ಮುಖ್ಯಮಂತ್ರಿ ಸಂಚಾರಕ್ಕೆ ಪ್ರತ್ಯೇಕ ಮಾರ್ಗ ವ್ಯವಸ್ಥೆ; ಸಿಎಂ ಗೃಹ ಕಚೇರಿ ಹಾಗೂ ಖಾಸಗಿ ನಿವಾಸದ ಅಂತರ ಕಡಿತ
ಸಿಎಂ ಗೃಹ ಕಚೇರಿ ಕೃಷ್ಣಾದಿಂದ ಬರಲು ವಿಂಡ್ಸನ್ ಮ್ಯಾನರ್ ಬ್ರಿಡ್ಜ್, ಬಿಡಿಎ ಜಂಕ್ಷನ್, ಕಾವೇರಿ ಜಂಕ್ಷನ್, ಮೇಖ್ರಿ ಸರ್ಕಲ್ ಮಾರ್ಗವಾಗಿ ಬರುವ ಮುಖ್ಯಮಂತ್ರಿಗೆ, ಮೇಖ್ರಿ ಸರ್ಕಲ್ ಅಂಡರ್‌ಪಾಸ್ ಆದ ಬಳಿಕ ಹೊಸ ಮಾರ್ಗ ವ್ಯವಸ್ಥೆ ಕಲ್ಪಿಸಲಾಗಿದೆ.
ಬೆಂಗಳೂರು: ಮುಖ್ಯಮಂತ್ರಿ ಸಂಚಾರಕ್ಕೆ ರಾತ್ರೋರಾತ್ರಿ ಪ್ರತ್ಯೇಕ ಮಾರ್ಗ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರಿನ ಆರ್.ಟಿ.ನಗರ ನಿವಾಸದಿಂದ ತೆರಳಲು ವ್ಯವಸ್ಥೆ ಮಾಡಿಕೊಡಲಾಗಿದೆ. ಮೇಖ್ರಿ ಸರ್ಕಲ್ ಬಳಿ ಡಿವೈಡರ್ ಒಡೆದು ಪ್ರತ್ಯೇಕ ಮಾರ್ಗದ ವ್ಯವಸ್ಥೆ ಮಾಡಲಾಗಿದೆ. ಸಿಎಂ ಗೃಹ ಕಚೇರಿ ಕೃಷ್ಣಾದಿಂದ ಬರಲು ವಿಂಡ್ಸನ್ ಮ್ಯಾನರ್ ಬ್ರಿಡ್ಜ್, ಬಿಡಿಎ ಜಂಕ್ಷನ್, ಕಾವೇರಿ ಜಂಕ್ಷನ್, ಮೇಖ್ರಿ ಸರ್ಕಲ್ ಮಾರ್ಗವಾಗಿ ಬರುವ ಮುಖ್ಯಮಂತ್ರಿಗೆ, ಮೇಖ್ರಿ ಸರ್ಕಲ್ ಅಂಡರ್‌ಪಾಸ್ ಆದ ಬಳಿಕ ಹೊಸ ಮಾರ್ಗ ವ್ಯವಸ್ಥೆ ಕಲ್ಪಿಸಲಾಗಿದೆ. ಆರ್‌ಟಿನಗರದ ತಮ್ಮ ನಿವಾಸಕ್ಕೆ ತೆರಳಲು ಡಿವೈಡರ್ ಒಡೆದು ಸಂಚಾರಿ ಪೊಲೀಸರು ಪ್ರತ್ಯೇಕ ಮಾರ್ಗದ ವ್ಯವಸ್ಥೆಯನ್ನು ಮಾಡಿದ್ದಾರೆ. ಇದರಿಂದ, ಸಿಎಂ ಗೃಹ ಕಚೇರಿ, ಖಾಸಗಿ ನಿವಾಸಕ್ಕೆ ಇದ್ದ ಅಂತರ ಕಡಿಮೆ ಆಗಿದೆ. ಗೃಹ ಕಚೇರಿ ಹಾಗೂ ಖಾಸಗಿ ನಿವಾಸಕ್ಕೆ ಮುಕ್ಕಾಲು ಕಿಲೋ ಮೀಟರ್ ದೂರ ಕಡಿಮೆ ಆಗಿದೆ.
ಸಿಎಂ ರಾಜಕೀಯ ಕಾರ್ಯದರ್ಶಿಗಳ ನೇಮಕ ರದ್ದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳ ನೇಮಕ ರದ್ದಾಗಿದೆ. ಈ ಬಗ್ಗೆ, ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಹೇಳಿಕೆ ನೀಡಿದೆ. ವಕೀಲ ಎಸ್. ಉಮಾಪತಿ ಸಲ್ಲಿಸಿದ್ದ ಪಿಐಎಲ್ ಇತ್ಯರ್ಥವಾಗಿದೆ. ಸಿಎಂ ರಾಜಕೀಯ ಕಾರ್ಯದರ್ಶಿಗಳ ನೇಮಕವನ್ನು ಪಿಐಎಲ್ ಮೂಲಕ ಪ್ರಶ್ನಿಸಲಾಗಿತ್ತು. ಈ ಸಂಬಂಧ ಹೈಕೋರ್ಟ್, ರಾಜಕೀಯ ಕಾರ್ಯದರ್ಶಿಗಳಿಗೆ ನೋಟಿಸ್ ಜಾರಿಗೊಳಿಸಿತ್ತು. ಇದೀಗ ಸಿಎಂ ರಾಜಕೀಯ ಕಾರ್ಯದರ್ಶಿಗಳ ನೇಮಕ ರದ್ದುಗೊಂಡಿದೆ.
ಸಿಎಂ ಸಚಿವಾಲಯಕ್ಕೆ ಇಬ್ಬರು ಅಧಿಕಾರಿಗಳ ನೇಮಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಚಿವಾಲಯಕ್ಕೆ ಇಬ್ಬರು ಅಧಿಕಾರಗಳನ್ನು ನೇಮಿಸಲಾಗಿದೆ. ಗುತ್ತಿಗೆ ಆಧಾರದ ಮೇಲೆ ಇಬ್ಬರು ಅಧಿಕಾರಿಗಳ ನೇಮಕ ಆಗಿದೆ. ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿಯಾಗಿ ಅನಿಲ್ ಕುಮಾರ್ ಹಾಗೂ ವಿಶೇಷ ಕರ್ತವ್ಯಾಧಿಕಾರಿಯಾಗಿ ಎನ್. ರಂಗರಾಜು ನೇಮಕಗೊಂಡಿದ್ದಾರೆ.
ಇದನ್ನೂ ಓದಿ: ಖಾತೆ ಹಂಚಿಕೆಗೂ ಮುನ್ನ ಸಿದ್ದಗಂಗಾ ಶ್ರೀಗಳ ಆಶೀರ್ವಾದ ಪಡೆದ ಸಿಎಂ ಬಸವರಾಜ ಬೊಮ್ಮಾಯಿ
ಸಿಎಂ ಬಸವರಾಜ ಬೊಮ್ಮಾಯಿ – ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಭೇಟಿ; ನದಿ ನೀರು ಹಂಚಿಕೆ ಕುರಿತು ಮಾತುಕತೆ
(CM Basavaraj Bommai House to Office distance shortened by preparing new route road)
Published On - 11:01 pm, Fri, 6 August 21