ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಮೂರನೇ ಅಲೆ ಬಗ್ಗೆ ದಿನದಿಂದ ದಿನಕ್ಕೆ ಆತಂಕ ಹೆಚ್ಚಾಗುತ್ತಿದೆ. ಈ ನಡುವೆ ರಾಜ್ಯ ಮತ್ತೆ ಲಾಕ್ಡೌನ್ (Lockdown) ಆಗುತ್ತಾ ಎಂಬ ಭೀತಿ ಶುರುವಾಗಿದೆ. ಸದ್ಯಕ್ಕೆ ಲಾಕ್ಡೌನ್ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ ಅಂತ ಸಿಎಂ ಬೊಮ್ಮಾಯಿ (Basavaraj Bommai) ಸ್ಪಷ್ಟನೆ ನೀಡಿದ್ದಾರೆ. ಒಮಿಕ್ರಾನ್ (Omicron) ಪರಿಣಾಮದ ಬಗ್ಗೆ ಗಮನಿಸುತ್ತಿದ್ದೇವೆ. ಈಗಿರುವ ಡೆಲ್ಟಾ ತಳಿ ಪ್ರಕರಣವೂ ಅಲ್ಲಲ್ಲಿ ಕಾಣಿಸುತ್ತಿದೆ. ಹೆಚ್ಚಿನ ಮಾಹಿತಿ ಪಡೆಯಲು ಎನ್ಸಿಬಿಎಸ್ಗೆ (NCBS) ಕಳುಹಿಸುತ್ತಿದ್ದೇವೆ. ವಿದೇಶಿ ಪ್ರಯಾಣಿಕರ ಮೇಲೆ ಹೆಚ್ಚು ನಿಗಾವಹಿಸಲಾಗಿದೆ ಅಂತ ಸಿಎಂ ತಿಳಿಸಿದ್ದಾರೆ.
ಕ್ಲಸ್ಟರ್ನಲ್ಲಿರುವ ಎಲ್ಲರಿಗೂ ತಪಾಸಣೆ ಮಾಡಲಾಗುತ್ತಿದೆ. ಎಸ್ಡಿಎಂನಲ್ಲಿ 4,000ಕ್ಕೂ ಹೆಚ್ಚು ಜನರಿಗೆ ಕೊವಿಡ್ ಟೆಸ್ಟ್ ಮಾಡಲಾಗಿದೆ. ರಾಜ್ಯದಲ್ಲಿ ಕೊವಿಡ್ ಟೆಸ್ಟಿಂಗ್ ಹೆಚ್ಚಿಸಲು ಸೂಚಿಸಲಾಗಿದೆ. ಆರೋಗ್ಯ ಸಚಿವರು ಕೊವಿಡ್ ಸಂಬಂಧ ಸಭೆ ಮಾಡುತ್ತಾರೆ. ಬಳಿಕ ಅದರ ಬಗ್ಗೆ ನನ್ನ ಜತೆ ಚರ್ಚಿಸುತ್ತಾರೆ ಅಂತ ಬಸವರಾಜ ಬೊಮ್ಮಾಯಿ ಹೇಳಿದರು.
ಲಾಕ್ಡೌನ್ ಮಾಡುವ ಚಿಂತನೆ ಸರ್ಕಾರದ ಮುಂದಿಲ್ಲ. ಸದ್ಯ ಜನಜೀವನ ಹೇಗಿದೆಯೋ ಹಾಗೆಯೇ ನಡೆಯುತ್ತದೆ. ಹೆಚ್ಚು ಜನರು ಸೇರುವಲ್ಲಿ ಜನರು ಜಾಗೃತಿಯಿಂದ ಇರಬೇಕು ಅಂತ ಅವರು ಸೂಚಿಸಿದರು.
ಬೆಳಗಾವಿ ಅಧಿವೇಶನಕ್ಕೆ ಒಮಿಕ್ರಾನ್ ವೈರಸ್ ಆತಂಕದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಎಂ, ಸಭೆ ಸಮಾರಂಭಕ್ಕೆ ಅನ್ವಯಿಸುವ ನಿಯಮಗಳು ಅಧಿವೇಶನಕ್ಕೂ ಅನ್ವಯಿಸುತ್ತವೆ ಎಂದಿದ್ದಾರೆ.
ಇದನ್ನೂ ಓದಿ
ಪತ್ನಿ ನೇತ್ರಾಳಿಂದ ಹತ್ಯೆಗೊಳಗಾಗಿದ್ದ ಉದ್ಯಮಿ ಸ್ವಾಮಿರಾಜನ್ ಮನೆಯಲ್ಲಿ ಕಳವು; ಮಡದಿ ಜೈಲಿನಲ್ಲೇ ವಾಸ
Published On - 12:51 pm, Tue, 30 November 21