ಸಿಎಂ ಬೊಮ್ಮಾಯಿ ಮನೆ ಮುಂದೆ ಧರಣಿ ಮಾಡ್ತೇನೆ, ನನ್ನ ಪ್ರಾಣ ಹೋದರೆ ಅಲ್ಲೇ ಹೋಗಲಿ- ರಾಜ್ಯ ಸರ್ಕಾರದ ವಿರುದ್ಧ ರೇವಣ್ಣ ಕಿಡಿ

ಹಾಸನ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಶಿಕ್ಷಣ ಇಲಾಖೆಯಲ್ಲೂ ರಾಜಕೀಯ ನಡೆಸುತ್ತಿದ್ದಾರೆ. ಹೊಳೆನರಸೀಪುರ ಮಹಿಳಾ ಕಾಲೇಜಿಗೆ ಎಂ.ಎಸ್.ಸಿ ಪದವಿ ಮಂಜೂರು ಮಾಡಲು ರಾಜಕೀಯ ಮಾಡ್ತಿದಾರೆ. ಶಿಕ್ಷಣ ಇಲಾಖೆ ಕಾರ್ಯದರ್ಶಿ ಒಪ್ಪಿಗೆ ನೀಡಿದ್ದಾರೆ, ಮೈಸೂರು ವಿವಿಯವರು ಸಹ ಭೇಟಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಆದೇ ಯಾವುದೇ ಕಾರಣ ಕೊಡದೆ ಕಾಲೇಜಿನ ಕೋರ್ಸ್ ಮಂಜೂರು ಮಾಡಲು ಶಿಕ್ಷಣ ಸಚಿವರು ನಿರಾಕರಣೆ ಮಾಡಿದ್ದಾರೆ. ಹಾಗಾಗಿ ಮಂಗಳವಾರ ಸಿಎಂ ಬಸವರಾಜ ಬೊಮ್ಮಾಯಿ ಮನೆ ಎದುರು ಧರಣಿ ಮಾಡುತ್ತೇನೆ. ನಾನು ಅಲ್ಲೇ ಕೂರುತ್ತೇನೆ, ನನ್ನ ಪ್ರಾಣ […]

ಸಿಎಂ ಬೊಮ್ಮಾಯಿ ಮನೆ ಮುಂದೆ ಧರಣಿ ಮಾಡ್ತೇನೆ, ನನ್ನ ಪ್ರಾಣ ಹೋದರೆ ಅಲ್ಲೇ ಹೋಗಲಿ- ರಾಜ್ಯ ಸರ್ಕಾರದ ವಿರುದ್ಧ ರೇವಣ್ಣ ಕಿಡಿ
ಜೆಡಿಎಸ್ ಶಾಸಕ ಎಚ್​. ಡಿ. ರೇವಣ್ಣ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Jan 14, 2022 | 1:50 PM

ಹಾಸನ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಶಿಕ್ಷಣ ಇಲಾಖೆಯಲ್ಲೂ ರಾಜಕೀಯ ನಡೆಸುತ್ತಿದ್ದಾರೆ. ಹೊಳೆನರಸೀಪುರ ಮಹಿಳಾ ಕಾಲೇಜಿಗೆ ಎಂ.ಎಸ್.ಸಿ ಪದವಿ ಮಂಜೂರು ಮಾಡಲು ರಾಜಕೀಯ ಮಾಡ್ತಿದಾರೆ. ಶಿಕ್ಷಣ ಇಲಾಖೆ ಕಾರ್ಯದರ್ಶಿ ಒಪ್ಪಿಗೆ ನೀಡಿದ್ದಾರೆ, ಮೈಸೂರು ವಿವಿಯವರು ಸಹ ಭೇಟಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಆದೇ ಯಾವುದೇ ಕಾರಣ ಕೊಡದೆ ಕಾಲೇಜಿನ ಕೋರ್ಸ್ ಮಂಜೂರು ಮಾಡಲು ಶಿಕ್ಷಣ ಸಚಿವರು ನಿರಾಕರಣೆ ಮಾಡಿದ್ದಾರೆ. ಹಾಗಾಗಿ ಮಂಗಳವಾರ ಸಿಎಂ ಬಸವರಾಜ ಬೊಮ್ಮಾಯಿ ಮನೆ ಎದುರು ಧರಣಿ ಮಾಡುತ್ತೇನೆ. ನಾನು ಅಲ್ಲೇ ಕೂರುತ್ತೇನೆ, ನನ್ನ ಪ್ರಾಣ ಹೋದರೆ ಹೋಗಲಿ, ಅರೆಸ್ಟ್ ಮಾಡ್ತಾರಾ ಮಾಡಲಿ, ಇಂತಾ ಕೀಳು ಮಟ್ಟದ ರಾಜಕಾರಣ ಮಾಡಬೇಡಿ ಎಂದು ಎಚ್. ಡಿ.ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು.

ಹೊಳೆನರಸೀಪುರ ಮಹಿಳಾ ಕಾಲೇಜಿಗೆ ಎಂಎಸ್ಸಿ ಪದವಿ ಮಂಜೂರಾತಿಗೆ ರಾಜಕೀಯ ಮಾಡಲಾಗುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ್‌ ನಾರಾಯಣ ವಿರುದ್ಧ ಹೊಳೆನರಸೀಪುರ ಜೆಡಿಎಸ್ ಶಾಸಕ ಎಚ್.ಡಿ. ರೇವಣ್ಣ ಪರೋಕ್ಷ ಆರೋಪ ಮಾಡಿದರು.

ಜಿಲ್ಲೆಗೆ ಅನ್ಯಾಯ ಆದಾಗ ದೇವೇಗೌಡರು ಎದ್ದೇಳಬೇಕು- ರೇವಣ್ಣ ಬಡವರ ಹೆಣ್ಣು ಮಕ್ಕಳು ಅಲ್ಲಿ ಓದುತ್ತಾರೆ, ನನ್ನ ಮಕ್ಕಳು ಅಲ್ಲಿ ಓದುತ್ತಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಗರಂ ಆದ ರೇವಣ್ಣ, ನಾನು ದೇವೇಗೌಡರಿಗೆ ಕೇಳುತ್ತೇನೆ ಈ ಜಿಲ್ಲೆಗೆ ಅನ್ಯಾಯ ಆದಾಗ ನೀವು ಎದ್ದೇಳಬೇಕು. ಜನರು ನಿಮಗೆ ಅಧಿಕಾರ ನೀಡಿದಾರೆ, ಹಾಗಾಗಿ ನೀವು ಜನರ ಪರವಾಗಿ ಸಿಡಿದೇಳಬೇಕು ಎಂದರು. ಈ ರಾಜ್ಯ ಲೂಟಿಕೋರರ ಕೈ ಸೇರಿದೆ ಎಂದು ಕಿಡಿಕಾರಿದ ರೇವಣ್ಣ ಇವರನ್ನ ಶಿಕ್ಷಣ ಸಚಿವರು ಎನ್ನೋದಕ್ಕೆ ನಾಚಿಕೆ ಆಗಬೇಕು. ಬರಲಿ ನೋಡೋಣ, 2023 ಕ್ಕೆ ಏನಾಗುತ್ರೋ ನೋಡೋಣ ನಾನೂ ಇರ್ತೀನಿ. ಇಂತಹ ಶಿಕ್ಷಣ ಸಚಿವರಿಂದ ಸರ್ಕಾರ ಕ್ಕೂ ಕೆಟ್ಟ ಹೆಸರು ಬರ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರ ಪಾಪರ್‌ ಚೀಟಿ ತಗೊಂಡಿದ್ರೆ ನಾನು ನನ್ನ ಸಂಬಳದಲ್ಲಿ ಕಾಲೇಜಿಗೆ ಮೂಲಭೂತ ಸೌಕರ್ಯ ಕೊಡ್ತೀನಿ -ರೇವಣ್ಣ ಶಿಕ್ಷಣ ಇಲಾಖೆ ಖಾಸಗಿಯವರ ಕೈಲಿ ಸೇರಿಹೋಗಿದೆ. ಮುಖ್ಯ ಮಂತ್ರಿಗಳು ಇಂತಹವರನ್ನ ಜೊತೆಯಲ್ಲಿ ಇಟ್ಟುಕೊಳ್ಳಬಾರದು. ಎರಡೂ ರಾಷ್ಟ್ರೀಯ ಪಕ್ಷ ಗಳು ಜೆಡಿಎಸ್ ಮುಗಿದು ಹೋಗಿದೆ ಅಂದು ಕೊಂಡಿದಾರೆ. ನಾವು ಎರಡೂ ಪಕ್ಷಗಳ ವಿರುದ್ಧ ಹೋರಾಟ ಮಾಡುತ್ತೇವೆ. ಸರ್ಕಾರ ಪಾಪರ್‌ ಚೀಟಿ ತಗೊಂಡಿದ್ರೆ ನಾನು ನನ್ನ ಸಂಬಳದಲ್ಲಿ ಕಾಲೇಜಿಗೆ ಮೂಲಭೂತ ಸೌಕರ್ಯ ಕೊಡ್ತೀನಿ. ಖಾಸಗಿ ಸಂಸ್ಥೆ ಜೊತೆ ಸೇರಿಕೊಂಡು ಗುಲಾಮರಾಗಿ ಕೆಲಸ ಮಾಡಿ. ಮಾಜಿ ಪ್ರದಾನಿ ದೇವೇಗೌಡರ ಕ್ಷೇತ್ರದಲ್ಲಿ ಒಂದು ಕಾಲೇಜು ಮಾಡೋಕೆ ಹೋದ್ರೆ ಅದಕ್ಕೂ ವಿರೋಧ ಮಾಡ್ತೀರಾ? ಯಡಿಯೂರಪ್ಪ, ನಿಮ್ಮ ಸರ್ಕಾರದ ಬಂಡವಾಳ ಬಿಚ್ಚಿ ಇಡ್ತೀನಿ ಕಾಲ ಬರಲಿ ಎಂದು ರೇವಣ್ಣ ಗುಡುಗಿದರು.

ಇದನ್ನೂ ಓದಿ: ಆರೋಪಿಯ ಅರೆಸ್ಟ್ ಮಾಡಲು ತಮ್ಮದೇ ಕಾರು ಕೊಟ್ಟ ತುಮಕೂರು ಜಿಲ್ಲಾ ಎಸ್​ಪಿ, ಬೆಳಗಿನ ಜಾವಕ್ಕೆ ಆರೋಪಿ ಕೊನೆಗೂ ಅಂದರ್!

Published On - 1:33 pm, Fri, 14 January 22

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?