ಪ್ರಪಂಚದ ಹಲವು ರಾಷ್ಟ್ರಗಳಲ್ಲಿ ಈಗ ಪ್ರಜಾಪ್ರಭುತ್ವ ಉಳಿದಿಲ್ಲ: ರಾಜ್ಯದ ಫಲಾನುಭವಿಗಳ ಜೊತೆ ಸಿಎಂ ಬೊಮ್ಮಾಯಿ ಸಂವಾದ

| Updated By: ಗಂಗಾಧರ​ ಬ. ಸಾಬೋಜಿ

Updated on: May 31, 2022 | 2:48 PM

ಪ್ರಧಾನಿ ನರೇಂದ್ರ ಮೋದಿ ಸಂವಾದ ಕಾರ್ಯಕ್ರಮದಲ್ಲಿ ಕೇಂದ್ರ ಯೋಜನೆಯ ರಾಜ್ಯದ ಫಲಾನುಭವಿಗಳ ಜೊತೆ ಸಿಎಂ ಬಸವರಾಜ ಬೊಮ್ಮಾಯಿ ಸಂವಾದ ಮಾಡಿದರು.

ಪ್ರಪಂಚದ ಹಲವು ರಾಷ್ಟ್ರಗಳಲ್ಲಿ ಈಗ ಪ್ರಜಾಪ್ರಭುತ್ವ ಉಳಿದಿಲ್ಲ: ರಾಜ್ಯದ ಫಲಾನುಭವಿಗಳ ಜೊತೆ ಸಿಎಂ ಬೊಮ್ಮಾಯಿ ಸಂವಾದ
ಸಿಎಂ ಬಸವರಾಜ ಬೊಮ್ಮಾಯಿ
Follow us on

ಬೆಂಗಳೂರು: ಪ್ರಪಂಚದ ಹಲವು ರಾಷ್ಟ್ರಗಳಲ್ಲಿ ಈಗ ಪ್ರಜಾಪ್ರಭುತ್ವ ಉಳಿದಿಲ್ಲ. ನಾವು ಪ್ರಜಾಪ್ರಭುತ್ವವನ್ನು ಉಳಿಸಿಕೊಂಡು ಬಂದಿದ್ದೇವೆ‌. ಪ್ರಜಾಪ್ರಭುತ್ವದಿಂದ ಜನರ ಸಮಸ್ಯೆಗಳನ್ನು ಚರ್ಚೆ ಮಾಡಬಹುದು ಎಂದು ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆ ಕೇಂದ್ರ ಯೋಜನೆಗಳ ಫಲಾನುಭವಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಂವಾದ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಭಾಗಿಯಾಗಿ ರಾಜ್ಯದ ಫಲಾನುಭವಿಗಳ ಜೊತೆ ಮಾತನಾಡಿದರು. 1975ರಲ್ಲಿ ನಾಗರಿಕ ಮತ್ತು ಮಾಧ್ಯಮ ಹಕ್ಕುಗಳು ಮೊಟಕು ಆಗುತ್ತಿದ್ದವು‌. ಆಗ ಜನಶಕ್ತಿ ಗೆಲುವು ಸಾಧಿಸಿ ಪ್ರಜಾಪ್ರಭುತ್ವ ಉಳಿಯಿತು.

ಇದನ್ನೂ ಓದಿ: IPL 2022: ಗುಜರಾತ್ ಚಾಂಪಿಯನ್: ಒಂದು ದಿನ ಉಚಿತ ಸೇವೆ ನೀಡಿದ ಪಾಂಡ್ಯ ಫ್ಯಾನ್

ಪ್ರಧಾನಿ ಮೋದಿ 8 ವರ್ಷಗಳಲ್ಲಿ ದೊಡ್ಡ ಸಾಧನೆ ಮಾಡಿದ್ದಾರೆ. ಕೊವಿಡ್ ಸಮಸ್ಯೆ ಮತ್ತು ವಿದೇಶಗಳ ಆಕ್ರಮಣವನ್ನು ಎದುರಿಸಿ ಸಾಧನೆ ಮಾಡಲಾಗಿದೆ. ವಸತಿ ಯೋಜನೆ ಅಡಿಯಲ್ಲಿ‌ 18 ಲಕ್ಷ ಮನೆಗಳ ನಿರ್ಮಾಣ ಆಗಿವೆ. ಮೊದಲು ಯೋಜನೆಗಳು ದೆಹಲಿ ಮತ್ತು ಬೆಂಗಳೂರಿಗೆ ಸೀಮಿತವಾಗಿದ್ದವು. ಮೋದಿ ಬಂದ ಮೇಲೆ ಹಳ್ಳಿಗೆ ನೇರವಾಗಿ ಯೋಜನೆಗಳು ತಲುಪುತ್ತಿವೆ. ಅಧಿಕಾರಿಗಳ ಜವಬ್ದಾರಿ ಯೋಜನೆಗಳನ್ನು ಜನರಿಗೆ ಮುಟ್ಟಿಸುತ್ತಿವೆ. ದಿನ ದಲಿತರಿಗೆ ಯೋಜನೆ ಮುಟ್ಟಿಸಬೇಕು. ಐವತ್ತು ವರ್ಷಗಳ ಕಾಲ ಸಮಾಜವಾದದ ಬಗ್ಗೆ ಮಾತಾಡಿದ್ದರು. ಅವರೇ ಬಂಡವಾಳ ಶಾಹಿಗಳ ಜೊತೆ ಮಾತುಕತೆ ನಡೆಸುತ್ತಿದ್ದರು ಎಂದು ಪರೋಕ್ಷವಾಗಿ ಕಾಂಗ್ರೆಸ್​ಗೆ ಚಾಟಿ ಬೀಸಿ, ಪ್ರಧಾನಿ ನರೇಂದ್ರ ಮೋದಿಯನ್ನ ಸಿಎಂ ಬೊಮ್ಮಾಯಿ ಕೊಂಡಾಡಿದರು.

ಎಪ್ಪತ್ತು ವರ್ಷಗಳ ಕಾಲ ಅಧಿಕಾರ ನಡೆಸಿದರು, ಕುಡಿಯುವ ನೀರಿನ ಸಮಸ್ಯೆ, ಹೂಡಿಕೆ ಸೇರಿದಂತೆ ವಿವಿಧ ಸಮಸ್ಯೆಗಳ ಪ್ರಧಾನಿಗಳು ಅರ್ಥ ಮಾಡಿಕೊಂಡರು. ನೀರು ಹೇಗೆ ಕೊಡಲು ಸಾಧ್ಯ ಎಂದು ಚಿಂತನೆ ಮಾಡಿ, ನೀರು ಕೊಡುವ ಸಾಹಸ ಮಾಡಿದರು. ಛಲದಿಂದ ನೀರಿಗಾಗಿ ಯೋಜನೆ ಮತ್ತು ಹಣಕಾಸು ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದಾರೆ‌. ಕೆಂಪು ಕೋಟೆ ಮೇಲೆ ನಿಂತು ಭಾರತವನ್ನು ಸ್ವಚ್ಛಗೊಳಿಸುತ್ತೇನೆ ಎಂದು ಮೊದಲ ಭಾಷಣದಲ್ಲೇ ಸ್ವಚ್ಛ ಭಾರತದ ಬಗ್ಗೆ ಮಾತಾಡಿದರು. ಯಾಕೆಂದರೆ ಸ್ವಚ್ಛವಾಗಿದ್ದರೆ ಆರೋಗ್ಯ ಚನ್ನಾಗಿರುತ್ತದೆ ಎಂದು ಆದ್ಯತೆ ನೀಡಿದರು.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.