AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

CM Basavaraj Bommai Press Meet: ಸಂದರ್ಭ ಬಂದರೆ ಕರ್ನಾಟಕಕ್ಕೆ ಯೋಗಿ ಆದಿತ್ಯನಾಥ್​ ಮಾದರಿಯ ಸರ್ಕಾರ ತರುತ್ತೇವೆ: ಸಿಎಂ ಬೊಮ್ಮಾಯಿ

ನಮ್ಮ ನಾಯಕ ಯಡಿಯೂರಪ್ಪ ಎರಡು ವರ್ಷ ಸಿಎಂ ಆಗಿ ನಾನು ಒಂದು ವರ್ಷ ಸಿಎಂ ಆಗಿ ಪೂರೈಸಿದೆ. ಕೆಲವು ವಿಚಾರ ನಿಮ್ಮ ಮುಂದೆ ಹಂಚಿಕೊಳ್ಳಲು ಕರೆದಿದ್ದೇನೆ ಎಂದು ಹೇಳಿದರು.

CM Basavaraj Bommai Press Meet: ಸಂದರ್ಭ ಬಂದರೆ ಕರ್ನಾಟಕಕ್ಕೆ ಯೋಗಿ ಆದಿತ್ಯನಾಥ್​ ಮಾದರಿಯ ಸರ್ಕಾರ ತರುತ್ತೇವೆ: ಸಿಎಂ ಬೊಮ್ಮಾಯಿ
ಸಿಎಂ ಬಸವರಾಜ ಬೊಮ್ಮಾಯಿ
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on:Jul 28, 2022 | 12:10 PM

Share

ಬೆಂಗಳೂರು: ಪ್ರವೀಣ್​ ನೆಟ್ಟಾರು ಹತ್ಯೆ ಹಿನ್ನೆಲೆ ಜನೋತ್ಸವ ಸಮಾವೇಶ ಕಾರ್ಯಕ್ರಮವನ್ನು ಎಲ್ಲರ ಜೊತೆ ಚರ್ಚಿಸಿ ರದ್ದುಗೊಳಿಸಿದ್ದೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಕೋಮು ಭಾವನೆ ಕದಡುವ ಶಕ್ತಿಗಳನ್ನು ಸದೆಬಡಿಯುತ್ತೇವೆ. ಬಾಯಿ ಮಾತಿನಲ್ಲಿ ಅಲ್ಲ ಕಠಿಣ ಕ್ರಮಕೈಗೊಂಡಿದ್ದೇವೆ. ರಾಜ್ಯದಲ್ಲಿ ಅಪರಾಧಗಳ ತಡೆಗೆ ಹಲವು ಕ್ರಮಕೈಗೊಂಡಿದ್ದೇವೆ. ಅಗತ್ಯ ಬಿದ್ದರೆ ರಾಜ್ಯದಲ್ಲೂ ಯೋಗಿ ಮಾಡೆಲ್ ಜಾರಿ ಮಾಡುತ್ತೇವೆ ಎಂದು ಸಿಎಂ ಬೊಮ್ಮಾಯಿ ಹೇಳಿದರು. ರಾಜ್ಯ ಬಿಜೆಪಿ ಸರ್ಕಾರ ಮೂರು ವರ್ಷ ಪೂರೈಸಿದೆ. ಸರ್ಕಾರದ ಸಾಧನೆ ಜನರಿಗೆ ತಿಳಿಸುವುದು ನಮ್ಮ ಕರ್ತವ್ಯ. ಸರ್ಕಾರ ನಡೆಸಲು ಅವಕಾಶ ಕೊಟ್ಟ ವರಿಷ್ಠರಿಗೆ ಧನ್ಯವಾದ ಹೇಳಿದರು. ನಮ್ಮ ಸಚಿವ ಸಂಪುಟದಲ್ಲಿ ಅತ್ಯಂತ ದಕ್ಷ ಆಡಳಿತಗಾರ ಇದ್ದಾರೆ. ಸೇವಾ ಮನೋಭಾವ ಚೈತನ್ಯ ಇರುವ ಯುವಕರು ಬದ್ದತೆ ಇರುವ ಸಂಪುಟ ನಮ್ಮದು. ಇವರೆಲ್ಲರ ಪಾಲು ನಮ್ಮ ಸರ್ಕಾರದ ಸಾಧನೆಯಲ್ಲಿದೆ. ಕೋವಿಡ್ ಹಿನ್ನೆಲೆಯಲ್ಲಿ ಸ್ವಲ್ಪ ನಿಯಂತ್ರಣಕ್ಕೆ ಬಂದ ಮೇಲೆ ನಾನು ಅಧಿಕಾರ ವಹಿಸಿಕೊಂಡೆ. ಯಡಿಯೂರಪ್ಪ ಸಮರ್ಥವಾಗಿ ಕೋವಿಡ್ ನಿರ್ವಹಿಸಿದ್ದರು. ಯಾರು ಯಾರು ಆಯಾ ಕ್ಷೇತ್ರದಲ್ಲಿ ಪರಿಣತರೋ ಎಲ್ಲ ಅಧಿಕಾರಿಗಳು ಸಚಿವರು ಸಹಕಾರ ನೀಡಿದರು. ಆಡಳಿತ ಯಾರ ಪರವಾಗಿ ಇದೆ ಎನ್ನೋದು ಬಹಳ‌ ಮುಖ್ಯ. ರಾಜ್ಯದ ಸಮಗ್ರ ಅಭಿವೃದ್ಧಿ ಆಡಳಿತ ನಾವು ನೀಡಿದ್ದೇವೆ. ಮಾಧ್ಯಮ ಸ್ನೇಹಿತರು ಒಳ್ಳೆಯ ಕೆಲಸ ಮಾಡಿದಾಗ ಪ್ರಚಾರ ಕೊಟ್ಟಿದ್ದೀರಿ. ರೈತರ ವಿದ್ಯಾನಿಧಿ ಪ್ರಥಮ ಬಾರಿ ಇಡೀ ದೇಶದಲ್ಲಿ ಮಾಡಿದ್ದೇವೆ ಎಂದು ಹೇಳಿದರು.

8.5 ಲಕ್ಷ ಕಳೆದ ವರ್ಷ ರೈತ ವಿದ್ಯಾರ್ಥಿಗಳು ವಿದ್ಯಾನಿಧಿ ಪಡೆದುಕೊಂಡಿದ್ದರು. 9.98 ವಿದ್ಯಾರ್ಥಿಗಳಿಗೆ ರೈತ ವಿದ್ಯಾನಿಧಿ ತಲುಪಿದೆ. ರೈತ ಮಕ್ಕಳಿಗೆ ಇದರಿಂದ ಭರವಸೆ ಮೂಡಿದೆ. ಸಂಧ್ಯಾ ಸುರಕ್ಷಾ ಮಾಸಾಶನ ಎಲ್ಲ ಹೆಚ್ಚು ಮಾಡಿ ಆರ್ಥಿಕ ಆಸರೆ ನೀಡಲಾಗಿದೆ. ಬಡವರಿಗೆ ವಯಸ್ಸಾದವರಿಗೆ ಅಂಗವಿಕಲರಿಗೆ ಕೊಟ್ಟಿದ್ದೇವೆ. ಇತ್ತೀಚೆಗೆ ಎಸ್ಸಿ.ಎಸ್ಟಿ ಸಮುದಾಯಕ್ಕೆ ಯೋಜನಗೆಳನ್ನು ಹೆಚ್ಚಳ ಮಾಡಿದ್ದೇವೆ. 25 ಲಕ್ಷಕ್ಕೂ ಹೆಚ್ಚಿನ ಕುಟುಂಬಗಳಿಗೆ ಪುಕ್ಕಟೆ ವಿದ್ಯುತ್ ನೀಡುವ ಕೆಲಸ ಮಾಡಿದ್ದೇವೆ. ಎಸ್ಸಿ.ಎಸ್ಟಿ ಸ್ಕಾಲರ್ ಶಿಪ್ ಹೆಚ್ಚಳ ಮಾಡಿದ್ದೇವೆ. 50 ಓಬಿಸಿ ಹಾಸ್ಟೆಲ್​ಗಳನ್ನು ನಾವು ಮಾಡ್ತಿದ್ದೇವೆ. 33 ಸಾವಿರ ಸ್ತ್ರೀ ಶಕ್ತಿ ಸಂಘಗಳಿಗೆ ಆರ್ಥಿಕ ಸಹಾಯ ಮಾಡಲಾಗಿದೆ. ನಿಖರ ಸಾಲ ನೀಡಿ ಬೇರೆ ಬೇರೆ ತರಬೇತಿ ಮಾರುಕಟ್ಟೆ ವಿಸ್ತರಣೆ ಅವಕಾಶ ನೀಡಲಾಗಿದೆ.

ಅಮೇಜಾನ್ ಸೇರಿ ಬೇರೆಬೇರೆ ಅಗ್ರಿಗೇಟರ್ ಮುಂದೆ ಬಂದಿದ್ದಾರೆ. ಮಾರುಕಟ್ಟೆ ಒದಗಿಸುವ ಎಂಡ್ ಟು ಎಂಡ್ ಯೋಜನೆ ಇದಾಗಿದೆ. ಹೊಸ ಶಿಕ್ಷಣ ನೀತಿ ಒಪ್ಪಿಕೊಂಡ ರಾಜ್ಯ ನಮ್ಮದು. ಆರೋಗ್ಯದಲ್ಲಿ ಬಹಳ ದೊಡ್ಡ ಮೂಲಸೌಕರ್ಯ ಒದಗಿಸಲಾಗಿದೆ. 750 ಗ್ರಾಮ ಪಂಚಾಯತಿಗಳಿಗೆ ಅಮೃತ್ ಯೋಜನೆ ಅಡಿ ಮಾಡಲಾಗಿದೆ. ಎಫ್ಡಿಐ ಅತಿ ಹೆಚ್ಚು ಬಂದಿದ್ದು, ನೀತಿ ಆಯೋಗದಲ್ಲಿ ಕರ್ನಾಟಕ ನಂಬರ್​ 1 ಇದೆ. 1.15 ಲಕ್ಷ ಕೋಟಿ ಒಡಂಬಡಿಕೆಗಳನ್ಬು ಸಹಿ ಮಾಡಿದ್ದೇನೆ. ಗ್ಲೋಬಲ್ ಇನವೆಸ್ಟರ್ ಮೀಟ್ ನವಂಬರ್​​ನಲ್ಲಿ ಮಾಡ್ತಿದ್ದೇವೆ. ಉದ್ಯೋಗ ನೀತಿ ಹೊಸದಾಗಿ ತಂದಿದ್ದೇವೆ. ಜನಪರ ಚಿಂತನೆ ಇರುವ ಸರ್ಕಾರವಾಗಿ ನಾವು ಏನು ಮಾಡಬೇಕು ಮಾಡಿದ್ದೇವೆ. 2075 ಕಿಮೀ ರಾಜ್ಯ ಹೆದ್ದಾರಿ ಆಗಿದೆ. ರಾಜ್ಯದಲ್ಲಿ 5 ಲಕ್ಷ ಮನೆಗಳ‌ ಮಂಜೂರಾಗಿದೆ.

ಹೊಸ ಯೋಜನೆಗಳ ಘೋಷಣೆ ಮಾಡಬೇಕು ಅಂತ ತೀರ್ಮಾನ ಮಾಡಿದ್ದೇನೆ. ಯೋಜನಾಬದ್ದ ಅಭಿವೃದ್ಧಿ ಕೊಟ್ಟಿದ್ದೇವೆ. 6000 ಕೋಟಿ ನಗರೋತ್ಥಾನ ಯೋಜನೆ ಅಡಿ ಹಣ ನೀಡಿದ್ದೇವೆ. ಸಬ್ ಅರ್ಬನ್ ಪ್ರಧಾನಿ ಚಾಲನೆ ನೀಡಿದ್ದಾರೆ. ಹೆಬ್ಬಾಳ ಫ್ಲೈ ಓವರ್ ಹಾಗೂ ಗೊರಗುಂಟೆಪಾಳ್ಯ ಎರಡಕ್ಕೂ ಯೋಜನೆ ಮಾಡಿದ್ದೇವೆ.

ಪುಣ್ಯ ಕೋಟಿ ಕಾರ್ಯಕ್ರಮದ ಅಡಿ ಹಸು ದತ್ತು ತೆಗೆದುಕೊಳ್ಳಲು ಅವಕಾಶವಿದ್ದು, ದತ್ತು ತೆಗೆದುಕೊಳ್ಳುವ ಪ್ರತಿ ವ್ಯಕ್ತಿ 11 ಸಾವಿರ ನಿರ್ವಹಣೆಗೆ ಕೊಡ್ತೇವೆ. ಶಾಲಾ ಕಟ್ಟಡಗಳಿಗೆ ವಿವೇಕ ಅಂತ ಬಿಸಿ ನಾಗೇಶ್ ಹೆಸರು ನೀಡಿದ್ದಾರೆ. ಮಠಗಳಿಗೂ ಕೂಡ ಸಹಾಯ ಮಾಡಿದ್ದೇವೆ. ಪ್ರಗತಿಪರ ಉದ್ಯೋಗ ಸೃಷ್ಟಿ ಮಾಡುವವರಿಂದ ಹಿಡಿದು ಮಹಿಳೆಯರು ಯುವಕರು ಎಲ್ಲರಿಗೂ ಕೂಡ ಸಾರ್ಥಕತೆ ನೀಡುವ ಕೆಲಸ ಆಗಿದೆ. ಸರ್ವರ ವಿಕಾಸ ಆಗುವ ಕರ್ನಾಟಕ ಕಟ್ಟುವ ಕೆಲಸ ಮಾಡಿದ್ದೇವೆ. ಐದು ಹೊಸ ನಗರ ಕಟ್ಟುವ ನಿರ್ಧಾರ ಆಗಿದೆ. ಸವಾಲುಗಳ ಬಗ್ಗೆಯೂ ಕೂಡ ಚಿಂತನೆ ಮಾಡಿದ್ದೇವೆ. ಕೋಮು ಸೌಹಾರ್ದ ಕದಡುವ ಶಕ್ತಿಗಳು ಹೆಚ್ಚಾಗಿವೆ.

Published On - 11:55 am, Thu, 28 July 22

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ