ಬೆಂಗಳೂರು: ನಗರದಲ್ಲಿ ಸಾಕಷ್ಟು ಮಳೆಯಾಗುತ್ತಿದೆ. ಬೇರೆ ಬೇರೆ ಪ್ರದೇಶಗಳಲ್ಲಿ ಜನರು ಸಮಸ್ಯೆ ಸಿಲುಕಿದ್ದಾರೆ. ಅವರ ಸಮಸ್ಯೆ ಬಗೆಹರಿಸುವುದು ಮುಖ್ಯವಾಗಿದೆ. ಇಂಜಿನಿಯರ್‌ಗೆ ನಾನು ಆದೇಶ ಕೊಟ್ಟಿದ್ದೇನೆ. ಇನ್ನೂ ಐದಾರು ತಿಂಗಳಲ್ಲಿ ಮೇಜರ್ ಸಮಸ್ಯೆ ಕ್ಲಿಯರ್ ಆಗುತ್ತೆ ಎಂದು ಪೈ ಬಡಾವಣೆಯಲ್ಲಿ ರಾಜಕಾಲುವೆ ಪರಿವೀಕ್ಷಣೆ ಬಳಿಕ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿಕೆ ನೀಡಿದರು. ಅಲ್ಲಿರೋ ಸಮಸ್ಯೆ ಇಲ್ಲಿರೋ ಸಮಸ್ಯೆ ಎರಡು ಕಾಮನ್. ಸಮಸ್ಯೆ ಬಗೆಹರಿಸುವುದು ಮುಖ್ಯ. ಇಂಜಿನಿಯರ್ಗಳಿಗೆ ಈಗಾಗಲೇ ನಾನು ಸೀವೇಜ್ ಟ್ರೀಟ್ ಮೆಂಟ್ ಪ್ಲಾಂಟ್ ಅಳವಡಿಸಲು ಈಗಾಗಲೇ ಆದೇಶ ಕೊಟ್ಟಿದ್ದೇನೆ. ರೈಲ್ವೆ ವೆಂಟ್ ಬಳಿ ಅಗಲೀಕರಣಕ್ಕೆ ರೈಲ್ವೆ ಇಲಾಖೆಯ ಜೊತೆ ಮಾತನಾಡಿ ಡಿಸೈನ್ ರೆಡಿಯಾಗಿದೆ. 42 ಕೋಟಿ ವೆಚ್ಚದಲ್ಲಿ ಮಾಡಲಾಗುತ್ತಿದೆ. ಅದು ಆದ್ರೆ ನಾಲ್ಕು ಬಡಾವಣೆಗಳಿಗೆ ಅನೂಕೂಲವಾಗಲಿದೆ ಎಂದು ಹೇಳಿದರು. ರೈಲ್ವೆ ಇಲಾಖೆ ಈಗಾಗಲೇ ಒಪ್ಪಿಗೆ ನೀಡಿದ್ದಾರೆ. ಅರ್ಕಾವತಿ ಲೇಔಟ್ನಿಂದ ಹೋಗುವ ಮುಖ್ಯ ವೆಂಟ್ ಅದಕ್ಕೂ ರೈಲ್ವೆ ಇಲಾಖೆ ಒಪ್ಪಿಗೆ ನೀಡಿದೆ. ಇದರಿಂದ ದೊಡ್ಡ ಸಮಸ್ಯೆ ಬಗಹರಿಯುತ್ತದೆ. ಎರಡು ಕೆಲಸವನ್ನು ಆರು ತಿಂಗಳಿನಲ್ಲಿ ಕೆಲಸ ಮುಗಿಸುತ್ತೇವೆ ಎಂದರು.
ಒಂದೊಂದು ಜೋನ್‌ಗೆ ಟಾಸ್ಕ್‌ಫೋರ್ಸ್ ಮಾಡ್ತೀವಿ. 8 ಜೋನ್‌ಗಳಲ್ಲಿ 8 ಸಚಿವರ ನೇಮಕ ಮಾಡಿದ್ದೇವೆ. ಪ್ರತಿಯೊಂದು ಜೋನ್‌ನಲ್ಲೂ ಸಚಿವರ ನೇತೃತ್ವ ವಹಿಸಿರುತ್ತಾರೆ. ಸಚಿವರು, ಸ್ಥಳೀಯ ಶಾಸಕರು, ಸಂಸದರು, ಇಂಜಿನಿಯರ್‌ಗಳು ಟಾಸ್ಕ್‌ಫೋರ್ಸ್‌ನಲ್ಲಿ ಇರುತ್ತಾರೆ. ಜೋನ್ ಅಭಿವೃದ್ಧಿ ಜೊತೆಜೊತೆಗೆ ಈ ರೀತಿ ಮಳೆ ಬಂದಾಗ ಅದರ ನಿರ್ವಹಣೆ ಕೂಡ ಮಾಡುತ್ತಾರೆ. ಇಂದೇ ಟಾಸ್ಕ್‌ಫೋರ್ಸ್ ರಚನೆ ಮಾಡಿ ಸಚಿವರ ನೇಮಕ ಮಾಡುತ್ತೇವೆ. 900 ಮೀಟರ್ ಅಡಿಷನಲ್ ಡ್ರೈನೇಜ್ ಕೂಡ ಮಾಡುತ್ತಿದ್ದೇವೆ. ರಾಜ ಕಾಲವೇ ಮೇಲೆ ಮನೆ ನಿರ್ಮಾಣ ಮಾಡಿದ್ದಾರೆ. ಅದನ್ನು ತೆರವು ಮಾಡಿಸುವ ಕೆಲಸ ಮಾಡಲಾಗುವುದು ಎಂದರು.
ಇದನ್ನೂ ಓದಿ: Matthew Wade: ಇದರಲ್ಲಿ ಆರ್ಸಿಬಿ ತಪ್ಪೇನಿದೆ?: ಔಟಾದ ಸಿಟ್ಟಲ್ಲಿ ಬ್ಯಾಟ್, ಹೆಲ್ಮೆಟ್ ಬಿಸಾಕಿದ ಮ್ಯಾಥ್ಯೂ ವೇಡ್
ಸಾಯಿ ಲೇಔಟ್ ಗೆಸಿಎಂ ವೀಕ್ಷಣೆ ಹಿನ್ನೆಲೆಯಲ್ಲಿ ಅಧಿಕಾರಿಗಳು ಓಡೋಡಿ ಬಂದಿದ್ದು, ಎದ್ದು ಬಿದ್ದು ನೀರು ಖಾಲಿ ಮಾಡಿಸಲು ಮಾಡಲು ಮುಂದಾಗಿದ್ದರು. ದೊಡ್ಡ ದೊಡ್ಡ ಮೋಟಾರುಗಳ ಮೂಲಕ ಲೇಔಟ್ನಿಂದ ನೀರು ಹೊರ ಹಾಕ್ತಿದ್ದಾರೆ. ಬಿಬಿಎಂಪಿ ಬಿಡಬ್ಲೂಎಸ್ಎಸ್ಬಿ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದರು. ಏರಿಯಾ ಮುಂಭಾದಲ್ಲಿ ತುಂಬಿದ್ದ ನೀರನ್ನು ಖಾಲಿ ಮಾಡಲಾಗಿದೆ. ಒಳಗಿನ ಕ್ರಾಸ್ಗಳಲ್ಲಿ ಇನ್ನೂ ಎರಡರಿಂದ ಮೂರು ಅಡಿಗಳಷ್ಟು ನೀರು ನಿಂತಿದೆ. ಆ ನೀರನ್ನು ಖಾಲಿ ಮಾಡಲು ವಾಟರ್ ಮೋಟಾರು ಮೂಲಕ ಹೊರ ಹಾಕಲು ಮುಂದಾಗಿದ್ದಾರೆ. ಇದನ್ನು ಮೊದಲೇ ಮಾಡಿದ್ರೆ ನೀರು ಖಾಲಿ ಆಗ್ತಿತ್ತು. ಆದರೆ ಅದನ್ನು ಮಾಡಿಲ್ಲ ಈಗ ಸಿಎಂ ಬರ್ತಾರೆ ಎಂದು ಮೋಟಾರು ಮೂಲಕ ನೀರು ಖಾಲಿ ಮಾಡಿಸ್ತಿದ್ದಾರೆ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.
ಬಿಬಿಎಂಪಿ, ಜಲಮಂಡಳಿ ಅಧಿಕಾರಿಗಳ ವಿರುದ್ಧ ಸಂತ್ರಸ್ತರು ಗರಂ ಆಗಿದ್ದು, ನಮ್ಮ ಮನೆ ಬಳಿ ಇನ್ನೂ 2 ಅಡಿ ಎತ್ತರಕ್ಕೆ ನೀರು ನಿಂತಿದೆ. ನಾವಿನ್ನೂ ತಿಂಡಿ ತಿಂದಿಲ್ಲ, ಕುಡಿಯಲು ನೀರಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿನ್ನೆ, ಮೊನ್ನೆ ಯಂತ್ರಗಳನ್ನು ತಂದಿದ್ದರೆ ನೀರು ಖಾಲಿ ಆಗುತ್ತಿತ್ತು. ಮನೆಯಿಂದ ಹೊರಬರಲು ಆಗ್ತಿಲ್ಲ, ಕೆಲಸಕ್ಕೆ ಹೋಗುವುದು ಹೇಗೆ? ಸಿಎಂ ಬಳಿಗೆ ಜನರನ್ನು ಬಿಡದೆ ಅಧಿಕಾರಿಗಳು ಬ್ಯಾರಿಕೇಡ್ ಹಾಕಿದ್ದಾರೆ. ಏರಿಯಾದಿಂದ ಜನರು ಹೊರಬರದಂತೆ ತಡೆಯಲು ಪ್ರಯತ್ನ ಮಾಡಲಾಗಿದೆ. ಪೊಲೀಸರು, ಅಧಿಕಾರಿಗಳ ನಡೆಯನ್ನು ನಿವಾಸಿಗಳು ಖಂಡಿಸಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.