ಇಂಟಿಗ್ರೇಟೆಡ್ ಮೇಲ್ಸೇತುವೆಯನ್ನು ಉದ್ಘಾಟಿಸಿದ ಸಿಎಂ ಬೊಮ್ಮಾಯಿ; ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಫೋಟೋ ಅಳವಡಿಕೆ

ಇಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ಮೇಲ್ಸೇತುವೆಯನ್ನು ಉದ್ಘಾಟಿಸಿದರೂ, ಕಾರ್ಯಕ್ರಮದಲ್ಲಿ ಹಿಂದಿನ ಕಾಂಗ್ರೆಸ್ ಸರ್ಕಾರದ ಬಗ್ಗೆ ನೆನಪು ಮಾಡಿಕೊಂಡಿದ್ದಾರೆ.

ಇಂಟಿಗ್ರೇಟೆಡ್ ಮೇಲ್ಸೇತುವೆಯನ್ನು ಉದ್ಘಾಟಿಸಿದ ಸಿಎಂ ಬೊಮ್ಮಾಯಿ; ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಫೋಟೋ ಅಳವಡಿಕೆ
ಮೇಲ್ಸೇತುವೆ ಉದ್ಘಾಟನೆ ವೇಳೆ ಗೋವಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪೂಜೆ ಮಾಡಿದರು
Edited By:

Updated on: Oct 04, 2021 | 11:54 AM

ಬೆಂಗಳೂರು: ರಾಜಾಜಿನಗರದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಇಂಟಿಗ್ರೇಟೆಡ್ ಮೇಲ್ಸೇತುವೆಯನ್ನು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಉದ್ಘಾಟಿಸಿದರು. 71 ಕೋಟಿ ರೂಪಾಯಿ ವೆಚ್ಚದಲ್ಲಿ ಮೇಲ್ಸೇತುವೆ ನಿರ್ಮಾಣವಾಗಿದೆ. ಮೇಲ್ಸೇತುವೆ ನಿರ್ಮಾಣಕ್ಕೆ ಸಿದ್ದರಾಮಯ್ಯ ಸರ್ಕಾರದಲ್ಲಿ ಅನುದಾನ ನೀಡಲಾಗಿತ್ತು. ಹೀಗಾಗಿ ಕಾರ್ಯಕ್ರಮದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಫೋಟೋಗಳನ್ನ ಅಳವಡಿಸಿದ್ದಾರೆ.

ರಾಜಾಜಿನಗರದ ಶಿವನಗರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಸೇತುವೆ 650 ಮೀಟರ್ ಉದ್ದ ಹೊಂದಿದೆ. ಇಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ಮೇಲ್ಸೇತುವೆಯನ್ನು ಉದ್ಘಾಟಿಸಿದರೂ, ಕಾರ್ಯಕ್ರಮದಲ್ಲಿ ಹಿಂದಿನ ಕಾಂಗ್ರೆಸ್ ಸರ್ಕಾರದ ಬಗ್ಗೆ ನೆನಪು ಮಾಡಿಕೊಂಡಿದ್ದಾರೆ. ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಮೇಲ್ಸೇತುವೆಗೆ ಅನುದಾನ ಬಿಡುಗಡೆಯಾಗಿದ್ದರಿಂದ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಬಗ್ಗೆ ಬ್ಯಾನರ್ ಹಾಕಿದ್ದಾರೆ.

ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ರಾಜಾಜಿನಗರ ಸುತ್ತಾ ಮುತ್ತಾ ನಾನು ಜಾಸ್ತಿ ಓಡಾಡಿದ್ದೇನೆ. ಅದಕ್ಕಾಗಿ ಇಲ್ಲಿ ಪ್ರದೇಶ ನನಗೆ ಚಿರಪರಿಚಿತ. ಟ್ರಾಫಿಕ್​ನಿಂದ ಪಾರಾಗಲು ಈ ಸೇತುವೆ ಮುಖ್ಯ ಆಗಿತ್ತು. ಬಸವೇಶ್ವರನಗರಕ್ಕೆ ದ್ವಿಮುಖ ರಸ್ತೆ ಮಾಡಬೇಕಾದ ಅಗತ್ಯವಿದೆ. ಒಂದು ವಾರದಲ್ಲಿ ಮಾಹಿತಿ ನೀಡಲು ಆಯುಕ್ತರಿಗೆ ಹೇಳಿದ್ದೇನೆ ಎಂದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಸುರೇಶ್ ಕುಮಾರ್, ಇವತ್ತು ಶಿವನಗರ ಮೇಲ್ಸೇತುವೆ ಉದ್ಘಾಟನೆಯಾಗುತ್ತಿರುವುದು ಅತ್ಯಂತ ಖುಷಿ ತಂದಿದೆ. ವಾಜಪೇಯಿಯವರು ನಿತಿನ್ ಗಡ್ಕರಿಗೆ ಇಂಡಿಯಾ ಮತ್ತು ಭಾರತ್ ನಡುವೆ ಮೇಲ್ಸೇತುವೆತರಲು ಸಾಧ್ಯವೇ ಅಂತಾ ಒಮ್ಮೆ ಕೇಳಿದ್ರು. ನಿತಿನ್ ಗಡ್ಕರ್ ಆಗುತ್ತೆ ಅಂದಿದ್ರು. ಅದರ ಪ್ರತಿಫಲವೇ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ಜಾರಿಗೆ ಬಂದಿದ್ದು. ಇಂಥಹ ಪ್ರತಿಫಲವೇ ಬರಲು ಸಾಧ್ಯವಾಯಿತು ಅಂತಾ ಹಳೇ ನೆನಪನ್ನ ಸುರೇಶ್ ಕುಮಾರ್ ಸಿಎಂಗೆ ನೆನಪಿಸಿದರು.

ಇದನ್ನೂ ಓದಿ

ದತ್ತಪೀಠದಲ್ಲಿ ಅನಗತ್ಯವಾಗಿ ನಿರ್ಮಾಣ ಮಾಡಿರುವ ಘೋರಿಗಳನ್ನು ನಾಗೇನಹಳ್ಳಿಗೆ ಸ್ಥಳಾಂತರ ಮಾಡಿ; ಸಚಿವ ಸುನಿಲ್ ಕುಮಾರ್ ಸೂಚನೆ

ಮೈಸೂರಿನಲ್ಲಿ ಬೋನಿಗೆ ಬಿತ್ತು ಹೆಣ್ಣು ಚಿರತೆ; ಅರಣ್ಯ ಇಲಾಖೆ ಕಾರ್ಯಾಚರಣೆ ಯಶಸ್ವಿ

Published On - 11:47 am, Mon, 4 October 21