Google Play Best Apps 2021: ಈ ವರ್ಷದ ಬೆಸ್ಟ್​​ ಆ್ಯಪ್ಸ್​​​, ಗೇಮ್ಸ್​ ಯಾವುದು?; ಗೂಗಲ್ ಪ್ಲೇಯಿಂದ ಪಟ್ಟಿ ಬಿಡುಗಡೆ

ಗೂಗಲ್​ ಪ್ಲೇ ಬೆಸ್ಟ್​ 2021 (Google Play Best Apps 2021) ಅಡಿಯಲ್ಲಿ ಕೆಲ ಆ್ಯಪ್​ಗಳ ಕುರಿತಾಗಿ ಮಾಹಿತಿ ಹಂಚಿಕೊಂಡಿದ್ದು, ಇದರಲ್ಲಿ ಬಿಟ್​ಕ್ಲಾಸ್ ಆ್ಯಪ್ ಭಾರತದ ಅತ್ಯುತ್ತಮ ಅಪ್ಲಿಕೇಶನ್ ಎಂಬ ಬಿರುದು ಪಡೆದುಕೊಂಡಿದೆ. ಗೇಮಿಂಗ್ ಕೆಟಗರಿಯಲ್ಲಿ ಬ್ಯಾಟರ್​ಗ್ರೌಂಡ್ ಮೊಬೈಲ್ ಇಂಡಿಯಾ ಅತ್ಯುತ್ತಮ ಆ್ಯಪ್ ಎಂಬುದು ಬಹಿರಂಗ ಪಡಿಸಿದೆ.

Google Play Best Apps 2021: ಈ ವರ್ಷದ ಬೆಸ್ಟ್​​ ಆ್ಯಪ್ಸ್​​​, ಗೇಮ್ಸ್​ ಯಾವುದು?; ಗೂಗಲ್ ಪ್ಲೇಯಿಂದ ಪಟ್ಟಿ ಬಿಡುಗಡೆ
Google Play’s Best of 2021
Follow us
TV9 Web
| Updated By: Vinay Bhat

Updated on: Nov 30, 2021 | 12:17 PM

ಇಂಟರ್‌ನೆಟ್ ಲೋಕದ ದಿಗ್ಗಜ ಗೂಗಲ್ (Google), ಪ್ರತಿವರ್ಷವೂ ಹೊಸ ಹೊಸ ಸೇವೆಗಳನ್ನು ಜನರಿಗೆ ಪರಿಚಯಿಸುತ್ತಿರುತ್ತದೆ. ಈ ಪೈಕಿ ಆಂಡ್ರಾಯ್ಡ್ ಬಳಕೆದಾರರಿಗೆ ಲಭ್ಯರುವ ಗೂಗಲ್ ಪ್ಲೇ ಸ್ಟೋರ್​ನಲ್ಲೂ (Google Play Store) ವರ್ಷಕ್ಕೆ ಸಾಕಷ್ಟು ಆ್ಯಪ್​ಗಳು ಬಿಡುಗಡೆಗೊಳ್ಳುತ್ತವೆ. ಹೀಗೆ ಪ್ರತಿ ವರ್ಷ ಜನಪ್ರಿಯವಾಗಿರುವ ಆ್ಯಪ್​ಗಳ ಪಟ್ಟಿಯನ್ನೂ ಬಿಡುಗಡೆ ಮಾಡುತ್ತದೆ. ಅದರಂತೆ 2021ನೇ ವರ್ಷದಲ್ಲಿ ಗೂಗಲ್​ ಅತ್ಯುತ್ತಮ ​ಆ್ಯಪ್ಸ್​, ಗೇಮ್ಸ್​​, ಸಿನಿಮಾ ಮತ್ತು ಪುಸ್ತಕ ಕುರಿತಾಗಿ ಮಾಹಿತಿ ಹಂಚಿಕೊಂಡಿದೆ. ಗೂಗಲ್​ ಪ್ಲೇ ಬೆಸ್ಟ್​ 2021 (Google Play Best Apps 2021) ಅಡಿಯಲ್ಲಿ ಕೆಲ ಆ್ಯಪ್​ಗಳ ಕುರಿತಾಗಿ ಮಾಹಿತಿ ಹಂಚಿಕೊಂಡಿದ್ದು, ಇದರಲ್ಲಿ ಬಿಟ್​ಕ್ಲಾಸ್ ಆ್ಯಪ್ ಭಾರತದ ಅತ್ಯುತ್ತಮ ಅಪ್ಲಿಕೇಶನ್ ಎಂಬ ಬಿರುದು ಪಡೆದುಕೊಂಡಿದೆ.

ಬಿಟ್​ಕ್ಲಾಸ್ ಒಂದು ಕಲಿಕೆಯ ಆ್ಯಪ್ ಆಗಿದ್ದು, ಇದರಲ್ಲಿ ಲೈವ್ ಮೂಲಕ ಅನೇಕ ವಿಷಯಗಳನ್ನು ಕಲಿಯಬಹುದಾಗಿದೆ. ಇದು ಕಳೆದ ಮಾರ್ಚ್​ನಲ್ಲಿ ಭಾರತದ ಆಂಡ್ರಾಯ್ಡ್ ಬಳಕೆದಾರರಿಗೆ ಪ್ಲೇ ಸ್ಟೋರ್​ನಲ್ಲಿ ಲಾಂಚ್ ಆಗಿತ್ತು. ಇನ್ನು ಗೇಮಿಂಗ್ ಕೆಟಗರಿಯಲ್ಲಿ ಬ್ಯಾಟರ್​ಗ್ರೌಂಡ್ ಮೊಬೈಲ್ ಇಂಡಿಯಾ ಅತ್ಯುತ್ತಮ ಆ್ಯಪ್ ಎಂಬುದು ಬಹಿರಂಗ ಪಡಿಸಿದೆ. ಇದು ಪಬ್ಜಿ ಬ್ಯಾನ್ ಆದ ಬಳಿಕ ಬಂದ ಹೊಸ ಅವತಾರವಾಗಿದೆ. ಬಳಕೆದಾರರ ಆಯ್ಕೆಯಲ್ಲಿ ಕ್ಲಬ್ ಹೌಸ್ ಮೊದಲ ಸ್ಥಾನದಲ್ಲಿದೆ.

ಗೂಗಲ್ ಹೇಳಿರುವ ಪ್ರಕಾರ, ಈ ವರ್ಷ ಹೆಚ್ಚಿನವರು ಆನ್​ಲೈನ್ ಲರ್ನಿಂಗ್ ಆ್ಯಪ್ ಬಗ್ಗೆ ಹೆಚ್ಚಿನ ಗಮನ ನೀಡಿದ್ದಾರಂತೆ. ನಂತರ ಹಾಡು, ಮ್ಯೂಸಿಕ್, ಕಾಮಿಡಿ ಈರೀತಿಯ ಕೆಟಗರಿ ಕಡೆ ಉತ್ಸಾಹ ತೋರಿಸಿದ್ದಾರಂತೆ. ಅಂತೆಯೆ ಲೈವ್ ಆಗಿ ಡ್ಯಾನ್ಸ್ ಕಲಿಯುವುದು ಮತ್ತು ಫಿಟ್​ನೆಸ್ ಬಗ್ಗೆ ಇರುವ ಆ್ಯಪ್​ಗಳು ಕೂಡ ಹೆಚ್ಚು ಡೌನ್​ಲೋಡ್ ಆಗಿವೆಯಂತೆ. ಕಳೆದ ವರ್ಷ ಬೆಸ್ಟ್​ ಗೇಮ್​​ 2020 ವಿಭಾಗದಲ್ಲಿ ಲೆಜೆಂಡ್​ ಆಫ್​​ ರನ್​ಟೆರಾ ಮತ್ತು ಸ್ಪರ್ಧಾತ್ನಕ ಆಟಗಳಲ್ಲಿ ಬುಲೆಟ್​ ಇಕೊ, ಕಾರ್ಟ್​ ರೈಡರ್​+, ಲೆಂಜೆಂಡ್​ ಆಪ್​ ರುನೆಟೆರಾ, ರಂಬಲ್​ ಹಾಕಿ ಮತ್ತು ಟಾಪ್​ವಾರ್​ ಬ್ಯಾಟಲ್​ ಗೇಮ್​ ಪ್ರಶಸ್ತಿ ಬಾಜಿಕೊಂಡಿತ್ತು.

ಗೂಗಲ್ ಪ್ಲೇ ಬೆಸ್ಟ್ 2021 ಪ್ರಶಸ್ತಿ ಪಡೆದುಕೊಂಡ ಸಂಪೂರ್ಣ ಆ್ಯಪ್​ಗಳ ವಿವರ ಇಲ್ಲಿದೆ:

  • 2021ರ ಅತ್ಯುತ್ತಮ ಆ್ಯಪ್  (India) Bitclass: Learn Anything. Live. Together!
  • 2021ರ ಅತ್ಯುತ್ತಮ ಗೇಮಿಂಗ್ ಆ್ಯಪ್ (India): Battlegrounds Mobile India
  • ಬಳಕೆದಾರರ ಪ್ರಯುಕ್ತ 2021ರ ಅತ್ಯುತ್ತಮ ಆ್ಯಪ್ (India): Clubhouse: The Social Audio App
  • ಬಳಕೆದಾರರ ಪ್ರಯುಕ್ತ 2021ರ ಅತ್ಯುತ್ತಮ ಗೇಮಿಂಗ್ ಆ್ಯಪ್ (India): Garena Free Fire MAX

ಬೆಸ್ಟ್​ ಫನ್ ಆ್ಯಪ್​:

  • FrontRow: Learn Singing, Music, Rap, Comedy & More
  • Clubhouse: The Social Audio App
  • Hotstep

ದೈನಂದಿನ ಅಗತ್ಯಗಳ ಬೆಸ್ಟ್​ ಆ್ಯಪ್:

  • Sortizy – Recipes, Meal Planner & Grocery Lists
  • SARVA – Yoga & Meditation
  • Guardians from Truecaller

ಪರ್ಸನ್ ಗ್ರೋತ್​ನ ಅತ್ಯುತ್ತಮ ಆ್ಯಪ್:

  • Bitclass: Learn Anything. Live. Together!
  • EMBIBE: Learning Outcomes App
  • Evolve Mental Health: Meditations, Self-Care & CBT Best Hidden Gems
  • Jumping Minds – Talk & Feel Better
  • Learn Product Management & Marketing Skills @ FWD
  • Moonbeam I Podcast Discovery

ಬೆಸ್ಟ್​ ಆ್ಯಪ್ ಫಾರ್ ಗುಡ್:

  • Evergreen Club – Health, Fitness, Fun & Learning
  • being: your mental health friend
  • Speechify – text to speech tts

ಬೆಸ್ಟ್​ ಆ್ಯಪ್ ಫಾರ್ ಟ್ಯಾಬ್ಲೆಟ್:

  • Houzz – Home Design & Remodel
  • Canva
  • Concepts: Sketch, Note, Draw

ಬೆಸ್ಟ್​ ಆ್ಯಪ್ ಫಾರ್ Wear:

  • My Fitness Pal
  • Calm
  • Sleep Cycle: Sleep analysis & Smart alarm clock

ಭಾರತದ ಅತ್ಯುತ್ತಮ ಗೇಮಿಂಗ್ ಆ್ಯಪ್:

  • Battlegrounds Mobile India
  • Summoners War: Lost Centuria
  • MARVEL Future Revolution
  • Pokemon Unite
  • Suspects: Mystery Mansion

ಬೆಸ್ಟ್​ ಗೇಮ್ ಚೆಂಜರ್ಸ್:

  • JanKenUP!
  • Unmaze – a myth of shadow & light
  • NieR Re[in]carnation
  • Tears of Themis

ಅತ್ಯುತ್ತಮ Indie ಗೇಮ್ಸ್:

  • DeLight: The Journey Home
  • Huntdown
  • My Friend Pedro
  • Ronin: The Last Samurai
  • Bird Alone

ಬೆಸ್ಟ್ Pick Up & Play:

  • Cats in Time – Relaxing Puzzle Game
  • Crash Bandicoot: On the Run!
  • Dadish 2
  • Disney POP TOWN
  • Switchcraft: The Magical Match 3

Tabletsನ ಅತ್ಯುತ್ತಮ ಗೇಮ್:

  • Chicken Police – Paint it RED!
  • My Friend Pedro: Ripe for Revenge
  • Overboard!
  • The Procession to Calvary

Twitter CEO: ಟ್ವಿಟರ್ ಸಿಇಒ ಸ್ಥಾನಕ್ಕೆ ಜ್ಯಾಕ್ ಡಾರ್ಸೆ ರಾಜೀನಾಮೆ; ನೂತನ ಸಿಇಒ ಆಗಿ ಪರಾಗ್ ಅಗರ್​ವಾಲ್ ನೇಮಕ

(Google Play Best of 2021 list is out the best app of the year is Bitclass Battlegrounds Mobile India won in games category)