್ರೀನಾಥ್​

Updated on: Jan 14, 2022 | 1:07 PM

ರಾಜಕೀಯ ಕಾರ್ಯದರ್ಶಿ ಸ್ಥಾನ ಏನೂ ನನಗೆ ದೊಡ್ಡದಲ್ಲ. ಸುಮ್ಮನೆ ಮನೆ ಕೊಟ್ಟಿದ್ದಾರೆ, ಚೇಂಬರ್ ಕೊಟ್ಟಿದ್ದಾರೆ ಅಷ್ಟೇ. ಅದರಲ್ಲಿ ಬಹಳ ಕೆಲಸ ಇಲ್ಲ, ನಾನೂ ಏನೂ ಅದಕ್ಕೇ ಅಂಟಿಕೊಂಡಿಲ್ಲ- ಮುಖ್ಯಮಂತ್ರಿ ಬೊಮ್ಮಾಯಿ ರಾಜಕೀಯ ಕಾರ್ಯದರ್ಶಿ ಮತ್ತು ಬಿಜೆಪಿ ಶಾಸಕ ಎಂ.ಪಿ. ರೇಣುಕಾಚಾರ್ಯ

ಸಿಎಂ ಹೊರತುಪಡಿಸಿ ಕೆಲವರ ಬದಲಾವಣೆ ಆಗಬೇಕು, ಅದೇ ಮುಖ ನೋಡಿ ನೋಡಿ ಜನರಿಗೆ ಸಾಕಾಗಿದೆ: ರೇಣುಕಾಚಾರ್ಯ
ಎಂಪಿ.ರೇಣುಕಾಚಾರ್ಯ
Follow us on

ಬೆಂಗಳೂರು: ರಾಜ್ಯ ಸಚಿವ ಸಂಪುಟ ಪುನಾರಚನೆ ವಿಚಾರದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಸರಿ ಇದೆ ಎಂದಿರುವ ಮುಖ್ಯಮಂತ್ರಿ ಬೊಮ್ಮಾಯಿ ರಾಜಕೀಯ ಕಾರ್ಯದರ್ಶಿ ಮತ್ತು ಬಿಜೆಪಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರು ರಾಜಕೀಯ ಕಾರ್ಯದರ್ಶಿ ಸ್ಥಾನ ಏನೂ ನನಗೆ ದೊಡ್ಡದಲ್ಲ. ಸುಮ್ಮನೆ ಮನೆ ಕೊಟ್ಟಿದ್ದಾರೆ, ಚೇಂಬರ್ ಕೊಟ್ಟಿದ್ದಾರೆ ಅಷ್ಟೇ. ಅದರಲ್ಲಿ ಬಹಳ ಕೆಲಸ ಇಲ್ಲ, ನಾನೂ ಏನೂ ಅದಕ್ಕೇ ಅಂಟಿಕೊಂಡಿಲ್ಲ. ಸಿಎಂ ಹೊರತುಪಡಿಸಿ ಕೆಲವರ ಬದಲಾವಣೆ ಆಗಬೇಕು. ಅದೇ ಮುಖ ನೋಡಿ ನೋಡಿ ಸಾಕಾಗಿದೆ ಜನರಿಗೆ. ಅಭಿವೃದ್ಧಿ ಕೆಲಸಗಳು ಆಗಬೇಕು ಎಂದು ಹೇಳಿದ್ದಾರೆ. ಸಿಎಂ ರಾಜಕೀಯ ಕಾರ್ಯದರ್ಶಿಗಿಂತ ಶಾಸಕನಾಗೇ ಇರುವೆ ಎಂದೂ ರೇಣುಕಾಚಾರ್ಯ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

ಸಿದ್ದರಾಮಯ್ಯಗೆ ಪಾದಯಾತ್ರೆ ಸ್ವಲ್ಪವೂ ಇಷ್ಟ ಇರಲಿಲ್ಲ- ರೇಣುಕಾಚಾರ್ಯ

ಇದೇ ವೇಳೆ ಕಾಂಗ್ರೆಸ್ ವಿರುದ್ಧ ಶಾಸಕ ಎಂ.ಪಿ. ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದು ಕಾಂಗ್ರೆಸ್ಸಿನವರು ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಪಾದಯಾತ್ರೆ ಮಾಡಿದ್ರು. ಸಿದ್ದರಾಮಯ್ಯಗೆ ಪಾದಯಾತ್ರೆ ಸ್ವಲ್ಪವೂ ಇಷ್ಟ ಇರಲಿಲ್ಲ. ಡಿಕೆಶಿ ನಾಯಕರಾಗಿ ಹೊರಹೊಮ್ಮಿದ್ರೆ ಎಂಬ ಭೀತಿಯಲ್ಲಿ ವಿರೋಧ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯ ಒಳಗಿಂದೊಳಗೆ ಪಾದಯಾತ್ರೆ ವಿರೋಧಿಸಿದ್ದರು. ಸಿದ್ದರಾಮಯ್ಯ ಪಟಾಲಂನಿಂದ ಮುಂದಿನ ಸಿಎಂ ಕೂಗು. ಸಿದ್ದರಾಮಯ್ಯ ಮುಂದಿನ ಸಿಎಂ ಎಂದು ಘೋಷಣೆ ಮಾಡಿದ ಒಂದೇ ಕಾರಣಕ್ಕೆ ಡಿಕೆಶಿ ಪಾದಯಾತ್ರೆ ಮಾಡಿದರು ಎಂದು ಕಟಕಿಯಾಡಿದ್ದಾರೆ.

ಪಾದಯಾತ್ರೆ ಮಾಡಿದ್ರೆ ತಮ್ಮನ್ನ ಬಂಧಿಸ್ತಾರೆ ಎಂದು ಅವರು ತಿಳಿದಿದ್ದರು. ಕಾಂಗ್ರೆಸ್‌ಗೆ ಹೋರಾಟ ಮಾಡಿ ಅಭ್ಯಾಸವೇ ಇಲ್ಲ. ಸೌಂದರ್ಯ ಸ್ಪರ್ಧೆಯಲ್ಲಿ ಮಾಡಿದಂತೆ ಹೊಸ ಶೂ, ಟ್ರ್ಯಾಕ್ ಪ್ಯಾಂಟ್ ಧರಿಸಿ ಡಿಕೆಶಿ ರಾಂಪ್ ವಾಕ್ ಮಾಡಿದ್ರು. ಸಿದ್ದರಾಮಯ್ಯ – ಡಿಕೆಶಿ ಪ್ರತಿದಿನ ನನ್ನ ನಾಮ ಜಪ ಮಾಡ್ತಿದ್ದಾರೆ. ಜನರಿಗೆ ಹತ್ತಿರ ಆಗಬೇಕೆಂದು ನನ್ನ ನಾಮ ಜಪ ಮಾಡ್ತಿದ್ದಾರೆ ಎಂದು ಬೆಂಗಳೂರಿನಲ್ಲಿ ಬಿಜೆಪಿ ಶಾಸಕ ರೇಣುಕಾಚಾರ್ಯ ಲೇವಡಿ ಮಾಡಿದರು.

ಇದನ್ನೂ ಓದಿ:
ಪ್ರಧಾನಿ ಮೋದಿ ಮೆಚ್ಚಿದ್ದ ಕಾಮೇಗೌಡರಿಗೆ ಅಧಿಕಾರಿಗಳಿಂದ ಅಡ್ಡಿ? ಅನ್ನ, ನೀರು ಬಿಟ್ಟ‌ ಕಲ್ಮನೆಗೌಡರು ಆಸ್ಪತ್ರೆ ಸೇರಿದರು

Published On - 12:50 pm, Fri, 14 January 22