Coronavirus: ಕೊವಿಡ್ 3ನೇ ಡೋಸ್ ಲಸಿಕೆ ಬಗ್ಗೆ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದೇನು?
ಇಬ್ಬರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಅವರ ಮಾದರಿ ಜಿನೋಮಿಕ್ ಸೀಕ್ವೆನ್ಸ್‌ಗೆ ಕಳಿಸಿದ್ದೇವೆ. ಅವರಿಗೆ ಯಾವುದೇ ರೀತಿಯ ರೋಗದ ಲಕ್ಷಣಗಳಿಲ್ಲ. ಅವರಿಗೆ ಯಾವ ವೇರಿಯೆಂಟ್ ಬಂದಿದೆ ಪತ್ತೆಯಾಗಿಲ್ಲ -ಸಚಿವ ಡಾ. ಕೆ. ಸುಧಾಕರ್
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಆತಂಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೀಗಾಗಿ ಸರ್ಕಾರ ಈಗಾಗಲೇ ಎಲ್ಲಾ ರೀತಿಯ ಎಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಸದ್ಯ 2ನೇ ಡೋಸ್ ಲಸಿಕೆ ಪೂರ್ಣ ಪ್ರಮಾಣದಲ್ಲಿ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಬೆಂಗಳೂರಿನಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಈ ವೇಳೆ ಮಾತನಾಡಿದ ಅವರು, ಏರ್‌ಪೋರ್ಟ್, ಬಂದರು, ಅಂತಾರಾಜ್ಯ ಗಡಿಯಲ್ಲೂ ಎಚ್ಚರಿಕೆ ವಹಿಸಲಾಗಿದೆ. ಈ ನಿಟ್ಟಿನಲ್ಲಿ ಸಭೆಯಲ್ಲಿ ಸವಿಸ್ತಾರವಾಗಿ ಚರ್ಚೆ ಮಾಡುತ್ತೇವೆ. ಕೊವಿಡ್ ನೆಗೆಟಿವ್, ಪಾಸಿಟಿವ್ ಬಂದವರ ಕ್ವಾರಂಟೈನ್ ಕ್ರಮಗಳ ಬಗ್ಗೆಯೂ ಸಭೆಯಲ್ಲಿ ಚರ್ಚಿಸುತ್ತೇವೆ. ಕೊವಿಡ್ ಸಾಮಾನ್ಯವಾಗಿ ಬಂದು ಹೋದರೆ ಸಮಸ್ಯೆಯಾಗಲ್ಲ. ಹೊಸ ತಳಿ ಕೊರೊನಾ ತೀವ್ರತೆಯ ಬಗ್ಗೆ ತಿಳಿಯಬೇಕಾಗಿದೆ. ಅದರ ಬಗ್ಗೆ ಚರ್ಚಿಸಲು ತಜ್ಞರಿಗೆ ಸಭೆಗೆ ಬರಲು ಕರೆಯಲಾಗಿದೆ. ಯಾವುದೇ ಚಟುವಟಿಕೆಗಳ ಮೇಲೆ ಈಗಲೇ ಕ್ರಮ ತೆಗೆದುಕೊಳ್ಳಲ್ಲ. ಶಾಲೆ-ಕಾಲೇಜುಗಳು, ಕೈಗಾರಿಕೆ ಸೇರಿ ಯಾವುದಕ್ಕೂ ನಿರ್ಬಂಧವಿಲ್ಲ. ಸದ್ಯಕ್ಕೆ ನಿರ್ಬಂಧ ಹೇರುವ ಯಾವುದೇ ಚಿಂತನೆ ಸರ್ಕಾರಕ್ಕಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಕೊವಿಡ್ 3ನೇ ಡೋಸ್ ಲಸಿಕೆ ಬಗ್ಗೆ ನಾವು ನಿರ್ಧರಿಸಲಾಗಲ್ಲ ಇಬ್ಬರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಅವರ ಮಾದರಿ ಜಿನೋಮಿಕ್ ಸೀಕ್ವೆನ್ಸ್‌ಗೆ ಕಳಿಸಿದ್ದೇವೆ. ಅವರಿಗೆ ಯಾವುದೇ ರೀತಿಯ ರೋಗದ ಲಕ್ಷಣಗಳಿಲ್ಲ. ಅವರಿಗೆ ಯಾವ ವೇರಿಯೆಂಟ್ ಬಂದಿದೆ ಪತ್ತೆಯಾಗಿಲ್ಲ ಎಂದರು. ಕೊವಿಡ್ 3ನೇ ಡೋಸ್ ಲಸಿಕೆ ಬಗ್ಗೆ ನಾವು ನಿರ್ಧರಿಸಲಾಗಲ್ಲ. ಕೇಂದ್ರ ಸರ್ಕಾರ, ಐಸಿಎಂಆರ್ ಈ ಬಗ್ಗೆ ನಿರ್ಧರಿಸುತ್ತದೆ. ಅವರು ಚರ್ಚಿಸಿ ಇಡೀ ದೇಶಕ್ಕೆ ಮಾರ್ಗಸೂಚಿ ನೀಡುತ್ತಾರೆ ಎಂದು ಮಾಹಿತಿ ನೀಡಿದ್ದಾರೆ.
ಇನ್ನು ಕೊರೊನಾ ರೂಪಾಂತರಿ ‘ಒಮಿಕ್ರಾನ್’ ಆತಂಕ ವಿಚಾರಕ್ಕೆ ಸಂಬಂಧಿಸಿ ಆರೋಗ್ಯ & ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ನೇತೃತ್ವದಲ್ಲಿ ಬೆಳಗ್ಗೆ 11.30ಕ್ಕೆ ಸಭೆ ನಿಗದಿಯಾಗಿದೆ. ಕೊವಿಡ್ ನಿರ್ವಹಣಾ ಸಮಿತಿ ಸದಸ್ಯರು, ತಜ್ಞರ ಜೊತೆ ಸಭೆಯಲ್ಲಿ ಚರ್ಚೆ ನಡೆಸಿ ಹಲವು ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ವ್ಯಾಕ್ಸಿನ್ 2 ಡೋಸ್ ಎಲ್ಲರೂ ಕಂಪ್ಲೀಟ್ ಮಾಡಲೇಬೇಕು. ಮಕ್ಕಳಿಗೆ ಲಸಿಕೆ ನೀಡುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ.
ಇದನ್ನೂ ಓದಿ: Video: ಮದುವೆ ಮನೆಗೆ ಬೆಂಕಿ ಬಿದ್ದು ಹೊತ್ತಿ ಉರಿಯುತ್ತಿದ್ದರೂ ಸ್ವಲ್ಪವೂ ತಲೆಕೆಡಿಸಿಕೊಳ್ಳದೆ ಊಟ ಮಾಡುತ್ತಲೇ ಇದ್ದ ಅತಿಥಿಗಳು !
Published On - 10:04 am, Tue, 30 November 21